ಆಲ್ಕೇನ್ಗಳು
ಗೋಚರ
ಆಲ್ಕೇನ್ಗಳು ವಿವೃತ-ಶೃಂಖಲೆಯ (ಓಪನ್ ಚೇನ್) ಪರ್ಯಾಪ್ತ (ಸ್ಯಾಚುರೇಟೆಡ್) ಹೈಡ್ರೊಕಾರ್ಬನ್ನುಗಳು. ಇವುಗಳನ್ನು CnH2n+2 ಎಂಬ ಸಾಮಾನ್ಯ ಸೂತ್ರದಿಂದ ನಿರೂಪಿಸಬಹುದು. ಇವನ್ನು ಪ್ಯಾರಫಿನ್ಸ್ ಹೈಡ್ರೊಕಾರ್ಬನ್ನುಗಳೆನ್ನುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಲ್ಕೇನ್ ಇಂಗಾಲ ಮತ್ತು ಜಲಜನಕ ಪರಮಾಣುಗಳನ್ನು ವೃಕ್ಷ ರಚನೆಯಲ್ಲಿ ಜೋಡಣೆಯಾಗಿರುವಂತೆ ಹೊಂದಿದ್ದು, ಇದರಲ್ಲಿನ ಎಲ್ಲ ಇಂಗಾಲ-ಇಂಗಾಲ ಬಂಧಗಳು ಏಕಬಂಧಗಳಾಗಿರುತ್ತವೆ. ಈ ಶ್ರೇಣಿಯ (ಮೀಥೇನ್‌ಶ್ರೇಣಿ) ಮೊದಲ ಮೂರರಲ್ಲಿ ಮೀಥೇನ್ (CH4), ಈಥೇನ್ (C2H6) ಮತ್ತು ಪ್ರೊಪೇನ್‌ಗಳು (C3H8) ಸೇರಿವೆ.
ಹೆಚ್ಚಿನ ಓದಿಗೆ
[ಬದಲಾಯಿಸಿ]- Virtual Textbook of Organic Chemistry
- A visualization of the crystal structures of alkanes up to nonan
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: