ವಿಷಯಕ್ಕೆ ಹೋಗು

ಇರಾ ತ್ರಿವೇದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇರಾ ತ್ರಿವೇದಿ

ಇರಾ ತ್ರಿವೇದಿಯವರು ಓರ್ವ ಭಾರತೀಯ ಲೇಖಕಿ, ಅಂಕಣಗಾರ್ತಿ, ಮತ್ತು ಯೋಗ ಆಚಾರ್ಯರು[]. ಅವರು ಭಾರತದ ೨೧ ನೇ ಶತಮಾನದ ಪ್ರೀತಿ, ಮದುವೆ ಮತ್ತು ಲೈಂಗಿಕತೆಯ ಬಗ್ಗೆ ಕೃತಿಗಳನ್ನು ಬರೆದಿರುತ್ತಾರೆ. ಅವರು ಕಾದಂಬರಿ ಹಾಗೂ ಕಾಲ್ಪನಿಕಥೆಗಳನ್ನು ಬರೆಯುತ್ತಾರೆ. ಅವರು ಬಾರತದಲ್ಲಿ ಮಹಿಳೆಯರ ಮತ್ತು ಲಿಂಗಗಳ ವಿಷಯಗಳ ಕುರಿತು ಕಾಲ್ಪನಿಕ ಮತ್ತು ಪತ್ರಿಕೋದ್ಯಮದ ಗಮನದಲ್ಲಿ ಬರೆಯುತ್ತಾರೆ.[] ಅವರ ಇತ್ತೀಚಿನ ಪುಸ್ತಕ ಮೈ ಬುಕ್ ಆಫ್ ಯೋಗ, ಓಂ ದಿ ಯೋಗ ಡಾಗ್ ಪಾತ್ರವನ್ನು ಮಕ್ಕಳಿಗಾಗಿ ಪರಿಚಯಿಸುವ ಯೋಗದ ಒಂದು ಪುಸ್ತಕ, ಜೂನ್ ೨೧ ೨೦೧೬ರ ಅಂತರಾಷ್ಠ್ರೀಯ ಯೋಗ ದಿನದಂದು ಹೊರಬಂದಿದೆ.

ಪುಸ್ತಕ ಪ್ರಕಟನೆಗಳು

[ಬದಲಾಯಿಸಿ]

ದಿ ೧೦ ಮಿನುಟ್ಸ್ ಯೋಗ ಸೊಲ್ಯೂಷನ್

[ಬದಲಾಯಿಸಿ]

ಈ ಪುಸ್ತಕದಲ್ಲಿ ಯೋಗ ಶಿಕ್ಷಕಿಯಾದ ಇರಾ ತ್ರಿವೇದಿಯವರು ದೇಹದ ಬೇಡದ ತೂಕವನ್ನು ಹೇಗೆ ಇಳಿಸುವುದು, ವಾಶ್ಬೋರ್ಡ್ ಎಬಿಎಸ್ ಹಾಗು ಕಡಿಮೆ ರಕ್ತದೊತ್ತಡವನ್ನು ಹೇಗೆ ಪಡೆಯುವುದು, ಹೀಗೆ ದಿನಕ್ಕೆ ಹತ್ತು ನಿಮಿಷದ ಯೋಗದಿಂದ ಮಾನಸಿಕ ಹಾಗು ದೈಹಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದೆನ್ನುವುದರ ಕುರಿತು ಬರೆದಿರುತ್ತಾರೆ.

ನಿಖಿಲ್ ಆಂಡ್ ರಿಯಾ:ಅ ಲವ್ ಸ್ಟೋರಿ

[ಬದಲಾಯಿಸಿ]

೨೦೧೭ರಲ್ಲಿ ಬಿಡುಗಡೆಯಾದ ಈ ಪುಸ್ತಕದಲ್ಲಿ ತ್ರಿವೇದಿಯವರು ವಿದ್ಯಾರ್ಥಿಗಳ ಜೀವನದಲ್ಲಿ ಆಗುವ ಆಕರ್ಶಣೆ ಹಾಗು ಪ್ರೀತಿ-ಪ್ರೇಮದ ಕುರಿತು ಬರೆದಿದ್ದಾರೆ.

ಇಂಡಿಯಾ ಇನ್ ಲವ್:ಮ್ಯಾರೇಜ್ ಆಂಡ್ ಸೆಕ್ಷ್ವಾಲಿಟಿ ಇನ್ ೨೧ ಸ್ಟ್ ಸೆಂಚುರಿ

[ಬದಲಾಯಿಸಿ]

ಇಂಡಿಯಾ ಇನ್ ಲವ್:ಮ್ಯಾರೇಜ್ ಆಂಡ್ ಸೆಕ್ಷ್ವಾಲಿಟಿ ಇನ್ ೨೧ ಸ್ಟ್ ಸೆಂಚುರಿಯು ೨೦೧೪ರಲ್ಲಿ ಬಿಡುಗಡೆಯಾದ ಕಾಲ್ಪನಿಕ ಪುಸ್ತಕ.[]

ವಾಟ್ ವುಡ್ ಯು ಡೂ ಟು ಸೇವ್ ದಿ ವರ್ಲ್ಡ

[ಬದಲಾಯಿಸಿ]

ತ್ರಿವೇದಿಯವರು ೧೮ನೇ ವಯಸ್ಸಿನಲ್ಲಿರುವಾಗ ಈ ಪುಸ್ತಕಕವನ್ನು ಬರೆದಿರುತ್ತಾರೆ.[]

ಧೇರ್ ಈಸ್ ನೋ ಲವ್ ಆನ್ ವಾಲ್ ಸ್ಟ್ರೀಟ್

[ಬದಲಾಯಿಸಿ]

ಇರಾ ತ್ರವೇದಿಯ ಈ ಪುಸ್ತಕ ಲೇಖಕ ಜುನೋಟ್ ಡೈಸ್ನವರಿಂದ ಜೈಪುರ್ನಲ್ಲಿ ನಡೆದ ಸಾಹಿತ್ಯ ಹಬ್ಬದಲ್ಲಿ ಬಡುಗಡೆಯಾಯಿತು.[]

ಮೈ ಯೋಗಬು೯ಕ್

[ಬದಲಾಯಿಸಿ]

ಈ ಪುಸ್ತಕವನ್ನು ಅಂತರರಾಷ್ಟ್ರೀಯ ಯೋಗ ದಿನ ೨೧ ಜೂನ್ ೨೦೧೬ ರಂದು ಬಿಡುಗಡೆ ಮಾಡಲಾಯಿತು. ಈ ಪುಸ್ತಕವು ಆಸನ, ಪ್ರಾಣಯಾಮ ಮತ್ತು ಮಕ್ಕಳಿಗಾಗಿ ಸಾವಧಾನತೆ ಅಭ್ಯಾಸಗಳನ್ನು ಒಳಗೊಂಡಿದೆ.

ಮಾಧ್ಯಮ

[ಬದಲಾಯಿಸಿ]

ದಿ ಟೈಮ್ಸ್ ಆಫ್ ಇಂಡಿಯಾ, ಹಿಂದುಸ್ತಾನ್ ಟೈಮ್ಸ್, ಇಂಡಿಯಾ ಟುಡೇ, ಹಿಂದು ಮುಂತಾದ ಪತ್ರಿಕೆಗಳ್ಲಿ ಇವರ ಲೇಖನ ಪ್ರಕಟನೆಯಾಗುತ್ತದೆ. ತ್ರಿವೇದಿಯವರು ನಿಯಮಿತವಾಗಿ ಸುದ್ದಿವಾಹಿನಿಗಳಲ್ಲಿ ಲಿಂಗ, ಮಹಿಳೆಯರು ಮತ್ತು ಪುರುಷರ ವಿಶಯಗಳ ಕುರಿತು ಮಾತನಾಡುತ್ತಾರೆ.[] ಅವರ ಯೋಗ ಪ್ರದರ್ಶನ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರವಾಗುತ್ತದೆ.

ಪ್ರಶಸ್ತಿಗಳು

[ಬದಲಾಯಿಸಿ]

೨೦೧೭ರಲ್ಲಿ "ಬಿಬಿಸಿಸ್ 100 ಮೋಸ್ಟ್ ಇನ್ಫ್ಲುವೆನ್ಶನಲ್ ಇನ ದಿ ವರ್ಲ್ಡ್" ಮಹಿಳೆಯಾಗಿದ್ದಾರೆ.[] ೨೦೧೫ನಲ್ಲಿ ಭಾರತದಲ್ಲಿ ವಧು ಸಾಗಾಣಿಕೆಗೆ ಸಂಬಂಧಿಸಿದ ಅತ್ಯುತ್ತಮ ತನಿಖಾ ಲೇಖನಕ್ಕೆ ಯುಕೆ ಮಾಧ್ಯಮ ಪ್ರಶಸ್ತಿಯನ್ನು ನೀಡಲಾಯಿತು. ೨೦೧೫ರಲ್ಲಿ ಪತ್ರಿಕೋದ್ಯಮದಲ್ಲಿ ಸಿಗ್ಮಾ ಡೆಲ್ಟಾ ಚಿ ಪ್ರಶಸ್ತಿಗಾಗಿ ವಿದೇಶಾಂಗ ವ್ಯವಹಾರಗಳಿಂದ ನಾಮನಿರ್ದೇಶನಗೊಂಡರು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2019-01-30. Retrieved 2019-03-17.
  2. https://thousandmilessite.in/an-interview-with-ira-trivedi/
  3. https://www.firstpost.com/living/the-sexual-revolution-in-india-keeps-coming-and-coming-1396153.html
  4. https://penguin.co.in/
  5. https://www.dnaindia.com/lifestyle/report-book-review-there-s-no-love-on-wall-street-1537408
  6. https://www.youtube.com/watch?v=oouAx8r3Qu4
  7. https://www.bbc.com/news/world-41380265