ಇ-ಬುಕ್ ರೀಡರ್
ಇ-ಬುಕ್ ರೀಡರ್ ಎಂಬುದು ಒಂದು ಕೈಯಲ್ಲಿ ಹಿಡಿದು ವಿ-ಪುಸ್ತಕಗಳನ್ನು ಓದುವ ಸಾಧನ. ಇದನ್ನು ಪ್ರಮುಖವಾಗಿ ಇ-ಬುಕ್ ಅರ್ಥಾತ್ ವಿದ್ಯುನ್ಮಾನ ಪುಸ್ತಕಗಳನ್ನು ಓದುವುದಕ್ಕಾಗಿ ವಿನ್ಯಾಸ ಮಾಡಲಾಗಿದೆ.
ಪರದೆಯ ಮೇಲೆ ಪಠ್ಯವನ್ನು ತೋರಿಸಬಲ್ಲ ಯಾವುದೇ ಸಾಧನವು ಇ-ಬುಕ್ ರೀಡರ್ ಆಗಿ ಕೆಲಸ ಮಾಡಬಲ್ಲುದು. ಆದರೆ ವಿ-ಪುಸ್ತಕಗಳನ್ನು ಓದಲೆಂದೇ ವಿನ್ಯಾಸ ಮಾಡಿದ ಸಾಧನಗಳು ಪ್ರಖರ ಬೆಳಕಿನಲ್ಲಿ ಓದಲು ಉತ್ತಮವಾಗಿರುತ್ತವೆ ಮತ್ತು ಕಡಿಮೆ ಬ್ಯಾಟರಿ ಕೋಶ ಬಳಕೆ ಮಾಡುತ್ತವೆ. ಈ ಸಾಧನಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯುವುದು ಸುಲಭ. ಒಂದು ಇ-ಬುಕ್ ರೀಡರ್‍ನಲ್ಲಿ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿಡಬಹುದು.
ಪೀಠಿಕೆ
[ಬದಲಾಯಿಸಿ]ಇ-ಬುಕ್ ರೀಡರ್ ಬಹುಮಟ್ಟಿಗೆ ಟ್ಯಾಬ್ಲೆಟ್ ಗಣಕದ ಗಾತ್ರದಲ್ಲಿರುತ್ತದೆ ಹಾಗೂ ಹೋಲುತ್ತದೆ. ಇ-ಬುಕ್ ರೀಡರ್‍ನ ಬ್ಯಾಟರಿ ಬಾಳಿಕೆ ಉತ್ತಮವಾಗಿರುವುದರಿಂದ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ವಾರಗಳ ಕಾಲ ಬಳಸಬಹುದು. ಅಷ್ಟು ಮಾತ್ರವಲ್ಲದೆ ಇ-ಬುಕ್ ರೀಡರ್‍ಗಳಲ್ಲಿ ಯಾವುದೇ ಇತರೆ ಕಿರುತಂತ್ರಾಂಶಗಳು (ಆಪ್) ಇರುವುದಿಲ್ಲ.
ಬಹುತೇಕ ಇ-ಬುಕ್ ರೀಡರ್‍ಗಳು ಅಂತರಜಾಲ ಸಂಪರ್ಕವನ್ನು ಬಳಸುತ್ತಿವೆ. ಈ ಸಂಪರ್ಕವು ವೈಫೈ ಅಥವಾ ೩ಜಿ/೪ಜಿ ಡಾಟಾ ಆಗಿರಬಹುದು. ಅಂತರಜಾಲ ತಾಣದ ಮೂಲಕ ವಿ-ಪುಸ್ತಕಗಳನ್ನು ಕೊಳ್ಳುವುದನ್ನು ಇವು ಬೆಂಬಲಿಸುತ್ತವೆ.
