ಎಮ್. ಎಸ್. ರಾಮಯ್ಯ
ಎಮ್. ಎಸ್. ರಾಮಯ್ಯ | |
---|---|
[[File:|270px|center=yes|alt=]] | |
ಜನನ | ಎಪ್ರಿಲ್ ೨೦, ೧೯೨೨ ಮಧುಗಿರಿ |
ವೃತ್ತಿ | ರೈತ,ಪತ್ರಕರ್ತ,ತಂತ್ರಜ್ಞಾನಿ |
ರಾಷ್ಟ್ರೀಯತೆ | ಭಾರತೀಯ |
ಬಾಳ ಸಂಗಾತಿ | ವೆಂಕಟಮ್ಮ ಲಕ್ಶ್ಮಿಗೌರಮ್ಮ |
ತಂದೆ | ಸಂಪಂಗಪ್ಪ ರಾಮಯ್ಯ |
ತಾಯಿ | ನರಸಮ್ಮ |
ಪರಿಚಯ
[ಬದಲಾಯಿಸಿ]ಡಾ. ಎಮ್. ಎಸ್. ರಾಮಯ್ಯ (೨೦ ಎಪ್ರಿಲ್ ೧೯೨೨-೨೫ ಡಿಸೆಂಬರ್ ೧೯೯೭)ವಿದ್ಯಾಭ್ಯಾಸ ಕ್ಷೇತ್ರದ ಭಾವನಾ ಜೀವಿ, ಲೋಕೋಪಕಾರಿ, ಉದಾರದಾನಿ, ಉದ್ಯಮಿ, ವ್ಯವಸಾಯಗಾರ, ಪತ್ರಿಕಾ ವ್ಯವಸಾಯದ ಮೂಲಕರ್ತ. ಗೋಕುಲ ವಿದ್ಯಾಸಂಸ್ಥೆ ಎಂಬ ಹೆಸರಾಂತ ಸಂಸ್ಥೆಯ ವಾಸ್ತುಶಿಲ್ಪಿಯಾದ ಎಮ್.ಎಸ್.ರಾಮಯ್ಯನವರು ತಮ್ಮ ಕೊಡುಗೆಗಳನ್ನು ಆಧ್ಯಾತ್ಮಿಕದ ಕಡೆಗೂ ವ್ಯಾಪಿಸಿದರು.ಭಾರತ ದೇಶದಲ್ಲಿ ನೆಲೆಗೊಂಡ ಗೋಕುಲ ಸಂಸ್ಥೆ, ವೈದ್ಯಕೀಯ ಶಾಲೆ, ನ್ಯಾಯಶಾಸ್ತ್ರ ಶಾಲೆ, ಆಡಳಿತ ಮಂಡಳಿ, ಸಂಶೋಧನೆ, ಔಷದಾಲಯ, ಹೊಟೆಲ್ ಉಸ್ತುವಾರಿ, ಮುಂತಾದ ವಿಭಾಗಗಳನ್ನು ನಡೆಸಿಕೊಂಡು ಬರುತ್ತಿವೆ.
ಪೂರ್ವ ಜೀವನ
[ಬದಲಾಯಿಸಿ]೨೦ ಎಪ್ರಿಲ್, ೧೯೯೨, ಮಧುಗಿರಿಯಲ್ಲಿ ಜನಿಸಿದ ಎಮ್.ಎಸ್.ರಾಮಯ್ಯ ಅವರು, ಸಂಪಂಗಪ್ಪ ನರಸಮ್ಮ ದಂಪತಿಗಳ ಏಕೈಕ ಪುತ್ರ. ತನ್ನ ಪ್ರಾಥಮಿಕ ಶಿಕ್ಷಣವನ್ನು ಮತ್ತಿಕೆರೆಯಲ್ಲಿ ಮುಗಿಸಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಹೊರವಲಯಕ್ಕೆ ತೆರಳಿದರು. ಆದರೆ ಹಣದ ಅಭಾವದಿಂದಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ, ಶಾಲೆಯನ್ನು ಬಿಟ್ಟು ವ್ಯವಸಾಯ ಮಾಡಲು ಮುಂದಾದರು. ಸಣ್ಣ ವಯಸ್ಸಿನಲ್ಲಿಯೇ ವೃತ್ತಿ ಜೀವನಕ್ಕೆ ಕಾಲಿಟ್ಟ ಇವರು ೨ ವರ್ಷಗಳ ಕಾಲ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಿದರು. ಇದರ ನಂತರ ಗುತ್ತಿಗೆದಾರನಾಗಿ, ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬೆಂಗಳೂರಿನ ಮಿಲಿಟರಿ ಶಿಬಿರಗಳಿಗೆ ಇಟ್ಟಿಗೆಗಳನ್ನು ಸರಬರಾಜು ಮಾಡುವ ಕೆಲಸದಲ್ಲಿ ತೊಡಗಿದರು.
ಸಾಧನೆಗಳು
[ಬದಲಾಯಿಸಿ]ಎಮ್.ಎಸ್.ಆರ್. ಅವರು ೧೯೬೨ರಲ್ಲಿ 'ಗೋಕುಲ ವಿದ್ಯಾ ಸಂಸ್ಥೆಯನ್ನು' ಸ್ಥಾಪಿಸುವ ಮೂಲಕ 'ಎಮ್. ಎಸ್. ರಾಮಯ್ಯ ತಾಂತ್ರಿಕ ಸಂಸ್ಥೆಗೆ' ತಳಪಾಯ ಹಾಕಿದರು. ಸುಮಾರು ೧೨ ಶಿಲ್ಪವಿಜ್ಞಾನ ಶಾಖೆಗಳನ್ನು ಹೊಂದಿರುವ 'ಎಮ್.ಎಸ್.ಆರ್.ಐ.ಟಿ', ಪ್ರಸ್ತುತವಾಗಿ ಬೆಂಗಳೂರಿನ ಪ್ರವರ್ತಕಾ ತಾಂತ್ರಿಕ ಸಂಸ್ಥೆಯಾಗಿದೆ.
೧೯೭೯ರಲ್ಲಿ,'ಎಮ್.ಎಸ್.ರಾಮಯ್ಯ ಮೆಡಿಕಲ್ ಕಾಲೇಜು' ಸ್ಥಾಪನೆಗೊಂಡಿತು. ನಂತರ, ವೈದ್ಯಕೀಯ ವಿದ್ಯಾಭ್ಯಾಸದ ಅಗತ್ಯಕ್ಕಾಗಿ, ಎಮ್.ಎಸ್.ರಾಮಯ್ಯ ತಾಂತ್ರಿಕ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು. ಬಹು ವೈಶಿಷ್ಟ್ಯತ ಕೇಂದ್ರದ ದೂರದೃಷ್ಟಿ ಹೊಂದಿದ್ದ ಎಮ್.ಎಸ್.ರಾಮಯ್ಯನವರು, ಎಮ್.ಎಸ್.ಆರ್.ಮೂತ್ರಪಿಂಡ ಶಾಸ್ತ್ರ, ಎಮ್.ಎಸ್.ಆರ್. ಎದೆಯರಿಮೆ ಸಂಸ್ಥೆಗೆ ತಳಪಾಯ ಹಾಕಿದರು. ೧೯೮೫ ರಲ್ಲಿ ಸ್ಥಾಪನೆಯಾದ ಎಮ್.ಎಸ್.ಆರ್.ಮೆಡಿಕಲ್ ಟೀಚಿಂಗ್ ಆಸ್ಪತ್ರೆಯು ಎಮ್.ಎಸ್.ಆರ್. ರವರ ಸಾದನೆಯ ಪಟ್ಟಿಗೆ ಸೇರಿತು.
ಕಾರ್ಖಾನೆಗಳು
[ಬದಲಾಯಿಸಿ]ಸರ್.ಎಮ್.ವಿಶ್ವೇಶ್ವರಯ್ಯನವರನ್ನು ಮಾದರಿಯಾಗಿ ಇಟ್ಟುಕೊಂಡು, ಎಮ್.ಎಸ್.ರಾಮಯ್ಯರವರು ಕೈಗಾರಿಕರಣದಲ್ಲಿ ನಂಬಿಕೆಯನ್ನು ಇಟ್ಟುಕೊಂಡು, ಅದರ ಪ್ರವರ್ತಕರಾದರು.
ಎಮ್.ಎಸ್.ಆರ್.ಅವರು ಬೆಂಬಲ ನೀಡಿದ ಕೆಲವು ಕೈಗಾರಿಕ ಸಂಸ್ಥೆಗಳು ಕೆಳಗಿನಂತಿವೆ:
- ಕ್ವಾಎರ್ನೆರ್ ಜಾನ್ ಬ್ರೌನ್ ಪ್ರೈವೆಟ್ ಲಿಮಿಟೆಡ್.
- ಎಮ್.ಎಸ್.ಆರ್.ಅಂಡ್ ಸನ್ಸ್ ಇನ್ವೆಷ್ಟ್ಮೆಂಟ್ಸ್ ಪ್ರೈವೆಟ್ ಲಿಮಿಟೆಡ್.
- ಇಂಡೊ ಮಲೇಷಿಯನ್ ಟೆಕ್ನೋಪಾಲಿಸ್ ಪ್ರೈವೆಟ್ ಲಿಮಿಟೆಡ್.
- ಎಮ್.ಎಸ್.ರಾಮಯ್ಯ ಇನ್ವೆಷ್ಟ್ಮೆಂಟ್ಸ್ ಅಂಡ ಪ್ರಾಪರ್ಟಿ ಪ್ರೈವೆಟ್ ಲಿಮಿಟೆಡ್.
