ವಿಷಯಕ್ಕೆ ಹೋಗು

ಸಾಪೇಕ್ಷ ದಿಕ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಡಗಡೆ ಇಂದ ಪುನರ್ನಿರ್ದೇಶಿತ)

ಒಬ್ಬ ಮಾನವನಿಗೆ ಸಾಪೇಕ್ಷವಾಗಿ x (ಬಲ-ಎಡ), y (ಮುಂದೆ-ಹಿಂದೆ) ಮತ್ತು z (ಮೇಲೆ-ಕೆಳಗೆ) ಅಕ್ಷಗಳನ್ನು ವಿವರಿಸುವ ಬಲಗೈ ಕಾರ್ಟೇಸಿಯನ್ ನಿರ್ದೇಶನಾಂಕ ವ್ಯೂಹ.

ಎಡ, ಬಲ, ಮುಂದೆ, ಹಿಂದೆ, ಮೇಲೆ, ಮತ್ತು ಕೆಳಗೆ ಇವು ಅತ್ಯಂತ ಸಾಮಾನ್ಯ ಸಾಪೇಕ್ಷ ದಿಕ್ಕುಗಳು. ಯಾವುದೇ ಸಾಪೇಕ್ಷ ದಿಕ್ಕುಗಳಿಗೆ ಯಾವ ನಿರಪೇಕ್ಷ ದಿಕ್ಕೂ ಅನುರೂಪವಾಗಿಲ್ಲ. ಇದು ಭೌತಶಾಸ್ತ್ರದ ನಿಯಮಗಳ ಸ್ಥಾನಾಂತರ ಅಪರಿಣಾಮಿತ್ವದ ಒಂದು ಪರಿಣಾಮ: ಸಡಿಲವಾಗಿ ಹೇಳುವುದಾದರೆ, ಒಬ್ಬರು ಯಾವ ದಿಕ್ಕಿನಲ್ಲಿ ಚಲಿಸಿದರೂ ಪ್ರಕೃತಿಯ ವರ್ತನೆ ಸಮಾನವಾಗಿರುತ್ತದೆ. ಮೈಕಲ್ಸನ್-ಮೊರ್ಲಿ ಶೂನ್ಯ ಫಲಿತಾಂಶ ತೋರಿಸಿಕೊಟ್ಟಂತೆ, ನಿರಪೇಕ್ಷ ಜಡತ್ವದ ಉಲ್ಲೇಖ ಚೌಕಟ್ಟು ಅಂತ ಯಾವುದೂ ಇಲ್ಲ. ಆದರೆ, ಸಾಪೇಕ್ಷ ದಿಕ್ಕುಗಳ ನಡುವೆ ನಿರ್ದಿಷ್ಟ ಸಂಬಂಧಗಳಿವೆ. ಎಡ ಮತ್ತು ಬಲ, ಮುಂದೆ ಮತ್ತು ಹಿಂದೆ, ಹಾಗೂd ಮೇಲೆ ಮತ್ತು ಕೆಳಗೆ ಪರಸ್ಪರ ಪೂರಕವಾದ ದಿಕ್ಕುಗಳ ಮೂರು ಯುಗ್ಮಗಳು, ಮತ್ತು ಪ್ರತಿ ಯುಗ್ಮವು ಇತರ ಎರಡೂ ಯುಗ್ಮಗಳಿಗೆ ಲಂಬಕೋನೀಯವಾಗಿದೆ. ಸಾಪೇಕ್ಷ ದಿಕ್ಕುಗಳನ್ನು ಸ್ವಕೇಂದ್ರಿತ ನಿರ್ದೇಶನಾಂಕಗಳು ಎಂದೂ ಕರೆಯಲಾಗುತ್ತದೆ.[]

