ಎಚ್.ಆರ್.ಚಂದ್ರಶೇಖರ್

ವಿಕಿಪೀಡಿಯ ಇಂದ
Jump to navigation Jump to search
ಡಾ. ಎಚ್. ಆರ್. ಚಂದ್ರಶೇಖರ್
H. R. Chandrasekhar.jpg
ಡಾ.ಹೊಳಲ್ಕೆರೆ ರಂಗರಾವ್ ಚಂದ್ರಶೇಖರ್, ತಮ್ಮ ಪಿ.ಎಚ್.ಡಿ.ಪ್ರಬಂಧವನ್ನು ಮಂಡಿಸುತ್ತಿರುವುದು.
ಹುಟ್ಟು
ಚಂದ್ರಶೇಖರ

ವ್ಯಯನಾಮ ಸಂವತ್ಸರದ ಮಾರ್ಗಶೀರ್ಷ ಮಾಸದ, ಶುದ್ಧ ಪಂಚಮಿ,ಶುಕ್ರವಾರ, ೨೯,೧೧,೨೯೪೬,
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ
ರಾಷ್ಟ್ರೀಯತೆಭಾರತೀಯ ಅಮೆರಿಕನ್
ಶಿಕ್ಷಣಪರ್ಡ್ಯೂ ವಿಶ್ವವಿದ್ಯಾಲಯ ಪಿ.ಎಚ್.ಡಿ (೧೯೭೩)ಆಲ್ಫ್ರೆಡ್ ಪಿ.ಸ್ಲೋನ್ ಫೆಲೋಶಿಪ್ ವಿಜೇತರು, past consultant to the United Nations Development Program (UNDP) under the TOKTEN project. ಜರ್ಮನಿಯ ಸ್ಟುಟ್ಗರ್ಟ್ ನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿ ಟ್ಯೂಟ್ ನಲ್ಲಿ Post Doctoral ಸಂಶೋಧಕರಾಗಿದ್ದರು.
ಅಧ್ಯಯನ ಮಾಡಿದ ವಿದ್ಯಾಕೇಂದ್ರಗಳುಕಾನ್ಪುರ್ ಐ.ಐ.ಟಿ;ಎಮ್.ಎಸ್.ಸಿ.(೧೯೬೮)
ವೃತ್ತಿಅಮೆರಿಕದ ಮಿಸ್ಸೂರಿ ವಿಶ್ವವಿದ್ಯಾಲಯದಲ್ಲಿ ಭೌತ ಮತ್ತು ಖಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ
ಖ್ಯಾತಿ'Tales from Indian epics' ಎಂಬ ಇಂಗ್ಲೀಷ್ ಭಾಷೆಯ ಕಥಾಸಂಕಲನದ ರಚನಾಕಾರರು, 'ಕರ್ಣಾಟಕ ಭಾಗವತವೆಂಬ ಬೃಹತ್ ಗ್ರಂಥದ ಲಿಪಿಕಾರ, ಹಾಗೂ ಸಂಪಾದಕ'
ಜೀವನ ಸಂಗಾತಿ(ಗಳು)ಡಾ.ಮೀರಾ ಚಂದ್ರಶೇಖರ್
ಜಾಲತಾಣweb.missouri.edu/~chandrasekharh/

