ಇಬ್ಬನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಬ್ಬನಿ- ಗಾಳಿಯಲ್ಲಿರುವ ನೀರಿನ ಆವಿ ರಾತ್ರಿ ವೇಳೆಯಲ್ಲಿ ಸಾಂದ್ರೀಕರಿಸಿ ನೆಲಕ್ಕೆ ಕೆಡೆವಾಗ ಉಂಟಾಗುವ ನೀರಹನಿ (ಡ್ಯೂ). ಪ್ರಾತಃಕಾಲದಲ್ಲಿ ಗಿಡಮರಗಳ ಹುಲ್ಲುಗಾವಲುಗಳ ಮೇಲೆ ಬೀಳುವ ಸೂರ್ಯಕಿರಣಗಳನ್ನು ಪ್ರತಿಫಲಿಸಿ ವಕ್ರೀಭವಿಸಿ ವರ್ಣರಂಜಿತ ದೃಶ್ಯ ಬೀರುವ ಇಬ್ಬನಿಗಳ ಹಾಸೆ ನೋಡಲು ಬಲು ಸುಂದರ. ನಿರಭ್ರ ಆಕಾಶ ಮತ್ತು ಸ್ತಬ್ಧ ಇಲ್ಲವೇ ಮಂದಚಲನೆಯ ವಾಯುಮಂಡಲ ಇವು ಇಬ್ಬನಿಯ ಬೆಳೆವಣಿಗೆಗೆ ಸಹಕಾರಿಗಳು.[೧]

ನಿರಾತಂಕವಾಗಿ ಆಗಸಕ್ಕೆ ಒಡ್ಡಿರುವ ಹೊರಮೈಯಿಂದ ವಸ್ತುಗಳು ಉಷ್ಣವನ್ನು (ವಿಸರಣದಿಂದ-ರೇಡಿಯೇಷನ್) ಕಳೆದುಕೊಳ್ಳುವುವು. ಹೀಗೆ ಸಂಭವಿಸುವ ನಷ್ಟ ಆಯಾ ವಸ್ತುವಿನ ಆಂತರಿಕ ರಚನೆಯಿಂದ ಅಥವಾ ಬಾಹ್ಯಾವರಣದಿಂದ ಭರ್ತಿಯಾಗಬೇಕು. ಹೀಗಾಗದಿದ್ದಾಗ ವಸ್ತುವಿನ ಹೊರಮೈ ಉಷ್ಣತೆ ತಗ್ಗುತ್ತದೆ. ಎಲೆ, ಹೂದಳ ಮತ್ತು ಹುಲ್ಲಿನ ಗರಿ ಇವು ಉಷ್ಣವನ್ನು ಕಳೆದುಕೊಂಡು ಸುತ್ತಲಿನ ಗಾಳಿಯನ್ನು ತಂಪುಗೊಳಿಸುತ್ತವೆ. ಇಂಥ ತಂಪಾದ ಗಾಳಿಯ ಉಷ್ಣತೆ ಇಬ್ಬನಿಬಿಂದುವಿಗಿಂತ (ನೋಡಿ- ಆದ್ರ್ರತೆ) ತಗ್ಗಿನಲ್ಲಿದ್ದರೆ ನೀರಿನ ಆವಿ ಸಾಂದ್ರೀಕರಿಸಿ ಎಲೆ ದಳ ಮತ್ತು ಗರಿಗಳ ಮೇಲೆ ಹನಿ ಹನಿಯಾಗಿ ಮೂಡುತ್ತದೆ. ಆಕಾಶದಲ್ಲಿ ಮೋಡಗಳಿದ್ದರೆ ಅಥವಾ ಗಾಳಿ ಬಲವಾಗಿ ಬೀಸುತ್ತಿದ್ದರೆ ಇಬ್ಬನಿ ಉಂಟಾಗುವುದಿಲ್ಲ. ವಿಸರಣೆಯಿಂದ ಉಂಟಾಗುವ ಉಷ್ಣನಷ್ಟವನ್ನು ಮೋಡಗಳು ತಡೆದು ಭೂಮಿಯ ಮೇಲಣ ಉಷ್ಣತೆಯನ್ನು ಕಾದಿಡುತ್ತವೆ; ಬೀಸುವ ಗಾಳಿ ಉಷ್ಣತೆಯನ್ನು ಎಲ್ಲೂ ಇಬ್ಬನಿ ಬಿಂದುವಿಗಿಂತ ತಗ್ಗಿಗೆ ಇಳಿಯಲು ಬಿಡುವುದಿಲ್ಲ.

