ಆರ್ಯದೇವ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Aryadeva-1-.jpg

ಆರ್ಯದೇವಪ್ರ.ಶ.ಸು. ೨-೩ನೆಯ ಶತಮಾನ. ಪ್ರಾಚೀನ ಬೌದ್ಧಾಚಾರ್ಯರಲ್ಲಿ ಒಬ್ಬ. ಪ್ರಸಿದ್ಧ ವಿದ್ವಾಂಸನಾದ ನಾಗಾರ್ಜುನನ ಶಿಷ್ಯ.

ಜೀವನ ವೃತ್ತಾಂತ[ಬದಲಾಯಿಸಿ]

ಆರ್ಯದೇವ ಒಬ್ಭ ಸಿಂಹಳಿ ರಾಜನ ಮಗ. ಮಹಾಯಾನ ಪಂಥಾವಲಂಬಿ.[೧] ಅಶ್ವಘೋಷನಂತೆ ಆಯುರ್ವೇದ ಪಂಡಿತ.

ಸಾಧನೆಗಳು[ಬದಲಾಯಿಸಿ]

ಮಾತೃಚೇಟ ಎಂಬ ಬ್ರಾಹ್ಮಣ ಪಂಡಿತನನ್ನು ವಾದದಲ್ಲಿ ಸೋಲಿಸಲು ನಾಲಂದ ವಿದ್ಯಾಪೀಠದ ಭಿಕ್ಷುಗಳು ದಕ್ಷಿಣದ ಶ್ರೀಪರ್ವತದಲ್ಲಿದ್ದ ನಾಗಾರ್ಜುನನನ್ನು ಕರೆಸಿದಾಗ, ನಾಗಾರ್ಜುನ ತನ್ನ ಶಿಷ್ಯನಾದ ಇವನನ್ನು ಕಳುಹಿಸಿಕೊಟ್ಟ. ಈತ ಚತುಶ್ಶತಕ, ಮಾಧ್ಯಮಿಕ ಹಸ್ತಬಾಲ ಪ್ರಕರಣ, ಸ್ಖಲಿತ ಪ್ರಮಥನ ಯುಕ್ತಿಹೇತುಸಿದ್ಧಿ, ಜ್ಞಾನಸಾರಖಸಮುಚ್ಚಯ, ಚರ್ಯಾಮೇಳಾಯನ ಪ್ರದೀಪ, ಚಿತ್ತಾವರಣ ವಿಶೋಧನ, ಚತುಃಪೀಠ ತಂತ್ರರಾಜ, ಚತುಃಪೀಠಸ್ಥಾನ, ಜ್ಞಾನಡಾಕಿನೀಸಾಧನ, ಏಕದ್ರುಮ ಪಂಚಿಕಾ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಆದರೆ ಮಹಾವ್ಯುತ್ಪತ್ತಿ ಎಂಬ ಗ್ರಂಥದಲ್ಲಿ ನಾಗಾರ್ಜುನ, ನಾಗಾಹ್ವಯ, ಆರ್ಯದೇವ ಎಂದು ಕ್ರಮಪಡಿಸಿರುವುದನ್ನು ನೋಡಿದರೆ ಆರ್ಯದೇವ ನಾಗಾರ್ಜುನನ ಸಾಕ್ಷಾತ್ ಶಿಷ್ಯನಿರಲಾರನೆಂದು ತೋರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Women of Wisdom By Tsultrim Allione (Page 186)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಆರ್ಯದೇವ&oldid=609068" ಇಂದ ಪಡೆಯಲ್ಪಟ್ಟಿದೆ