ಇಂದಿರಾ ಹೆಗ್ಗಡೆ

ವಿಕಿಪೀಡಿಯ ಇಂದ
Jump to navigation Jump to search
ಇಂದಿರಾ ಹೆಗ್ಗಡೆ
ಇಂದಿರಾ ಹೆಗ್ಗಡೆ
ಜನನ೧೪ ಮಾರ್ಚ್ ೧೯೪೯
ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ
ವೃತ್ತಿಲೇಖಕಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥಾಸಂಕಲನ,ಕಾದಂಬರಿ,ಪ್ರಬಂಧ
ವಿಷಯತುಳು,ಕನ್ನಡ

ಇಂದಿರಾ ಹೆಗ್ಗಡೆ ಎಂದು ಪ್ರಸಿದ್ಧರಾಗಿರುವ ಇವರು ಕರಾವಳಿಯ ಲೇಖಕಿ, ಇವರು ತುಳು, ಕನ್ನಡ ಭಾಷೆಗಳಲ್ಲಿ ಕಾವ್ಯ, ಕಾದಂಬರಿ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಇವರ ಸಂಶೋಧನಾ ಕೃತಿ ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ, ಒಟ್ಟು ತುಳುನಾಡಿನ ನೆಲಮೂಲದ ಜನರ ಮತ್ತು ಅವರ ಉಪಾಸನಾ ಆಚರಣೆಗಳನ್ನು ಒಳಗೊಂಡ ಕೃತಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ಜನನ, ಜೀವನ[ಬದಲಾಯಿಸಿ]

ಇವರು ೧೪ ಮಾರ್ಚ್ ೧೯೪೯ರಂದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಎಳತ್ತೂರು ಗುತ್ತಿನ ಮನೆಯಲಿ ಜನಿಸಿದರು. ಇವರ ತಂದೆ ರಾಜು ಸೆಟ್ಟಿ, ತಾಯಿ ಸಿಂಧು ಸೆಡ್ತಿ ಎಳತ್ತೂರು ಗುತ್ತು. ಇವರ ಪ್ರಾಥಮಿಕ ವಿದ್ಯಾಭ್ಯಾಸ ಸ್ಥಳೀಯ ಶಾಲೆಯಲ್ಲಿ ನಡೆಸಿ, ಕೃಷ್ಣಾ ಇನ್ಸ್‍ಟಿಟ್ಯೂಟ್ ಆಫ್ ಮೇನೇಜ್ ಮೆಂಟಿನಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನವನ್ನು ಸಮಾಜ ಶಾಸ್ತ್ರದಲ್ಲಿ ಪೂರೈಸಿದ್ದರು. ಪ್ರಸಿದ್ಧ ತುಳು ಕನ್ನಡ ಸಾಹಿತಿ, ಅಮ್ಮುಂಜೆ ಗುತ್ತು ಶೀನಪ್ಪ ಹೆಗ್ಗಡೆಯವರ ಪುತ್ರ ಎಸ್ ಆರ್ ಹೆಗ್ಡೆ ಎಂದೇ ಪ್ರಸಿದ್ಧರಾದ ಚೇಳಾರುಗುತ್ತು ಸೀತಾರಾಮ ಹೆಗ್ಡೆಯರ ಮಡದಿ. ಸರಿತಾ ಹೆಗ್ಗಡೆ ಮಗಳು ಮತ್ತು ಶರತ್ ಹೆಗ್ಡೆ ಇವರ ಮಕ್ಕಳು.

 • ಇಂದಿರಾ ಹೆಗ್ಗಡೆಯವರು ಸಣ್ಣ ಕಥೆಗಳನ್ನು ಸುಧಾ ತರಂಗ ಮುಂತಾದ ಪತ್ರಿಕೆಗಳಿಗೆ ಬರೆಯುವ ಮೂಲಕ ತಮ್ಮ 33ನೆಯ ವಯಸ್ಸಿನಲ್ಲಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು.
 • ಮುಂದೆ ಇವರನ್ನು ಸಂಶೋಧನಾ ಕ್ಷೇತ್ರಕ್ಕೆ ಕರೆತಂದವರು ಡಾ. ಎಂ.ಚಿದಾನಂದ ಮೂರ್ತಿಯವರು.
 • ಇವರ ಅನೇಕ ಸೃಜನ ಶೀಲ ಬರಹಗಳು, ಸಂಶೋಧನಾ ಬರಹಗಳು,ಪ್ರವಾಸ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಪ್ರಜಾವಾಣಿ, ಉದಯವಾಣಿ, ವಿಜಯಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಕೃತಿಗಳು[ಬದಲಾಯಿಸಿ]