ಇತಿಹಾಸ
[ಬದಲಾಯಿಸಿ]ಇಬುಕ್ ರೀಡರ್‍ಗಳು ಹಲವು ತಲೆಮಾರುಗಳನ್ನು ದಾಟಿ ಬಂದಿವೆ. ರಾಕೆಟ್ ಇ-ಬುಕ್ ರೀಡರ್ ಎನ್ನುವುದು ಪ್ರಥಮ ಇಬುಕ್ ರೀಡರ್ ಆಗಿತ್ತು[೧]. ೧೯೮೮ರ ಇಸವಿಯಲ್ಲಿ ಇನ್ನೂ ಹಲವಾರು ಇ-ಬುಕ್ ರೀಡರ್‍ಗಳು ಮಾರುಕಟ್ಟೆಗೆ ಬಂದವು. ೧೯೯೭ರಲ್ಲಿ ಇ-ಇಂಕ್ ಕೋರ್ಪೊರೇಶನ್ ಎಂಬ ಕಂಪೆನಿ ಅಸ್ತಿತ್ವಕ್ಕೆ ಬಂದು ಇ-ಪೇಪರ್ ತಂತ್ರಜ್ಞಾನವನ್ನು ಬಳಕೆಗೆ ತಂದಿತು. ಈ ತಂತ್ರಜ್ಞಾನದ ಮೂಲಕ ಪರದೆಯು ಮಾಮೂಲಿ ಕಾಗದದಂತೆ ಬೆಳಕನ್ನು ಪ್ರತಿಫಲಿಸುತ್ತದೆ. ಸೋನಿ ಕಂಪೆನಿಯು ಈ ತಂತ್ರಜ್ಞಾನವನ್ನು ೨೦೦೬ರಲ್ಲಿ ಬಳಸಿತು. ತದನಂತರ ಅಮೆಝಾನ್ ಕಿಂಡಲ್‍ನಲ್ಲಿ ಈ ತಂತ್ರಜ್ಞಾನದ ಬಳಕೆ ಆಯಿತು[೨]. ಕಿಂಡಲ್ ಇಬುಕ್ ರೀಡರ್ ಅಮೆಝಾನ್ ಕಿಂಡಲ್ ಜಾಲತಾಣದಿಂದ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತದೆ.
ಮುಕ್ತ ಬಳಕೆಯ ಪುಸ್ತಕಗಳು
[ಬದಲಾಯಿಸಿ]ಹಕ್ಕುಸ್ವಾಮ್ಯ ಮುಗಿದ ಪುಸ್ತಕಗಳನ್ನು ಮುಕ್ತ ಬಳಕೆಯ ಪುಸ್ತಕಗಳು ಎನ್ನಲಾಗುತ್ತದೆ. ಈ ಪುಸ್ತಕಗಳನ್ನು ಯಾವುದೇ ನಿರ್ಬಂಧನೆಗಳಿಲ್ಲದೆ ಪ್ರತಿ ಮಾಡಬಹುದು ಮತ್ತು ಹಂಚಬಹುದು[೩] ಅಂತರಜಾಲದಲ್ಲಿ ಅಂತಹ ಜಾಲತಾಣಗಳು ಹಲವಾರಿವೆ.
ಜನರ ಸ್ವೀಕಾರ
[ಬದಲಾಯಿಸಿ]ಇ-ಬುಕ್ ರೀಡರ್‍ಗಳು ಪುಸ್ತಕ ಮುದ್ರಣ ಮತ್ತು ಪ್ರಕಾಶನ ಉದ್ಯೋಗದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಹಲವು ನಿಯತಕಾಲಿಕೆಗಳು ತಮ್ಮ ಪ್ರಕಾಶನವನ್ನು ನಿಲ್ಲಿಸಿವೆ ಅಥವಾ ಈ ವಿಧಾನಕ್ಕೆ ತಮ್ಮನ್ನು ಬದಲಾಯಿಸಿಕೊಂಡಿವೆ[೪]
References
[ಬದಲಾಯಿಸಿ]- ↑ MobileRead Wiki – Rocket eBook. Wiki.mobileread.com (2011-11-20). Retrieved on 2012-04-12.
- ↑ Patel, Nilay (November 21, 2007). "Kindle Sells Out in 5.5 Hours". Engadget.com. Archived from the original on November 23, 2007. Retrieved November 21, 2007.
{{cite web}}
: Unknown parameter|dead-url=
ignored (help) - ↑ Boyle, James (2008). The Public Domain: Enclosing the Commons of the Mind. CSPD. p. 38. ISBN 978-0-300-13740-8.
- ↑ Ballatore, Andrea; Natale, Simone (2015-05-18). "E-readers and the death of the book: Or, new media and the myth of the disappearing medium". New Media & Society (in ಇಂಗ್ಲಿಷ್): 1461444815586984. doi:10.1177/1461444815586984. ISSN 1461-4448. Archived from the original on 2016-03-15. Retrieved 2017-12-02.