ವಿಷಯಕ್ಕೆ ಹೋಗು

ಇನ್ಸ್ಟಾಗ್ರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇನ್ಸ್ಟಾಗ್ರಾಮ್

ಮೂಲ ಕರ್ತೃ
ಅಭಿವೃದ್ಧಿಪಡಿಸಿದವರುಮೆಟಾ
ಮೊದಲು ಬಿಡುಗಡೆಅಕ್ಟೋಬರ್ ೬, ೨೦೧೦
ಟೆಂಪ್ಲೇಟು:Infobox software/stacked
ಕಾರ್ಯಾಚರಣಾ ವ್ಯವಸ್ಥೆ
ಗಾತ್ರ೨೩೧.೩ ಮೆಗಾಬೈಟ್ (ಐಒಎಸ್)[೧]
೫೦.೨೨ ಮೆಗಾಬೈಟ್ (ಆಂಡ್ರಾಯ್ಡ್)[೨]
೫೦.೩ ಮೆಗಾಬೈಟ್ (ಫೈರ್ ಒಎಸ್) [೩]
ಲಭ್ಯವಿರುವ ಭಾಷೆ(ಗಳು)೩೨[೪] ಭಾಷೆಗಳು
ಭಾಷೆಗಳು
 • ಚೀನೀ
 • ಕ್ರೊವೇಶಿಯನ್
 • ಝೆಕ್
 • ಡ್ಯಾನಿಶ್
 • ಡಚ್
 • ಆಂಗ್ಲ
 • ಫಿನ್ನಿಶ್
 • ಫ್ರೆಂಚ್
 • ಜರ್ಮನ್
 • ಗ್ರೀಕ್
 • ಹಿಂದಿ
 • ಹಂಗೇರಿಯನ್
 • ಇಂಡೋನೇಷ್ಯನ್
 • ಇಟಾಲಿಯನ್
 • ಜಪಾನೀ
 • ಕೊರಿಯನ್
 • ಮಲೇಷಿಯನ್
 • ನಾರ್ವೇಜಿಯನ್
 • ಪೋಲಿಷ್
 • ಪೋರ್ಚುಗೀಸ್
 • ರೊಮೇನಿಯನ್
 • ರಷ್ಯನ್‌
 • ಸ್ಲೋವಾಕ್‌‌
 • ಸ್ಪಾನಿಷ್
 • ಸ್ವೀಡಿಶ್
 • ತಗಲಾಗ್
 • ಥಾಯ್
 • ತುರ್ಕಿಷ್
 • ಉಕ್ರೇನಿಯನ್
 • ವಿಯೆಟ್ನಾಮೀಸ್
 • ಪರ್ಷಿಯನ್
ಪರವಾನಗಿಮೆಟಾ ಸಂಸ್ಥೆಯು ಹಕ್ಕುಸ್ವಾಮ್ಯ ಹೊಂದಿದೆ
ಅಧೀಕೃತ ಜಾಲತಾಣinstagram.com

ಇನ್‍ಸ್ಟಾಗ್ರಾಂ ಒಂದು ಅಮೆರಿಕ ಮೂಲದ ಸಾಮಾಜಿಕ ಫೋಟೋ ಮತ್ತು ವೀಡಿಯೊ ಹಂಚಿಕೆ ನೆಟ್‍ವರ್ಕಿಂಗ್ ಸೇವೆಯಾಗಿದ್ದು, ೨೦೧೦ ರಲ್ಲಿ ಕೆವಿನ್ ಸಿಸ್ಟ್ರೋಮ್ ಮತ್ತು ಮೈಕ್ ಕ್ರೀಗರ್ ಇದನ್ನು ಆರಂಭಿಸಿದರು. ನಂತರ ಫೇಸ್‍ಬುಕ್ ಇಂಕ್ ಇದನ್ನು ಸ್ವಾಧೀನ ಪಡಿಸಿಕೊಂಡಿತು. ಈ ಅಪ್ಲಿಕೇಶನ್ ಬಳಕೆದಾರರಿಗೆ ಫಿಲ್ಟರ್, ಹ್ಯಾಶ್‍ಟ್ಯಾಗ್ ಮತ್ತು ಭೌಗೋಳಿಕ ಟ್ಯಾಗಿಂಗ್ ನಿಂದ ಸಂಘಟಿಸಬಹುದಾದ ಮಾಧ್ಯಮವನ್ನು ಅಪ್‍ಲೋಡ್ ಮಾಡಲು ಅನುಮತಿಸುತ್ತದೆ. ಪೊಸ್ಟ್ ಗಳನ್ನು ಸಾರ್ವಜನಿಕವಾಗಿ ಅಥವಾ ಪೂರ್ವ ಅನುಮೋದಿತವಾಗಿ ಅನುಯಾಯಿಗಳೊಂದಿಗೆ ಹಂಚಿಕೊಳ್ಳಬಹುದು. ಬಳಕೆದಾರರು ಇತರ ಬಳಕೆದಾರರ ವಿಷಯವನ್ನು ಟ್ಯಾಗ್ ಮತ್ತು ಸ್ಥಳದ ಮೂಲಕ ಹುಡುಕಬಹುದು. ಫೋಟೋ ಗಳಂತಹ ಟ್ರೆಂಡಿಂಗ್ ವಿಷಯವನ್ನು ವೀಕ್ಷಿಸಬಹುದು ಮತ್ತು ವೈಯಕ್ತಿಕ ಫೀಡ್ ಗೆ ತಮ್ಮ ವಿಷಯವನ್ನು ಸೇರಿಸಲು ಇತರ ಬಳಕೆದಾರರನ್ನು ಅನುಸರಿಸಬಹುದು. ಇನ್‍ಸ್ಟಾಗ್ರಾಂಅನ್ನು ಮೂಲತಃ ೬೪೦ ಪಿಕ್ಸೆಲ್‍ಗಳ ಚದರ(೧:೧) ಆಕಾರ ಅನುಪಾತದಲ್ಲಿ ಆ ಸಮಯದಲ್ಲಿ ಐಫೋನ್‍ನ ಡಿಸ್‍ಪ್ಲೇ ಅಗಲಕ್ಕೆ ಹೊಂದಿವ೦ತೆ ರೂಪಿಸಲಾಯಿತು. ೨೦೧೫ರಲ್ಲಿ ಈ ನಿರ್ಬಂಧಗಳನ್ನು ೧೦೮೦ ಪಿಕ್ಸೆಲ್‍ಗಳಿಗೆ ಹೆಚ್ಚಿಸುವುದರೊಂದಿಗೆ ಸರಾಗಗೊಳಿಸಲಾಯಿತು. ನ೦ತರ ಸಂದೇಶ ಕಳುಹಿಸುವ ವೈಶಿಷ್ಟ್ಯಗಳನ್ನು ಸೇರಿಸಲಾಯಿತು. ಒಂದೇ ಪೋಸ್ಟ್ ನಲ್ಲಿ ಬಹು ಚಿತ್ರಗಳನ್ನು ಅಥವಾ ವೀಡಿಯೋಗಳನ್ನು ಸೇರಿಸುವ ಸಾಮರ್ಥ್ಯ ಮತ್ತು ಅದರ ಮುಖ್ಯಸ್ಪರ್ಧಿ ಸ್ನ್ಯಾಪ್‍ಚಾಟ್ ನಂತೆಯೇ ಸ್ಟೋರೀಸ್‍ಗಳ ವೈಶಿಷ್ಟ್ಯವನ್ನು ಇದು ಹೊಂದಿದೆ. ಇದರಿಂದಾಗಿ ಬಳಕೆದಾರರು ತಮ್ಮ ವಿಷಯವನ್ನು ಅನುಕ್ರಮ ಫೀಡ್‍ಗೆ ಪೋಸ್ಟ್ ಮಾಡಲು ಸಾಧ್ಯವಾಯಿತು. ಪ್ರತಿ ಪೋಸ್ಟ್ ಗಳನ್ನು ಇತರರು ೨೪ ಗಂಟೆಯವರೆಗೆ ಪ್ರವೇಶಿಸಬಹುದು. ನಂತರದ ಎರಡು ತಿಂಗಳಲ್ಲಿ ಒಂದು ಮಿಲಿಯನ್ ನೋಂದಾಯಿತ ಬಳಕೆದಾರರು, ವರ್ಷದಲ್ಲಿ ೧೦ ಮಿಲಿಯನ್ ಮತ್ತು ಜೂನ್ ೨೦೧೮ ರ ಹೊತ್ತಿಗೆ ೧ ಬಿಲಿಯನ್ ನೋಂದಾಯಿತ ಬಳಕೆದಾರರನ್ನು ಪಡೆದುಕೊಂಡಿತು. ಇದರ ಆಂಡ್ರಾಂಯ್ಡ್ ಏಪ್ರಿಲ್ ೨೦೧೨ ರಲ್ಲಿ ಬಿಡುಗಡೆ ಮಾಡಲಾಯಿತು. ಇನ್‍ಸ್ಟಾಗ್ರಾಂ ತನ್ನ ಯಶಸ್ಸು ಮತ್ತು ಪ್ರಭಾವಕ್ಕಾಗಿ ಆಗಾಗ್ಗೆ ಮೆಚ್ಚುಗೆ ಪಡೆದಿದ್ದರೂ,ಹದಿಹರೆಯದವರ ಮಾನಸಿಕ ಆರೋಗ್ಯ, ಅದರ ನೀತಿ ಮತ್ತು ಇಂಟರ್ಫೇಸ್ ಬದಲಾವಣೆಗಳು ಮತ್ತು ಬಳಕೆದಾರರು ಅಪ್‍ಲೋಡ್ ಮಾಡಿದ ಕಾನೂನು ಬಾಹಿರ ಮತ್ತು ಅನುಚಿತ ವಿಷಯಗಳು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಟೀಕಿಸಲಾಗಿದೆ. ಪ್ರಮುಖ ಸಾಮಾಜಿಕ ಜಾಲತಾಣಗಳ ಪೈಕಿ ಇನ್‌ಸ್ಟಾಗ್ರಾಮ್‌ ಒಂದಾಗಿದೆ.[೫]

