ಉಸ್ಮಾನ್ ಖವಾಜ
ಉಸ್ಮಾನ್ ತಾರಿಕ್ ಖವಾಜ, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಎಡಗೈ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬಾಲರ್. ದೇಶೀಯ ಕ್ರಿಕೆಟ್ನಲ್ಲಿ ಕ್ವೀನ್ಸ್ ಲ್ಯಾನ್ದ್ ಹಾಗೂ ನ್ಯೂ ಸೌತ್ ವೇಲ್ಸ್ ತಂಡಗಳಿಗೆ ಆಡುತ್ತಾರೆ. ೨೦೧೬ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಯಂಟ್ಸ್ ತಂಡಕ್ಕೆ ಆಡಿದ್ದರು, ನಂತರ ಇವರು ಯಾವುದೇ ಐಪಿಎಲ್ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ.[೧][೨] [೩]
ಆರಂಭಿಕ ಜೀವನ
[ಬದಲಾಯಿಸಿ]ಉಸ್ಮಾನ್ ರವರು ಡಿಸೆಂಬರ್ ೧೮, ೧೯೮೬ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಜನಿಸಿದರು. ಇವರು ಜನಿಸಿದ್ದು ಪಾಕಿಸ್ತಾನದಲ್ಲಿ ಆದರೂ ಇವರು ತಮ್ಮ ಐದನೇ ವಯಸ್ಸಿನಲ್ಲಿ ತಂದೆ ತಾಯಿಯರ ಜೊತೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಗೆ ಸ್ಥಳಾಂತರಗೊಂದರು. ೨೦೧೧-೧೨ರ ಅಶೇಸ್ ಸರಣಿಯ ಮೂಲಕ ಇವರು ಪಾಕಿಸ್ತಾನದಲ್ಲಿ ಜನಿಸಿ ಆಸ್ಟ್ರೇಲಿಯಾ ಪರ ಆಡಿದ ಮೊದಲ ಆಟಗಾರರಾದರು. ಇವರು ವಾಯುಯಾನದಲ್ಲಿ ಪದವಿ ಪೂರೈಸಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ಪಡೆಯುವ ಮುಂಚೆಯೇ ಇವರಿಗೆ ಪೈಲೆಟ್ ಲೈಸೆನ್ಸ್ ದೊರಕಿತ್ತು.[೪]
ವೃತ್ತಿ ಜೀವನ
[ಬದಲಾಯಿಸಿ]ಉಸ್ಮಾನ್ ರವರು ಫೆಬ್ರವರಿ ೧೫, ೨೦೦೮ರಂದು ಸಿಡ್ನಿಯಲ್ಲಿ ವಿಕ್ಟೊರಿಯಾ ಹಾಗೂ ನ್ಯೂ ಸೌತ್ ವೇಲ್ಸ್ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[೫]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಜನವರಿ ೦೩, ೨೦೧೧ರಲ್ಲಿ ಇಂಗ್ಲೆಂಡ್ ವಿರುಧ್ಧ ನಡೆದ ಐದನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬] ಜನವರಿ ೧೧, ೨೦೧೩ರಂದು ಮೆಲ್ಬರ್ನ್ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಿಂದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು.[೭] ಜನವರಿ ೩೧, ೨೦೧೬ ರಂದು ಸಿಡ್ನಿಯಲ್ಲಿ ಭಾರತದ ವಿರುದ್ಧ ನಡೆದ ಮೂರನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[೮]
ಪಂದ್ಯಗಳು
[ಬದಲಾಯಿಸಿ]- ಏಕದಿನ ಕ್ರಿಕೆಟ್ : ೪೦ ಪಂದ್ಯಗಳು[೯]
- ಟೆಸ್ಟ್ ಕ್ರಿಕೆಟ್ : ೪೪ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೦೯ ಪಂದ್ಯಗಳು
ಶತಕಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೦೨
- ಟೆಸ್ಟ್ ಪಂದ್ಯಗಳಲ್ಲಿ : ೦೮
ಅರ್ಧ ಶತಕಗಳು
[ಬದಲಾಯಿಸಿ]- ಟೆಸ್ಟ್ ಪಂದ್ಯಗಳಲ್ಲಿ : ೧೪
- ಏಕದಿನ ಪಂದ್ಯಗಳಲ್ಲಿ : ೧೨
- ಟಿ-೨೦ ಪಂದ್ಯಗಳಲ್ಲಿ : ೦೧
ಉಲ್ಲೇಖಗಳು
[ಬದಲಾಯಿಸಿ]- ↑ https://m.cricbuzz.com/profiles/6635/usman-khawaja
- ↑ http://www.espncricinfo.com/indian-premier-league-2016/content/squad/969891.html
- ↑ https://www.cricbuzz.com/live-cricket-scorecard/16441/rising-pune-supergiant-vs-kings-xi-punjab-53rd-match-indian-premier-league-2016
- ↑ https://www.telegraph.co.uk/sport/cricket/international/theashes/8236909/The-Ashes-Australia-v-England-fifth-Test-day-one-lunch-report.html
- ↑ https://www.espncricinfo.com/series/8043/scorecard/298338/new-south-wales-vs-victoria-pura-cup-2007-08
- ↑ https://www.espncricinfo.com/series/13062/scorecard/428753/australia-vs-england-5th-test-england-tour-of-australia-2010-11
- ↑ https://www.espncricinfo.com/series/12264/scorecard/573014/australia-vs-sri-lanka-1st-odi-sri-lanka-tour-of-australia-2012-13
- ↑ https://www.espncricinfo.com/series/11188/scorecard/895821/australia-vs-india-3rd-t20i-india-tour-of-australia-2015-16
- ↑ http://www.espncricinfo.com/australia/content/player/215155.html