ಆಲ್ಬರ್ಟ್ ಪೇಸನ್ ಟರ್ಹ್ಯೂನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲ್ಬರ್ಟ್ ಪೇಸನ್ ಟರ್ಹ್ಯೂನ್-(1872-1942). ಅಮೆರಿಕನ್ ಕಾದಂಬರಿಕಾರ.

ಬದುಕು, ಬರಹ[ಬದಲಾಯಿಸಿ]

ತಂದೆ ಎಡ್ವರ್ಡ್ ಪೇಸನ್ ಟರ್‍ಹ್ಯೂನ್ ವೃತ್ತಿಯಿಂದ ಪಾದ್ರಿ. ತಾಯಿ ಮೇರಿ ವರ್ಜಿನಿಯ ಅನೇಕ ಜನಪ್ರಿಯ ಕಾದಂಬರಿಗಳ ಹಾಗೂ ಗೃಹ ನಿರ್ವಹಣೆಯ ಬಗೆಗಿನ ಪುಸ್ತಕಗಳ ಲೇಖಕಿ.

ಎಡ್ವರ್ಡ್ ಪೇಸನ್ ರೋಮ್ ಮತ್ತು ಪ್ಯಾರಿಸ್ಸಿನ ಅಮೆರಿಕನ್ ಚರ್ಚ್‍ಗಳಲ್ಲಿ ಪಾದ್ರಿಯಾಗಿ ಹೋದದ್ದರಿಂದ ಆಲ್ಬರ್ಟನ ಮೊದಲ ವಿದ್ಯಾಭ್ಯಾಸ ಯೂರೋಪಿನಲ್ಲೇ ನಡೆಯಿತು. ಅನಂತರ ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನು ಗಳಿಸಿ, ಈಜಿಪ್ಟ್ ಮತ್ತು ಸಿರಿಯ ದೇಶಗಳನ್ನು ಈತ ಕುದುರೆಯ ಮೇಲೆ ಸುತ್ತಿದ. ಈ ಪ್ರವಾಸದಲ್ಲೆ ಈತ ಕುಷ್ಠರೋಗಿಗಳ ವಸಾಹತುಗಳು ಹಾಗೂ ಅರಬರ ಜೀವನ ರೀತಿಗಳನ್ನು ಅಭ್ಯಾಸ ಮಾಡಿದ್ದು. ಪರಿಣಾಮವಾಗಿ ಈತ ಬರೆದ ಪುಸ್ತಕ-ಸಿರಿಯ ಫ್ರಂ ದಿ ಸ್ಯಾಡಲ್ (1896). 1894ರಲ್ಲಿ ನ್ಯೂಯಾರ್ಕ್ ಈವ್ನಿಂಗ್ ವರ್ಲ್ಡ್ ಪತ್ರಿಕೆಯನ್ನು ಸೇರಿದ; 1916ರಲ್ಲಿ ಈ ಕೆಲಸವನ್ನು ಬಿಡುವಹೊತ್ತಿಗೆ ಸುಮಾರು ಹನ್ನೆರಡಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ.

ತನ್ನ ಉಳಿದ ಜೀವಮಾನವನ್ನೆಲ್ಲ ಈತ ಜಾತಿಯ ನಾಯಿಗಳ ತಳಿ ಬೆಳೆಸುವುದು, ಮೀನು ಹಿಡಿಯುವುದು. ಷಿಕಾರಿ ಇತ್ಯಾದಿ ಹವ್ಯಾಸಗಳಲ್ಲಿ ಕಳೆದ.

ಇವನ ಅನೇಕ ಕಾದಂಬರಿಗಳಲ್ಲಿ ನಾಯಿಗಳೇ ಮಹತ್ವದ ಪಾತ್ರ ವಹಿಸುತ್ತವೆ. ಇವನಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದದ್ದು ಈ ಕಾದಂಬರಿಗಳೇ. ಲ್ಯಾಡ್: ಎ ಡಾಗ್ (1919). ದಿಹಾರ್ಟ್ ಆಫ್ ಎ ಡಾಗ್ (1926), ದಿ ವೇ ಆಫ್ ಎ ಡಾಗ್ (1934) ಇವು ಇವನ ಕೆಲವು ಅತ್ಯಂತ ಪ್ರಸಿದ್ಧ ಶ್ವಾನಕಾದಂಬರಿಗಳು. ನೌ ದಟ್ ಅಯ್ ಆ್ಯಮ್ ಫಿಫ್ಟಿ (1925), ಟು ದಿ ಬೆಸ್ಟ್ ಆಫ್ ಮೈ ಮೆಮೊರಿ (1930)-ಇವು ಈತನ ಎರಡು ಆತ್ಮಕಥಾನಕಗಳು.