ಉತ್ಪಲ ಮಾಲಾ ವೃತ್ತ
ಗೋಚರ
ಉತ್ಪಲಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ "ಭರನಭಭರಲಗ" ಗಣವಿನ್ಯಾಸವಿರುತ್ತದೆ.(ಲ-ಲಘು, ಗು-ಗುರು)
ಸೂತ್ರ ಪದ್ಯ ಹೀಗಿದೆ
"ಉತ್ಪಲಮಾಲೆಯಪ್ಪುದುಭರಂನಭಭಂರಲಗಂ ನೆಗಳ್ದಿರಲ್"
ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಉತ್ಪಲಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ
ಭ | ರ | ನ | ಭ | ಭ | ರ | ಲಗಂ |
_UU | _U_ | U U U | _ U U | _ U U | _ U _ | U _ |
ಉತ್ಪಲ | ಮಾಲೆಯ | ಪ್ಪುದುಭ | ರಂನಭ | ಭಂರಲ | ಗಂ ನೆಗ | ಳ್ದಿ ರಲ್ |
ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ಬಳಸಲ್ಪಟ್ಟಿದೆ.
ಉದಾಹರಣೆಗೆ ವಿಕ್ರಮಾರ್ಜುನ_ವಿಜಯ ದಲ್ಲಿನ:-
ಶ್ರೀಯನರಾತಿ ಸಾಧನಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ
ಜೀಯನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ಡಿಯುಮಿಂತುದಾತ್ತ ನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ||
(ವಿಕ್ರಮಾರ್ಜುನವಿಜಯ ೧-೧)