ಎಂ.ಡಿ.ಗೋಗೇರಿ

ವಿಕಿಪೀಡಿಯ ಇಂದ
Jump to navigation Jump to search

ಎಮ್.ಡಿ.ಗೋಗೇರಿಯವರು ಹುಬ್ಬಳ್ಳಿಯಲ್ಲಿ ನೆಲೆಸಿರುವ ಶಾಲಾಶಿಕ್ಷಕರು. ಇವರ ಕವನ ಹಾಗು ಹರಟೆಗಳು ಸಂಯುಕ್ತ ಕರ್ನಾಟಕ , ಕರ್ಮವೀರ , ಕಸ್ತೂರಿ , ಸುಧಾ , ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಜನನ/ಜೀವನ[ಬದಲಾಯಿಸಿ]

೨೧-೧-೧೯೪೨ ಹುಟ್ಟಿದ್ದು ರೋಣ ತಾಲ್ಲೂಕು ಗೋಗೇರಿಯಲ್ಲಿ. ತಂದೆ ದಸ್ತಗೀರ ಸಾಹೇಬ, ತಾಯಿ ಅಲ್ಲಮ್ಮಾ. ಫಂಡು ಸಾಹೇಬ ಅಂಗಡಿ ಎಂಬುವರ ಗಾಂವಠಿ ಶಾಲೆಯಲ್ಲಿ ನಾಲ್ಕನೆಯ ಇಯತ್ತೆ ಪಾಸು. ಕುರುಡಿಗಿ, ನಿಡಗುಂದಿ, ರೋಣದಲ್ಲಿ ಓದಿ ಮುಲ್ಕಿ ಪರೀಕ್ಷೆ ಪಾಸು. ಹೈಸ್ಕೂಲು ವಿದ್ಯಾಭ್ಯಾಸ ಗಜೇಂದ್ರಗಡದಲ್ಲಿ. ಹುಬ್ಬಳ್ಳಿಯಲ್ಲಿ ಟಿ.ಸಿ.ಎಚ್. ಟ್ರೈನಿಂಗ್. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬೊಮ್ಮನ ಹಳ್ಳಿಯಲ್ಲಿ ಶಿಕ್ಷಕ ವೃತ್ತಿ ಆರಂಭ.

ಶಿಕ್ಷಕ ವೃತ್ತಿ[ಬದಲಾಯಿಸಿ]

 • ಸ್ವಂತ ಜಿಲ್ಲೆಯಾದ ಧಾರವಾಡ ಜಿಲ್ಲೆಯಲ್ಲೇ ಶಿಕ್ಷಕ ವೃತ್ತಿಗಾಗಿ ಹುಡುಕಾಟ. ಅದೃಷ್ಟದಿಂದ ಸಂದರ್ಶನಕ್ಕೆ ಕರೆ. ಧಾರವಾಡ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶೀರನ ಹಳ್ಳಿಯಲ್ಲಿ ಶಿಕ್ಷಕರಾಗಿ ನೇಮಕಾತಿ ಹುಕುಂ. ಇದ್ದ ಶಾಲೆ ಬಿಟ್ಟರೆ ಶಾಲೆ ಮುಚ್ಚುತ್ತಾ ರೆಂದು ರಜೆ ಬರೆದು ಸ್ವಂತ ಊರಿಗೆ. ನಂತರ ರಿಜಿಸ್ಟರ್ ಅಂಚೆಯ ಮೂಲಕ ರಾಜೀನಾಮೆ ಪತ್ರ ರವಾನೆ. ಬೊಮ್ಮನಹಳ್ಳಿಯ ರೂಮಿನಲ್ಲಿದ್ದ ಹಾಸಿಗೆ, ಸ್ಟೌವ್, ಬಟ್ಟೆ-ಬರೆ ದೇವರಪಾಲು.
 • ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಲಿಸುತ್ತ, ಕಲಿಯುತ್ತ ಬೆಳೆದ ಸಾಹಿತ್ಯದ ಗೀಳು. ವಿದ್ಯಾರ್ಥಿಗಳಿಗೆ ಅಭಿನಯ, ಗೀತೆ, ಪ್ರಹಸನ ತರಬೇತಿ. ಆ ಶಾಲೆಯಿಂದಲೂ ಎತ್ತಂಗಡಿ. ಕಲಘಟಕಿ ತಾಲ್ಲೂಕಿನ ಮಡಕಿ ಹೊನ್ನಳ್ಳಿಗೆ ಸಹಾಯ ಶಿಕ್ಷಕರಾಗಿ ನೇಮ ಕಾತಿ. ಕಾವ್ಯಕೃಷಿ ಪ್ರಾರಂಭ. ಮೊಟ್ಟಮೊದಲ ಕವನ ಸಂಕಲನ ಜೀವಜೇನು ಪ್ರಕಟ. ಮತ್ತೆ ಹುಬ್ಬಳ್ಳಿಗೆ ವರ್ಗಾವಣೆ. ಬಿಡುವಿಲ್ಲದೆ ಕವಿಗೋಷ್ಠಿ, ರೇಡಿಯೋ ಕಾರ್ಯಕ್ರಮಗಳು.
 • ಕಲಿಸುವುದರ ನಡುವೆಯೂ ಕಲಿಯುತ್ತಾ ಮೈಸೂರು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯಗಳ ಬಾಹ್ಯ ವಿದ್ಯಾರ್ಥಿ. ಎಂ.ಎ. ತೇರ್ಗಡೆ. ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನ. ಪತ್ರಿಕೆಗಳಲ್ಲಿ ಹಾಸ್ಯ ಬರಹಗಳೂ ಪ್ರಕಟ. ಪ್ರಕಟಿತ ಪುಸ್ತಕಗಳು-ಆರು ಕವನ ಸಂಕಲನಗಳು, ಮೂರು ಮಕ್ಕಳ ಪದ್ಯಗಳು, ಮೂರು ಏಕಾಂಕ ನಾಟಕಗಳು, ಸಾಹೇಬರ ಸಿಪಾಯಿ, ನಮಸ್ಕಾರ, ಕವಿಪತ್ನಿಯರ ಸಂದರ್ಶನ ಮತ್ತು ಪುರುಷ ಶೋಷಣೆ ಮೊದಲಾದ ಹಾಸ್ಯ ಸಂಕಲನಗಳು. ‘ಹುಬ್ಬಳ್ಳಿಯಿಂದ ಹೂಬಳ್ಳಿಗೆ’ ಸ್ವಾನುಭವದ ಸಂ ಕಥನ ಪ್ರಕಟಣೆ.

