ವಿಷಯಕ್ಕೆ ಹೋಗು

ಉಡುಪಿ ಬಿ.ಜಯರಾಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಡುಪಿ ಬಿ. ಜಯರಾಂ.(೨೬ನೇ ನವೆಂಬರ್ ,೧೯೨೬ -೧೩ ನೇ ಅಕ್ಟೋಬರ್, ೨೦೦೮ ) ಕನ್ನಡ ಸಿನಿಮಾ ಮಾಧ್ಯಮದ ನೃತ್ಯ ನಿರ್ದೇಶಕರು.

ಉಡುಪಿ ಬಿ.ಜಯರಾಂ

ಪರಿಚಯ

[ಬದಲಾಯಿಸಿ]

ನಮಗೆ ಒಂದು ಹಾಡು ಅದರ ದೃಶ್ಯ ಮತ್ತು ಸಿನಿಮ ಮತ್ತೆ ಮತ್ತೆ ನೆನಪಿಗೆ ಬರುವುದಾದರೆ ಅದಕ್ಕೆ ಕಾರಣ ಆ ಸಿನಿಮಾ ದ ಸಾಹಿತ್ಯ , ಗಾಯನ ಹಾಗು ನೃತ್ಯ . ಅದರಲೂ ನಮಗೆ ಆ ಗೀತೆಯ ದೃಶ್ಯ ಮನಸ್ಸ್ಸಿನಲ್ಲಿ ಪದೆ ಪದೆ ಬರುವುದಾದರೆ ಹಾಗು ನಿರಂತರವಾಗಿ ಬರುವುದಕ್ಕೆ ಕಾರಣ ಅದರ ನೃತ್ಯ ಸಂಯೊಜನೆ. ಭಾರತೀಯ ಸಿನಿಮಾ ಅತಿಉತ್ತಮವಾದ ಮನೋರಂಜನ ಮಾಧ್ಯಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ್ಲ. ಹಳೆಯ ಚಿತ್ರಗಳಿಂದ ಹಿಡಿದು ಇಂದಿನ ಹೊಸ ಅಲೆಯ ಚಿತ್ರಗಳವರೆಗು ಇಂತಹ ನೂರಾರು ಉದಾಹರಣೆ ಕಾಣಬಹುದು. ಅಂತಹ ಹಲವಾರು ಸಂಯೋಜನಾ ಕಾರರಲ್ಲಿ ತಮ್ಮದೇ ರೀತಿಯಿಂದ ಸಿನಿಮಾದಲ್ಲಿ ಹೆಸರು ಮಾಡಿರುವಲರಲ್ಲಿ ಉಡುಪಿ ಬಿ. ಜಯರಾಂ ಕೂಡ ಮುಖ್ಯರಾಗುತ್ತಾರೆ.

೨೬ನೇ ನವೆಂಬರ್ ,೧೯೨೬ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟಗ್ರಾಮ ಬಾಳೇಕುದ್ರು ಊರಿನಲ್ಲಿ ಆನಂದ ಭಟ್ ಹಾಗು ಜಲಜಮ್ಮ ನವರ ಬಯಕೆಯ ಹರಕೆಯ ೫ನೆ ಶಿಶುವಾಗಿ ಜನಿಸಿದರು.

ಪ್ರತಿಭೆ

[ಬದಲಾಯಿಸಿ]

