ವಿಷಯಕ್ಕೆ ಹೋಗು

ಆಮ್ಲೆಟ್ (ತಿಂಡಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಮ್ಲೆಟ್ ಹೆಸರಿನ ಲೇಖನಕ್ಕಾಗಿ ಆಮ್ಲೆಟ್ (ಚಲನಚಿತ್ರ) ಅನ್ನು ಕ್ಲಿಕ್ಕಿಸಿ.

ಪಾಕಪದ್ಧತಿಯಲ್ಲಿ, ಆಮ್ಲೆಟ್ ಎಂದರೆ ಬಿರುಸಾಗಿ ಕಲಕಿದ ಮೊಟ್ಟೆಗಳಿಂದ ತಯಾರಿಸಲಾದ ಖಾದ್ಯ. ಇದನ್ನು ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆಯೊಂದಿಗೆ (ಕಲಕದೇ) ಕರಿಯಲಾಗುತ್ತದೆ. ಆಮ್ಲೆಟ್ ಒಳಗೆ ಗಿಣ್ಣು, ಚೈವ್ಸ್, ತರಕಾರಿಗಳು, ಅಣಬೆಗಳು, ಮಾಂಸ (ಹಲವುವೇಳೆ ಹ್ಯಾಮ್ ಅಥವಾ ಬೇಕನ್), ಅಥವಾ ಮೊದಲು ಹೇಳಲಾದ ಪದಾರ್ಥಗಳ ಯಾವುದೋ ಸಂಯೋಜನೆಯಂತಹ ಹೂರಣವನ್ನು ತುಂಬಿ ಸುತ್ತುವುದು ಸಾಮಾನ್ಯವಾಗಿದೆ. ಇಡೀ ಮೊಟ್ಟೆಗಳು ಅಥವಾ ಮೊಟ್ಟೆಯ ಬಿಳಿ ಭಾಗವನ್ನು ಹಲವುವೇಳೆ ಸ್ವಲ್ಪ ಪ್ರಮಾಣದಲ್ಲಿ ಹಾಲು, ಕೆನೆ, ಅಥವಾ ನೀರು ಸೇರಿಸಿ ಕಲಕಲಾಗುತ್ತದೆ.

ಸರಳ ಆಮ್ಲೆಟ್

ಎಗ್ ಅಪ್ಪಂ ಹುದುಗು ಬರಿಸಿದ ಅಕ್ಕಿ ಹಿಟ್ಟು ಮತ್ತು ತೆಂಗಿನ ಹಾಲಿನಿಂದ ತಯಾರಿಸಲಾದ ಆಮ್ಲೆಟ್ ಆಗಿದೆ. ಅಪ್ಪಂ ಬೇಯುತ್ತಿರುವಾಗ ಮೊಟ್ಟೆಯನ್ನು ಹಿಟ್ಟಿನ ಮೇಲೆ ಒಡೆದು ಹಾಕಲಾಗುತ್ತದೆ.

ಪಾರ್ಸಿ ಪಾಕಪದ್ಧತಿಯಲ್ಲಿ, ಪೋರಾ ಮೊಟ್ಟೆಗಳು, ಈರುಳ್ಳಿ, ಟೊಮೇಟೊ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ತಯಾರಿಸಲಾದ ಆಮ್ಲೆಟ್ ಆಗಿರುತ್ತದೆ.[][] ಇದನ್ನು ಸಾಮಾನ್ಯವಾಗಿ ಬೆಳಗಿನ ತಿಂಡಿಯಲ್ಲಿ ಚಹಾ ಮತ್ತು ಬ್ರೆಡ್‍ನೊಂದಿಗೆ ಬಡಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Parsi Pora, Omelette Parsi Food Style". www.nilouferskitchen.com (in ಬ್ರಿಟಿಷ್ ಇಂಗ್ಲಿಷ್). Retrieved 2018-04-28.
  2. King, Niloufer Ichaporia (2007-06-18). My Bombay Kitchen: Traditional and Modern Parsi Home Cooking (in ಇಂಗ್ಲಿಷ್). University of California Press. ISBN 9780520933378.