ಹಿಂದಿನಕಾಲದ ಜನ ಇಬ್ಬನಿ ಆಕಾಶದಿಂದ ಬೀಳುತ್ತದೆಂದು ತಿಳಿದಿದ್ದರು. ಅರಿಸ್ಟಾಟಲ್ ಕೂಡ (ಮೀಟಿಯರೊಲಾಜಿಕ್‍ದಲ್ಲಿ ವಿವರಿಸಿದ್ದಾನೆ) ಬೆಳಗಿನ ವೇಳೆಯಲ್ಲಿ ಕಾದು ಆವಿಯಾದ ನೀರು ರಾತ್ರಿ ವೇಳೆಯಲ್ಲಿ ಸಾಂದ್ರೀಕರಿಸಿ ಇಬ್ಬನಿ ಇಲ್ಲವೆ ಮಂಜಾಗಿ ಬೀಳುತ್ತದೆಂದು ನಂಬಿದ್ದ. ಪ್ರಾಯಶಃ ಲೂಯಿಕಾನಸ್ಟಂಟ್ ಪ್ರಿವಾಸ್ಟ್ (1792) ಎಂಬ ವಿಜ್ಞಾನಿಯೇ ಇಬ್ಬನಿಗೂ ವಸ್ತುಗಳ ತೆರೆದ ಹೊರಮೈಗಳ ವಿಸರಣೆಗೂ ಇರುವ ಸಂಬಂಧವನ್ನು ಗುರುತಿಸುವವರಲ್ಲಿ ಮೊದಲಿಗ. ಇಬ್ಬನಿಯ ಸೃಷ್ಟಿಯ ಬಗ್ಗೆ ಅಮೂಲಾಗ್ರವಾಗಿ ಪ್ರಯೋಗಗಳನ್ನು ನಡೆಸಿದವರಲ್ಲಿ ಮೊದಲಿಗೆ ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಯ ವೈದ್ಯ ಚಾರಲ್ಸ್ ವೆಲ್ಸ್ (1814). ಗಾಳಿ ಮೆಲ್ಲನೆ ಬೀಸುತ್ತಿದ್ದರೆ ಇಬ್ಬನಿಯ ಬೆಳೆವಣಿಗೆ ತ್ವರಿತಗತಿಯಿಂದ ಆಗುತ್ತದೆಂಬುದನ್ನು ಈತ ಚೆನ್ನಾಗಿ ತೋರಿಸಿದ. ಜಾನ್ ಆಟ್ಯಿನ್ (1885) ಎಂಬ ವಿಜ್ಞಾನಿ ಇಬ್ಬನಿಯಂತೆ ಬೇರಿನ ಒತ್ತಡದಿಂದ ಎಲೆಗಳ ಮೇಲೆ ಒಮ್ಮೊಮ್ಮೆ ನೀರಿನಹನಿಗಳು ಮೂಡುವುದನ್ನು ಗುರುತಿಸಿದ.

ಇಬ್ಬನಿಯ ಬೆಳೆವಣಿಗೆಗೆ ನೀರಿನ ಆವಿಯ ವಿಸರಣವೇ ಕಾರಣ. ವಾಯುಮಂಡಲದ ಮೇಲ್ಭಾಗದಲ್ಲಿ ಅದರ ಒತ್ತಡ ಹೆಚ್ಚಾಗಿದ್ದರೆ ನೀರಿನ ಆವಿ ಅಧೋಮುಖವಾಗಿ ವಿಸರಣವಾಗಿ ಇಬ್ಬನಿಯ ಬೆಳೆವಣಿಗೆಗೆ ಪೂರಕವಾಗುತ್ತದೆ. ಇಲ್ಲವೆ ತೇವವಾಗಿರುವ ನೆಲದ ಉಷ್ಣತೆ ಎಲೆಗಳ ಮೇಲ್ಮೈಯ ಉಷ್ಣತೆಗಿಂತ ಹೆಚ್ಚಾಗಿದ್ದರೆ ನೀರಿನ ಆವಿ ಊಧ್ರ್ವಮುಖವಾಗಿ ವಿಸರಣವಾಗಿ ಇಬ್ಬನಿಯ ಬೆಳೆವಣಿಗೆಗೆ ಪೂರಕವಾಗುತ್ತದೆ. ಅಧೋಮುಖವಾಗಿ ವಿಸರಣವಾದ ನೀರಿನ ಆವಿಯಿಂದ ಬೆಳೆದ ಇಬ್ಬನಿಯನ್ನು ಇಬ್ಬನಿಪಾತ (ಡ್ಯೂಫಾಲ್) ಎಂದೂ ಊಧ್ರ್ವಮುಖವಾಗಿ ವಿಸರಣವಾದ ನೀರಿನ ಆವಿಯಿಂದ ಬೆಳೆದ ಇಬ್ಬನಿಯನ್ನು ಬಟ್ಟಿಇಬ್ಬನಿ (ಡಿಸ್ಟಿಲ್ಲೇಷನ್) ಎಂದೂ ಕರೆಯುವುದಿದೆ.

ಗಿಡಗಳ ಮತ್ತು ಹುಲ್ಲಿನ ಮೇಲೆ ಬೀಳುವ ಇಬ್ಬನಿಯ ಮೊತ್ತವನ್ನು ಗೊತ್ತು ಮಾಡುವುದು ಪ್ರಯಾಸದ ಕೆಲಸ, ಒಂದು ರಾತ್ರಿಯಲ್ಲೇ ಸುಮಾರು (1/50)" ಇಬ್ಬನಿ ಬೀಳುವುದುಂಟು. ಸಮಶೀತೋಷ್ಣ ಮತ್ತು ಉಷ್ಣವಲಯಗಳ ಹವಾಗುಣ ಇಬ್ಬನಿಯ ಸೃಷ್ಟಿಗೆ ಪ್ರೇರಕವಾಗಿದೆ. ಶೀತವಲಯಗಳ ಇಬ್ಬನಿ ಬಲು ಅಪೂರ್ವ, ಯಾವುದೇ ಪ್ರದೇಶದಲ್ಲಿ ಬೀಳುವ ಸಾಲಿಯಾನ ಇಬ್ಬನಿಯ ಮೊತ್ತ ಆ ಪ್ರದೇಶದ ಸರಾಸರಿ ಉಷ್ಣತೆ ಮತ್ತು ಗಾಳಿಯ ಆದ್ರ್ರತೆಗಳನ್ನವಲಂಬಿಸಿದೆ. ಚಳಿ ಇಲ್ಲವೆ ನಿರಾದ್ರ್ರತೆ ಬಿಸಿ ಹವಾಗುಣವಿರುವ ಪ್ರದೇಶಗಳಲ್ಲಿ ಸುಮಾರು 1/2” ಮತ್ತು ಸಾಮಾನ್ಯ ಆದ್ರ್ರತೆ ಇದ್ದು ಬಿಸಿ ಹವಾಗುಣವಿರುವ ಪ್ರದೇಶಗಳಲ್ಲಿ ಸುಮಾರು 3" ಇಬ್ಬನಿ ಬೀಳುತ್ತದೆ. ಇಸ್ರೇಲಿನಂಥ ಪ್ರದೇಶಗಳಲ್ಲಿ ಇಬ್ಬನಿಯಿಂದಲೇ ಬೇಸಗೆ ಬೆಳೆ ಮಾಡುತ್ತಾರೆ. ಮರುಭೂಮಿಯ ಮರಗಳು ಬದುಕಿರುವುದೂ ಇಬ್ಬನಿಯಿಂದಲೇ, ಇಬ್ಬನಿಯಿಂದ ಅನುಕೂಲದಂತೆ ಪ್ರತಿಕೂಲವೂ ಇದೆ. ಬಹಳ ಕಡೆ ಇದನ್ನುಂಡು ಬೆಳೆಯುವ ಅಣಬೆ ಮತ್ತು ಕಳೆ ಉಪಯುಕ್ತ ಗಿಡಮರಗಳಿಗೆ ಹಾನಿ ಉಂಟುಮಾಡುತ್ತದೆ.

ಇಬ್ಬನಿಬಿಂದು : ಗಾಳಿ ತಂಪುಗೊಂಡಂತೆ ಸಂತೃಪ್ತನೀರಾವಿಯ ಮತ್ತು ನೀರಾವಿಯ ಸಂಮರ್ಧಗಳು ಸಮಾನವಾಗಿರುವ ಸ್ಥಿತಿಯನ್ನು ತಲಪುತ್ತವೆ. ಎಂದರೆ ಅಲ್ಲಿಂದ ಮುಂದೆ ಗಾಳಿ ಉಷ್ಣವಿಸರಣೆಯಿಂದ ಲಭ್ಯವಾಗುವ ನೀರಾವಿಯನ್ನು ಸ್ವೀಕರಿಸಲು ಅಸಮರ್ಥವಾಗುವುದು. ಇಂಥ ಅವಧಿಕ ಉಷ್ಣತೆಯ ಹೆಸರು ಇಬ್ಬನಿ ಬಿಂದು. ಸಮುದ್ರ, ನದಿ ಮತ್ತು ಸರೋವರಗಳಲ್ಲಿ ನೀರು ಸದಾ ಬಾಷ್ಪೀಕರಣಗೊಂಡು (ಇವಾಷರೇಷನ್) ವಾಯುಮಂಡಲವನ್ನು ಸೇರುವುದರಿಂದ ಗಾಳಿ ಸದಾ ನೀರಾವಿಯಿಂದ ಕೂಡಿರುತ್ತದೆ. ಇದರ ಪ್ರಮಾಣ ಬೆಳಗಿನ ವೇಳೆಯ ಸರಾಸರಿ ಉಷ್ಣತೆಯನ್ನೂ ಪರಿಸರದ ಪ್ರಕೃತಿಯ ಸ್ವಭಾವನ್ನೂ ಆವಲಂಬಿಸಿದೆ.

ಚಿತ್ರ-1

ರಾತ್ರಿ ವೇಳೆಯಲ್ಲಿ ಎಲೆ, ದಳ ಮತ್ತು ಗುರಿಗಳಿಂದ ಉಷ್ಣವಿಸರಣಗೊಂಡು ತತ್ಪಲವಾಗಿ ಗಾಳಿಯ ಉಷ್ಣತೆ ಇಬ್ಬನಿಬಿಂದುವಿಗಿಂತ ಕೆಳಗೆ ಇಳಿದರೆ ಹೆಚ್ಚಾದ ಆವಿ ಸಾಂದ್ರೀಕರಿಸಿ ಇಬ್ಬನಿಯಾಗುತ್ತದೆ. ಉಷ್ಣತೆ ಹಿಮಬಿಂದುವಿಗಿಂತ (ಫ್ರಿಸೀóಂಗ್ ಪಾಯಿಂಟ್) ತಗ್ಗಿನಲ್ಲಿದ್ದರೆ ಇಬ್ಬನಿ ಹೆಪ್ಪುಗಟ್ಟಿ ಬಿಳಿ ಮಂಜು ಆಗುತ್ತದೆ.

ಸಮಾನ್ಯವಾಗಿ ಗಾಳಿ ನೀರಿನ ಆವಿಯಿಂದ ಸಂತೃಪ್ತವಾಗಿರುವುದಿಲ್ಲ. ಇರುವ ನೀರನ ಆವಿಯಿಂದಲೇ ಅದನ್ನು ಸಂತೃಪ್ತಗೊಳಿಸಬೇಕಾದರೆ ಅದರ ಉಷ್ಣತೆಯನ್ನು ತಗ್ಗಿಸಬೇಕು. ಗಾಳಿಯನ್ನು ಸಂತೃಪತ್ತಗೊಳಿಸುವ ನೀರಿನ ಆವಿಯ ಪ್ರಮಾಣ ಉಷ್ಣತೆಯನ್ನವಲಂಬಿಸಿದೆ.

