ಆಲ್ಫ್ರೆಡ್ ಚಾರಲ್ಸ್ ಕಿನ್ಸೆ
ಆಲ್ಫ್ರೆಡ್ ಚಾರಲ್ಸ್ ಕಿನ್ಸೆ | |
---|---|
ಜನನ | Alfred Charles Kinsey June 23, 1894 Hoboken, New Jersey, United States |
ಮರಣ | August 25, 1956 Bloomington, Indiana, United States | (aged 62)
ವಾಸಸ್ಥಳ | United States |
ರಾಷ್ಟ್ರೀಯತೆ | American |
ಕಾರ್ಯಕ್ಷೇತ್ರ | Biology |
ಸಂಸ್ಥೆಗಳು | Indiana University |
ಅಭ್ಯಸಿಸಿದ ವಿದ್ಯಾಪೀಠ | Bowdoin College Harvard University |
ಪ್ರಸಿದ್ಧಿಗೆ ಕಾರಣ | Sexology and human sexuality: Kinsey Reports, Kinsey scale, Kinsey Institute for Research in Sex, Gender, and Reproduction |
ಆಲ್ಫ್ರೆಡ್ ಚಾರಲ್ಸ್ ಕಿನ್ಸೆ(ಜೂನ್ 23, 1894 – ಆಗಸ್ಟ್ 25, 1956) ಅಮೆರಿಕದ ಜೀವಶಾಸ್ತ್ರಜ್ಞ,ಪ್ರಾಣಿಶಾಸ್ತ್ರ ಮತ್ತು ಕೀಟಶಾಸ್ತ್ರದ ಪ್ರಾಧ್ಯಾಪಕ ಮತ್ತು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಲೈಂಗಿಕಶಾಸ್ತ್ರದ ಅಧ್ಯಯನ ಪೀಠವನ್ನು ಸ್ಥಾಪನೆಮಾಡಿದ ಲೈಂಗಿಕ ವಿಜ್ಞಾನಿ.[೧]
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಅಮೆರಿಕದ ನ್ಯೂಜರ್ಸಿಯಲ್ಲಿ ಹುಟ್ಟಿದ. ಬ್ರನ್ಸ್‍ವಿಕ್, ಹಾರ್ವರ್ಡ್‍ಗಳಲ್ಲಿ ಕಲಿಕೆ ಮುಂದುವರಿಸಿ ಕೊನೆಗೆ 1920 ರಿಂದ 27 ವರ್ಷಗಳ ಕಾಲ ಪ್ರಾಣಿಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಆಮೇಲೆ ಕೊನೆಯ ತನಕ ಇಂಡಿಯಾನಾ ವಿಶ್ವವಿದ್ಯಾಲಯದ ಲೈಂಗಿಕ ಸಂಶೋಧನ ಸಂಸ್ಥೆಯ ನಿರ್ದೇಶಕನಾಗಿದ್ದ.
ಅಧ್ಯಯನ
[ಬದಲಾಯಿಸಿ]ಲೈಂಗಿಕ ಜೀವನದ ಪದ್ಧತಿ, ರೂಢಿ, ಸಂಪ್ರದಾಯ, ಒಳಗುಟ್ಟುಗಳನ್ನು ಹೊರಗೆಡಹುವುದರಲ್ಲಿ ಇವನಿಗಿದ್ದ ಕಟ್ಟಾಸಕ್ತಿಯಿಂದ ಆ ಸಂಸ್ಥೆ ಹುಟ್ಟಿತು. ಇವನೂ ಇವನ ಸಹೋದ್ಯೋಗಿಗಳು ಸೇರಿ ನಡೆಸಿದ ಶೋಧನೆಗಳ ಫಲವಾಗಿ ಪ್ರಪಂಚದಲ್ಲಿ ಎಲ್ಲೆಲ್ಲೂ ಗಂಡಸರಲ್ಲಿನ ಲೈಂಗಿಕ ವರ್ತನೆ (1948), ಹೆಂಗಸರಲ್ಲಿನ ಲೈಂಗಿಕ ವರ್ತನೆ(1953) ಎಂಬ ಹೆಸರಾದ ಎರಡು ಪುಸ್ತಕಗಳು ಹೊರಬಂದವು. 18,500 ಜನರನ್ನು ಕಂಡು ಗೋಪ್ಯವಾಗಿ ಸಂಗ್ರಹಿಸಿದ ವಿವರಗಳು ಈ ಪುಸ್ತಕಗಳಲ್ಲಿವೆ. ಗಂಡು ಹೆಣ್ಣುಗಳ ಲೈಂಗಿಕ ವರ್ತನೆಗಳಲ್ಲಿ ಎಷ್ಟೊಂದು ಅಭಾಸ, ಏರುಪೇರು, ವಿಚಿತ್ರಗಳಿವೆ ಎನ್ನುವುದನ್ನು ಈತ ವರದಿಮಾಡಿದ್ದಾನೆ. ಇವನ ಇವೆರಡು ವರದಿಗಳ ಆಧಾರದ ಮೇಲೆ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಇವುಗಳಲ್ಲಿನ ತರ್ಕ, ವಾದ, ರೀತಿ ನೀತಿಗಳನ್ನು ಕಟುವಾಗಿ ಟೀಕಿಸಿದವರೂ ಇದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Origin of the Institute". The Kinsey Institute. Archived from the original on ಆಗಸ್ಟ್ 19, 2010. Retrieved March 30, 2010.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Kinsey Institute website
- American Experience – Kinsey
- Obituary
- Alfred Kinsey ಐ ಎಮ್ ಡಿ ಬಿನಲ್ಲಿ
- Kinsey at IMDb
- Gay Great Fyne Times Magazine
- FBI file on Alfred Kinsey