ಅಂದು ತನ್ನಲ್ಲಿ ಬೆಳೆದ ಸ್ವಾಭಿಮಾನ, ಹಠದಿಂದ ಇಡೀ ಕರ್ನಾಟಕದ ಜನರ ಪ್ರೀತಿ ಸಂಪಾದಿಸಲು ಸಾದ್ಯವಾಯಿತು ಎಂದು ಅವರು ನಂಬ್ಬಿದ್ದರು. ಅವರೊಳಗಿದ್ದ ನೃತ್ಯ ಪ್ರತಿಭೆಯ ಒಳಗೆ ಮತ್ತೊಬ್ಬ ಮಹಾನ್ ಕಲಾವಿದನಿದ್ದ್ದ ಅದು ಜಯರಾಮರಿಗಿದ್ದ ಹಾಡುಗಾರಿಕೆಯ ಕಲೆ. ಇದರೊಳಗೊಂದು ಸ್ವಾರಸ್ಯ ಕತೆಯೇ ಉಂಟು. ಜಯರಾಂರವರಿಗೆ ತಾಯಿಯ ಪ್ರೀತಿಯ ಕೊರತೆ ಇದ್ದರು ತಂದೆ ಪ್ರೀತಿ ಕಮ್ಮಿಯಾಗಲಿಲ್ಲ. ಆನಂದ ಭಟ್ಟರು ತಮ್ಮ ಹಾಡುಗಾರಿಕೆಯನ್ನು ತಮ್ಮ ಮಗನಿಗೆ ಬಳುವಳಿಯಾಗಿ ನೀಡಿದ್ದರು ಎನ್ನಬಹುದು. ತಮ್ಮ ಕಾಯಕ ತಂದೆಯ ಗಾಯನ ಕೇಳಿ ಕೇಳಿ ಜಯರಾಮ ತಮಗಿದ್ದ ಕಲಾ ಪ್ರತಿಭೆಯನ್ನು ಸರಿಯಾಗೆ ಉಪಯೋಗಿಸಿ ಕೊಂಡರು. ಶಾಸ್ತ್ರೀಯವಾಗಿ ಕಲಿಯದಿದ್ದ್ದರು ಸ್ವರ ಲಯ ಶೃತಿ ಅರಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಂದೆಯಜೊತೆ ಹಾರ್ಮೋನಿಯಂ ತಲೆಯ ಮೇಲೆ ಹೊತ್ತು ಊರೂರು ತಿರುಗಿದ್ದಕ್ಕೆ ಸರಸ್ವತಿ ಅವರಿಗಿತ್ತ ವರವಿದು. ಅವರ ಗಾಯನ ಪ್ರತಿಭೆಗೆ ಅವಕಾಶವಿತ್ತದ್ದು ಅವರ ಊರಿನ ರಾಮಮಂದಿರ. ರಾಮನವಮಿ ಸಂದರ್ಭದಲ್ಲಿ ಇದೇ ವಾರ ಭಜನೆ ನಡೆಯುತಿತ್ತು. ವಾರದಲೊಂದು ದಿನ ಶಾಲಾ ಮಕ್ಕಳಿಗೆ ಭಜನೆ ಮಾಡುವ ಅವಕಾಶ. ಅದರ ಉಪಯೂಗವನ್ನು ಕಂಚಿನ ಕಂಠದಿಂದ ಹಾಡುವ ಮೂಲಕ ಜಯರಾಮರು ಸರಿಯಾಗೇ ಉಪಯೂಗಿಸಿಕೊಂಡರು. ಹಾಗೆ ಹಾಡುವಾಗ ಅವರು ಹೆಚ್ಚಾಗಿ ಆರಿಸಿಕೊಳ್ಳುತ್ತಿದದ್ದು ಪಂಡರಿ ಭಜನೆಗಳನ್ನೇ ಹಾಡಿನ ಜೊತೆಗೆ ಅವರೊಳಗಿದ್ದ ನರ್ತಕವೂ ಆಗಲೆ ತನ್ನಿರುವು ಕೊಟ್ಟಿದ್ದು ಅದೇ ಮುಂದೆ ಅವರ ನೃತ್ಯ ಸಂಯೋಜನಗೆ ಪ್ರೇರಣೆಯಾದದ್ದು. ಇವರ ಗಾಯನ ಕೇಳಿ ಊರಿನವರು ಇವರನ್ನು ಪ್ರೇತಿಯಿಂದ ಕುಟ್ಟಿ ಹರಿದಾಸ ಎಂದೇ ಕರೆಯುತ್ತಿದ್ದರು. ಇವರ ಸಂಗೀತ ಒಲವು ಕಂಡ ತಂದೆ ಅವರನ್ನು ಪದ್ಮನಾಭರ ಬಳಿ ಅಬ್ಯಾಸ ಮಾಡಿಸಿದರು. ಕನ್ನಡ ಸಿನಿಮಾ ಮಾಧ್ಯಮದಲ್ಲಿ ನೃತ್ಯ ನೀರ್ದೇಶನಕ್ಕೊಂದು ಸ್ಥಾನ ತಂದವರು ಜಯರಾಂರವರು. ಒಂದು ಕಾಲದಲ್ಲಿ ಸಿನಿಮಾದಲ್ಲಿ ಬೇರೆ ಬೇರೆ ನೃತ್ಯ ಸನ್ನಿವೆಶಗಳಿಗೆ ಬೇರೆ ಬೇರೆ ನೃತ್ಯ ನಿರ್ದೇಶಕರನ್ನು ಅರಿಸಲಾಗುತ್ತಿತ್ತು. ಆದರೆ ಉಡುಪಿ ಜಯರಾಮರು ಎಲ್ಲಾ ರೀತಿಯ ನೃತ್ಯ ಸಂಯೂಜನೆಯನ್ನು ತಾವೊಬ್ಬರೆ ಸಮರ್ಥ ರೀತಿಯಿಂದ ನಿಬಾಯಿಸಿದ್ದರು ಉದಾ. ಅವರು ನಿರ್ದೇಶನದ ನೂರಾರು ನೃತ್ಯಗಳು ಸಾಕ್ಷಿಯಾಗಿದೆ.

