ಆರೆಂಜ್ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಆರೆಂಜ್ ನದಿ
ಗಾರೀಪ್, ಆರೇಂಜ್, ಸೆಂಕು
River
none ಆರೆಂಜ್ ನದಿಯ ಮೇಲಿಂದ ಸೂರ್ಯಾಸ್ತ
ಆರೆಂಜ್ ನದಿಯ ಮೇಲಿಂದ ಸೂರ್ಯಾಸ್ತ
ದೇಶಗಳು ಲೆಸೆತೊ, ದಕ್ಷಿಣ ಆಫ್ರಿಕ, ನಮೀಬಿಯ
ಉಪನದಿಗಳು
 - ಬಲಬದಿಯಲ್ಲಿ ಕಲಿಡೋನ್ ನದಿ, ವಾಲ್ ನದಿ, ಫಿಶ್ ನದಿ (ನಮೀಬಿಯಾ)
Landmarks ಗಾರೀಪ್ ಅಣೆಕಟ್ಟು, ಒಘ್ರಾಬೀಸ್ ಜಲಪಾತ
ಮೂಲ ಥಾಬಾ ಪುಟ್ಸೋವಾ [೧]
 - ಸ್ಥಳ ಮಲೋಟಿ ಪರ್ವತಗಳು (ಡ್ರ್ಯಾಕನ್ಸ್‌ಬರ್ಗ್), ಲೆಸೋತೊ
 - ಸಮುದ್ರ ಮಟ್ಟದಿಂದ ಎತ್ತರ ೩,೩೫೦ m (೧೦,೯೯೧ ft)
ಸಾಗರಮುಖ ಅಲೆಕ್ಸ್ಯಾಂಡರ್ ಕೊಲ್ಲಿ
 - ಸ್ಥಳ ಅಟ್ಲಾಂಟಿಕ್ ಮಹಾಸಾಗರ
ಉದ್ದ ೨,೨೦೦ km (೧,೩೬೭ mi)
ಜಲಾನಯನ ೯,೭೩,೦೦೦ km² (೩,೭೫,೬೭೭ sq mi)
ಆರೇಂಜ್ ನದಿ, ಕಲಿಡೋನ್ ನದಿ ಮತ್ತು ವಾಲ್ ನದಿಯ ಪಥ ಮತ್ತು ಜಲಾನಯನ. ಈ ನಕ್ಷೆ ಜಲಾನಯನಕ್ಕೆ ಮಿತವಾದ ಗಡಿಯನ್ನು ತೋರಿಸುತ್ತದೆ. ನಿರ್ದಿಷ್ಟವಾಗಿ, ಕಾಲಹಾರಿ ಜಲಾನಯನ ಪ್ರದೇಶವನ್ನು ಹೊರಗಿಡಲಾಗಿದೆ, ಏಕೆಂದರೆ ಅದು ಒಳಗೇ ಬರಿದಾಗುತ್ತದೆ ಎಂದು ಕೆಲವು ಮೂಲಗಳು ಹೇಳುತ್ತವೆ.[೨] ಗಣನಾ ವಿಧಾನಗಳನ್ನು ಬಳಸುವ ಕೆಲವು ಇತರ ಮೂಲಗಳು ಬೊಟ್ಸ್ವಾನಾದ ಭಾಗಗಳನ್ನು (ಹಾಗಾಗಿ ಕಾಲಹಾರಿಯ) ಒಳಗೊಂಡ ಜಲಾನಯನ ಪ್ರದೇಶವನ್ನು ತೋರಿಸುತ್ತವೆ.[೩]
ಆರೇಂಜ್ ನದಿ, ಕಲಿಡೋನ್ ನದಿ ಮತ್ತು ವಾಲ್ ನದಿಯ ಪಥ ಮತ್ತು ಜಲಾನಯನ. ಈ ನಕ್ಷೆ ಜಲಾನಯನಕ್ಕೆ ಮಿತವಾದ ಗಡಿಯನ್ನು ತೋರಿಸುತ್ತದೆ. ನಿರ್ದಿಷ್ಟವಾಗಿ, ಕಾಲಹಾರಿ ಜಲಾನಯನ ಪ್ರದೇಶವನ್ನು ಹೊರಗಿಡಲಾಗಿದೆ, ಏಕೆಂದರೆ ಅದು ಒಳಗೇ ಬರಿದಾಗುತ್ತದೆ ಎಂದು ಕೆಲವು ಮೂಲಗಳು ಹೇಳುತ್ತವೆ.[೨] ಗಣನಾ ವಿಧಾನಗಳನ್ನು ಬಳಸುವ ಕೆಲವು ಇತರ ಮೂಲಗಳು ಬೊಟ್ಸ್ವಾನಾದ ಭಾಗಗಳನ್ನು (ಹಾಗಾಗಿ ಕಾಲಹಾರಿಯ) ಒಳಗೊಂಡ ಜಲಾನಯನ ಪ್ರದೇಶವನ್ನು ತೋರಿಸುತ್ತವೆ.[೩]

ಆರೆಂಜ್ ನದಿ ದಕ್ಷಿಣ ಆಫ್ರಿಕದ ಅತಿಉದ್ದವಾದ ನದಿ. ಲೆಸೊತೊ ಪರ್ವತಗಳಲ್ಲಿ ಉಗಮ ಹೊಂದಿ, ಪ್ರಾರಂಭದಲ್ಲಿ ಪಶ್ಚಿಮ ಮತ್ತು ವಾಯವ್ಯಕ್ಕೆ ಹರಿದು ದಕ್ಷಿಣ ಅಟ್ಲಾಂಟಿಕ್ ಸಾಗರವನ್ನು ಅಲೆಗ್ಸಾಂಡರ್ ಸಾಗರವನ್ನು ಅಲೆಗ್ಸಾಂಡರ್ ಕೊಲ್ಲಿಯ ಸಮೀಪ ಸೇರುತ್ತದೆ. ಇದರ ಮೇಲ್ಕಣಿವೆಯು ಫ್ರೀಸ್ಟೇಟ್ ಮತ್ತು ಕೇಪ್ ಪ್ರಾಂತ್ಯಗಳ ನಡುವೆ ಗಡಿಯಾಗಿ ಹರಿಯುತ್ತದೆ. ಪ್ರಸ್ಥಭೂಮಿಯಲ್ಲಿ ಕಂದರಗಳಲ್ಲಿ ಹರಿಯುತ್ತ ಆಗ್ರೇಬಿಸ್ ಬಳಿ ಜಲಪಾತವನ್ನು ಸೃಷ್ಟಿಸುತ್ತದೆ. ಅನಂತರ ಮೈದಾನದಲ್ಲಿ ಸಾಗುವುದು. ಮುಖಜಭಾಗದ ಮರಳು ಅಡ್ಡಗಟ್ಟೆ ಮತ್ತು ಕಡಿಮೆ ಆಳದಿಂದಾಗಿ ಹಡಗು ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ವಾಲ್ ಮತ್ತು ಕಾಲೆಡಾನ್ ಉಪನದಿಗಳು, ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ತಯಾರಿಕೆಗೆ ಹೆಚ್ಚು ಉಪಯುಕ್ತ. ಈ ನದಿಯ ಉದ್ದ ೨೧೦೦ಕಿಮೀ ವಾಲ್ ಇದರ ಪ್ರಮುಖ ನದಿ. ಕಾಲೆಡೆನ್, ಮಾಡ್ರನ್ ಮತ್ತು ರಿಯಟ್ ಇತರ ಉಪನದಿಗಳು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Key rivers of South Africa
  2. Swanevelder, C. J. (1981), Utilising South Africa's largest river: The physiographic background to the Orange River scheme, GeoJournal vol 2 supp 2 pg 29-40
  3. Revenga, C.; Murray, S.; Abramovitz, J. and Hammond, A . (1998) Watersheds of the world: Ecological value and vulnerability, World Resources Institute, ISBN 1-56973-254-X
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: