ಇನ್ವರ್ಟ್ ಸಕ್ಕರೆ
ಗೋಚರ
ಬಳಕೆ ಸಕ್ಕರೆಯನ್ನು ಆಮ್ಲದಿಂದ ಅಥವಾ ಇನ್‌ವರ್ಟೇಸ್ ಕಿಣ್ವದ ಸಹಾಯದಿಂದ ಜಲವಿಚ್ಛೇದನೆಗೊಳಿಸಿದಾಗ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಕ್ಕರೆಗಳನ್ನು 1: 1 ಪ್ರಮಾಣದಲ್ಲಿ ಒಳಗೊಂಡ ಮಿಶ್ರಣ ಉತ್ಪತ್ತಿಯಾಗುತ್ತದೆ. ಇದೇ ಇನ್ವರ್ಟ್ ಸಕ್ಕರೆ.[೧] ಔದ್ಯೋಗಿಕವಾಗಿ 96% ಪ್ರಮಾಣ ಸಕ್ಕರೆಯ ದ್ರಾವಣವನ್ನು ವಿಚ್ಛೇದಿಸಿ ಇನ್‌ವರ್ಟ್ ಸಕ್ಕರೆಯನ್ನು ತಯಾರಿಸುತ್ತಾರೆ.
ಹೆಸರಿಗೆ ಕಾರಣ
[ಬದಲಾಯಿಸಿ]ಫಲಿತವಸ್ತು ಮೂಲವಸ್ತುವಿನಲ್ಲಿ ಹಾಯುವ ಧ್ರುವೀಕೃತ ಬೆಳಕಿನ ಸಮತಲದ ದಿಕ್ಕನ್ನು ಬಲದಿಂದ ಎಡಕ್ಕೆ ತಿರುಗಿಸಿ, ಚಿಹ್ನೆಯ ಸಂಕೇತವನ್ನು [(+) → (-)] ಧನದಿಂದ ಋಣಕ್ಕೆ ಬದಲಾಯಿಸುವುದರಿಂದ (ತಲೆಕೆಳಗು ಮಾಡುವುದರಿಂದ) ಇದಕ್ಕೆ ಇನ್‌ವರ್ಟ್ ಸಕ್ಕರೆ ಎಂದು ಹೆಸರಿಡಲಾಗಿದೆ.
ಗುಣಗಳು
[ಬದಲಾಯಿಸಿ]ನೀರನ್ನು ಅತಿ ಶೀಘ್ರವಾಗಿ ಹೀರುತ್ತದೆ. ಆದ್ದರಿಂದ ಈ ಮಿಶ್ರಣವನ್ನು ಸಾಮಾನ್ಯವಾಗಿ ಪಾಕದ (ಸಿರಪ್) ರೂಪದಲ್ಲಿ ಉಪಯೋಗಿಸುತ್ತಾರೆ. ಸಕ್ಕರೆಗಿಂತ ಸಿಹಿ ಹೆಚ್ಚು.[೨]
ಉಪಯೋಗಗಳು
[ಬದಲಾಯಿಸಿ]ಆಹಾರ ಮತ್ತು ಔಷಧ ಉದ್ಯಮಗಳಲ್ಲಿಯೂ ಮದ್ಯಸಾರದ ತಯಾರಿಕೆಯಲ್ಲೂ ಉಪಯೋಗವಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "What are the types of sugar?". The Sugar Association. Archived from the original on ಮಾರ್ಚ್ 1, 2009.
- ↑ "Making simple syrup is an exercise in chemical reactions". A Word from Carol Kroskey. Archived from the original on July 14, 2007. Retrieved May 1, 2006.
In addition to increased moisture retention ability, converting sucrose to invert syrup has two other interesting results: increased sweetness and better solubility. On a sweetness scale where sucrose is set at 100, invert syrup ranks about 130.
ಹೊರಗಿನ ಕೊಂಡಿಗಳು
[ಬದಲಾಯಿಸಿ]- "Invertase". Greenwood Health Systems. Archived from the original on May 29, 2017. Retrieved November 27, 2012.
- Sweeteners at Curlie
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: