ಆನ್‌ಲೈನ್ ಜಾಹೀರಾತು
ಟೆಂಪ್ಲೇಟು:Ecommerce ಆನ್‌ಲೈನ್ ಜಾಹೀರಾತು ಎಂಬುದು ಪ್ರಚಾರದ ಒಂದು ಸ್ವರೂಪವಾಗಿದ್ದು, ಗ್ರಾಹಕರನ್ನು ಆಕರ್ಷಿಸಲೆಂದು ಮಾರಾಟಗಾರಿಕೆಯ ಸಂದೇಶಗಳನ್ನು ವಿತರಿಸುವ ಅಭಿವ್ಯಕ್ತಿಸಲ್ಪಟ್ಟ ಉದ್ದೇಶಕ್ಕೆ ಸಂಬಂಧಿಸಿದಂತೆ ಅಂತರಜಾಲ ಮತ್ತು ವರ್ಲ್ಡ್ ವೈಡ್ ವೆಬ್ ಮಾಧ್ಯಮವನ್ನು ಅದು ಬಳಸಿಕೊಳ್ಳುತ್ತದೆ. ಆನ್‌ಲೈನ್ ಜಾಹೀರಾತಿನ ಉದಾಹರಣೆಗಳಲ್ಲಿ ಇವೆಲ್ಲವೂ ಸೇರಿವೆ: ಶೋಧಕ ಸಾಧನದ ಫಲಿತಾಂಶಗಳ ಪುಟಗಳಲ್ಲಿನ ಸಂದರ್ಭೋಚಿತ ಜಾಹೀರಾತುಗಳು, ಪತಾಕೆ ಶೀರ್ಷಿಕೆ ಜಾಹೀರಾತುಗಳು, ವಿಪುಲ ಮಾಧ್ಯಮಗಳ ಜಾಹೀರಾತುಗಳು, ಸಾಮಾಜಿಕ ಜಾಲದ ಜಾಹೀರಾತು, ತೆರಪಿನ ಜಾಹೀರಾತುಗಳು, ಆನ್‌ಲೈನ್ ವರ್ಗೀಕೃತ ಜಾಹೀರಾತು, ಜಾಹೀರಾತು ಜಾಲಗಳು ಮತ್ತು ಇ-ಮೇಲ್ ಕಳಪೆ ವಿಷಯವನ್ನು ಒಳಗೊಂಡಂತಿರುವ ಇ-ಮೇಲ್ ಮಾರಾಟಗಾರಿಕೆ.
ಸಾಂಪ್ರದಾಯಿಕ ಜಾಹೀರಾತಿಗೆ ಪ್ರತಿಯಾಗಿರುವ ಸ್ಪರ್ಧಾತ್ಮಕ ಪ್ರಯೋಜನ
[ಬದಲಾಯಿಸಿ]ಭೌಗೋಳಿಕ ಪ್ರದೇಶ ಅಥವಾ ಕಾಲದಿಂದ ಸೀಮಿತಗೊಳಿಸಲ್ಪಡದ ಮಾಹಿತಿ ಮತ್ತು ಹೂರಣವನ್ನು ತತ್‌ಕ್ಷಣದಲ್ಲಿ ಪ್ರಕಟಿಸಲು ಸಾಧ್ಯವಾಗುವುದು ಆನ್‌ಲೈನ್ ಜಾಹೀರಾತಿನ ಒಂದು ಪ್ರಮುಖ ಪ್ರಯೋಜನವಾಗಿದೆ. ಭೌಗೋಳಿಕ ಪ್ರದೇಶ ಅಥವಾ ಕಾಲದಿಂದ ಸೀಮಿತಗೊಳಿಸಲ್ಪಡದ ಮಾಹಿತಿ ಮತ್ತು ಹೂರಣವನ್ನು ತತ್‌ಕ್ಷಣದಲ್ಲಿ ಪ್ರಕಟಿಸಲು ಸಾಧ್ಯವಾಗುವುದು ಆನ್‌ಲೈನ್ ಜಾಹೀರಾತಿನ ಒಂದು ಪ್ರಮುಖ ಪ್ರಯೋಜನವಾಗಿದೆ. ಅಂತಿಮವಾಗಿ ಹೇಳುವುದಾದರೆ, ಒಂದು ತಡೆಹಾಕುವ ಕಾರ್ಯತಂತ್ರವನ್ನು ಇಲ್ಲಿಯವರೆಗೆ ಅಳವಡಿಸಿಕೊಂಡಿರುವ ಜಾಹೀರಾತುದಾರರಿಗೆ ಸಂಬಂಧಿಸಿದಂತೆ, ಪಾರಸ್ಪರಿಕ ಕ್ರಿಯೆಯ ಜಾಹೀರಾತಿನ ಹೊರಹೊಮ್ಮುತ್ತಿರುವ ಕ್ಷೇತ್ರವು ತಾಜಾ ಸವಾಲುಗಳನ್ನು ಸಾದರಪಡಿಸುತ್ತದೆ. ಜಾಹೀರಾತುದಾರರ ಹೂಡಿಕೆಯ ಪರಿಣಾಮಕಾರಿತ್ವವು ಮತ್ತೊಂದು ಪ್ರಯೋಜನವಾಗಿದೆ. ಹೂರಣ ಮತ್ತು ಪ್ರಚುರಗೊಳಿಸಲ್ಪಟ್ಟ ವೆಬ್‌ಸೈಟ್‌ಗಳನ್ನು ಒಳಗೊಂಡಂತೆ, ಜಾಹೀರಾತುಗಳನ್ನು ಗಿರಾಕಿಯ ಇಷ್ಟಾನುಸಾರ ರೂಪಿಸುವುದರ ಕುರಿತಾಗಿಯೂ ಆನ್‌ಲೈನ್ ಜಾಹೀರಾತು ಅವಕಾಶ ನೀಡುತ್ತದೆ. ಉದಾಹರಣೆಗೆ, ಆಡ್‌ವರ್ಡ್ಸ್, ಯಾಹೂ! ಸರ್ಚ್ ಮಾರ್ಕೆಟಿಂಗ್ ಮತ್ತು ಗೂಗಲ್ ಆಡ್‌ಸೆನ್ಸ್ ಇವೇ ಮೊದಲಾದವು, ಸಮಂಜಸವಾದ ವೆಬ್ ಪುಟಗಳಲ್ಲಿ ಅಥವಾ ಸಂಬಂಧಿತ ಮುಖ್ಯಸೂಚಿಪದಗಳ (ಕೀವರ್ಡ್ಸ್) ಶೋಧನ ಫಲಿತಾಂಶಗಳ ಉದ್ದಕ್ಕೂ ಜಾಹೀರಾತುಗಳು ಕಾಣಿಸಿಕೊಳ್ಳುವಂತೆ ಅನುವುಗೊಳಿಸುತ್ತವೆ.
ನೈತಿಕತೆ
[ಬದಲಾಯಿಸಿ]ವಿಭಿನ್ನ ಬಗೆಯ ಜಾಹೀರಾತುಗಳ ಒಂದು ಶ್ರೇಣಿಯನ್ನೇ ಆನ್‌ಲೈನ್ ಜಾಹೀರಾತು ಒಳಗೊಳ್ಳುತ್ತದೆ; ಅವುಗಳ ಪೈಕಿ ಕೆಲವೊಂದು ನೈತಿಕವಾಗಿ ನಿಯೋಜಿಸಲ್ಪಟ್ಟಿದ್ದರೆ, ಮತ್ತೆ ಕೆಲವು ಹಾಗಿರುವುದಿಲ್ಲ. ಬಳಕೆದಾರನ ಗಮನವನ್ನು ಬೇರೆ ದಿಕ್ಕಿಗೆ ತಿರುಗಿಸುವಂಥ ಆಡಂಬರವಾಗಿ ಪ್ರದರ್ಶಿಸಲ್ಪಡುವ ಪತಾಕೆ-ಶೀರ್ಷಿಕೆಯ ಸ್ವರೂಪಗಳನ್ನು ಒಳಗೊಂಡಂತೆ, ಕೆಲವೊಂದು ವೆಬ್‌ಸೈಟ್‌ಗಳು ದೊಡ್ಡ ಸಂಖ್ಯೆಯಲ್ಲಿ ಜಾಹೀರಾತುಗಳನ್ನು ಬಳಸುತ್ತವೆ; ಇನ್ನು ಕೆಲವು ತಪ್ಪುದಾರಿಗೆಳೆಯುವ ಚಿತ್ರಿಕೆಗಳನ್ನು ಹೊಂದಿದ್ದು, ಇವು ಜಾಹೀರಾತುಗಳಿಗಿಂತ ಹೆಚ್ಚಾಗಿ ಕಾರ್ಯಾಚರಣೆ ವ್ಯವಸ್ಥೆಯಿಂದ (ಆಪರೇಟಿಂಗ್ ಸಿಸ್ಟಂ) ಹೊರಹೊಮ್ಮಿದ ದೋಷ-ಸಂದೇಶಗಳ ರೀತಿಯಲ್ಲಿ ಕಾಣಿಸುವಂತೆ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ. ಆದಾಯಕ್ಕಾಗಿಯೇ ಆನ್‌ಲೈನ್ ಜಾಹೀರಾತನ್ನು ಆಗಿಂದಾಗ್ಗೆ ಅನೈತಿಕವಾಗಿ ಬಳಸಿಕೊಳ್ಳುವ ವೆಬ್‌ಸೈಟ್‌ಗಳು, ತಮ್ಮ ವೆಬ್‌ಸೈಟ್ ಮೇಲೆ ಪ್ರದರ್ಶನಗೊಳ್ಳುವ ಯಾವ ಜಾಹೀರಾತುಗಳು ಯಾವುದಕ್ಕೆ ಸಂಪರ್ಕವನ್ನು ನೀಡುತ್ತವೆ ಎಂಬುದರ ಕುರಿತು ಹತೋಟಿಯನ್ನು ಹೊಂದಿರುವುದಿಲ್ಲ; ಇದರಿಂದಾಗಿ ದುರುದ್ದೇಶಪೂರಿತ ತಂತ್ರಾಂಶ ಅಥವಾ ವಯಸ್ಕರು ಮಾತ್ರವೇ ನೋಡಬಹುದಾದ ವಿಷಯದೊಂದಿಗಿನ ತಾಣಗಳಿಗೆ ಸದರಿ ಜಾಹೀರಾತುಗಳು ನೋಡುಗರನ್ನು ಕರೆದೊಯ್ಯುವುದಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ಆನ್‌ಲೈನ್ ಜಾಹೀರಾತನ್ನು ನೈತಿಕವಾಗಿ ಬಳಸಿಕೊಳ್ಳುವ ವೆಬ್‌ಸೈಟ್ ನಿರ್ವಾಹಕರು ವಿಶಿಷ್ಟವೆಂಬಂತೆ ಸಣ್ಣ ಸಂಖ್ಯೆಯಲ್ಲಿ ಜಾಹೀರಾತುಗಳನ್ನು ಬಳಕೆಮಾಡಿಕೊಳ್ಳುತ್ತಾರೆ. ಇವು ಬಳಕೆದಾರನನ್ನು ಬೇರೆ ದಿಕ್ಕಿಗೆ ತಿರುಗಿಸುವ ಅಥವಾ ಕಿರಿಕಿರಿಗೊಳಿಸುವ ಆಶಯವನ್ನು ಹೊಂದಿರದ ಜಾಹೀರಾತುಗಳಾಗಿದ್ದು, ವೆಬ್‌ಸೈಟ್ ನಿರ್ವಾಹಕರು ವೆಬ್‌ಸೈಟ್‌ಗಳ ವಿನ್ಯಾಸ ಮತ್ತು ರೂಪರೇಖೆಯಿಂದ ಇವನ್ನು ತೆಗೆದುಹಾಕುವುದಿಲ್ಲ.[೧] ಜಾಹೀರಾತುಗಳನ್ನು ನೀಡಲು ಬಯಸುವ ಕಂಪನಿಗಳೊಂದಿಗೆ ಅನೇಕ ವೆಬ್‌ಸೈಟ್ ಮಾಲೀಕರು ನೇರವಾಗಿ ವ್ಯವಹರಿಸುತ್ತಾರೆ; ಜಾಹೀರಾತಿನಿಂದ ಸಂಪರ್ಕಿಸಲ್ಪಡುವ ಒಂದು ವೆಬ್‌ಸೈಟ್ ಶಾಸನಬದ್ಧವಾಗಿರುತ್ತದೆ ಎಂಬುದು ಇದರರ್ಥ. ಅಡೋಬ್ ಫ್ಲ್ಯಾಶ್‌ನಂಥ ತಂತ್ರಜ್ಞಾನಗಳನ್ನು ಆನ್‌ಲೈನ್ ಜಾಹೀರಾತಿನಲ್ಲಿ ಮಿತಿಮೀರಿದ ಪ್ರಮಾಣದಲ್ಲಿ ಬಳಕೆಮಾಡುವುದರಿಂದಾಗಿ, ಕೆಲವೊಂದು ಬಳಕೆದಾರರು ಇದನ್ನು ತಮ್ಮ ಬ್ರೌಸರ್‌ಗಳಲ್ಲಿ ಅಸಮರ್ಥವಾಗಿಸುವ, ಅಥವಾ ಆಡ್‌ಬ್ಲಾಕ್ ಅಥವಾ ನೋಸ್ಕ್ರಿಪ್ಟ್‌ನಂಥ ಬ್ರೌಸರ್ ಪ್ಲಗ್-ಇನ್‌ಗಳನ್ನು