ಎಬೊನೈಟ್

ಎಬೊನೈಟ್ ಅಧಿಕ ಗಂಧಕ ಬೆರೆತ ಬಿರುಸಾದ ರಬ್ಬರ್.[೧][೨] ರಬ್ಬರ್ ಮತ್ತು ಗಂಧಕವನ್ನು ಬೆರೆಸಿ ೧೪೦೦ - ೧೬೦೦ ಸೆಂ.ಗ್ರೇ. ಉಷ್ಣತೆಗೆ ಕಾಸಿ ಇದನ್ನು ತಯಾರಿಸಬಹುದು. ಸಾಮಾನ್ಯ ಉಷ್ಣತಾಮಿತಿಗಳಲ್ಲಿ ಬಿರುಸಾಗಿದ್ದು ಕಾಸಿದಾಗ ಮೃದುವಾಗುವುದು. ಸ್ಥಿತಿಸ್ಥಾಪಕತ್ವ ಗುಣವಿಲ್ಲ. ಗಡಸು ಮೈ. ಗೀರುನಿರೋಧಕವಾಗಿದೆ. ಎರಕಹೊಯ್ದು ರಂಧ್ರ ಮಾಡಿ ಚೆನ್ನಾಗಿ ಹೊಳೆಯುವಂತೆಯೂ ಮಾಡಬಹುದು. ವಿದ್ಯುನ್ನಿರೋಧಕವಸ್ತು. ಹಲವಾರು ರಾಸಾಯನಿಕಗಳು ಇದರೊಡನೆ ವರ್ತಿಸುವುದಿಲ್ಲ.
ಉಪಯೋಗಗಳು[ಬದಲಾಯಿಸಿ]
ರೇಡಿಯೊ, ತಾಂತ್ರಿಕ ಮುಂತಾದ ಉದ್ದಿಮೆಗಳಲ್ಲಿ ಹೆಚ್ಚಿನ ಉಪಯೋಗವಿದೆ. ರಸಾಯನೋದ್ಯಮದಲ್ಲಿ ರಕ್ಷಕ ಪದರವಾಗಿ ಉಪಯೋಗಿಸುವರು. ಅಚ್ಚುಹಾಕಿ ಕೋಶಪೆಟ್ಟಿಗೆ ಫೌಂಟನ್ ಪೆನ್ನು ಕೊಳವೆ,[೩][೪] ಟೆಲಿಫೋನ್, ಹೆಣಿಗೆ, ತಂಬಾಕು ಚಿಲುಮೆ ಮುಂತಾದ ಹಲವಾರು ನಿತ್ಯೋಪಯೋಗಕಾರಿ ವಸ್ತುಗಳನ್ನು ಇದರಿಂದ ತಯಾರಿಸಬಹುದು.
ಉಲ್ಲೇಖಗಳು[ಬದಲಾಯಿಸಿ]
- ↑ Hartgummi (Ebonite) (in German)
- ↑ "eboDUST Ebonite/Hard-rubber dust". Archived from the original on 2014-12-05. Retrieved 2014-11-30.
- ↑ "What Is Ebonite?". Unsharpen. Retrieved 19 July 2021.
- ↑ "Ebonite". fountainpen.it. Retrieved 2022-04-02.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: