ವಿಷಯಕ್ಕೆ ಹೋಗು

ಆರ್. ಚಲಪತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಸೃಜನಶೀಲ ಬರಹಗಾರರು, ಸಂಶೋಧಕರಾಗಿ ಗುರುತಿಸಿಕೊಂಡಿರುವ, ಚಲಪತಿಯವರು []ಸೀನಿಯರ್ ಫೆಲೊ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮೈಸೂರು

ವೃತ್ತಿ

[ಬದಲಾಯಿಸಿ]

ಈಗ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ `ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ದಲ್ಲಿ ಸೀನಿಯರ್ ರೀಸರ್ಚ್ ಫೆಲೋ ಆಗಿ ಕೆಲಸ. ಈ ಮೊದಲು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳು ಮತ್ತು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳಿಗೂ ಸೇರಿದಂತೆ 22 ವರುಷಗಳ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಸಂಬಂಧದಲ್ಲಿ ಪಾಠ ಹೇಳಿದ ಅನುಭವ.

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ಹುಟ್ಟಿದ್ದು 1965ರಲ್ಲಿ, ಬೆಂಗಳೂರು ಜಿಲ್ಲೆಯ ಯಲಹಂಕದ ಬಳಿಯ ಹಾರೋಹಳ್ಳಿಯಲ್ಲಿ. ಅಮ್ಮ-ಪಾರ್ವತಮ್ಮ. ಅಪ್ಪ-ರಾಮಯ್ಯ. ಅಲ್ಲಿನ ಸ್ಥಳೀಯ ಶಾಲೆ-ಕಾಲೇಜುಗಳಲ್ಲಿಯೇ ಪಿಯುಸಿವರೆಗಿನ ಕಲಿಕೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ. ಹಂಪಿಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ.

ಕೃತಿಗಳು

[ಬದಲಾಯಿಸಿ]

ಕನ್ನಡ ನುಡಿ ಮತ್ತು ಸಾಹಿತ್ಯದ ನಂಟಿನ ಸಾಂಸ್ಕೃತಿಕ ಓದು-ಅಧ್ಯಯನಗಳಲ್ಲಿ `

  • ಸಾಹಿತ್ಯ ಮತ್ತು ಸಾಹಿತ್ಯದಾಚೆಗೆ-ಅಧಿಕಾರ ಚಲನೆಯ ಅನಧಿಕೃತ ವರಸೆಗಳು
  • ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ
  • ತಂತಿ ಮೇಲಿನ ನಡಿಗೆ-ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತುಕತೆ
  • ನುಡಿಯೊಡನೆ
  • ನಮ್ಮದೇ ತಿಳಿವಿನ ದಾರಿಗಳಲ್ಲಿ-ಕನ್ನಡ ಬರವಣಿಗೆಯ ಚಹರೆಗಳಲ್ಲಿ ಬದುಕಿನ ಓದು
  • ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ `
  • ಕುವೆಂಪು ಬರಹಗಳ ಓದಿನ ರಾಜಕಾರಣ `
  • ಕನ್ನಡ ನುಡಿಯ ಆಕರಕೋಶ[]
  • ರೈತ-ಕಾರ್ಮಿಕ ಓದು
  • ಪ್ರಾಚೀನ ಕನ್ನಡ ಸಾಹಿತ್ಯ ಸಮಗ್ರ ಸೂಚಿ-1
  • ತೊಡಕುಗಳು ಮತ್ತು ತೋರುದಾರಿ
  • ಕನ್ನಡ ಸಂಸ್ಕೃತಿಯ ಓದಿನ ಬಗೆಗಳು
  • ಸಾಹಿತ್ಯ ಚರಿತ್ರೆಗಳ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಓದು.

ಉಲ್ಲೇಖ

[ಬದಲಾಯಿಸಿ]