ಎಂ.ಸಿ.ಮನಗೂಳಿ
Jump to navigation
Jump to search
ಎಂ.ಸಿ.ಮನಗೂಳಿ | |
---|---|
ಜನನ | ಸಿಂದಗಿ, ವಿಜಯಪುರ, ಕರ್ನಾಟಕ |
ವೃತ್ತಿ | ರಾಜಕೀಯ |
ರಾಷ್ಟ್ರೀಯತೆ | ಭಾರತೀಯ |
ಎಂ.ಸಿ.ಮನಗೂಳಿಯವರು ಪ್ರಸ್ತುತ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ಸಚಿವರು, ಶಿಕ್ಷಣ ಪ್ರೇಮಿಗಳು ಹಾಗೂ ರಾಜಕೀಯ ಧುರೀಣರು.
ಜನನ[ಬದಲಾಯಿಸಿ]
ಮನಗೂಳಿಯವರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು.
ಶಿಕ್ಷಣ[ಬದಲಾಯಿಸಿ]
ಮನಗೂಳಿಯವರು ೧೦ನೇ ತರಗತಿಯವರೆಗೆ ಶಿಕ್ಷಣವನ್ನು ಪೂರೈಸಿದ್ದಾರೆ.
ರಾಜಕೀಯ[ಬದಲಾಯಿಸಿ]
- ಎಂ.ಸಿ.ಮನಗೂಳಿಯವರು ಸಿಂದಗಿ ವಿಧಾನಸಭಾ ಕ್ಷೇತ್ರದಿಂದ 7 ಸಲ ಸ್ಪರ್ಧಿಸಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.[೧]
- ಮನಗೂಳಿಯವರು 1994ರಲ್ಲಿ ಹೆಚ್.ಡಿ.ದೇವೇಗೌಡರ ಸಂಪುಟದಲ್ಲಿ ಸಚಿವರಾದರು.
- ೨೦೧೮ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾದರು.[೨][೩]
ವೈಯಕ್ತಿಕ ಜೀವನ[ಬದಲಾಯಿಸಿ]
ಶ್ರೀಯುತರಿಗೆ ಮೂವರು ಮಕ್ಕಳಿದ್ದು ಸಿಂದಗಿ ನಗರದಲ್ಲಿ ವಾಸವಾಗಿದ್ದಾರೆ.