ಆರ್ಕ್ಟಿಕ್ ವೃತ್ತ
ಆರ್ಕ್ಟಿಕ್ ವೃತ್ತ ೬೬೦೩° ಉತ್ತರ ಅಕ್ಷಾಂಶ; ಅಥವಾ ಉತ್ತರ ಮೇರುಕೇಂದ್ರವಾಗಿ ೨೩೦೨೭° ತ್ರಿಜ್ಯವಾಗಿ ಎಳೆದ ವೃತ್ತ (ಉತ್ತರ ಮೇರುವೃತ್ತ). ಇದೇ ರೀತಿ ದಕ್ಷಿಣದಲ್ಲಿ ಮೇರುವನ್ನು ಕುರಿತು ಅಂಟಾರ್ಕ್ಟಿಕ್ ವೃತ್ತವಿದೆ. ಭೂಮಿಯ ಅಕ್ಷ ಮತ್ತು ಕಕ್ಷಾತಲಗಳ (ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುವ ಪಥದ ಹೆಸರು ಭೂಮಿಯ ಕಕ್ಷೆ) ನಡುವೆ ೬೬೦೩೩° ಬಾಗು ಇದೆ. ಈ ಕಾರಣದಿಂದ ಭೂಮಿವಾಸಿಗಳಿಗೆ ಒಂದು ವರ್ಷದಲ್ಲಿ (ಭೂಮಿಗೆ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಅವಧಿ) ಸೂರ್ಯ ೨೩೦೨೭° (೯೦೦-೬೬೦ 33° = ೨೩೦ ೨೭°) ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ (ಇವುಗಳಿಗೆ ಸಂಕ್ರಾತಿ ವೃತ್ತಗಳೆಂದು ಹೆಸೆರು) ನಡುವೆ ಆಂದೋಲಿಸಿದಂತೆ ಭಾಸವಾಗುವುದು. ಅಂದರೆ, ಸೂರ್ಯ ಸಂಕ್ರಾತಿವೃತ್ತಗಳ ಗಡಿಯನ್ನು ಉತ್ತರಿಸಿ ಎಂದೂ ಸಾಗುವುದಿಲ್ಲ. ಇದರ ಪರಿಣಾಮವಾಗಿ ಗಡಿಗಳ ಒಳಗಿರುವವರಿಗೆ (ಉದಾ: ಮೈಸೂರಿನವರಿಗೆ) ವರ್ಷದಲ್ಲಿ ಎರಡು ಸಲ ಸೂರ್ಯ ನೆತ್ತಿಯ ಮೇಲೆ ಬರುವುದು (ಬೇರೆ ಗುಣಗಳೂ ಇವೆ.); ಗಡಿ ವೃತ್ತಗಳ ಮೇಲೆ ಇರುವುವವರಿಗೆ ಒಂದೇ ಸಲ ಬರುವುದು; ಗಡಿಗಳಿಂದ ಹೊರಗೆ ಇರುವವರಿಗೆ ಎಂದೂ ಬರುವುದಿಲ್ಲ-ಇಷ್ಟು ಮಾತ್ರವಲ್ಲ, ಇವರ ರಾತ್ರಿ ಹಗಲುಗಳ ಏರಿಳಿತಗಳ ವ್ಯತ್ಯಾಸ ತೀವ್ರವಾಗಿರುವುದು. ಆರ್ಕ್ಟಿಕ್ (ಅದರಂತೆ ಅಂಟಾರ್ಕ್ಟಿಕ್) ವೃತ್ತ ಇನ್ನೊಂದು ಗಡಿ. ಅಲ್ಲಿರುವವರಿಗೆ ವರ್ಷದಲ್ಲಿ ಒಂದು ದಿವಸ (೨೪ ಗಂಟೆ ಕಾಲ) ಸೂರ್ಯ ಮುಳುಗುವುದೇ ಇಲ್ಲ-ಸಂಪುರ್ಣ ಹಗಲು; ಮುಂದೆ ಒಂದು ದಿವಸ (೨೪ ಗಂಟೆ ಕಾಲ) ಸೂರ್ಯ ಮೂಡುವುದೇ ಇಲ್ಲ-ಪುರ್ಣ ರಾತ್ರಿ. ಈ ಕಾರಣದಿಂದ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ವೃತ್ತಗಳಿಗೆ ಪ್ರಾಧಾನ್ಯ ಬಂದಿದೆ. ಈ ವೃತ್ತಗಳ ಒಳಗೆ (೬೬೦೩೩° ನಿಂದ ಆಯಾ ಮೇರುವರೆಗೆ) ಇರುವವರಿಗೆ ಹಗಲು, ರಾತ್ರಿಗಳ ವ್ಯತ್ಯಾಸ ಅತಿ ತೀವ್ರ ಮಾತ್ರವಲ್ಲ, ವರ್ಷದಲ್ಲಿ ಹಲವಾರು ದಿವಸ ನಿರಂತರ ಹಗಲು ನಿರಂತರ ರಾತ್ರಿಯೂ ಇರುತ್ತವೆ. ಮೇರುಬಿಂದುಗಳಲ್ಲಿಯೇ (೯೦೦ ಉ. ಮತ್ತು ದ.) ಇರುವವರಿಗೆ ೬ ತಿಂಗಳು ನಿರಂತರ ಹಗಲೂ ೬ ತಿಂಗಳು ನಿರಂತರ ರಾತ್ರಿಯೂ ಇರುತ್ತವೆ.
ಭೂಗೋಳ
[ಬದಲಾಯಿಸಿ]ಭೂಮಧ್ಯರೇಖೆಯಿಂದ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ವೃತ್ತಗಳ ದೂರ ಸುಮಾರು ೧೧೮೨ ಕಿಮೀ. ಆರ್ಕ್ಟಿಕ್ ವೃತ್ತ ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯ ಖಂಡಗಳ ಮೂಲಕ ಹಾದುಹೋಗುತ್ತದೆ. ಆದ್ದರಿಂದ ಈ ಎಲ್ಲ ಖಂಡಗಳ ವಾಯುಗುಣ, ಸಸ್ಯಜೀವನ ಜನಜೀವನಕ್ರಮ ಈ ವೃತ್ತದ ಭಾಗದಲ್ಲಿ ಸಾಮಾನ್ಯವಾಗಿ ಒಂದೇ ರೀತಿ ಇದೆ. ಅತಿ ಶೀತ ಪ್ರದೇಶಗಳಾದ್ದರಿಂದ ಇಲ್ಲಿನ ಜನ ಬೆಚ್ಚಗಿರಲು ವಿಶಿಷ್ಟ ನಮೂನೆಯ ಉಡುಪುಗಳನ್ನು ಧರಿಸುತ್ತಾರೆ. ಆರ್ಕ್ಟಿಕ್ ವೃತ್ತ ಹಾದುಹೋಗುವ ಕೆಲವು ಪ್ರಮುಖ ದೇಶ,ಭೂ ಪ್ರದೇಶ ಮತ್ತು ಸಮುದ್ರಗಳು ಇಂತಿವೆ.