ಇಮರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಮರ್ತಿ ಭಾರತದ ಒಂದು ಸಿಹಿ ತಿನಿಸಾಗಿದೆ. ಉದ್ದಿನ ಹಿಟ್ಟನ್ನು ವೃತ್ತಾಕಾರದ ಹೂವಿನ ಆಕಾರವಾಗಿ ಮಾಡಿ ಎಣ್ಣೆಯಲ್ಲಿ ಕರಿದು, ನಂತರ ಸಕ್ಕರೆ ಪಾಕದಲ್ಲಿ ನೆನೆಸಿ ಇದನ್ನು ತಯಾರಿಸಲಾಗುತ್ತದೆ. ಇದರ ಪರ್ಯಾಯ ಹೆಸರುಗಳಲ್ಲಿ ಅಮ್ರಿತಿ, ಎಮರ್ತಿ, ಒಮ್ರಿತ್ತಿ, ಅಮಿತ್ತಿ, ಜಹಾಂಗೀರ್, ಝಾಂಗಿರಿ/ಜಾನ್‍ಗಿರಿ ಸೇರಿವೆ. ಈ ಖಾದ್ಯವನ್ನು ಜಿಲೇಬಿಯೊಂದಿಗೆ ತಪ್ಪು ತಿಳಿಯಬಾರದು. ಜಿಲೇಬಿ ಇಮರ್ತಿಗಿಂತ ಹೆಚ್ಚು ತೆಳುವಾಗಿ ಮತ್ತು ಸಿಹಿಯಾಗಿರುತ್ತದೆ.[೧] ಸಿಲ್ಹೆಟಿ ಸಿಹಿತಿನಿಸುಗಳ ಒಂದು ವಿಶೇಷ ತಯಾರಿಕೆಯಾದ ಇದನ್ನು ಇಫ಼್ತಾರ್‌ಗಾಗಿ ತಯಾರಿಸಲಾಗುತ್ತದೆ. ಇದಕ್ಕೆ ಯಾವುದೇ ಆಹಾರದ ಬಣ್ಣವನ್ನು ಸೇರಿಸಲಾಗಿರುವುದಿಲ್ಲ.[೨]

ಉದ್ದಿನ ಬೇಳೆಯನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿಟ್ಟು ಆಮೇಲೆ ನುಣ್ಣನೆಯ ಹಿಟ್ಟಾಗಿ ರುಬ್ಬಿಕೊಳ್ಳಲಾಗುತ್ತದೆ. ಈ ಹಿಟ್ಟಿನ ಸಣ್ಣ ಗಾತ್ರದ ವೃತ್ತಾಕಾರದ ವಿನ್ಯಾಸವಾಗಿ ಮಾಡಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಹೆಚ್ಚಾಗಿ ತುಪ್ಪವನ್ನು ಬಳಸಲಾಗುತ್ತದೆಯಾದರೂ, ಕೆಲವೊಮ್ಮೆ ಇತರ ಎಣ್ಣೆಗಳನ್ನು ಬಳಸಲಾಗುತ್ತದೆ.

ಸಕ್ಕರೆ ಪಾಕವನ್ನು ತಯಾರಿಸಿಕೊಂಡು ಅದಕ್ಕೆ ತಿನ್ನಬಹುದಾದ ಕರ್ಪೂರ, ಲವಂಗ, ಏಲಕ್ಕಿ, ಕೇವ್ರಾ ಮತ್ತು ಕೇಸರಿ ಸೇರಿಸಿ ರುಚಿಗೊಳಿಸಲಾಗುತ್ತದೆ. ನಂತರ ಕರಿದ ಇಮರ್ತಿಯನ್ನು ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Difference between Jalebi & Imarti". recipes.timesofindia.com. Times Food. Retrieved 19 April 2020.
  2. "ঐতিহ্যে সিলেটি ইফতার" (in Bengali). Sylheter Dak. 31 May 2017. Archived from the original on 5 ಜೂನ್ 2020. Retrieved 19 April 2020.
"https://kn.wikipedia.org/w/index.php?title=ಇಮರ್ತಿ&oldid=1053461" ಇಂದ ಪಡೆಯಲ್ಪಟ್ಟಿದೆ