೨೦೧೦ - ೨೦೧೧ ಆರಂಭ ಮತ್ತು ಪ್ರಮುಖ ನಿಧಿ[ಬದಲಾಯಿಸಿ]

ಇನ್ಸ್ಟಾಗ್ರಾ೦ ಅನ್ನು ಸ್ಯಾನ್ ಫ್ರಾನ್ಸಿಸ್ಕೋ, ಬರ್ಬನ್ನಲ್ಲಿ ಅಭಿವೃದ್ಧಿ ಪಡಿಸಲಾಯಿತು. ಕೆವಿನ್ ಸಿಸ್ಟ್ರೋ೦ ಮತ್ತು ಮೈಕ್ ಕ್ರೀಗೆರ್ ರಚಿಸಿದ ಮೊಬೈಲ್ ಚೆಕ್ ಇನ್ ಅಪ್ಲಿಕೇಶನ್ ಇದು.[೬] ಈ ಅಪ್ಲಿಕೇಶನ್ ನಾಲ್ಕು ಚೌಕಗಳನ್ನು ಹೋಲುತ್ತದೆ ಎ೦ದು ತಿಳಿದ ಮೇಲೆ ಇದನ್ನು ಫೋಟೋ ಹ೦ಚಿಕೆಗೂ ವಿಸ್ತರಿಸಲಾಯಿತು. ನಂತರ ಅವರು ಅದನ್ನು ಇನ್‍ಸ್ಟಾಗ್ರಾಂ ಎಂದು ಮರುನಾಮರಕರಣ ಮಾಡಿದರು. ಇದು ತ್ವರಿತ ಕ್ಯಾಮೆರಾ ಮತ್ತು ಟೆಲಿಗ್ರಾಂನಂತೆ ಕೆಲಸ ಮಾಡುತ್ತದೆ. ಮೊದಲ ಇನ್ಸ್ಟಾಗ್ರಾ೦ ಪೋಸ್ಟ್ ಸೌತ್ ಹಾರ್ಬರ್ ನಲ್ಲಿನ ಪೇರ್ ೩೮ ನ ಫೋಟೋವಾಗಿದ್ದು ಇದನ್ನು ಮೈಕ್ ಕ್ರೀಗರ್ ಅವರು ಜುಲೈ ೧೬, ೨೦೧೦ ರಂದು ಸಂಜೆ ೫:೨೬ ಕ್ಕೆ ಪೋಸ್ಟ್ ಮಾಡಿದ್ದಾರೆ. ನಂತರ ರಾತ್ರಿ ೯:೨೪ ಕ್ಕೆ ನಾಯಿ ಮತ್ತು ತನ್ನ ಗೆಳತಿಯ ಪಾದದ ಪೋಸ್ಟ್ ಅನ್ನು ಹಂಚಿಕೊಂಡರು.

ಫೆಬ್ರವರಿ ೨೦೧೧ ರಲ್ಲಿ, ಇನ್‍ಸ್ಟಾಗ್ರಾಂ ಬೆಂಚ್ಮಾರ್ಕ್ ಕ್ಯಾಪಿಟಲ್, ಜ್ಯಾಕ್ ಡಾರ್ಸೆ, ಕ್ರಿಸ್ ಸಾಕ್ಕಾ ಮತ್ತು ಆಡಮ್ ಡಿ ಏಂಜೆಲೊ ಸೇರಿದಂತೆ ವಿವಿಧ ಹೂಡಿಕೆದಾರರಿನ್ದ ಸರಣಿ ಎ ನಲ್ಲಿ $೭ ಮಿಲಿಯನ್ ಹಣವನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಸುಮಾರು $೨೦ ಮಿಲಿಯನ್,ಎಪ್ರಿಲ್ ೨೦೧೨ ರಲ್ಲಿ $೫೦೦ ಮಿಲಿಯನ್ ಮೌಲ್ಯದೊಂದಿಗೆ $೫೦ ಮಿಲಿಯನ್ ಸಾಹಸೋದ್ಯಮ ಬಂಡವಾಳಗಾರರಿಂದ $೫೦ ಮಿಲಿಯನ್ ಸಂಗ್ರಹಿಸಿದೆ.[೭] ಜೋಶುವಾ ಕುಶ್ನರ್ ಇನ್‍ಸ್ಟಾಗ್ರಾಂ ನ ಸರಣಿ ಬಿ ಸುತ್ತಿನಲ್ಲಿ ಎರಡನೇ ಅತಿ ದೊಡ್ದ ಹೊಡಿಕೆದಾರರಾಗಿದ್ದರು.[೮]

೨೦೧೨ - ೨೦೧೪ ಫೇಸ್‍ಬುಕ್‍ನಿಂದ ಹೆಚ್ಚುವರಿ ಫ್ಲಾಟ್‍ಫಾರ್ಮ್ ಮತ್ತು ಸ್ವಾಧೀನ[ಬದಲಾಯಿಸಿ]