ಬಾಲ್ಯ ಜೀವನ

[ಬದಲಾಯಿಸಿ]
ಜಯರಾಂ ತಮ್ಮ ೫ನೆ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ಚಿಕಮ್ಮ ಭವಾನಿಯ ಆಶ್ರಯದಲ್ಲಿ ಬೇಡದ ಮಗುವಾಗಿ ಬೆಳೆದರು.ಅವರ ಗುಣ ಸ್ವಬಾವ ಹೇಳಲು ಹೊರಟರೆ ತಮ್ಮನ್ನು ಪ್ರೀತಿಸದ ಚಿಕ್ಕಮ್ಮನ ಸ್ವಭಾವದ ಬಗ್ಗೆ ಜಯರಾಂ ಒಂದು ಮಾತನ್ನು ಆಡಿದವರಲ್ಲ. ಅದರ ಬದಲಾಗಿ 'ನಿಂದಕರಿರ ಬೇಕಯ್ಯಾ' ಎನ್ನುವ ದಾಸವಾಣಿಯನ್ನು ಒಪ್ಪಿಕೊಂಡು, ಇಂದಿನ ತಮ್ಮ ಉನ್ನತಿಗೆ ಚಿಕ್ಕಮ್ಮನೇ ಕಾರಣ ,ಎಲ್ಲರಂತೆ ತನಗೂ ತಯಿಯ ಪ್ರೀತಿ ದೊರಕಿದ್ದರೆ  ತಾನು ಕೇವಲ ಗ್ರಾಮಕ್ಕೆ ಸೀಮಿತವಾಗುತ್ತಿದ್ದೆ ಎಂದಂದ್ದುಕೊಂಡು ಸಮಾಧಾನ ಪಟ್ಟುಕೊಳ್ಳುತಿದ್ದರು. ಅವರು ಅಜಾತಶತ್ರು.ಅವರನ್ನು ಪ್ರೀತಿಸದವರು ಇರಲು ಸಾಧ್ಯ ವಿಲ್ಲ ಎನ್ನ ಬಹುದು. ಅವರಿಗೆ ಸುತ್ತ ಹತ್ತೂ ಹಳ್ಳಿಯವರು ಕರೆಯುತ್ತಿದ್ದು ಕುಟ್ಟಿ ಹರಿದಾಸರೆಂದು. ಅವರೆಂದರೆ ಎಲ್ಲರಿಗು ಅಚ್ಚು-ಮೆಚ್ಚು.ಬಾಲ್ಯ ದಲ್ಲಿ ಇವರು ಪದ್ಮನಾಭ ಭಟ್ಟರಲ್ಲಿ ಸಂಗೀತವನ್ನು ಕಲಿತರು.ಉಡುಪಿ ಜಯರಾಂನವರು ಜೀವನ ಬಾಲ್ಯ ಸರಳವಾಗೀನೂ ಇರಲಿಲ್ಲ. ಮಲೆನಾಡಿನಲ್ಲಿ ಅಡಕೆ ವಾಣಿಜ್ಯ ಬೆಳೆ. ಅಡಕೆ ಕುಯ್ಲಿನ ಸಮಯದಲ್ಲಿ ಎಲ್ಲರ ಮನೆಯಲ್ಲಿ ಅಡಕೆ ಸುಲಿಸುವ ಕೆಲಸ. ರಾತ್ರಿಯಲ್ಲಿ ಕೆಲಸಮಾಡುವಾಗ ನಿದ್ದೆ ಬರದಿರಲೆಂದು ಭಟ್ಟರನ್ನು ಹಾಡಲು, ಕಥೆ ಹೇಳಲು ಕರೆಸುತ್ತದ್ದರು. ಬಟ್ಟರಿಗೆ ಸುಸ್ತಾದಾಗ ಆ ಕೆಲಸ ಜಯರಾಂ ಪಾಲಿಗೆ ಬರುತ್ತಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ ಊಟ ಹಾಗು ಸ್ವಲ್ಪ ಅಡಿಕೆ ಸಿಗುತ್ತಿತ್ತು. ಅದನ್ನು ಮಾರಿ ಮುಂದಿನ ಸಂಚಾರದವರಿಗೆ ಕುಟುಂಬ ನಿರ್ವಹಣೆಗೆ ಹಣ ಒಟ್ಟು 

ಮಾಡಿಕೊಳ್ಳುತ್ತಿದ್ದರು. ಕಿರಿಯ ಹೆಂಡತಿ ಮಗನನ್ನು ಸರಿಯಾಗಿ ನೂಡಿಕೊಳ್ಳುವುದಿಲ್ಲ ಎಂದು ಮಗನನ್ನು ಕರೆದೊಯ್ಯುತ್ತಿದ್ದರು. ಹೀಗೆ ಪ್ರಯಾಣಿಸುವಾಗ ಒಮ್ಮೆ ಕಾಲಿಗೆ ಹಾವು ಕಚ್ಚಿ ಸಾವು ಬದುಕಿನ ಮಧ್ಯ ಇದ್ದ ಮಗನನ್ನು ಉಳಿಸಿಕೊಂಡಿದ್ದು ಸಾಧನೆಯೇ ಸರಿ. ಹೀಗೆ ಕಷ್ಟದಲ್ಲೆ ಬೆಳೆದ ಜಯರಾಮನಿಗೆ ತಂದೆಯ ಪ್ರೀತಿಯೇ ಅವರಿಗೆ ಸರ್ವಸ್ವ ವಾಗಿತ್ತು. ಹೀಗೆ ಹಾಡುತ್ತಾ ತಮ್ಮ ಸಂಗೀತ ಕಲಿಕೆಯ ವಿಭಾಗಗಳನ್ನು ಹಲವಾರು ವಾಧ್ಯಗಳನ್ನು ನುಡಿಸುವತ್ತ ಅಬ್ಯಾಸ ಮಾಡತೊಡಗಿದರು. ಅವರ ಬಾಲ್ಯದ ಗೆಳೆಯ ಪೇಜಾವರ ಮಠದ ವಿಶ್ವೆಶ್ವರ ತೀರ್ಥ ಸ್ವಾಮಿಜಿ ಸಹಪಾಠಿಯೂ ಹೌದು. ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಪ್ಪಾಗಲಾರದು. ಇವರು ಜೀವನದ ಮತ್ತೊಂದು ತಿರುವು ಬಾವ ಕೃಷ್ಣಕಾರಂತರು ಬಳಿ ಸೇರಿದ್ದು. ಇವರ ಅಕ್ಕ ಸುಶೀಲ ತಮ್ಮನ ಜೀವನಕ್ಕೆ ಎನಾದರು ದಾರಿ ಮಾಡಲೇಬೆಕೆಂಬ ಹಂಬಲದಿಂದ ಯಾರಿಗೂ ತಿಳಿಯದಂತೆ ದುಡ್ಡು ಹೊಂದಿಸಿ ತಮ್ಮನನ್ನು ತನ್ನ ತೀರಿ ಹೋದ ಸಹೋದರಿಯ ಗಂಡ ಕೃಷ್ಣಕಾರಂತರ ಹೂಟೆಲ್, ಅಲ್ಲಿದ್ದ ವಾಟರ್ ಫಾಲ್ಸ್ಸನಿಂದ ಅದ್ಬುತವಾಗಿ ನಡೆಯುತಿತ್ತು. ಕಾರಂತರು ಉದಾಸೀನ ಮಾಡದೆ ಜಯರಾಮರಿಗೆ ಆಶ್ರಯ ವಿತ್ತರು. ಆದರೆ ಜಯರಾಮರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡು ಕಾರಂತರೇ ಸೈ ಎನ್ನುವಂತೆ ನಡೆದುಕೊಂಡರು. ಹಾಡುಗಾರಿಕೆಯನ್ನು ಎಷ್ಟೇ ನಿಷ್ಟೆಯಿಂದ ಹೊಟೆಲಿನ ಸಮಸ್ತ ಜವಾಬ್ದಾರಿ ಹೊತ್ತರು. ಹೀಗೆ ಇರುವಾಗ ಅವರ ಜೀವನದ ಮತ್ತೊಂದು ತಿರುವುತೆಗೆದುಕೊಂಡದ್ದು ಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಜಯರಾಮನಿಗೆ ಸ್ನೇಹಿತ ಫಿಲಾಸಫರ್, ಗೈಡ್ ಎಲ್ಲವೂ ಆದರು.

ಶಾಸ್ತ್ರೀಯ ನೃತ್ಯವನ್ನು ಕಲಿತ ರೀತಿ

[ಬದಲಾಯಿಸಿ]

ಜಯರಾಮರವರು ಮೊದಲಿಗೆ ಮೈಲಾಪುರದ ಗುರು 'ಮುತ್ತುಸ್ವಾಮಿ ಪಿಳ್ಳೈ' ಅವರಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿದರು. ಗುರು ಮುತ್ತುಸ್ವಾಮಿಯವರು ಆ ಕಾಲದ ಓರ್ವ ಧೀಮಂತ ನೃತ್ಯಗುರು. ನೃತ್ಯ ಮಾಧ್ಯಮದಲ್ಲಿ ಸಾಕಷ್ಟ್ಯು ಹೆಸರು ಮಾಡಿರುವ ನರ್ತಕಿಯರಿಗೆ ನೃತ್ಯ ವನ್ನು ಕಲಿಸಿದವರು. ಎಲ್ಲ ಗುರುಗಳಂತೆ ಇವರೂಸಹಾ ಒಬ್ಬ ಅರ್ಹ ಶಿಷ್ಯರಿಗಾಗಿ ಹುದುಕಾಟ ನಡೆಸುವಾಗ ಜಯರಾಂರವರ ಗುರು ಭಕ್ತಿಯನ್ನು ನೋಡಿ ಅವರೇ ತಮಗೆ ಸೂಕ್ತವಾದ ಶಿಷ್ಯ ನೆನ್ನಿಸಿರಬೇಕು. ಆಗ ಅವರು ತಾನು ಅರಿತ ನೃತ್ಯದ ಸೂಕ್ಷ್ಮಾತಿಸೂಕ್ಷ್ಮಗಳನೆಲ್ಲಾ ಅವರಿಗೆ ಕಲಿಸಿದರು.ಜಯರಾಮರವರು ಸಹಾ ಅಷ್ಟೆ ಶ್ರದ್ಧೆಯಿಂದ ಅಭ್ಯಾಸ ಮಾದಿದರು. ಆನಂತರ ಜಯರಾಮರು 'ಸಿನ್ಹ 'ಎನ್ನುವ ಗುರುಗಳಿಂದ 'ಮಣಿಪುರಿ' ನೃತ್ಯವನ್ನು, ಕಥಕ್ಕಳಿ ನೃತ್ಯಶೈಲಿಯಲ್ಲಿ ಹೆಸರುವಾಸಿಯಾಗಿದ್ದ 'ಗೋಪಿನಾಥ್' ಅವರಲ್ಲಿ 'ಕಥಕಳೀ' ಶೈಲಿಯನ್ನು 'ಚೋಪ್ರಾ' ಅವರಿಂದ' ಪಂಜಾಬೀ' 'ಬಾಂಗ್ರ' ಪದ್ಧತಿಯನ್ನೂ ಅಭ್ಯಾಸಿಸಿದರು.'ಚಂದ್ರಲೇಖ' ಚಿತ್ರದ ಶೂಟಿಂಗ್ ಮುಗಿಯುವವೇಳೆಗೆ ಜಯರಾಮರು ಪ್ರಬುದ್ಧ ಭರಟನಾಟ್ಯ ಕಲಾವಿದರಾಗಿ' ರೂಪುಗೊಂಡಿದ್ದರು. ಹಲವಾರು ನೃತ್ಯ ಶೈಲಿಗಳ್ಳನ್ನು ತಿಳಿದಿದ್ದ ಜಯರಾಮರಿಗೆ ಎಷ್ಟೋ ಚಿತ್ರಗಳಲ್ಲಿ ನಿರ್ಧೇಶಿಸುವ ಅವಕಾಶ ದೊರೆಯಿತು.

