ಎಮ್.ಎಸ್.ಶೀಲಾ
ಎಮ್.ಎಸ್.ಶೀಲಾ | |
---|---|
ಮೂಲಸ್ಥಳ | ಭಾರತ |
ಸಂಗೀತ ಶೈಲಿ | Indian classical music |
ವೃತ್ತಿ | ಶಾಸ್ತ್ರೀಯ ಸಂಗೀತ ಗಾಯಕಿ |
ಅಧೀಕೃತ ಜಾಲತಾಣ | http://www.mssheela.com |
ಎಮ್.ಎಸ್.ಶೀಲಾ ಕರ್ನಾಟಕ ಸಂಗೀತದ ಜನಪ್ರಿಯ ಗಾಯಕಿ. ಇವರು ಶಾಸ್ತ್ರೀಯ ಶೈಲಿ, ಲಘು ಸಂಗೀತ ಹಾಗೂ ಭಕ್ತಿಗೀತೆಗಳ ಗಾಯನದಲ್ಲಿ ಸಮಾನವಾಗಿ ಪ್ರಭುತ್ವ ಸಾಧಿಸಿದ್ದಾರೆ.ಇವರು ದೂರದರ್ಶನ ಹಾಗೂ ಆಕಾಶವಾಣಿ ಎರಡರಲ್ಲೂ ಶಾಸ್ತ್ರೀಯ ಗಾಯನ ಮತ್ತು ಲಘು ಸಂಗೀತ ಎರಡೂ ವಿಭಾಗಗಳಲ್ಲೂ ಉಚ್ಚ ದರ್ಜೆಯ ಕಲಾವಿದರಾಗಿದ್ದಾರೆ.[೧]
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಇವರು ಸಂಗೀತ ಹಿನ್ನಲೆಯ ಕುಟುಂಬದಿಂದ ಬಂದವರಾಗಿದ್ದು, ಖ್ಯಾತ ಗುರು ಆರ್. ಕೆ. ಶ್ರೀಕಂಠನ್ರವರ ಶಿಷ್ಯೆಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಾಧನೆ ಮತ್ತು ಪ್ರಶಸ್ತಿಗಳು
[ಬದಲಾಯಿಸಿ]ದೂರದರ್ಶನ ಹಾಗೂ ಆಕಾಶವಾಣಿಗಳಲ್ಲಿ ನಿಯಮಿತವಾಗಿ ಕಛೇರಿಗಳನ್ನು ನೀಡುತ್ತಿರುವುದರ ಜೊತೆಗೆ ದೇಶ -ವಿದೇಶಗಳ ಹಲವಾರು ನಗರಗಳಲ್ಲೂ ಕಛೇರಿಗಳನ್ನು ನೀಡಿ ಜನಪ್ರಿಯರಾಗಿದ್ದಾರೆ.ಲಘು ಸಂಗೀತ ಪ್ರಕಾರದಲ್ಲಿ ಇವರು ಹಾಡಿದ ಲಲಿತಾ ಸಹಸ್ತ್ರನಾಮ,ಶಾರದಾ ಸುಪ್ರಭಾತ,ಸೌಂದರ್ಯ ಲಹರಿ ಮನೆಮಾತಾಗಿದೆ.[೧]
ಇವರ ಸಂಗೀತ ಸಾಧನೆಯನ್ನು ಗಮನಿಸಿ ಕರ್ನಾಟಕ ಸರಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಹಲವಾರು ಸಂಘಸಂಸ್ಥೆಗಳೂ ಇವರನ್ನು ಗೌರವಿಸಿದ್ದು,ಶೃಂಗೇರಿ ಶಾರದಾ ಪೀಠದ ಆಸ್ಥಾನ ವಿದುಷಿಯಾಗಿ ಗೌರವಿಸಲ್ಪಟ್ಟಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Ganakalashree M S Sheela". Archived from the original on 2013-10-16. Retrieved 2013-11-27.