ವಿಷಯಕ್ಕೆ ಹೋಗು

ಆರ್. ಎನ್. ದೊರೈಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ, ವಿದ್ಯಾಭ್ಯಾಸ, ಸಂಗೀತ ಕೃಷಿ

[ಬದಲಾಯಿಸಿ]

ಸಂಗೀತ ಕ್ಷೇತ್ರದ ಕಲಾರತ್ನರೆನ್ನಿಸಿದ ದೊರೈಸ್ವಾಮಿಯವರು,(೧೨-೧೨-೧೯೧೬-೧೭-೮-೨೦೦೨) <ref> ಆರ್. ಎನ್. ದೊರೈಸ್ವಾಮಿ,ಕಣಜ,ಅಂತರ್ಜಾಲೀಯ ವಿಶ್ವಕೋಶ Archived 2020-10-17 ವೇಬ್ಯಾಕ್ ಮೆಷಿನ್ ನಲ್ಲಿ./ref> ರುದ್ರಪಟ್ಟಣದಲ್ಲಿ ಜನಿಸಿದರು. ತಂದೆಯವರ ಹೆಸರು, ನಾಲಾವೆಂಕಟರಾಮಯ್ಯ, ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಸಾವಿತ್ರಮ್ಮ. ತಾಯಿಯವರು ಸಂಗೀತ ಬಲ್ಲವರಾಗಿದ್ದರು. ದೊರೈಸ್ವಾಮಿಯವರು ಸೇಲಂ ದೊರೆಸ್ವಾಮಿ ಅಯ್ಯಂಗಾರ್ಯರಲ್ಲಿ ಸಂಗೀತದ ಪ್ರಥಮ ಶಿಕ್ಷಣವನ್ನು ಪಡೆದರು. ಹಾಡುಗಾರಿಕೆಯಲ್ಲಿ ಸಿದ್ಧಿಸಿಗಲಿಲ್ಲ. ಮುಂದೆ ವೀಣೆ ವೆಂಕಟಗಿರಿಯಪ್ಪನವರ ಹತ್ತಿರ ಶಿಷ್ಯವೃತ್ತಿಯನ್ನು ಕೈಗೊಂಡರು. ಗುರುಗಳ ಜೊತೆಗೆ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಉತ್ತರ ಭಾರತದ ಪ್ರವಾಸ ಮಾಡಿದರು. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಸ್ವಲ್ಪ ಕಾಲ ಸಂಗೀತ ಅಧ್ಯಾಪಕರಾಗಿ ಕೆಲಸಮಾಡಿದರು. ಮೈಸೂರು ಸರ್ಕಾರ ನಡೆಸುವ ಸಂಗೀತ ಪರಿಕ್ಷಾ ಮಂಡಲಿಯ ಮುಖ್ಯ ಪರೀಕ್ಷಕರಾಗಿ, ಸಂಗೀತ ಕಲಾಭಿವರ್ಧಿನಿ ಸಭಾ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರ ಗುರುಗಳು ನಡೆಸಿಕೊಟ್ಟ ಭಾರತೀಯ ಸಂಗೀತ ವಾದ್ಯಗಳು ಎನ್ನುವ ವೀಣಾವಾದನ ಸಾಕ್ಷ್ಯಚಿತ್ರಕ್ಕಾಗಿ ಕೆಲಸಮಾಡಿದರು. ಪಿಟೀಲು ಚೌಡಯ್ಯನವರ ಜೊತೆ ಹಾಡಲು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ರಾಮೋತ್ಸವ, ಗಣೇಶೋತ್ಸವ ಮುಂತಾದ ಸಮಾರಂಭಗಳಲ್ಲಿ ನಡೆಸಿಕೊಟ್ಟ ಗಾಯನ, ವೀಣಾವಾದನ ಕಚೇರಿ 'ಮದರಾಸಿನ ಆಲ್ ಇಂಡಿಯ ರೇಡಿಯೋ ನಿಲಯ'ದಲ್ಲಿ ಹಲವಾರು ಬಾರಿ ಸಂಗೀತ ಕಚೇರಿಗಳನ್ನು ದೊರೈಸ್ವಾಮಿಯವರು ಕೊಟ್ಟಿದ್ದಾರೆ.

ಪ್ರಶಸ್ತಿ,ಸನ್ಮಾನಗಳು

[ಬದಲಾಯಿಸಿ]
  • ಮೈಸೂರು ನಗರದ ಸರಸ್ವತಿ ಗಾನ ಕಲಾಮಂದಿರದ 'ತ್ಯಾಗರಾಜ ಆರಾಧನಾ ಮಹೋತ್ಸ'ವ ಸಂದರ್ಭದಲ್ಲಿ ದೊರೆತ 'ವೈಣಿಕ ವಿದ್ಯಾವಾರಿಧಿ ಪ್ರಶಸ್ತಿ'
  • ಕಲಾಭಿವರ್ಧಿನಿ ಸಭಾದಿಂದ ಗಾನರತ್ನಾಕರ ಬಿರುದು
  • ಕಲಾವಿದ ಬಿ.ವೇವೇಂದ್ರಪ್ಪನವರು ಆಯೋಜಿಸುತ್ತಿದ್ದ ಹನುಮಜ್ಜಯಂತಿ ಉತ್ಸವದಲ್ಲಿ 'ವೈಣಿಕ ಪ್ರವೀಣ ಪ್ರಶಸ್ತಿ'.
  • ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯಿಂದ 'ಕರ್ನಾಟಕ ಕಲಾತಿಲಕ ಪ್ರಶಸ್ತಿ',
  • ಬೆಂಗಳೂರಿನ ಪ್ರತಿಷ್ಠಿತ ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಗಾಯನ ಸಮಾಜದ 'ಸಂಗೀತ ಕಲಾರತ್ನ ಬಿರುದು' ಗಳಿಸಿದರು.
  • 'ರಾಜ್ಯೋತ್ಸವ ಪ್ರಶಸ್ತಿ',
  • 'ಚೌಡಯ್ಯ ಸ್ಮಾರಕ ಪ್ರಶಸ್ತಿ,' ಮುಂತಾದವು.

ಉಲ್ಲೇಖ

[ಬದಲಾಯಿಸಿ]