ನಟನೆಯ ಬಗೆಗಿನ ಆಸಕ್ತಿ

[ಬದಲಾಯಿಸಿ]

ಜಯರಾಂ ಎಲ್ಲದಕ್ಕು ಮೊದಲೇ ತಮ್ಮ ಬಾಲ್ಯದ ಆಸಕ್ತಿಯಾದ ನಟನೆ ಬಗ್ಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ತಾನು ನೃತ್ಯ ಕಲಿಯುತ್ತೇನೆ,ನೃತ್ಯ ನಿರ್ದೇಶಕರಾಗುತ್ತೇನೆ ಎಂದು ಇವರು ಅಂದುಕೊಂಡವರೇಅಲ್ಲ.ಅವರ ಆಸಕ್ತಿ ಇದ್ದದ್ದು ನಟನೆಯಕಡೆ. ತೆರೆಯಮೇಲೆ ಬಂದರಷ್ಟೇ ಜನ ತಮ್ಮನ್ನು ಗುರುತಿಸುವುದು ಎಂದುಕೊಂಡಿದ್ದ ಬಾಲ್ಯದ ಅಭಿಪ್ರಾಯವನ್ನು ಮುಂದುವರಿಸಿಕೊಂಡು ಬಂದಿದ್ದರು. ಆದರೆ ಅನಿರೀಕ್ಷಿತವಾಗಿ ನೃತ್ಯದ ಕಡೆ ಬರವ ಮುನ್ನ ನಟರಾಗಲು ಪ್ರಯತ್ನ ಪಟ್ಟಿದರು .ವಾಸ್ತವವಾಗಿ ಆ ಪ್ರಯತ್ನದಲ್ಲಿ ಅರ್ಧದಷ್ಟನ್ನೂ ನೃತ್ಯದ ಬಗ್ಗೆ ಮಾಡಿರಲಿಲ್ಲ. ಒಮ್ಮೆ ಕನ್ನಡದವರಾದ ಆರ್.ನಾಗೇಂದ್ರರಾಯರ, ಆರ್.ಎನ್.ಆರ್ ಸಂಸ್ಥೆಗೆ ಕೂಡ ಅವಕಾಶ ಕೇಳಿ ಹೋದದ್ಧುಂಟು.ಆ ಕಾಲದಲ್ಲಿ ನಾಗೇಂದ್ರರಾಯರುಸಿನಿಮಾ ಮಾಧ್ಯಮದಲ್ಲಿ ಬಹು ದೊಡ್ಡ ಹೆಸರುವಾಸಿಯಾಗಿದ್ದರು. ನಟರಾಗಿ,ನಿರ್ದೇಶಕರಾಗಿ,ನಿರ್ಮಾಪಕರಾಗಿ ಸಲ್ಲಿಸಿರುವ ಕೊಡುಗೆಯು ಮಾಧ್ಯಮಕ್ಕೆ ಬಹಳ ಸಂದಿದೆ. ಜೊತೆಗೆ ಅವರು ಹೊಸಬರಲ್ಲಿನ ಪ್ರತಿಭೆಯನ್ನು ಗಮನಿಸಿ ಅವರನ್ನು ಪ್ರೋತ್ಸಾಹಿಸಿ, ಬೆಳಕಿಗೆ ತರುವ ನಿಟ್ಟಿನಲ್ಲಿ ನಾಗೇಂದ್ರರಾಯರು ಸಾಕಷ್ಟು ಕೆಲಸಮಾಡುತ್ತಿದ್ದರೆ.ಆವೇಳೆಗಾಗೆಲೇ ಅವರಿಂದ ಹಲವಾರು ಕಲಾವಿದರು ಮತ್ತು ತಂತ್ರಙ್ನರು ಮಾಧ್ಯಮದಲ್ಲಿ ಅವಕಾಶ ಪಡೆದುಕೊಂಡಿದ್ದರು. ಹಾಗಾಗಿ ಹಲವಾರು ಕಾರಣಗಳಿಂದ ಜಯರಾಮರ ನಟನಾಗುವ ಪ್ರಯತ್ನ ಅಸಫ಼ಲವಾಯಿತೆನ್ನಬಹುದು.

ದಾಂಪತ್ಯ ಜೀವನ ಮತ್ತು ಮಕ್ಕಳ ಪ್ರೀತಿ

[ಬದಲಾಯಿಸಿ]

ಈ ವೇಳೆಗಾಗಲೇ ಜಯರಾಮರಿಗೆ ಇಪ್ಪತ್ನಾಲ್ಕರ ಹರಯ. ಸಿನಿಮಾಗೆ ಪಾಲಾದರು ಅನ್ನುವ ತೀರ್ಮಾನಕ್ಕೆ ಮನೆಯವರೆಲ್ಲಾ ಬಂದಾಗಿತ್ತು. ಸಿನಿಮಾಗೆ ಸೇರಿದವರು ಬಹಳ ಬೇಗ ಹಾದಿಬಿಡುತ್ತಾರೆ ಎನ್ನುವ ಪುರಾತನ ವಾದನವನ್ನು ನಂಬಿದ್ದ ಜಯರಾಮರ ತಂದೆಯವರು ೧೯೫೪ರ ಜೂನ್ ೧೦ರಂದು ಜಯರಮರವರನ್ನು ಸರೋಜ ರವರ ಜೊತೆ ವಿವಾಹಮಾಡಿಸಿದರು.ಈ ದಂಪತಿಗಳಿಗೆ ೧೯೫೫ರಲ್ಲಿ ಒಂದು ಮುದ್ದಾದ ಹೆಣ್ಣುಮಗು ಹುಟಿತು. ಮಗುವನ್ನು ಹರಣಿ ಎಂದು ನಾಮಕರಣ ಮಾಡಿದರು. ಅದರ ಮುಂದಿನ ವರ್ಷವೇ (೧೯೯೫ರಲ್ಲಿ)'ರಾಜರವಿ ಎಂಬ ತಮ್ಮನು ಜನಿಸಿದನು ಆನಂತರ ೧೯೬೨ರಲ್ಲಿ ವೆಂಕಟೇಶ್ ಭಟ್ ಮತ್ತು ೧೯೬೬ರಲ್ಲಿ ರಮೇಶ್ ಭಟ್ ಜನಿಸಿದರು.ಜಯರಾಮರ ಹೆಂಡತಿ ಮಕ್ಕಳ ಜತೆ ಪ್ರೀತಿ,ಸಲುಗೆ ಹೆಚಾಗಿಯೇಯಿತ್ತು. ಮಕ್ಕಳ ಜತೆಯಲ್ಲಿ ತಾವು ಮಕ್ಕಳಾಗಿಬಿಡುತ್ತಿದ್ದರು.ಹಾಗೆಯೆ ಮಕ್ಕಳಿಗು ತಂದೆಯಂದರೆ ಬಹಳ ಅಚ್ಚುಮೆಚ್ಚು. ಮಕ್ಕಳೆಲರಿಗೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಬಹಳ ಪ್ರೀತಿಯಿಂದ ಕಲಿಸಿಕೊಟ್ಟಿದ್ದರು. ಅವರ ನಾಲ್ಕೂ ಮಕ್ಕಳು ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಮನೆಯ ಎಲ್ಲಾ ಕೆಲಸಗಳನ್ನು ಕಲಿಯುತ್ತ ಬೆಳೆದರು.ಅವರು ಮಕ್ಕಳನ್ನು ಸ್ವಲ್ಪ ಅತಿ ಅನ್ನಿಸುವಷ್ಟು ಪ್ರೀತಿಸುತ್ತಿದ್ದರೂ,ಅವರನ್ನು ಬೆಳೆಸುವುದರಲ್ಲಿ ಎಂದೂ ಸೋತವರಲ್ಲ ಜಯರಾಮರು. ಅವರದು ಒಂದು ಸುಂದರವಾದ,ಸಂತೋಷವಾದ ಸಂಸಾರಾವಾಗಿತ್ತು.

ಮಾರ್ಡನ್ ಥಿಯೇಟರ್ಸ್ನನಿಂದ ಆಹ್ವಾನ

[ಬದಲಾಯಿಸಿ]

ಈ ವೇಗಾಗಲೇ ಸಿನಿಮಾ ಮಾಧ್ಯಮ ಜಯರಾಮರಲ್ಲಿದ ಪ್ರತಿಭೆಯನ್ನು ಗುರುತಿಸಿಯಾಗಿತ್ತು. ಹಲವಾರು ಹೆಸರಾಂತ ಸಂಸ್ಥೆಗಳು ಇವರಿಗೆ ಆಹ್ವಾನ ಕೊಡಲು ಆರಂಭಿಸಿದ್ದವು. ಅವುಗಳಲ್ಲಿ ಈ ಸಂಸ್ಥೆಯು ಒಂದಾಗಿತ್ತು. ಈ ಥಿಯೇಟರ್ಸ್ ಮಾಲಿಕರಾದ ಟಿ.ಆರ್.ಸುಂದರಂ ಆ ಕಾಲದಲ್ಲಿ ಓರ್ವ ಜನಪ್ರಿಯ ನಿರ್ಮಾಪಕರು. ತಮ್ಮ ಮಾರ್ಡನ್ ಸ್ಟ್ಡುಡಿಯೋವನ್ನು ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣಕ್ಕೆ ಬಾಡಿಗೆಗೂ ಕೊಡುತ್ತಿದ್ದರು. ಹಾಗೆಯೇ ತಮ್ಮ ಸ್ಟ್ಡುಡಿಯೋದಲ್ಲೆ ನಡೆಯುವ ಇತರ ಚಿತ್ರಗಳ ಚಿತ್ರೀಕರಣವನ್ನು ಶ್ರಧ್ಹೆಯಿಂದ ಗಮನಿಸುತ್ತಿದ್ದರು. ಹಾಗೆ ಗಮನಿಸುವಾಗ ಯಾವುದಾದರು ವಿಶೇಷ ಪ್ರತಿಭೆ ಕಂಡರೆ,ಆ ಪ್ರತಿಭೆಯನ್ನು ತಕ್ಷಣ ತಮ್ಮ ನಿರ್ಮಾಣಗಳಲ್ಲಿ ಬಳಸಿಕೊಳ್ಳುತ್ತಿದ್ದರು.ಅಂತಹ ಸಮಯದಲ್ಲಿ ಅವರಿಗೆ ಜಯರಾಮರು ಕೆಲಸದಲ್ಲಿ ತೋರಿಸುತ್ತಿದ್ದ ಆಸಕ್ತಿ ,ಅವರಲ್ಲಿದ್ದ ಅಗಾದವಾದ ಪ್ರತಿಭೆ ಎಲ್ಲವೂ ಬಹಳಷ್ಟು ಮೆಚ್ಚುಗೆಯಾಯಿತ್ತು. ಅವರು ತಮ್ಮ ನಿರ್ಮಾಣದ ಎಲ್ಲಾ ಚಿತ್ರಗಳಿಗೂ ಜಯರಾಂರವರನ್ನೇ ನೃತ್ಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರಾರಂಭಿಸಿದರು. ಈ ಸಂದರ್ಭದಲ್ಲೇ ಕರ್ನಾಟಕದ ಜಯರಾಂ ತಮಿಳರ ಪ್ರೀತಿಯ ಬಿ.ಜಯರಾಮನ್ ಆಗಿ, ಸಿನಿಮಾರಂಗದಲ್ಲಿ ತಮ್ಮ ಅಸ್ತಿತ್ವವನ್ನು ದಾಖಲಿಸತೊಡಗಿದರು.ಜಯರಾಂ ಮತ್ತು ಸುಂದರಂರವರಿಬ್ಬರ ಬಾಂಧವ್ಯ ಎಷ್ಟ್ಟು ಗಾಢವಾಗಿತ್ತೆಂದರೆ ಸುಂದರಂರವರು ತಾವು ವಿಧಿವಶರಾಗುವ ಮುನ್ನ ಬರೆದ ವಿಲ್ ನಲ್ಲಿ ಮುಂದೆಯೂ ಮಾರ್ಡನ್ ಥಿಯೇಟರ್ಸ್ನ ನಿರ್ಮಿಸುವ ಎಲ್ಲಾ ಚಿತ್ರಗಳಿಗೆ ಜಯರಾಂ ಮಾಸ್ಟರ್ ಅವರಿಂದಲೇ ನೃತ್ಯ ನಿರ್ದೇಶನ ಮಾಡಿಸಬೇಕು ಎಂದು ಬರೆದಿದ್ದರಂತೆ.ಜಯರಾಂರವರು ಈ ಸಂಸ್ಥೆಯಲ್ಲಿ ಕೆಲವು ವರ್ಷಗಳ ಕಲ ತಮ್ಮ ಸೇವೆ ಸಲ್ಲಿಸಿದರು.

ನಿರ್ದೇಶಿಸಿರುವ ಗೀತೆಗಳು ಮತ್ತು ನೃತ್ಯ ಪ್ರಕಾರಗಳು

[ಬದಲಾಯಿಸಿ]
  • ಸನಾದಿ ಅಪ್ಪಣಸಿನಿಮಾದ ಕರೆದರು ಕೇಳದೆ ಗೀತೆಗೆ ಸುಗ್ಗಿ ಕುಣಿತವನ್ನು ಬಳಸಿಕೊಂಡಿದ್ದರೆ.
  • ಆರು ಮೂರು ಒಂಭತ್ತು ಚಿತ್ರದಲ್ಲಿ ಯಕ್ಷಗಾನದ ಪ್ರಯೋಗ ಮಾಡಿದ್ದಾರೆ.
  • ದೂರದ ಬೆಟ್ಟ ಚಿತ್ರದಲ್ಲಿ ಕಾಮನಹಬ್ಬದ ಸಂದರ್ಭವನ್ನು ಮನಮೋಹಕವಾಗಿ ಕಟ್ಟಿಕೊಟ್ಟಿದ್ದರೆ.
  • ಬಂಗಾರದ ಪಂಜರ ಚಿತ್ರದಲ್ಲಿ ಕರ್ನಾಟಕದ ಜಾನಪದ ನೃತ್ಯಪ್ರಕಾರವಾಗಿರುವ ಡೋಳ್ಳುಕುಣೀತವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ, ಇದೇ ಚಿತ್ರದಲ್ಲಿ ಕ್ಲಬ್ ಮಾದರಿಯ ನೃತ್ಯ ಪ್ರಕಾರವೂ ಬಳಸಿಕೊಂಡಿದ್ದರು.
  • ಫಲಿತಾಂಶ ಸಿನಿಮಾದ ಗೀತೆ.
  • ಅಂತ ಚಿತ್ರದ ಪ್ರೇಮವಿದೆ ಗೀತೆ.
  • ಬಂಗಾರದ ಮನುಷ್ಯ ಸಿನಿಮಾದ ಹನಿ ಹನಿ ಕೂಡಿದ್ರೆ ಹಳ್ಳ ಗೀತೆ.
  • ಗೀತಾಚಿತ್ರದ ಕೇಳದೆ ನಿಮಗೀಗ ಗೀತೆ.
  • ತಾಯಿಯ ಮಡಿಲಲ್ಲಿ ಚಿತ್ರದ ಕನ್ನಡದ ರವಿ ಮೂಡಿ ಬಂದ ಎಂಬ ಗೀತೆ.
  • ' ಶುಭಮಂಗಳ ಚಿತ್ರದ ಶೀರ್ಷಿಕೆಯ ಗೀತೆ.
  • ಅನ್ನೋರೆಲ್ಲ ಅನ್ನಲಿ ಎಂಬ ಗೀತೆಗೆ ಮೊಫಲ್ ಶೈಲಿಯ ಕಥಕ್ ಪದ್ಧತಿಯನ್ನು ಸಂಯೋಜಿಸಿದ್ದರೆ.
  • ಈ ಸಮಯ ಶೃಂಗಾರಮಯಾ ಗೀತೆ .

ಹೀಗೆ ಹಲವಾರು ಗೀತೆಗಳನ್ನು ಜಯರಾಂ ಬಹಳ ಯಶಸ್ವಿಯಾಗಿ ಮತ್ತು ಇಂದಿಗೂ ಆ ಹಾದುಗಳನ್ನು ನೆನಪಿಸಿಕೊಂಡಾಗ ಎಲ್ಲರು ಸುಂದರ, ಅತಿಸುಂದರ ಎಂದು ರಸಿಕರು ಕೊಂಡಾಡುತ್ತಾರೆ.ಇಡೀ ಕಥೆಯನ್ನು ಐದಾರು ನಿಮಿಶದ ಹಾಡಿನಲ್ಲಿ ಬಿಡಿಸಿಡುವಲ್ಲಿ ಇವರು ಸಿದ್ಧಹಸ್ತರು. ಒಂದು ಗೀತೆಯಲ್ಲಿ ಒಂದು ಸನ್ನಿವೇಶವನ್ನು ಕಟ್ಟಿಕೊಡುವ ವಿಚಾರಕ್ಕೆ ಬಂದರೆ, ಅಲ್ಲಿ ಜಯರಾಂ ಮಾಸ್ಟರ್ ಅವರನ್ನು ಮೀರಿಸುವ ಇನ್ನೊಬ್ಬ ನೃತ್ಯ ನಿರ್ದೇಶಕ ಕಾಣುವುದಿಲ್ಲ.

ಅಂತಿಮ ಕ್ಷಣ

[ಬದಲಾಯಿಸಿ]

೧೩ನೇ ಅಕ್ಟೋಬರ್,೨೦೦೪,ಬುಧವಾರ,ಮಹಾಲಯ ಅಮಾವಾಸ್ಯೆಯ ದಿನದಂದು ಜಯರಾಮರು ದೇವರಿಗೆ ಪ್ರಿಯರಾದರು .[]

ಉಲ್ಲೇಖ

[ಬದಲಾಯಿಸಿ]
  1. .ಅಮೃತ ಮಹೋತ್ಸವ ಪುಸ್ತಕಮಾಲೆ_(ಉಡುಪಿ ಬಿ.ಜಯರಾಂ)- ಸುಗ್ಗನಹಳ್ಳಿ ಷಡಕ್ಷರಿಯವರು ಬರೆದಿರುವ ಪುಸ್ತಕ.