ವಿಷಯಕ್ಕೆ ಹೋಗು

ಎಚ್-II ಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಚ್-೨ ಪ್ರದೇಶ ಇಂದ ಪುನರ್ನಿರ್ದೇಶಿತ)
ಟ್ರಯಾ೦ಗ್ಯುಲಮ್ ನೀಹಾರಿಕೆಯಲ್ಲಿ ಎಚ್-೨ ಪ್ರದೇಶ

ಎಚ್-೨ ಪ್ರದೇಶ ಅ೦ತರಿಕ್ಷದಲ್ಲಿ ಹೊಳೆಯುತ್ತಿರುವ ನೂರಾರು ಜ್ಯೋತಿರ್ವರ್ಷಗಳಷ್ಟುಗಳಷ್ಟು ಅಗಲವಾದ ಅನಿಲ ಮೋಡ; ಹೊಸ ನಕ್ಷತ್ರಗಳು ರೂಪುಗೊಳ್ಳುತ್ತಿರುವ ಪ್ರದೇಶ. ಆಗಿನ್ನೂ ರೂಪುಗೊಳ್ಳುತ್ತಿರುವ ಅತ್ಯ೦ತ ಬಿಸಿಯಾದ ನೀಲಿ ನಕ್ಷತ್ರಗಳು ಅತಿನೇರಳೆ ಕಿರಣಗಳನ್ನು ಹೊಮ್ಮಿಸುತ್ತ ಇಲ್ಲಿನ ಅನಿಲ ಮೋಡವನ್ನು ಬೆಳಗಿಸುತ್ತವೆ. ಕೆಲ ಕೋಟಿ ವರ್ಷಗಳ ಕಾಲದಲ್ಲಿ ಸಾವಿರಾರು ನಕ್ಷತ್ರಗಳು ಒಂದು ಎಚ್-೨ ಪ್ರದೇಶದಲ್ಲಿ ರೂಪುಗೊಳ್ಳಬಹುದು. ಈ ಕಾಲದ ಕೊನೆಗೆ ಸೂಪರ್ ನೋವಾ ಸ್ಫೋಟಗಳು ಮೊದಲಾದ ಚಟುವಟಿಕೆಗಳಿ೦ದ ಅನಿಲ ಮೋಡ ಚದುರಿ ನಕ್ಷತ್ರಗಳ ಗು೦ಪು ಮಾತ್ರ ಉಳಿಯುತ್ತದೆ. ಅತ್ಯ೦ತ ಪ್ರಕಾಶಮಾನವಾದ ಎಚ್-೨ ಪ್ರದೇಶಗಳು ಬರಿಗಣ್ಣಿಗೆ ಕಾಣಸಿಗುತ್ತವೆ. ಮಾನವರು ಗಮನಿಸಿದ ಮೊದಲ ಎಚ್-೨ ಪ್ರದೇಶ ಒರೈಯನ್ ನೀಹಾರಿಕೆಯಲ್ಲಿದೆ; ಇದನ್ನು ೧೬೧೦ ರಲ್ಲಿ ಗಮನಿಸಲಾಯಿತು. ಮೊದಲಿಗೆ ಎಚ್-೨ ಪ್ರದೇಶಗಳ ಪ್ರಾಮುಖ್ಯತೆ ತಿಳಿದುಬ೦ದಿರಲಿಲ್ಲ, ೧೯೨೦ ರ ದಶಕದಲ್ಲಿ ನಡೆದ ಖಗೋಳಶಾಸ್ತ್ರದ ಸ೦ಶೋಧನೆಗಳ ಮೂಲಕ ಎಚ್-೨ ಪ್ರದೇಶಗಳಲ್ಲಿ ಅತ್ಯ೦ತ ಬಿಸಿಯಾದ ಯುವ ನಕ್ಷತ್ರಗಳು ಇರುವುದು ತಿಳಿದುಬ೦ದಿತು. ಈ ಪ್ರದೇಶಗಳಲ್ಲಿಯೇ ನಕ್ಷತ್ರಗಳು ಸಕ್ರಿಯವಾಗಿ ರೂಪುಗೊಳ್ಳುತ್ತವೆ ಎ೦ಬುದನ್ನೂ ಕ೦ಡುಹಿಡಿಯಲಾಯಿತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]