ಪತ್ರಿಕೋದ್ಯಮ
[ಬದಲಾಯಿಸಿ]ಪ್ರಮುಖ ವ್ಯಕ್ತಿತ್ವವನ್ನು ಹೊಂದಿದ್ದ ಎಮ್.ಎಸ್.ಆರ್.ರವರು ತಮ್ಮ ರಾಜಕೀಯ ಜ್ಞಾನದ ಮೂಲಕ ಪತ್ರಿಕೋದ್ಯಮದ ಬಗ್ಗೆ ಅಪಾರ ಆಸಕ್ತಿಯನ್ನು ತೋರಿಸಿದರು. ೧೯೫೬ರಲ್ಲಿ "ತಾಯ್ನಾಡು" ಎಂಬ ಮೈಸೂರು ರಾಜ್ಯದ, ಆಗಿನ ಪ್ರಾಚೀನ ದಿನಪತ್ರಿಕೆಯನ್ನು ಶುರುಮಾಡಿದರು. ಈ ಪತ್ರಿಕೆಗಳ ಮೂಲಕ ಯಶಸ್ವಿ ಪಡೆದು, "ಗೋಕುಲ" ಎಂಬ ವಾರ ಪತ್ರಿಕೆ, "ಕೈಲಾಸ" ಎಂಬ ಮಾಸಿಕ ಪತ್ರಿಕೆಗಳನ್ನು ಕನ್ನಡ ಭಾಷೆಯಲ್ಲಿ ಆರಂಭಿಸಿದರು. ರಾಷ್ಟ್ರವಾದಿ ಮತ್ತು ಪತ್ರಿಕೋದ್ಯಮದ ಹರಿಕಾರ ಎನಿಸಿಕೊಂಡ ಇವರ ಪತ್ರಿಕೆಗಳು ಇಂದಿಗೂ ಮಾದರಿ ಪ್ರಕಟಣೆಗಳಾಗಿಯೇ ಉಳಿದು ಬಂದಿವೆ.
ಧರ್ಮಕಾರ್ಯಗಳು
[ಬದಲಾಯಿಸಿ]ಎಮ್.ಎಸ್.ಆರ್ ರವರು ಧರ್ಮಕಾರ್ಯ ಎಂಬ ಸಂಸ್ಥೆಯ ಮೂಲಕ, ಧನಹೀನ ಮತ್ತು ಶ್ಲಾಘನೀಯ ವಿದ್ಯಾರ್ಥಿಗಳಿಗೆ ನೆರವಾದರು. ಇಲ್ಲಿಯವರೆಗೆ ಹಿಂದುಳಿದ ವರ್ಗಕ್ಕೆ ಸೇರಿದ ಸುಮಾರು ೨೫ ಲಕ್ಷ ವಿದ್ಯಾರ್ಥಿಗಳಿಗೆ ಎಮ್.ಎಸ್.ಆರ್.ಟ್ರಸ್ಟ್ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದೆ. ಇದು ಸೇರಿದಂತೆ, ಐ.ಎ.ಎಸ್ ಹಾಗು ಐ.ಪಿ.ಎಸ್ ನಂತಹ ಸರ್ಕಾರಿ ಸೇವೆಗಳಿಗೆ ತೆರಳುವ ಅಭ್ಯರ್ಥಿಗಳಿಗೂ ಸಹ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಸಹಕಾರಿಯಾಗಿದೆ.
ಸಮಾಜದಲ್ಲಿ ಅಭಿವೃದ್ಧಿಯ ಮಹತ್ವವನ್ನು ಅರಿತುಕೊಂಡ ಎಮ್.ಎಸ್.ರಾಮಯ್ಯನವರು, ಬಡವರಿಗೆ ವಸತಿ ಸೌಲಭ್ಯ ಮತ್ತು ಮಧ್ಯಮ ವರ್ಗದವರಿಗೆ ತಕ್ಕ ಬೆಲೆಗೆ ವಸತಿ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಪೂರ್ವದಲ್ಲಿ ಉಪನಗರಗಳಾಗಿದ್ದ ಸ್ಥಳಗಳು ಈಗ ದಶಲಕ್ಷ ಜನರು ವಾಸಿಸುತ್ತಿರುವ ಆಧುನಿಕ ನಗರಗಳ ವಾಣಿಜ್ಯ ತಾಣಗಳಾಗಿವೆ.
ಸತ್ಕಾರಕೂಟ ಸಮಿತಿಯ ಅಧ್ಯಕ್ಷರಾಗಿದ್ದ ಎಮ್.ಎಸ್.ಆರ್ ೧೯೯೦ ರಲ್ಲಿ ಕೈವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದರು. ಈ ಸಮ್ಮೇಳನವು ಇಂದಿಗೂ ಮಾದರಿ ಸಮ್ಮೇಳನವಾಗಿದೆ.
ಪದವಿ ಪುರಸ್ಕಾರ ಮತ್ತು ಪ್ರಶಸ್ತಿಗಳು
[ಬದಲಾಯಿಸಿ]- ಡಾಕ್ಟರ್ ಆಫ್ ಲೆಟರ್ಸ್, ಹನೊರಿಸ್ ಕೌಸ, ತುಮಕೂರು ವಿಶ್ವವಿದ್ಯಾಲಯ.
- ಡಾಕ್ಟರ್ ಆಫ್ ಸೈನ್ಸ್, ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯ, ಬೆಳಗಾವಿ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]