ಡಾ.ಎಚ್.ಆರ್.ಚಂದ್ರಶೇಖರ್,[೧]ಅಮೆರಿಕದ ಗೆಳೆಯರಿಗೆ ಆತ್ಮೀಯರಿಗೆಲ್ಲಾ 'ಚಂದ್ರ' ಎಂದೇ ಹೆಸರುವಾಸಿಯಾಗಿದ್ದಾರೆ. ಡಾ.ಚಂದ್ರ, ಭೌತಶಾಸ್ತ್ರದ ಪ್ರೊಫೆಸರ್. ’ಹೂಸ್ಟನ್ ಕನ್ನಡ ವೃಂದ,’ ದಲ್ಲಿ ೧೨, ನೇ, ಏಪ್ರಿಲ್, ೨೦೦೮ ರಂದು, ಬಿಡುಗಡೆಯಾಗಿರುವ,'ಎರಡು ಸಂಪುಟಗಳ ಕರ್ಣಾಟಕ ಭಾಗವತ' ಎಂಬ ಬೃಹತ್ ಕೃತಿಯನ್ನು ಹೊರತಂದ ಕನ್ನಡ ಕವಿ. ಅವರು ಚಿತ್ರದುರ್ಗಜಿಲ್ಲೆಯ ಹೊಳಲ್ಕೆರೆ,[೨] ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಕರ್ಣಾಟಕ ಭಾಗವತವನ್ನು ಸಂಪಾದಿಸಿದ ಲಿಪಿಕಾರ, ಅನುವಾದಕ. ಡಾ.ಚಂದ್ರಶೇಖರ್ ಒಬ್ಬ ಪ್ರತಿಭಾನ್ವಿತ ಭೌತಶಾಸ್ತ್ರದ ಪ್ರಾಧ್ಯಾಪಕರು, ಕರ್ಣಾಟಕ ಭಾಗವತ ಗ್ರಂಥಕ್ಕೆ ಆಧಾರವಾದ ತಾಳೆಗರಿಯ ಪ್ರತಿಗಳನ್ನು ಕ್ರಿ. ಶ. ೧೭೫೫ ರಲ್ಲಿ, ಲಿಖಿಸಿದ 'ಶ್ರೀ.ರಾಮಣ್ಣಯ್ಯ,' ನವರು, ಇವರ ಪೂರ್ವಜರು.

ಬಾಲ್ಯ ಹಾಗೂ ವಿದ್ಯಾರ್ಥಿ ಜೀವನ[ಬದಲಾಯಿಸಿ]

'ಹೊಳಲ್ಕೆರೆ ರಂಗರಾವ್ ಚಂದ್ರಶೇಖರ್' ರವರು,[೩] ಪ್ರೌಢಶಾಲೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಪ್ರಥಮ ಸ್ಥಾನ (ರಾಜ್ಯಕ್ಕೇ ಪ್ರಪ್ರಥಮ ರ‍್ಯಾಂಕ್), ಹಾಗೂ ಚಿನ್ನದ ಪದಕ ಗಳನ್ನು ಗಳಿಸಿ ಅಮೆರಿಕದ ಸಂಯುಕ್ತ ಸಂಸ್ಥಾನದ 'ಪರ್ಡ್ಯೂ ವಿಶ್ವವಿದ್ಯಾಲಯ,' ದಲ್ಲಿ ೧೯೭೩ ರಲ್ಲಿ 'ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ'ಪದವಿ ಪಡೆದರು. ತಮ್ಮ ಪಿ.ಯು.ಸಿ ಹಾಗೂ ಬಿ.ಎಸ್.ಸಿ ಪದವಿಗಳಿಸುವ ಸಮಯದಲ್ಲಿ 'ಬೆಂಗಳೂರಿನ ನ್ಯಾಷನಲ್ ಕಾಲೇಜ್' ನಲ್ಲಿ ವಿದ್ಯಾಭ್ಯಾಸ ಮಾಡುವ ಸಮಯ ದಲ್ಲಿ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್, ಬೆಂಗಳೂರು-೫೬೦ ೦೦೪ ನಲ್ಲಿದ್ದುಕೊಂಡು ತಮ್ಮ ವ್ಯಾಸಂಗವನ್ನು ನಡೆಸಿದರು. [೪] ಅಮೆರಿಕ, ಜರ್ಮನಿ, ಮುಂತಾದ ದೇಶಗಳಲ್ಲಿ ಭೌತಶಾಸ್ತ್ರದ ಸಂಶೋಧನೆ ನಡೆಸಿ, ಈಗ 'ಮಿಸ್ಸೂರಿ ಪ್ರಾಂತ್ಯದ ವಿಶ್ವವಿದ್ಯಾಲಯ', ದಲ್ಲಿ ಪ್ರಾಧ್ಯಾಪಕರೂ, 'ಭೌತಶಾಸ್ತ್ರ ವಿಭಾಗದ ಅಧ್ಯಕ್ಷ'ರೂ ಆಗಿದ್ದಾರೆ.[೫] (Chair). ಇವರಿಗೆ ಪ್ರಖ್ಯಾತವಾದ 'ಆಲ್ಫ್ರೆಡ್ ಸ್ಲೋನ್', ಮುಂತಾದ ಪ್ರಶಸ್ತಿಗಳು ದೊರೆತಿವೆ. 'ವಿಶ್ವಸಂಸ್ಥೆಯ ಒಂದು ವಿಭಾಗದಿಂದ ಪ್ರಶಸ್ತಿ' ಪಡೆದು ೧೯೯೩ ರಲ್ಲಿ ಭಾರತದ ಪ್ರಸಿದ್ಧ ಸಂಶೋಧನಾನಿಲಯಗಳಲ್ಲಿ ತಮ್ಮ 'ಸಂಶೋಧನೆಯ ಸಾರ'ವನ್ನು ವಿಸ್ತರಿಸಿದರು. ಸುಮಾರು ನೂರೈವತ್ತು ಸಂಶೋಧನ ಪತ್ರಿಕೆಗಳನ್ನೂ ಅನೇಕ 'ಸಂಶೊಧಕ ಗ್ರಂಥಗಳಲ್ಲಿ ಅಧ್ಯಾಯ'ಗಳನ್ನೂ 'ಅಂತಾರಾಷ್ಟ್ರೀಯ ಸಮ್ಮೇಳನಗಳ ಸಂಚಿಕೆ'ಗಳಲ್ಲಿ 'ಪ್ರಬಂಧಗಳನ್ನೂ' ಪ್ರಕಟಿಸಿದ್ದಾರೆ. [೬]

'ಶಾಂತಿ ಮಂದಿರದ ಸಂಸ್ಥಾಪಕರಲ್ಲೊಬ್ಬರು'[ಬದಲಾಯಿಸಿ]

'ಚಂದ್ರರವರು','ಮಿಸ್ಸೂರಿ ರಾಜ್ಯದ, ಕೊಲಂಬಿಯದ, ಶಾಂತಿ ಮಂದಿರ್,' ನ ಸ್ಥಾಪನೆಯಲ್ಲಿ ಪಾತ್ರ ವಹಿಸಿದ, ಮೊದಲ ಭಾರತೀಯ ತಂಡದಲ್ಲಿದ್ದಾರೆ. ಅಮೆರಿಕದ ಮಿಸ್ಸೂರಿರಾಜ್ಯದ ಕೊಲಂಬಿಯದಲ್ಲಿ 'ಶಾಂತಿಮಂದಿರ್,' ಎಂಬ ಭಾರತೀಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಸಾರ ಮಾಡಲು ಕಂಕಣಬದ್ಧವಾಗಿರುವ ಮಂದಿರದ ಸ್ಥಾಪನೆಯಲ್ಲಿ ಮೊದಲಿನಿಂದಲೂ ಶ್ರಮಿಸಿದ, ೧೦ ಪರಿವಾರಗಳಲ್ಲಿ ಡಾ.ಚಂದ್ರಾ ಅವರದೂ ಒಂದು ಪರಿವಾರ. ಈ ಪರಿವಾರಗಳು ಪ್ರಮುಖ ಟ್ರಸ್ಟಿಗಳಾಗಿ ಮಂದಿರಕ್ಕೆ ಬೇಕಾಗಿದ್ದ ಸ್ಥಳವನ್ನು ಖರೀದಿಸಿ ವಹಿಸಿ ಕೊಟ್ಟಿದ್ದಾರೆ. ನಂತರ ಹಲವಾರು ಭಾರತೀಯ ಪರಿವಾರಗಳು, ತಮ್ಮ ಯೋಗದಾನ ಮಾಡಿ,'ಶಾಂತಿಮಂದಿರ,'ದ ಪ್ರಗತಿಗೆ ಕಾರಣರಾಗಿದ್ದಾರೆ. 'ಶಾಂತಿಮಂದಿರ,' ಹಮ್ಮಿಕೊಂಡ ಕಾರ್ಯಕ್ರಮಗಳು ಹಲವಾರು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನ # 'ವೆಬ್ ಸೈಟ್' ನಲ್ಲಿ ವೀಕ್ಷಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. ಡಾ. ಚಂದ್ರಶೇಖರ್ ವೆಬ್ ಸೈಟ್'
  2. 'Holalkere', Chitradurga District, Karnataka Pincode 577526
  3. 'ಸಾಂಸ್ಕೃತಿಕ ಮೌಲ್ಯಗಳ ಭೌತವಿಜ್ಞಾನಿ ಡಾ. ಎಚ್. ಆರ್. ಚಂದ್ರಶೇಖರ್'
  4. ಡಾ.ಚಂದ್ರಶೇಖರ್ ರ ವೆಬ್ಸೈಟ್
  5. emeritus-faculty
  6. research/research-highlights/faculty-profile-h-r-chandrasekhar/