ಆಲ್‍ವಾರ್ ಗಲ್‍ಸ್ಟ್ರಾಂಡ್

ವಿಕಿಪೀಡಿಯ ಇಂದ
Jump to navigation Jump to search
ಆಲ್‍ವಾರ್ ಗಲ್‍ಸ್ಟ್ರಾಂಡ್
Allvar Gullstrand.jpg
ಜನನ(೧೮೬೨-೦೬-೦೫)೫ ಜೂನ್ ೧೮೬೨
Landskrona, Sweden
ಮರಣ೨೮ ಜುಲೈ ೧೯೩೦(1930-07-28) (aged ೬೮)
ಸ್ಟಾಕ್‍ಹೋಮ್, ಸ್ವೀಡನ್
ರಾಷ್ಟ್ರೀಯತೆಸ್ವೀಡಿಷ್
ಕಾರ್ಯಕ್ಷೇತ್ರನೇತ್ರ ವಿಜ್ಞಾನ
ಸಂಸ್ಥೆಗಳುಉಪ್ಸಲ ವಿಶ್ವವಿದ್ಯಾಲಯ
ಗಮನಾರ್ಹ ಪ್ರಶಸ್ತಿಗಳುವೈದ್ಯಶಾಸ್ತ್ರಕ್ಕೆ ನೊಬೆಲ್ ಪಾರಿತೋಷಕ ೧೯೧೧ರಲ್ಲಿ

ಆಲ್‍ವಾರ್ ಗಲ್‍ಸ್ಟ್ರಾಂಡ್ (5 ಜೂನ್ 1862 – 28 ಜುಲೈ 1930) ಸ್ವೀಡನಿನ ನೇತ್ರವೈದ್ಯ. ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ 1911ರ ನೊಬೆಲ್ ಪಾರಿತೋಷಿಕವನ್ನು ಪಡೆದ ಈತ ಸ್ವೀಡನಿನ ಲಾಂಟ್ಸ್ ಕ್ರೂನಾ ಎಂಬಲ್ಲಿ 1862ರ ಜೂನ್ 5ರಂದು ಜನಿಸಿದ. ವೈದ್ಯಶಾಸ್ತ್ರದಲ್ಲಿ-ಅದರಲ್ಲೂ ಕಣ್ಣಿಗೆ ಸಂಬಂಧಿಸಿದ ಅಧ್ಯಯನ, ರೋಗನಿದಾನ, ಚಿಕಿತ್ಸೆ ಮುಂತಾದವುಗಳಲ್ಲಿ ಹೆಚ್ಚಿನ ಆಸಕ್ತಿ ತಳೆದಿದ್ದ. ಉಪ್ಸಲ ಎಂಬಲ್ಲಿ ಈತ ಕಣ್ಣಿನ ರೋಗ ವಿಜ್ಞಾನದ ಪ್ರಾಧ್ಯಾಪಕನಾದ (1894). ಅನಂತರ 1913ರಲ್ಲಿ ಈತನನ್ನು ಅಲ್ಲೇ ದೃಗ್‍ ವಿಭಾಗದ ಪ್ರಾಧ್ಯಾಪಕನನ್ನಾಗಿ ನೇಮಿಸಲಾಯಿತು. ವಕ್ರೀಭವನ ಶಾಸ್ತ್ರಕ್ಕೆ (ಡಯಾಪ್ಟರಿಕ್ಸ್) ಸಂಬಂಧಿಸಿದಂತೆ ಸಾರ್ವತ್ರಿಕ ನಿಯಮಗಳನ್ನು ಕುರಿತ ಇವನ ಸಂಶೋಧನೆಗಳು ದೃಗ್ವಿಜ್ಞಾನತತ್ತ್ವ, ಕಣ್ಣಿನೊಳಗಣ ದೃಷ್ಟಿಪ್ರತಿಬಿಂಬಗಳ ಬಿಡಿಸಿಕೆ, ಬೆಳಕು ಮತ್ತು ಕಣ್ಣಿಗೂ ಇರುವ ಸಂಬಂಧ-ಈ ಮುಂತಾದ ಪ್ರಕಾರಗಳಲ್ಲಿ ಒಂದು ಹೊಸದೃಷ್ಟಿ ಕೋನವನ್ನು ಉಂಟುಮಾಡಿದವು. ಈ ಸಂಶೋಧನೆಗಳಿಗಾಗಿಯೇ ಈತನಿಗೆ ನೊಬೆಲ್ ಪಾರಿತೋಷಿಕ ಲಭಿಸಿದ್ದು. ಇವನ ಹಲವಾರು ಬರೆಹಗಳಲ್ಲಿ 1900, 1908 ಮತ್ತು 1911ರಲ್ಲಿ ಪ್ರಕಟಗೊಂಡ ವೈದ್ಯಕೀಯ ಲೇಖನಗಳು ಮಹತ್ತ್ವವುಳ್ಳವು. ಈತನಿಗೆ ಡಬ್ಲಿನ್ ವಿಶ್ವವಿದ್ಯಾಲಯ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಿತು. ಕನ್ನಡಕದ ಮಸೂರಗಳು, ಕಣ್ಣಿನ ರೋಗ ನಿದಾನೋಪಕರಣವಾದ ಸ್ಲಿಟ್ಲ್ಯಾಂಪ್ ಇವುಗಳ ಸುಧಾರಣೆಗೆ ಗಲ್ ಸ್ಟ್ರಾಂಡ್ ಕಾರಣನಾದ. ಈತ 1885ರಲ್ಲಿ ಸಿಗನೆ ಎಂಬುವವಳನ್ನು ವಿವಾಹವಾದ. ಈತ 1930 ಜುಲೈ 28ರಂದು ಸ್ಟಾಕ್‍‍ಹೋಮ್‍ನಲ್ಲಿ ನಿಧನವಾದ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]