ಉಲ್ಲಾಸ ಉತ್ಸಾಹ (ಚಲನಚಿತ್ರ)
ಉಲ್ಲಾಸ ಉತ್ಸಾಹ | |
---|---|
Directed by | ದೇವರಾಜ್ ಪಾಲನ್ |
Based on | ಉಲ್ಲಾಸಂಗ ಉತ್ಸಾಹಂಗ by ಎ. ಕರುಣಾಕರನ್ |
Produced by | ಬಿ. ಪಿ. ತ್ಯಾಗರಾಜು |
Starring | ಗಣೇಶ್, ಯಾಮಿ ಗೌತಮ್ |
Music by | ಜಿ. ವಿ. ಪ್ರಕಾಶ್ ಕುಮಾರ್ |
Release date | 2010 ರ ಮೇ 30 |
Country | ಭಾರತ |
Language | ಕನ್ನಡ |
ಉಲ್ಲಾಸ ಉತ್ಸಾಹವು 2010 ರ ಕನ್ನಡ ಭಾಷೆಯ ಪ್ರಣಯ ಚಲನಚಿತ್ರವಾಗಿದ್ದು, ಇದನ್ನು ದೇವರಾಜ್ ಪಾಲನ್ ನಿರ್ದೇಶಿಸಿದ್ದಾರೆ, ಇದರಲ್ಲಿ ಗಣೇಶ್ ಮತ್ತು ಯಾಮಿ ಗೌತಮ್ ನಟಿಸಿದ್ದಾರೆ (ಇಲ್ಲಿಯವರೆಗೆ ಇದು ಈಕೆಯ ಏಕೈಕ ಕನ್ನಡ ಚಲನಚಿತ್ರವಾಗಿದೆ). [೧] ಈ ಚಿತ್ರದ ಮೂಲಕ ಗಣೇಶ್ ಅವರ ಪತ್ನಿ ನಿರ್ಮಾಪಕಿಯಾದರು. [೨] 2008 ರ ತೆಲುಗು ಚಲನಚಿತ್ರ ಉಲ್ಲಾಸಂಗ ಉತ್ಸಾಹಂಗದ ರಿಮೇಕ್, [೩] ಇದು ನಾಲ್ಕು ತಿಂಗಳ ವಿಳಂಬದ ನಂತರ ಬಿಡುಗಡೆಯಾಯಿತು. [೪]
ಕಥಾವಸ್ತು
[ಬದಲಾಯಿಸಿ]ಪ್ರೀತಮ್ ಎಂಬ ಬೇಜವಾಬ್ದಾರಿ ಯುವಕ ಮಹಾಲಕ್ಷ್ಮಿಗೆ ಮರುಳಾಗಿ ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನ ಬಾಲ್ಯದ ಗೆಳೆಯನನ್ನು ಪ್ರೀತಿಸುತ್ತಿರುವ ಮಹಾಲಕ್ಷ್ಮಿ ಅಂತಿಮವಾಗಿ ತನ್ನ ಆ ಪ್ರಿಯಕರನನ್ನು ಭೇಟಿಯಾಗಲು ಕರೆದುಕೊಂಡು ಹೋಗುವಂತೆ ಪ್ರೀತಮನಿಗೆ ಕೇಳಿಕೊಳ್ಳುತ್ತಾಳೆ.