೩ ಏಪ್ರಿಲ್ ೨೦೧೨ ರಲ್ಲಿ ಇನ್‍ಸ್ಟಾಗ್ರಾಂ ಆಂಡ್ರಾಯ್ಡ್ ಫೋನ್‍ಗಳಿಗಾಗಿ ತನ್ನ ಅಪ್ಲಿಕೇಶನ್ ಆವ್ರುತ್ತಿಯನ್ನು ಬಿಡುಗಡೆ ಮಾಡಿತು. ಅದನ್ನು ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಒಂದು ಮಿಲಿಯನ್ ಗಿಂತಲೂ ಅಧಿಕ ಮಂದಿ ಡೌನ್‍ಲೋಡ್ ಮಾಡಿದ್ದಾರೆ. ಅಪ್ಲಿಕೆಶನ್ ಅಂದಿನಿಂದ ಎರಡು ಗಮನಾರ್ಹ ನವೀಕರಣಗಳನ್ನು ಸ್ವೀಕರಿಸಿದೆ. ಮೊದಲನೆಯದು ಮಾರ್ಚ್ ೨೦೧೪ ರಲ್ಲಿ ಇದು ಅಪ್ಲಿಕೇಶನ್ ನ ಫೈಲ್ ಗಾತ್ರವನ್ನು ಕತ್ತರಿಸಿ, ಕಾರ್ಯಕ್ಶಮತೆ ಸುಧಾರಣೆಗರಳನ್ನು ಸೇರಿಸಿದೆ. ನಂತರ ಏಪ್ರಿಲ್ ೨೦೧೭ ರಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದೇ ವಿಶಯವನ್ನು ವೀಕ್ಷಿಸಲು ಮತ್ತು ಸಂವಹನ ನಡೆಸಲು ಸಹಕರಿಸಿದೆ. ಇನ್‍ಸ್ಟಾಗ್ರಾಂ ನ ೬೦೦ ಮಿಲಿಯನ್ ಬಳಕೆದಾರರಲ್ಲಿ ೮೦% ಯು.ಎಸ್.ಎಯ ಹೊರಗೆ ನೆಲೆಸಿದ್ದಾರೆ. ೯ ಏಪ್ರಿಲ್ ೨೦೧೨ ರಂದು ಫೇಸ್‍ಬುಕ್ ಇಂಕ್, ಕಂಪನಿಯನ್ನು ಸ್ವತಂತ್ರವಾಗಿ ನಿರ್ವಹಿಸುವ ಯೋಜನೆಯೊಂದಿಗೆ $೧ ಬಿಲಿಯನ್ ನಗದು ಮತ್ತು ಸ್ಟಾಕ್, ೧೩೫೧೩೬೧೩೭ ಗೆ ಇನ್‍ಸ್ಟಾಗ್ರಾಂ ಅನ್ನು ಖರೀದಿಸಿತು. ಸೆಪ್ಟೆಂಬರ್ ೬.೨೦೧೨ ರಂದು, ಇನ್‍ಸ್ಟಾಗ್ರಾಂ ಮತ್ತು ಫೇಸ್‍ಬುಕ್ ನಡುವಿನ ಒಪ್ಪಂದವು $೩೦೦ ಮಿಲಿಯನ್ ನಗದು ಮತ್ತು ೨೩ ಮಿಲಿಯನ್ ಖರೀದಿ ಬೆಲೆಯೊಂದಿಗೆ ಅಧಿಕೃತವಾಗಿ ಮುಚ್ಚಲ್ಪಟ್ಟಿತು. ನವೆಂಬರ್ ೨೦೧೨ ರಲ್ಲಿ ಇನ್‍ಸ್ಟಾಗ್ರಾಂ ಪ್ರೊಫೈಲ್ ಗಳನ್ನು ಪ್ರಾರಂಭಿಸಿತು. ಬಳಕೆದಾರರ ಫೀಡ್‍ಗಳನ್ನು ಸೀಮಿತ ಕಾರ್ಯನಿರ್ವಹನೆಯೊಂದಿಗೆ ವೆಬ್ ಬ್ರೌಸರ್ ಮೂಲಕ ನೋಡಲು ಇದು ಅನುಮತಿಸುತ್ತದೆ. ಅಪ್ಲಿಕೇಶನ್ ಪ್ರಾರಂಭವಾದಾಗಿನಿಂದ ಇದು ಹೆಸರಿಸಲಾದ ಸ್ಥಳ ಟ್ಯಾಗಿಂಗ್ ಅನ್ನು ಒದಗಿಸಲು ಫೋರ್‍ಸ್ಕೇರ್ ಎ.ಪಿ.ಐ ತಂತ್ರಜ್ನಾನವನ್ನು ಬಳಸಿದೆ.

೨೦೧೫ - ೨೦೧೭ ಮರುವಿನ್ಯಾಸ ಮತ್ತು ವಿಂಡೋಸ್ ಅಪ್ಲಿಕೇಶನ್[ಬದಲಾಯಿಸಿ]

ಜೂನ್ ೨೦೧೫ ರಲ್ಲಿ ಡೆಸ್ಕ್ಟಾಪ್ ವೆಬ್‍ಸೈಟ್ ಬಳಕೆದಾರ ಇಂಟರ್ಫೇಸ್ ಅನ್ನು ಫ್ಲಾಟ್ ಮತ್ತು ಮಿನಿಮಲಿಸ್ಟಿಕ್ ಆಗಲು ಮರುವಿನ್ಯಾಸಗೊಳಿಸಲಾಯಿತು. ಮೊಬೈಲ್ ಲೇಯೌಟ್ ಗೆ ಹೊಂದಿಸಲು ಫೋಟೊಗಳು, ಪ್ರೊಫೈಲ್ ಫೋಟೋಗಳ ಮೇಲ್ಭಾಗದಲ್ಲಿ ಬಳಕೆದಾರರಿಂದ ಪೋಸ್ಟ್ ಮಾಡಿದ ಚಿತ್ರಗಳ ಏಳು ಚಿತ್ರ ಅಂಚುಗಳನ್ನು ಏಕಕಾಲದಲ್ಲಿ ಸ್ಲೈಡ್ ತೋರಿಸುತ್ತದೆ. ೧೧ ಮೇ ೨೦೧೬ ರಂದು, ಇನ್‍ಸ್ಟಾಗ್ರಾಂ ತನ್ನ ವಿನ್ಯಾಸವನ್ನು ಪರಿಷ್ಕರಿಸಿತು. ಅಪ್ಲಿಕೇಶನ್ ಬಳಕೆದಾರ ಇಂಟರ್ಫೇಸ್ ಗೆ ಕಪ್ಪು ಮತ್ತು ಬಿಳಿ ಫ್ಲಾಟ್ ವಿನ್ಯಾಸದ ಥೀಮ್ ಅನ್ನು ಸೇರಿಸಿತು.

ಪ್ರಶಸ್ತಿಗಳು[ಬದಲಾಯಿಸಿ]

