ಎಚ್. ವೈ.ಶಾರದಾಪ್ರಸಾದ
ಗೋಚರ
ಹೊಳೆನರಸೀಪುರ ಯೋಗನರಸಿಂಹ ಶಾರದಾ ಪ್ರಸಾದರು,ಅವರ ಗೆಳೆಯರಿಗೆ ಸಾಹಿತ್ಯಾಭಿಮಾನಿಗಳಿಗೆ ಡಾ.ಎಚ್.ವೈ.ಶಾರದಾಪ್ರಸಾದ, ರೆಂದು ಚಿರಪರಿಚಿತರಾಗಿದ್ದಾರೆ. ಅವರು ಪ್ರಧಾನಮಂತ್ರಿಯ ಕಾರ್ಯಾಲಯದಲ್ಲಿ ೨೨ ವರ್ಷಗಳವರೆಗೆ ಪ್ರೆಸ್ ಇನ್ಫರ್ಮೇಶನ್ ಅದಿಕಾರಿಯಾಗಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ, ಹಾಗೂ ರಾಜೀವ ಗಾಂಧಿಯವರಿಗೆ ಇವರು ಮಾಧ್ಯಮ ಸಲಹೆಗಾರರಾಗಿದ್ದರು.[೧]. ಇವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇವರು ಶಿವರಾಮ ಕಾರಂತರು ಬರೆದ ಈ ಕಾದಂಬರಿಗಳನ್ನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ್ದಾರೆ:
- ಕುಡಿಯರ ಕೂಸು (Headman of the Little Hill)
- ಮೈಮನಗಳ ಸುಳಿಯಲ್ಲಿ (The woman of Basrur)
- ಹುಚ್ಚು ಮನಸ್ಸಿನ ಹತ್ತು ಮುಖಗಳು (The faces of a crazy mind)
- ಆರ್.ಕೆ.ನಾರಾಯಣರವರ Swami and his friends ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಆಂಗ್ಲಾ ಭಾಷಾ ಕೃತಿಗಳು
[ಬದಲಾಯಿಸಿ]- ಶಾರದಾಪ್ರಸಾದರವರ ಸ್ವತಂತ್ರ ಕೃತಿ: Exploring Karnataka
- Selected Works of Jawaharlal Nehru: 18 November 1955 - 31 January 1956 (Second Series, 31)
ಉಲ್ಲೇಖಗಳು
[ಬದಲಾಯಿಸಿ]- ↑ ವಿಶ್ವೇಶ್ವರ ಭಟ್ಇವರು ದಿ:೦೭-೦೭-೦೭ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಲೇಖನ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |