ವಿಷಯಕ್ಕೆ ಹೋಗು

ಆರೋನ್ ಫಿಂಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರೋನ್ ಫಿಂಚ್

ಆರೋನ್ ಜೇಮ್ಸ್ ಫಿಂಚ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬಲಗೈ ಆಟಗಾರ. ಇವರು ಎಡಗೈ ಲೆಗ್ ಸ್ಪಿನ್ ಬಾಲರ್. ದೇಶೀಯ ಕ್ರಿಕೆಟ್ನಲ್ಲಿ ವಿಕ್ಟೊರಿಯಾ ಹಾಗೂ ಮೆಲ್ಬರ್ನ್ ರೇನೆಗೇಡ್ಸ್ ತಂಡಗಳಿಗೆ ಆಡುತ್ತಾರೆ. ೨೦೧೮ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಡಿದ್ದರು, ೨೦೧೯ರ ವಿಶ್ವಕಪ್ ತಯಾರಿಗಾಗಿ ಇವರು ೨೦೧೯ ಐಪಿಎಲ್ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ.[೧][೨]

ಆರಂಭಿಕ ಜೀವನ

[ಬದಲಾಯಿಸಿ]

ಫಿಂಚ್ ರವರು ನವೆಂಬರ್ ೧೭, ೧೯೮೬ರಲ್ಲಿ ಆಸ್ಟ್ರೇಲಿಯಾದ ವಿಕ್ಟೊರಿಯಾದ ಕೊಲ್ಯಾಕ್ನಲ್ಲಿ ಜನಿಸಿದರು. ಫಿಂಚ್ ಕೊಲ್ಯಾಕ್ ಕ್ರಿಕೆಟ್ ತಂಡದ ಪರವಾಗಿ ದೇಶೀ ಕ್ರಿಕೆಟ್ ಆಡುತ್ತಿದ್ದರು. ನಂತರ ಜಿಲ್ಲಾ ಕೊಲ್ಯಾಕ್ ಕ್ರಿಕೆಟ್ ತಂಡಕ್ಕೆ ಆಡಲು ಪ್ರಾರಂಭಿಸಿದರು. ಇವ್ರು ಜ್ಯೂನಿಯರ್ ಕ್ರಿಕೆಟ್ ಆಟಗಾರನಾಗಿದ್ದಾಗ ತಂಡದ ವಿಕೆಟ್ ಕೀಪರ್ ಸಹ ಆಗಿದ್ದರು. ನಂತರ ೨೦೧೬ರಲ್ಲಿ ಶ್ರೀಲಂಕಾ ವಿರುದ್ಧದ ೧೯ರ ವಯೋಮಿತಿ ತಂಡದ ಪಂದ್ಯದ ಮೂಲಕ ಇವರು ಸೀನಿಯರ್ ಕ್ರಿಕೆಟ್ ಅಡಲಾರಂಭಿಸಿದರು.[೩]

ವೃತ್ತಿ ಜೀವನ

[ಬದಲಾಯಿಸಿ]

ಫಿಂಚ್ ರವರು ಡಿಸೆಂಬರ್ ೨೦, ೨೦೦೭ರಂದು ಮೆಲ್ಬರ್ನ್ ನಲ್ಲಿ ವಿಕ್ಟೊರಿಯಾ ಹಾಗೂ ಭಾರತದ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[೪]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಜನವರಿ ೧೨, ೨೦೧೧ರಲ್ಲಿ ಇಂಗ್ಲೆಂಡ್ ವಿರುಧ್ಧ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೫] ಜನವರಿ ೧೧, ೨೦೧೩ರಂದು ಮೆಲ್ಬರ್ನ್ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಿಂದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು.[೬] ಅಕ್ತೋಬರ್ 07, ೨೦೧೮ ರಂದು ಯುಎಇ ಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಮೊದಲನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[೭]

ಪಂದ್ಯಗಳು

[ಬದಲಾಯಿಸಿ]
 • ಏಕದಿನ ಕ್ರಿಕೆಟ್ : ೧೧೯ ಪಂದ್ಯಗಳು[೮]
 • ಟೆಸ್ಟ್ ಕ್ರಿಕೆಟ್ : ೦೫ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೫೨ ಪಂದ್ಯಗಳು

ಶತಕಗಳು

[ಬದಲಾಯಿಸಿ]
 1. ಏಕದಿನ ಪಂದ್ಯಗಳಲ್ಲಿ : ೧೫
 2. ಟಿ-೨೦ ಪಂದ್ಯಗಳಲ್ಲಿ : ೦೨

ಅರ್ಧ ಶತಕಗಳು

[ಬದಲಾಯಿಸಿ]
 1. ಟೆಸ್ಟ್ ಪಂದ್ಯಗಳಲ್ಲಿ : ೦೨
 2. ಏಕದಿನ ಪಂದ್ಯಗಳಲ್ಲಿ : ೨೪
 3. ಟಿ-೨೦ ಪಂದ್ಯಗಳಲ್ಲಿ  : ೦೯

ವಿಕೇಟಗಳು

[ಬದಲಾಯಿಸಿ]
 1. ಏಕದಿನ ಪಂದ್ಯಗಳಲ್ಲಿ : ೦೪

ಉಲ್ಲೇಖಗಳು

[ಬದಲಾಯಿಸಿ]
 1. https://m.cricbuzz.com/profiles/1643/aaron-finch
 2. https://www.theweek.in/news/sports/2018/12/06/IPL-2019-Maxwell-Finch-opt-out-of-auction-Malinga-back-in-pool.html
 3. https://www.news18.com/cricketnext/profile/aaron-finch/4196.html
 4. https://www.espncricinfo.com/series/14141/scorecard/300767/victoria-vs-indians-tour-match-india-tour-of-australia-2007-08
 5. https://www.espncricinfo.com/series/13062/scorecard/446960/australia-vs-england-1st-t20i-england-tour-of-australia-2010-11
 6. https://www.espncricinfo.com/series/12264/scorecard/573014/australia-vs-sri-lanka-1st-odi-sri-lanka-tour-of-australia-2012-13
 7. https://www.espncricinfo.com/series/18886/scorecard/1157370/australia-vs-pakistan-1st-test-australia-in-uae-2018-19
 8. http://www.espncricinfo.com/australia/content/player/5334.html