ವಿಷಯಕ್ಕೆ ಹೋಗು

ಉತ್ಕರ್ಷ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ಕರ್ಷ (ಚಲನಚಿತ್ರ)
ಉತ್ಕರ್ಷ
ನಿರ್ದೇಶನಸುನಿಲ್ ಕುಮಾರ್ ದೇಸಾಯಿ
ನಿರ್ಮಾಪಕಸುನೀಲ್ ಕುಮಾರ್
ಚಿತ್ರಕಥೆಸುನಿಲ್ ಕುಮಾರ್ ದೇಸಾಯಿ
ಕಥೆಸುನಿಲ್ ಕುಮಾರ್ ದೇಸಾಯಿ
ಸಂಭಾಷಣೆಸುನಿಲ್ ಕುಮಾರ್ ದೇಸಾಯಿ
ಪಾತ್ರವರ್ಗಅಂಬರೀಶ್ ವನಿತಾ ವಾಸು ದೇವರಾಜ್‌, ಅಂಜಲಿ, ರಾಮಕೃಷ್ಣ, ಅವಿನಾಶ್
ಸಂಗೀತಗುಣಸಿಂಗ್
ಛಾಯಾಗ್ರಹಣಪಿ.ರಾಜನ್
ಸಂಕಲನಆರ್.ಜನಾರ್ಧನ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆರಚನಾ

ಸುನೀಲ್‍ಕುಮಾರ್ ದೇಸಾಯಿ ನಿರ್ದೇಶನದಲ್ಲಿ ೧೯೯೦ರಲ್ಲಿ ಬಿಡುಗಡೆಯಾದ ಚಿತ್ರವೇ ಉತ್ಕರ್ಷ. ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಅಂಬರೀಶ್, ದೇವರಾಜ್‌ ಹಾಗೂ ವನಿತಾ ವಾಸು ಇದ್ದಾರೆ.

ಸಂಕ್ಷಿಪ್ತ ಚಿತ್ರಕಥೆ

[ಬದಲಾಯಿಸಿ]

ಈ ಚಿತ್ರದಲ್ಲಿ ದೇವರಾಜ್‌ ರಾಜೇಶ್ ಶರ್ಮಾ ಎಂಬ ನಗ್ನ ಚಿತ್ರಗಳ ರಚನಾಕಾರನ ಪಾತ್ರ ಮಾಡಿದ್ದಾರೆ. ಈತ ತನ್ನ ಹೆಂಡತಿಯ ಅಕ್ರಮ ಸಂಬಂಧವನ್ನು ಸಹಿಸಲಾರದೆ ಮಾನಸಿಕ ರೋಗಿಯಾಗಿರುತ್ತಾನೆ. ಆದರೆ ಸಮಾಜದಲ್ಲಿ ಸಭ್ಯ ವ್ಯಕ್ಥಿಯಂತಿರುತ್ತಾನೆ. ತನ್ನ ಹೆಂಡತಿಯನ್ನು ಕೊಂದ ನಂತರ ಇನ್ನೂ ಅನೇಕ ಹೆಣ್ಣು ಮಕ್ಕಳನ್ನು ಕೊಲ್ಲುತ್ತಾನೆ. ಈತ ಯಾವುದೇ ಹೆಣ್ಣನ್ನು ನಗ್ನವಾಗಿ ಕಂಡರೆ ಅಥವಾ ಜೋರಾಗಿ ನಗುತ್ತಿರುವುದನ್ನು ಕಂಡರೆ ಈತನೊಳಗಿರುವ ಮಾನಸಿಕ ರೋಗಿ ಎಚ್ಚೆತ್ತುಕೊಳ್ಳುತ್ತಾನೆ. ನಂತರ ಅವಳು ಒಂಟಿಯಾಗಿರುವಾಗ ಹೋಗಿ ಅವಳ ಮನೆಯಲ್ಲೇ ಅವಳನ್ನು ಅವಳ ಕೈಯಲ್ಲೇ ನಗ್ನವಾಗಿಸಿ ಅವಳನ್ನು ಜೋರಾಗಿ ನಗುವಂತೆ ಮಾಡಿ ಕುತ್ತಿಗೆ ಕೊಯ್ದು ಸಾಯಿಸುತ್ತಾನೆ. ಆದರೆ ಯಾವುದೇ ಬಲಾತ್ಕಾರ ನಡೆಸುವುದಿಲ್ಲ. ನಂತರ ಹೆಣದ ಸುತ್ತ ಹಾಡು ಹೇಳಿಕೊಂಡು ಕುಣಿಯುತ್ತಾನೆ. ಯಾವುದೇ ಸುಳಿವುಗಳಿಲ್ಲದ ಯಾವುದೇ ಉದ್ದೇಶವಿಲ್ಲದ ಸರಣಿ ಕೊಲೆಗಳ ಹಿಂದಿನ ರಹಸ್ಯವನ್ನು ಪೋಲೀಸ್ ಅಧಿಕಾರಿ (ಅಂಬರೀಶ್) ಹೇಗೆ ಬಯಲಿಗೆಳೆಯುತ್ತಾನೆ ಎಂಬುದನ್ನು ಅತ್ಯುತ್ತಮವಾಗಿ ಚಿತ್ರಿಸಿದ್ದಾರೆ. ದೇವರಾಜ್ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆ. ಅವಿನಾಶ್ ಸಣ್ಣ ಪಾತ್ರದಲ್ಲಿ ಅಭಿನಯಿಸಿದರೂ ಆ ಪಾತ್ರ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತದೆ. ಒಟ್ಟಿನಲ್ಲಿ ಸುನೀಲ್ ಕುಮಾರ್ ದೇಸಾಯಿ ಅತ್ಯುತ್ತಮ ಚಿತ್ರವೊಂದನ್ನು ನೀಡಿದ್ದಾರೆ.


ಪಾತ್ರವರ್ಗ

[ಬದಲಾಯಿಸಿ]
ಪಾತ್ರಧಾರಿ ಪಾತ್ರ
ದೇವರಾಜ್‌ ರಾಜೇಶ್ ಶರ್ಮಾ
ಅಂಬರೀಶ್ ಇನ್ಸ್ಪೆಕ್ಟರ್ ನವೀನ್
ವನಿತಾ ವಾಸು ಸುನಿತಾ
ಅವಿನಾಶ್ ಮಹೇಂದ್ರ
ರಾಮಕೃಷ್ಣ ಅನಿಲ್

ಪೋಷಕ ಪಾತ್ರವರ್ಗ

[ಬದಲಾಯಿಸಿ]
  • ಕೆ. ವಿ. ಮಂಜಯ್ಯ
  • ಪ್ರವೀಣ್
  • ಅಭಿಲಾಷಾ
  • ಅಂಜಲಿ
  • ಅಖಿಲಾ
  • ಸಿತಾರಾ
  • ಅನುಪ್ರಿಯಾ
  • ಅಮೃತಾ
  • ವರಲಕ್ಷ್ಮಿ
  • ಕಮಲಶ್ರೀ
  • ಆಂಜನಪ್ಪ