ಕಥಾ ಸಂಕಲನಗಳು[ಬದಲಾಯಿಸಿ]

 • ಮೋಹಿನಿಯ ಸೇಡು
 • ಪುರುಷರೇ ನಿಮಗೆ ನೂರು ನಮನಗಳು
 • ಬದಿ
 • ಬದುಕು

ಸಂಶೋಧನಾ ಕೃತಿಗಳು[ಬದಲಾಯಿಸಿ]

 • ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ[೧]
 • ಬಂಟರು – ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ
 • ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು
 • ತುಳುವೆರೆ ಅಟಿಲ ಅರಗಣೆ
 • ಚೇಳಾರು ಗುತ್ತು ಅಗೊಳಿ ಮಂಜಣ್ಣ

ಜಾನಪದ[ಬದಲಾಯಿಸಿ]

 • ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ
 • ದೈವಗಳ ಸಂಧಿ ಪಾಡ್ದನ

ಇತರ ಬರಹಗಳು[ಬದಲಾಯಿಸಿ]

 • ಅಮಾಯಕಿ ಕರಾವಳಿ
 • ಒಡಲುರಿ
 • ಮಂಥನ
 • ಗುತ್ತಿನಿಂದ ಸೈನಿಕ ಜಗತ್ತಿಗೆ (ಸೈನಿಕ ಜೀವನದ ಅನುನುಭವ ಕಥನ ಪತಿ ಎಸ್ ಆರ್ ಹೆಗ್ಗಡೆಯವರ ಜತೆ ಸೇರಿ ರಚಿಸಿದ ಕೃತಿ)

ತುಳು ಕೃತಿಗಳು[ಬದಲಾಯಿಸಿ]

 • ತುಳುವೆರೆ ಅಟಿಲ ಅರಗಣೆ

ಪ್ರಶಸ್ತಿಗಳು[ಬದಲಾಯಿಸಿ]

 • ತುಳು ಸಾಹಿತ್ಯ ಆಕಾಡೆಮಿ ಪ್ರಶಸ್ತಿ.[೨]
 • ಇವರ ಸೃಜನಶೀಲ ಕೃತಿಯಾದ ಮೋಹಿನಿಯ ಸೇಡು ಕಥಾ ಸಂಕಲನಕ್ಕೆ ಕನ್ನಡಸಾಹಿತ್ಯ ಪರಿಷತ್ತಿನ “ವಸುದೇವ ಭೂಪಾಲಂ” ಪ್ರಶಸ್ತಿ ದೊರಕಿದೆ.
 • ಪುರುಷರೇ ನಿಮಗೆ ನೂರು ನಮನಗಳು ಕಥಾ ಸಂಕಲನಕ್ಕೆ ಮೈಸೂರಿನ ಅಂಬರೀಷ ಪ್ರಶಸ್ತಿ ದೊರಕಿದೆ.
 • ಒಡಲುರಿ ಕಾದಂಬರಿಗೆ ಬೆಳಗಾವಿಯ ಸಾಹಿತ್ಯ ಪುರಸ್ಕಾರ ಲಭಿಸಿದೆ.
 • ಬದಿ ಕಾದಂಬರಿಗೆ ಅತ್ತಿಮಬ್ಬೆ ಬಹುಮಾನ ಲಭಿಸಿದೆ.
 • ಇವರ ಬಂಟರು ಒಂದು ಸಮಾಜೋ ಸಾಂಸ್ಕತಿಕ ಕೃತಿಗೆ ಬಿ. ಎಂ. ಶ್ರೀ ಸ್ಮಾರಕಪ್ರತಿಷ್ಠಾನದಿಂದ “ಅನಂತ ರಂಗ ಸಂಶೋಧನಾ ಪ್ರಸಸ್ತಿ ಲಭಿಸಿದೆ.
 • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನ್ನಡ ಕ್ರಿಯಾ ಸಮಿತಿ ಬೆಂಗಳೂರು “ಸಾಹಿತ್ಯ ಕೌಸ್ತುಭ ಪ್ರಶಸ್ತಿ ಮತ್ತು ಸನ್ಮಾನ,
 • ಇವರ ಸಣ್ಣ ಕಥೆಗಳು ದೂರದರ್ಶನದಲ್ಲಿ ಧಾರವಾಹಿಯಾಗಿ ಪ್ರಕಟವಾಗಿವೆ.ಇವರು ದೂರದರ್ಶನದಲ್ಲಿ ತುಳುವರ ಆಚಾರ ವಿಚಾರದ ಬಗ್ಗೆ ಒಂದು ವಾರಗಳ ಕಾಲ ವಿವರಣೆ ನೀಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]