ಕವನಸಂಕಲನ[ಬದಲಾಯಿಸಿ]

 1. ಭಾವ ಸಂಗಮ
 2. ಕೂಗುತಿವೆ ಕಲ್ಲುಗಳು
 3. ಇದೋ ಕರ್ನಾಟಕ
 4. ನಾವು ಸರ್ವಸ್ವ-ತಂತ್ರರು
 5. ತಾಯಿಯ ಉಡಿಯಲ್ಲಿ[೧]
 6. ಚುನಾವಣೆಗೆ ನಿಂತ
 7. ದ್ರಾಕ್ಷಿ ಗೊಂಚಲು
 8. ಪುಟ್ಟನ ಪರಿಸರ

ಮಕ್ಕಳ ಕವಿತಾ ಸಂಕಲನ[ಬದಲಾಯಿಸಿ]

 1. ಕುರಿಮರಿ ಬೇಕೆ?
 2. ಶೈಕ್ಷಣಿಕ ಗೀತೆಗಳು
 3. ಸುರುವಾಯ್ತು ನನ್ನ ಸಾಲೆ
 4. ಅಕ್ಕ
 5. ನಿನಾದ ವಿನೋದ

ಸಮಗ್ರ ಕಾವ್ಯ[ಬದಲಾಯಿಸಿ]

ಹಾಸ್ಯ ಸಂಕಲನಗಳು[ಬದಲಾಯಿಸಿ]

 1. ಸಾಹೇಬರ ಸಿಪಾಯಿ,
 2. ನಮಸ್ಕಾರ,
 3. ಕವಿಪತ್ನಿಯರ ಸಂದರ್ಶನ ಮತ್ತು
 4. ಪುರುಷ ಶೋಷಣೆ

ಪ್ರಶಸ್ತಿ/ಪುರಸ್ಕಾರಗಳು[ಬದಲಾಯಿಸಿ]

ಇವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳು-

 1. ಹುಬ್ಬಳ್ಳಿ ಮೂರು ಸಾವಿರ ಮಠ ಪ್ರಶಸ್ತಿ,
 2. ಆದರ್ಶ ಶಿಕ್ಷಕ ಪ್ರಶಸ್ತಿ,
 3. ಹರ್ಡೇಕರ್ ಮಂಜಪ್ಪ ಪ್ರಶಸ್ತಿ ಮುಂತಾದುವು.

ಉಲ್ಲೇಖಗಳು[ಬದಲಾಯಿಸಿ]