ಇನ್‍ಸ್ಟಾಗ್ರಾಂ ಜನವರಿ ೨೦೧೧ ರಲ್ಲಿ ೨೦೧೦ ಟೆಕ್ ಕ್ರಂಚ್ ಕ್ರಂಚೀಸ್ ನಲ್ಲಿ ಅತ್ಯುತ್ತಮ ಮೊಬೈಲ್ ಅಪ್ಲಿಕೇಶನ್ ಗಾಗಿ ರನ್ನರ್ ಅಪ್ ಆಗಿತ್ತು. ಮೇ ೨೦೧೧ ರಲ್ಲಿ, ಫಾಸ್ಟ್ ಕಂಪನಿಯು ಸಿಇಒ ಕೆವಿನ್ ಸಿಸ್ಟ್ರೋಮ್ ಅವರನ್ನು ೨೦೧೧ ರಲ್ಲಿ ವ್ಯಾಪಾರದಲ್ಲಿ ೧೦೦ ಅತ್ಯಂತ ಸೃಜನಶೀಲ ವ್ಯಕ್ತಿಗಳು ನಲ್ಲಿ ೬೬ ನೇ ಸ್ಥಾನದಲ್ಲಿ ಪಟ್ಟಿಮಾಡಿತು. ಜೂನ್ ೨೦೧೧ ರಲ್ಲಿ ಇಂಕ್ ತನ್ನ ೨೦೧೧ ರ ೩೦ ಅಂಡರ್ ೩೦ ಪಟ್ಟಿಯಲ್ಲಿ ಸಹ-ಸಂಸ್ಥಾಪಕರಾದ ಸಿಸ್ಟ್ರೋಮ್ ಮತ್ತು ಕ್ರೀಗರ್ ಅನ್ನು ಸೇರಿಸಿತು. ಇನ್‍ಸ್ಟಾಗ್ರಾಂ ಸೆಪ್ಟೆಂಬರ್ ೨೦೧೧ ರಲ್ಲಿ ಎಸ್.ಎಫ಼್ ಸಾಪ್ತಾಹಿಕ ವೆಬ್ ಪ್ರಶಸ್ತಿಗಳಲ್ಲಿ "ಅತ್ಯುತ್ತಮ ಸ್ಥಳೀಯವಾಗಿ ತಯಾರಿಸಿದ ಅಪ್ಲಿಕೇಶನ್" ಅನ್ನು ಗೆದ್ದುಕೊಂಡಿತು. ೭x೭ಮ್ಯಾಗಜ಼ಿನ್ ನ ಸೆಪ್ಟೆಂಬರ್ ೨೦೧೧ ರ ಸಂಚಿಕೆಯಲ್ಲಿ ಸಿಸ್ಟ್ರೋಮ್ ಮತ್ತು ಕ್ರೀಗರ್ ಅವರ ದಿ ಹಾಟ್ ೨೦ ೨೦೧೧ ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದೆ. ಡಿಸೆಂಬರ್ ೨೦೧೧ ರಲ್ಲಿ, ಅಪಲ್ ಇಂಕ್. ಇನ್‍ಸ್ಟಾಗ್ರಾಂ ಅನ್ನು ೨೦೧೧ ರ ವರ್ಷದ ಅಪ್ಲಿಕೇಶನ್ ಎಂದು ಹೆಸರಿಸಿತು. ೨೦೧೫ ರಲ್ಲಿ, ಇನ್‍ಸ್ಟಾಗ್ರಾಂ ಸಾರ್ವಕಾಲಿಕ ೧೦೦ ಅತ್ಯುತ್ತಮ ಐಫೋನ್ ಅಪ್ಲಿಕೇಶನ್ಸ್ ಪಟ್ಟಿಯಲ್ಲಿ ಮಾಶೇಬಲ್ ನಿಂದ ನಂಬರ್ ೧ ಎಂದು ಹೆಸರಿಸಲಾಯಿತು. ಇನ್‍ಸ್ಟಾಗ್ರಾಂ ಅನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ನೆಟ್‌ವರ್ಕ್‌ಗಳಲ್ಲಿ ಒಂದು ಎಂದು ನಮೂದಿಸಲಾಗಿದೆ. ಇನ್‍ಸ್ಟಾಗ್ರಾಂ ಅನ್ನು ಟೈಮ್‌ನ ೨೦೧೩ ರ ೫೦ ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಪಟ್ಟಿಯಲ್ಲಿ ಪಟ್ಟಿಮಾಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

 1. "Instagram". App Store.
 2. "Instagram APKs". APKMirror.
 3. "Amazon.com: Instagram: Appstore for Android". Amazon.
 4. "Instagram". App Store. Retrieved October 7, 2019.
 5. https://kannada.gizbot.com/news/instagram-now-lets-users-record-reels-for-90-seconds-details-029882.html?story=1
 6. https://www.inc.com/30under30/2011/profile-kevin-systrom-mike-krieger-founders-instagram.html
 7. https://www.socialmediatoday.com/news/instagram-stories-is-now-being-used-by-500-million-people-daily/547270/
 8. https://kannada.gizbot.com/news/instagram-sensitive-controls-now-work-in-all-places-of-the-app-029912.html