ವಿಷಯಕ್ಕೆ ಹೋಗು

ಆಮ್ಲತಾ ನಿಯಂತ್ರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀರಿಲ್ಲದ ಸಿಟ್ರಿಕ್ ಆಮ್ಲ

ಆಮ್ಲತಾ ನಿಯಂತ್ರಕಗಳು ಅಥವಾ ಪಿಹೆಚ್ ನಿಯಂತ್ರಣಾ ಪದಾರ್ಥಗಳು, ಪಿಹೆಚ್ (ಆಮ್ಲೀಯತೆ ಅಥವಾ ಕ್ಷಾರತೆ) ಯನ್ನು ಬದಲಾಯಿಸಲು ಅಥವಾ ನಿರ್ವಹಿಸಲು ಬಳಸಲ್ಪಡುವ ಆಹಾರ ಸಂಯೋಜನೀಯಗಳಾಗಿವೆ. ಅವು ಕಾರ್ಬನಿಕ ಅಥವಾ ಖನಿಜಾಮ್ಲಗಳು, ಕ್ಷಾರಗಳು, ತಟಸ್ಥಗೊಳಿಸುವ ಪದಾರ್ಥ ಅಥವಾ ಪ್ರತಿರೋಧಕ ಪದಾರ್ಥಗಳಾಗಿರಬಹುದು. ವಿಶಿಷ್ಟ ಪದಾರ್ಥಗಳು ಈ ಕೆಳಗಿನ ಆಮ್ಲಗಳು ಮತ್ತು ಅವುಗಳ ಸೋಡಿಯಂ ಲವಣಗಳನ್ನು ಒಳಗೊಂಡಿವೆ: ಸೋರ್ಬಿಕ್ ಆಮ್ಲ, ಅಸಿಟಿಕ್ ಆಮ್ಲ, ಬೆಂಜ಼ೋಯಿಕ್ ಆಮ್ಲ ಮತ್ತು ಪ್ರೋಪಿಯೋನಿಕ್ ಆಮ್ಲ.[] ಆಮ್ಲತಾ ನಿಯಂತ್ರಕಗಳನ್ನು ಅವುಗಳ ಇ ಸಂಖ್ಯೆಯಿಂದ ಸೂಚಿಸಲಾಗುತ್ತದೆ, ಉದಾಹರಣೆಗೆ ಇ260 (ಅಸಿಟಿಕ್ ಆಮ್ಲ), ಅಥವಾ ಸರಳವಾಗಿ "ಆಹಾರಾಮ್ಲ" ಎಂದು ಪಟ್ಟಿಮಾಡಲಾಗುತ್ತದೆ.

ಆಮ್ಲತಾ ನಿಯಂತ್ರಕಗಳು ಆಸಿಡ್ಯೂಲೆಂಟ್‌ಗಳಿಂದ ಭಿನ್ನವಾಗಿವೆ. ಅವು ಹೆಚ್ಚಾಗಿ ಆಮ್ಲೀಯವಾಗಿರುತ್ತವೆ ಆದರೆ ಹುಳಿ ಸುವಾಸನೆಯನ್ನು ನೀಡಲು ಅವುಗಳನ್ನು ಸೇರಿಸಲಾಗುತ್ತದೆ. ಅವುಗಳು ಉದ್ದೇಶ ಆಹಾರವನ್ನು ಸ್ಥಿರಗೊಳಿಸುವುದಲ್ಲ. ಆದರೆ ಅದು ಪೂರಕ ಪ್ರಯೋಜನವಾಗಿರಬಹುದು.

ಉಲ್ಲೇಖಗಳು

[ಬದಲಾಯಿಸಿ]

 

  1. Erich Lück and Gert-Wolfhard von Rymon Lipinski "Foods, 3. Food Additives" in Ullmann's Encyclopedia of Industrial Chemistry, 2002, Wiley-VCH, Weinheim. doi:10.1002/14356007.a11_561