ಪ್ರಸ್ಥಭೂಮಿ
Jump to navigation
Jump to search
ಭೂರಚನಶಾಸ್ತ್ರ ಮತ್ತು ಭೌತಿಕ ಭೂಗೋಳಶಾಸ್ತ್ರದಲ್ಲಿ, ಪ್ರಸ್ಥಭೂಮಿ ಎಂದರೆ ಸಾಮಾನ್ಯವಾಗಿ ತುಲನಾತ್ಮಕವಾಗಿ ಚಪ್ಪಟೆ ಭೂಮಿಯನ್ನು ಹೊಂದಿರುವ, ಸುತ್ತಮುತ್ತಲಿನ ಪ್ರದೇಶದ ಮೇಲೆ ಗಣನೀಯವಾಗಿ ಎತ್ತರಿಸಿರುವ, ಹಲವುವೇಳೆ ಕಡಿದಾದ ಇಳಿಜಾರಿನ ಒಂದು ಅಥವಾ ಹೆಚ್ಚು ಬದಿಗಳಿರುವ ಎತ್ತರದ ಭೂಪ್ರದೇಶ. ಪ್ರಸ್ಥಭೂಮಿಗಳು ಅನೇಕ ಪ್ರಕ್ರಿಯೆಗಳಿಂದ ರೂಪಗೊಳ್ಳಬಹುದು. ಇವುಗಳಲ್ಲಿ ಜ್ವಾಲಾಮುಖಿ ಶಿಲಾಪಾಕದ ಉಬ್ಬುವಿಕೆ, ಶಿಲಾರಸದ ನಿಸ್ಸರಣ, ಮತ್ತು ನೀರು ಹಾಗೂ ಹಿಮನದಿಗಳಿಂದಾದ ಸವೆತ ಸೇರಿವೆ. ಪ್ರಸ್ಥಭೂಮಿಗಳನ್ನು ಅವುಗಳ ಸುತ್ತಮುತ್ತಲಿನ ಪರಿಸರವನ್ನು ಆಧರಿಸಿ ಅಂತರಪರ್ವತೀಯ, ಪರ್ವತಶ್ರೇಣಿಯ ಬುಡದ, ಅಥವಾ ಖಂಡೀಯ ಎಂದು ವರ್ಗೀಕರಿಸಲಾಗುತ್ತದೆ
ಉಬ್ಬುವಿಕೆಯಿಂದ ರೂಪಗೊಳ್ಳುವ ಪ್ರಸ್ಥಭೂಮಿಗಳ ಆಧಾರವಾಗಿರುವ ಪ್ರಕ್ರಿಯೆಯು ಮ್ಯಾಂಟಲ್‍ನಿಂದ ಶಿಲಾಪಾಕ ಏರಿದಾಗ ಶುರುವಾಗುತ್ತದೆ. ಇದರಿಂದ ನೆಲವು ಮೇಲ್ದಿಕ್ಕಿನತ್ತ ಉಬ್ಬುತ್ತದೆ. ಈ ರೀತಿಯಲ್ಲಿ, ಕಲ್ಲಿನ ಚಪ್ಪಟೆ ಪ್ರದೇಶಗಳು ಮೇಲಕ್ಕೆದ್ದು ಪ್ರಸ್ಥಭೂಮಿಯ ರಚನೆಯಾಗುತ್ತದೆ.