ವಿಷಯಕ್ಕೆ ಹೋಗು

ಇ. ಸಂಪತ್‌ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇ. ಸಂಪತ್‌ಕುಮಾರ್
ಜನನ (1936-06-10) ೧೦ ಜೂನ್ ೧೯೩೬ (ವಯಸ್ಸು ೮೮)
ಮಲ್ಲೂರು
ಪೌರತ್ವಭಾರತೀಯರು
ಕಾರ್ಯಕ್ಷೇತ್ರಗ್ರಾಫ್ ಸಿದ್ಧಾಂತ
ಸಂಸ್ಥೆಗಳುಕರ್ನಾಟಕ ವಿಶ್ವವಿದ್ಯಾಲಯ,
ಮೈಸೂರು ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು,
ಕರ್ನಾಟಕ ವಿಶ್ವವಿದ್ಯಾಲಯ
ಡಾಕ್ಟರೇಟ್ ಸಲಹೆಗಾರರುಸಿ. ಎನ್. ಎಸ್ ಅಯ್ಯಂಗಾರ್
ಜಾಲತಾಣ
http://www.tce.edu/events/ncdma07/Sampathkumar.pdf

ಇ. ಸಂಪತ್‌ಕುಮಾರ್ (ಜನನ ೧೦ ಜೂನ್ ೧೯೩೬) ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗ್ರಾಫ್ ಸಿದ್ಧಾಂತ ಎಂಬ ವಿಷಯದ ಪ್ರಾಧ್ಯಾಪಕರಾಗಿದ್ದರು. [೧] ಅವರು ಪ್ರಾಬಲ್ಯ ಸಂಖ್ಯೆ, ಬೈಪಾರ್ಟೈಟ್ ಡಬಲ್ ಕವರ್, ಮತ್ತು ಪುನರ್ನಿರ್ಮಾಣ ಸಿದ್ಧಾಂತ, ಹಾಗೆಯೇ ಗ್ರಾಫ್ ಸಿದ್ಧಾಂತದ ಇತರ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ಅವರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ (೧೯೯೨-೯೫) ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು.[೨] [೩]

ಆರಂಭಿಕ ಜೀವನ[ಬದಲಾಯಿಸಿ]

ಇವರು ಬೆಂಗಳೂರಿನ ಪಕ್ಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಜನಿಸಿದರು. ಅವರು ೧೯೫೫ ರಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ ಸೆಂಟ್ರಲ್ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಎಂ. ಎಸ್. ಸಿ. ಪದವಿಯನ್ನು ಗಳಿಸಿದರು. ೧೯೬೫ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಪಿಎಚ್‌ಡಿ (ಬೂಲಿಯನ್ ಬೀಜಗಣಿತಕ್ಕೆ ಸಂಬಂಧಿಸಿದ ವಿಷಯದಲ್ಲಿ) ಪದವಿ ಪಡೆದರು. ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತ ವಿಭಾಗದಲ್ಲಿ ಉಪನ್ಯಾಸಕರಾಗಿದ್ದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೯೬ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ನಿವೃತ್ತರಾದ ನಂತರ, ಅವರು ಗ್ರಾಫ್ ಸಿದ್ಧಾಂತದ ಹಲವಾರು ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರು ಮೈಸೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದಲ್ಲಿ ಡಿ. ಓ. ಎಸ್. ನ ಮುಖ್ಯಸ್ಥರಾಗಿದ್ದರು.

ಕೊಡುಗೆಗಳು[ಬದಲಾಯಿಸಿ]

ಪ್ರೊಫೆಸರ್ ಇ. ಸಂಪತ್‌ಕುಮಾರ್ ಅವರು ಭಾರತದ ವಿಶ್ವವಿದ್ಯಾಲಯಗಳಲ್ಲಿ ಗ್ರಾಫ್ ಥಿಯರಿಯನ್ನು ಒಂದು ವಿಷಯವಾಗಿ ಕಲಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.[೪] ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಎಂಎಸ್‌ಸಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪತ್ರಿಕೆಯಾಗಿ ಇದನ್ನು ಪರಿಚಯಿಸಿದರು. ಗೂಗಲ್ ಸ್ಕಾಲರ್ ಪ್ರಕಾರ, ಅವರ ಎಚ್-ಸೂಚ್ಯಂಕ ೨೧ ಆಗಿದೆ ಮತ್ತು ಅವರು ೧೫೦೦ ಕ್ಕೂ ಹೆಚ್ಚು ಉಲ್ಲೇಖಗಳನ್ನು ಹೊಂದಿದ್ದಾರೆ.[೫] ೨೦೦೫ ರಿಂದ, ಅವರ ಜನ್ಮದಿನವಾದ ಜೂನ್ ೧೦ ನ್ನು ಭಾರತದಲ್ಲಿ ಗ್ರಾಫ್ ಥಿಯರಿ ದಿನವಾಗಿ ಆಚರಿಸಲಾಗುತ್ತದೆ.[೬]

ಉಲ್ಲೇಖಗಳು[ಬದಲಾಯಿಸಿ]

  1. "The mathematics genealogy - E. Sampathkumar". Mathematics Genealogy Project. Retrieved 2010-02-03.
  2. "Karnataka University". Archived from the original on 13 ಜೂನ್ 2008. Retrieved 15 ಜೂನ್ 2024.
  3. "Mathematics". University of Mysore. Retrieved 3 February 2010.
  4. "The Academy of Discrete Mathematics and Applications". The Academy of Discrete Mathematics and Applications. Retrieved 9 March 2018.
  5. "Prof. E. Sampathkumar". Retrieved 9 March 2018.[ಶಾಶ್ವತವಾಗಿ ಮಡಿದ ಕೊಂಡಿ]
  6. "The Academy of Discrete Mathematics and Applications". The Academy of Discrete Mathematics and Applications e. Retrieved 9 March 2018.