ಸಹಜ ಪರಿಸರದ ರೇಖಾಗಣಿತವನ್ನು ಆಧರಿಸಿದ ಎಡ ಮತ್ತು ಬಲದ ವ್ಯಾಖ್ಯಾನಗಳು ಒಡ್ಡೊಡ್ಡಾಗಿರುವುದರಿಂದ, ಆಚರಣೆಯಲ್ಲಿ, ಸಾಪೇಕ್ಷ ದಿಕ್ಕಿನ ಶಬ್ದಗಳ ಅರ್ಥವನ್ನು ಸಂಪ್ರದಾಯ, ಸಂಸ್ಕೃತಿಗ್ರಹಣ, ಶಿಕ್ಷಣ, ಮತ್ತು ನೇರ ಉಲ್ಲೇಖದ ಮೂಲಕ ತಿಳಿಸಲಾಗುತ್ತದೆ. ಮೇಲೆ ಮತ್ತು ಕೆಳಗಿನ ಒಂದು ಸಾಮಾನ್ಯ ವ್ಯಾಖ್ಯಾನವು ಗುರುತ್ವ ಮತ್ತು ಭೂಮಿಯನ್ನು ಉಲ್ಲೇಖದ ಚೌಕಟ್ಟಾಗಿ ಬಳಸುತ್ತದೆ. ಭೂಮಿ ಮತ್ತು ಯಾವುದೇ ಇತರ ಹತ್ತಿರದ ವಸ್ತುವಿನ ನಡುವೆ ಪಾತ್ರವಹಿಸುವ ಬಹಳ ಗಮನಾರ್ಹವಾದ ಗುರುತ್ವ ಬಲವಿರುವುದರಿಂದ, ಭೂಮಿಯ ಸಂಬಂಧದಲ್ಲಿ ವಸ್ತುವಿಗೆ ಮುಕ್ತವಾಗಿ ಬೀಳಲು ಅವಕಾಶ ನೀಡಿದಾಗ ವಸ್ತು ಚಲಿಸುವ ದಿಕ್ಕನ್ನು ಕೆಳದಿಕ್ಕು ಎಂದು ವ್ಯಾಖ್ಯಾನಿಸಲಾಗುತ್ತದೆ. ಹಾಗಾಗಿ ಮೇಲ್ ದಿಕ್ಕನ್ನು ಕೆಳದಿಕ್ಕಿನ ವಿರುದ್ಧ ದಿಕ್ಕು ಎಂದು ವ್ಯಾಖ್ಯಾನಿಸಲಾಗುತ್ತದೆ. ಮತ್ತೊಂದು ಸಾಮಾನ್ಯ ವ್ಯಾಖ್ಯಾನವು ಲಂಬವಾಗಿ ನಿಂತ ಮಾನವ ಶರೀರವನ್ನು ಉಲ್ಲೇಖದ ಚೌಕಟ್ಟಾಗಿ ಬಳಸುತ್ತದೆ. ಆ ಸಂದರ್ಭದಲ್ಲಿ, ಮೇಲ್ ದಿಕ್ಕನ್ನು ಪಾದಗಳಿಂದ ತಲೆಯವರೆಗಿನ ದಿಕ್ಕೆಂದು ವ್ಯಾಖ್ಯಾನಿಸಲಾಗುತ್ತದೆ, ಮತ್ತು ಭೂಮಿಯ ಮೇಲ್ಮೈಗೆ ಲಂಬವಾಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ, ಮೇಲ್ ದಿಕ್ಕು ಸಾಮಾನ್ಯವಾಗಿ ಗುರುತ್ವದ ಎಳೆತಕ್ಕೆ ವಿರುದ್ಧವಾದ ದಿಶಾತ್ಮಕ ಸ್ಥಾನವಾಗಿದೆ.

ಸಾಮಾನ್ಯ ಉಲ್ಲೇಖ ಚೌಕಟ್ಟು ಬೇಕಾದ ಸಂದರ್ಭಗಳಲ್ಲಿ, ಸ್ವಕೇಂದ್ರಿತ ನೋಟವನ್ನು ಬಳಸುವುದು ಅತ್ಯಂತ ಸಾಮಾನ್ಯವಾಗಿರುತ್ತದೆ. ರಸ್ತೆ ಚಿಹ್ನೆಗಳು ಒಂದು ಸರಳ ಉದಾಹರಣೆ. ವೈದ್ಯಶಾಸ್ತ್ರ ಮತ್ತು ವಿಜ್ಞಾನದಲ್ಲಿ, ನಿಖರ ವ್ಯಾಖ್ಯಾನಗಳು ಬಹಳ ಮುಖ್ಯವಾಗಿರುವುದರಿಂದ, ಸಾಪೇಕ್ಷ ದಿಕ್ಕುಗಳು (ಎಡ ಮತ್ತು ಬಲ) ಜೀವಿಯ ಬದಿಗಳು, ವೀಕ್ಷಕನ ಬದಿಗಳಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. Deutscher, Guy (August 26, 2010). "Does Your Language Shape How You Think?". ದ ನ್ಯೂ ಯಾರ್ಕ್ ಟೈಮ್ಸ್. Retrieved August 31, 2010.