ಪಾತ್ರವರ್ಗ
[ಬದಲಾಯಿಸಿ]- ಪ್ರೀತಂ ಪಾತ್ರದಲ್ಲಿ ಗಣೇಶ್
- ಮಹಾಲಕ್ಷ್ಮಿಯಾಗಿ ಯಾಮಿ ಗೌತಮ್
- ರಂಗಾಯಣ ರಘು
- ಸಾಧು ಕೋಕಿಲ
- ಶರಣ್
- ರಂಗಾಯಣ ರಘು
- ಕವಿತಾ
- ತುಳಸಿ
- ಸಿಹಿ ಕಹಿ ಚಂದ್ರು
- ವಿತಿಕಾ ಶೇರು
- ಮಿತ್ರ
ನಿರ್ಮಾಣ
[ಬದಲಾಯಿಸಿ]ಬಾಲಿವುಡ್ ನಟಿ ಯಾಮಿ ಗೌತಮ್ ಈ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. [೫]
ಧ್ವನಿಮುದ್ರಿಕೆ
[ಬದಲಾಯಿಸಿ]ಸಂ. | ಹಾಡು | ಹಾಡುಗಾರರು | ಸಮಯ |
---|---|---|---|
1. | "Chalisuva Chluvey" | ಸೋನು ನಿಗಮ್ | 5:36 |
2. | "Hello Namastey" | ಕಾರ್ತಿಕ್ | 4:30 |
3. | "Love Made Nanne" | ನರೇಶ್ ಅಯ್ಯರ್ | 4:56 |
4. | "ಚಕೋರಿ ಚಕೋರಿ" | ಟಿಪ್ಪು, ರೀಟಾ ತ್ಯಾಗರಾಜನ್, ಬೆನ್ನಿ ದಯಾಳ್ | 4:47 |
5. | "ಕನಸಿನೊಳಗೆ" | ಜಿ. ವಿ. ಪ್ರಕಾಶ್ ಕುಮಾರ್, ಅಂಡ್ರಿಯಾ ಜೆರೆಮಿಯ | 5:33 |
6. | "ಲಾಲಿ ಹಾಡ" | ಕಾರ್ತಿಕ್, ಪ್ರಸನ್ನ ರಾವ್, ಪ್ರಶಾಂತಿನಿ | 3:09 |
7. | "ಓ. ಪ್ರೇಮ ಯಾಕಾದರೂ" | ಕಾರ್ತಿಕ್ | 4:24 |
ಸ್ವೀಕಾರ
[ಬದಲಾಯಿಸಿ]ಟೈಮ್ಸ್ ಆಫ್ ಇಂಡಿಯಾ "ಮೊದಲಾರ್ಧವು ರೋಮಾಂಚನಕಾರಿಯಾಗಿದ್ದರೂ, ದ್ವಿತೀಯಾರ್ಧವು ಭಾವನೆಗಳು, ಪ್ರಣಯ ಮತ್ತು ಹಾಸ್ಯದ ಅತ್ಯುತ್ತಮ ಮಿಶ್ರಣವಾಗಿದೆ" ಎಂದು ಹೇಳಿದೆ. [೬] ಬೆಂಗಳೂರು ಮಿರರ್ ಹೇಳುವಂತೆ, " ಚೆನ್ನಾಗಿ ರಚಿಸಿದ ಕಥಾಹಂದರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು ಮತ್ತು ಅದರಲ್ಲಿನ ಪರಿಣಾಮಕರಿ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೆ ಅನುಕೂಲ ಮಾಡಿವೆ". [೭] " ಈಗಾಗಲೇ ಮೂಲವನ್ನು ವೀಕ್ಷಿಸಿದ್ದವರು ಗಣೇಶ್ ಅವರ ಕಟ್ಟಾ ಅಭಿಮಾನಿಯಾಗಿರದಿದ್ದರೆ ನೋಡುವ ಅಗತ್ಯವಿಲ್ಲ" ಎಂದು ಸಿಫಿ ಹೇಳಿತು. [೮]
ಉಲ್ಲಾಸ ಉತ್ಸಾಹ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. [೯]
ಉಲ್ಲೇಖಗಳು
[ಬದಲಾಯಿಸಿ]- ↑ "Ganesh's Ullasa Utsaha all set for release". Sify. Archived from the original on 24 October 2021. Retrieved 24 October 2021.
- ↑ "Turning director for the first and only time". The Times of India. 21 April 2021. Archived from the original on 24 October 2021. Retrieved 24 October 2021.
- ↑ "'Ullasa Utsaha' ready for release". The New Indian Express. 28 November 2009. Archived from the original on 24 December 2021. Retrieved 24 December 2021.
- ↑ "Searching for Ganesh". Deccan Herald. 3 November 2009. Archived from the original on 24 October 2021. Retrieved 24 October 2021.
- ↑ "'Ullasa Utsaha' helped me blossom into a full-fledged heroine: Yami Gautam". The New Indian Express. Archived from the original on 24 October 2021. Retrieved 24 October 2021.
- ↑ "Ullasa Uthsaha Movie Review". The Times of India. Archived from the original on 24 October 2021. Retrieved 24 October 2021.
- ↑ "Ullasa Utsaha: Made for Ganesh". Bangalore Mirror. Archived from the original on 24 October 2021. Retrieved 24 October 2021.
- ↑ "Ullasa Utsaha". Sify. Archived from the original on 24 October 2021. Retrieved 24 October 2021.
- ↑ "Half-yearly report: Misses of 2010". Sify. Archived from the original on 24 October 2021. Retrieved 24 October 2021.