ಗಾಜಿನ ಲೊಟದಲ್ಲಿರುವ ನೀರಿಗೆ ಮಂಜುಗಡ್ಡೆಯನ್ನು ಹಾಕಿ ಕಲಕಿದರೆ ಸ್ವಲ್ಪ ಕಾಲದಲ್ಲೇ ಲೋಟದ ಹೊರಮೈಮೇಲೆ ಇಬ್ಬನಿ ಮೂಡುತ್ತದೆ. ರೀನೋನ ಆದ್ರ್ರತಾಮಾಪಿಯನ್ನು ಉಪಯೋಗಿಸಿ ಮಾಡುವ ಪ್ರಯೋಗವೂ ಇಂಥದೆ.

ಗಾಳಿ ಃಯಿಂದ ಂಗೆ ಹೋಗದಂತೆ ಅಡ್ಡಿಯಿದೆ. ವಾಯುಚೋಷಕ ಕೆಲಸ ಮಾಡಲಾರಂಭಿಸಿದರೆ ಗಾಳಿ ಗಾಜಿನ ನಳಿಗೆಯು ಮೂಲಕ ಈಥರನ್ನು ಪ್ರವೇಶಿಸಿ ಅದರ ಆವಿಯನ್ನು ಹೊತ್ತು ಹೊರಗೆ ಹೋಗುವುದು. ಇದರಿಂದ ಂಯ ಉಷ್ಣತೆ ಕಡಿಮೆಯಾಗುತ್ತ ಬರುತ್ತದೆ. ಒಮ್ಮೆ ಂ ಯ ಉಷ್ಣತೆ ಸುತ್ತಿನ ಗಾಳಿಯ ಇಬ್ಬನಿಬಿಂದುವಿಗಿಂತ ತಗ್ಗಿದರೆ ಇಬ್ಬನಿ S1 ರ ಮೇಲೆ ಮೂಡುವುದು. ಆಗ ಖಿ1 ತೋರಿಸುವ ಉಷ್ಣತೆಯನ್ನು ಓದಬೇಕು. ಇದನ್ನೇ ಇಬ್ಬನಿಬಿಂದು ಎಂದು ತಿಳಿಯುವುದು ಸರಿಯಲ್ಲ. ಆದ್ದರಿಂದ ವಾಯುಚೋಷಕವನ್ನು ನಿಲ್ಲಿಸಿ S1ರ ಮೇಲಿನ ಇಬ್ಬನಿ ಆರಿದ ತತ್‍ಕ್ಷಣ ಮತ್ತೆ ಖಿ1 ತೋರಿಸುವ ಉಷ್ಣತೆಯನ್ನು ಓದಬೇಕು. ಈ ಎರಡು ಉಷ್ಣತೆಗಳ ಸರಾಸರಿ ಬಲುಮಟ್ಟಗೆ ಸಮರ್ಪಕವಾದ ಇಬ್ಬನಿಬಿಂದುವನ್ನು ಕೊಡುತ್ತದೆ.

ಃ ಮತ್ತು ಅದರ ತುದಿಯಲ್ಲಿರುವ ಅಂಗುಸ್ತಾನ S2 ಪ್ರಯೋಗ ನಡಸುವವನಿಗೆ ಸಹಾಯಕವಾಗಿದೆ. S2ರ ಹೊರಮೈ ನೋಡುತ್ತ S1ರ ಹೊರಮೈ ಮೇಲೆ ಇಬ್ಬನಿ ಮೂಡುವುದನ್ನೂ ಅದು ಮತ್ತೆ ಆರುವುದನ್ನೂ ಸುಲಭವಾಗಿ ನಿರ್ಧರಿಸಬಹುದು. ರೀನೋನ ಆದ್ರ್ರತಾಮಾಪಿಯಿಂದ ಸಾಪೇಕ್ಷ ಆದ್ರ್ರತೆಯನ್ನೂ ನಿರ್ಧರಿಸಬಹುದು. (ಎಸ್.ಎ.ಎಚ್.) [೨]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಇಬ್ಬನಿ&oldid=1149480" ಇಂದ ಪಡೆಯಲ್ಪಟ್ಟಿದೆ