ಬಳಸುವ ಪರಿಪಾಠಕ್ಕೆ ಕಾರಣವಾಗುತ್ತದೆ. ಅನೇಕ ತಾಣಗಳ ಜಾಹೀರಾತಿಗೆ ಭದ್ರತೆ ಮತ್ತು ಖಾಸಗಿತನದ ಕ್ರಮಗಳ ಒಂದು ಪಾರ್ಶ್ವಪರಿಣಾಮವಾಗಿ ತಡೆಯೊಡ್ಡುವ ಸಾಧ್ಯತೆ ಇರುತ್ತದೆಯಾದ್ದರಿಂದ, ಇಂಥ ತಾಣಗಳು ಕೇಂದ್ರೀಕೃತ ವ್ಯವಸ್ಥೆಗೆ ಒಳಪಡಿಸಲ್ಪಟ್ಟ ಜಾಹೀರಾತು ಸೇವೆಗಳನ್ನು ಬಳಸುತ್ತವೆ. ಏಕೆಂದರೆ ಇಂಥ ಸೇವೆಗಳು ಕಾರ್ಯನಿರ್ವಹಿಸಬೇಕೆಂದರೆ ಜಾವಾಸ್ಕ್ರಿಪ್ಟ್ ಮತ್ತು ತಾಣಾಂತರದ ಮನವಿಗಳ ಅಗತ್ಯವಿರುತ್ತದೆ; ಅದೇ ವೇಳೆಗೆ, ಇಂಥ ತಾಣಗಳನ್ನು ಬಳಸಲು ಈ ಬಗೆಯ ಲಕ್ಷಣಗಳ ಅಗತ್ಯವಿರುವುದಿಲ್ಲ ಹಾಗೂ ಇವು ಭೇದ್ಯತೆಗಳ ಒಂದು ಸಮರ್ಥ ಮೂಲವಾಗಿರುತ್ತವೆ. ಅನೇಕವೇಳೆ ಶಾಸನಬದ್ಧ ಜಾಹೀರಾತನ್ನು ಆಯ್ದುಕೊಳ್ಳಲಾಗುತ್ತದೆ, ಅಥವಾ ಇದು ಆಯ್ದುಕೊಳ್ಳಲಾಗದಿರುವ ಒಂದು ಸ್ಪಷ್ಟವಾದ ಆಯ್ಕೆಯನ್ನು ಹೊಂದಿದ್ದು, ಕಳಪೆ ವಿಷಯದೊಂದಿಗಿರುವ ಅದರ ವ್ಯತ್ಯಾಸವನ್ನು ಇದು ತೋರಿಸುತ್ತದೆ.
ದೋಷಪೂರಿತ ತಂತ್ರಾಂಶ
[ಬದಲಾಯಿಸಿ]ಅನೈತಿಕ ಮತ್ತು ಅಷ್ಟೇ ಏಕೆ ಕಾನೂನುಬಾಹಿರವೂ ಆಗಿರಬಹುದಾದ ಜಾಹೀರಾತು ವಿಧಾನಗಳ ಒಂದು ವರ್ಗವೂ ಅಸ್ತಿತ್ವದಲ್ಲಿದೆ. ಕಂಪ್ಯೂಟರ್ ವ್ಯವಸ್ಥೆಯ ಸಜ್ಜಿಕೆಗಳನ್ನು (ಅಂದರೆ ಒಂದು ಬ್ರೌಸರ್‌ನ ಮೂಲಪುಟದಂಥದನ್ನು) ಮಾರ್ಪಡಿಸುವ, ಪಾಪ್-ಅಪ್‌ಗಳನ್ನು ಉತ್ಪಾದಿಸುವ, ಮತ್ತು ಅಂಗೀಕೃತವಾಗಿರದ ವೆಬ್‌ಪುಟಗಳೊಳಗೆ ಜಾಹೀರಾತುಗಳನ್ನು ತೂರಿಸುವ ಬಾಹ್ಯ ಅನ್ವಯಿಕೆಗಳು ಇವುಗಳಲ್ಲಿ ಸೇರಿವೆ. ಇಂಥ ಅನ್ವಯಿಕೆಗಳಿಗೆ ಸಾಮಾನ್ಯವಾಗಿ ಸ್ಪೈವೇರ್ ಅಥವಾ ಆಡ್‌ವೇರ್ ಎಂಬುದಾಗಿ ಹಣೆಪಟ್ಟಿ ಅಂಟಿಸಲಾಗುತ್ತದೆ. ಹವಾಮಾನವನ್ನು ಪ್ರದರ್ಶಿಸುವ ಅಥವಾ ಒಂದು ಶೋಧನಸಜ್ಜಿಕೆಯ ಪಟ್ಟಿಯನ್ನು ಒದಗಿಸುವಂಥ ಸರಳ ಸೇವೆಯೊಂದನ್ನು ನಿರ್ವಹಿಸುವ ಮೂಲಕ, ಅವರ ಪ್ರಶ್ನಾರ್ಹ ಕಾರ್ಯಚಟುವಟಿಕೆಗಳನ್ನು ಅವು ಮರೆಮಾಡಬಹುದು. ಮೋಸದ ಹೂಟಗಳಾಗಿ ಪರಿಣಾಮಕಾರಿಯಾಗಿ ವರ್ತಿಸುವ ಇವು, ಬಳಕೆದಾರರನ್ನು ಮೋಸಗೊಳಿಸಲೆಂದೇ ವಿನ್ಯಾಸಗೊಳಿಸಿದ ಕಾರ್ಯಸೂಚಿಗಳಾಗಿರುತ್ತವೆ. ಈ ಅನ್ವಯಿಕೆಗಳನ್ನು ತೆಗೆದುಹಾಕುವ ಅಥವಾ ಅಳವಡಿಕೆಯಿಂದ ಕಿತ್ತುಹಾಕುವ ಪ್ರಕ್ರಿಯೆಯು ಕಷ್ಟಕರವಾಗಿ ಪರಿಣಮಿಸುವ ರೀತಿಯಲ್ಲಿ ಇವನ್ನು ಸಾಮಾನ್ಯವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಆನ್‌ಲೈನ್ ಬಳಕೆದಾರರ ನೋಟಕವರ್ಗವು ಹೆಚ್ಚುತ್ತಲೇ-ಇದ್ದು, ಅವರ ಪೈಕಿ ಅನೇಕರಿಗೆ ಕಂಪ್ಯೂಟರ್-ತಿಳಿವಳಿಕೆ ಇರುವುದಿಲ್ಲ; ಇದರಿಂದಾಗಿ ಇಂಥ ಕಾರ್ಯಸೂಚಿಗಳಿಂದ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಜ್ಞಾನ ಮತ್ತು ತಾಂತ್ರಿಕ ಸಾಮರ್ಥ್ಯದ ಕೊರತೆಯು ಆಗಾಗ ಇಂಥವರನ್ನು ಕಾಡುತ್ತದೆ.
ಖಾಸಗಿತನ
[ಬದಲಾಯಿಸಿ]ಆನ್‌ಲೈನ್ ಜಾಹೀರಾತಿನ ಬಳಕೆಯು ಬಳಕೆದಾರರ ಖಾಸಗಿತನ ಮತ್ತು ಅಜ್ಞಾತ ನಾಮಕತ್ವದ ಮೇಲೆ ಸೂಚಿತ ಪರಿಣಾಮಗಳನ್ನು ಬೀರುತ್ತದೆ. ಒಂದುವೇಳೆ ಜಾಹೀರಾತು ಕಂಪನಿಯೊಂದು
ಎರಡು ವೆಬ್ ತಾಣಗಳಲ್ಲಿ ಪತಾಕೆ ಶೀರ್ಷಿಕೆಯ ಚಿತ್ರಿಕೆಗಳನ್ನು ಪ್ರಕಟಿಸಿದರೆ, ಪತಾಕೆ ಶೀರ್ಷಿಕೆಯ ಚಿತ್ರಿಕೆಗಳನ್ನು ತನ್ನ ಸರ್ವರ್‌ಗಳಲ್ಲಿ ರೂಪಿಸುವ ಮೂಲಕ, ಸದರಿ ಜಾಹೀರಾತು ಕಂಪನಿಯು ಈ ಎರಡೂ ತಾಣಗಳಲ್ಲಿನ ಬಳಕೆದಾರರು ಮಾಡುವ ಬ್ರೌಸಿಂಗ್‌ನ್ನು ಜಾಡುಹಿಡಿಯಲು ಸಮರ್ಥವಾಗಿರುತ್ತದೆ.
ಜಾಹೀರಾತು ಸಂಸ್ಥೆಗಳು ಮತ್ತು ಜಾಡುಹಿಡಿಯುವ ಕಂಪನಿಗಳಿಂದ ಜಾಡುಹಿಡಿಯುವಿಕೆಗೆ ಒಳಗಾಗುವುದನ್ನು ತಗ್ಗಿಸಲೆಂದು ಮತ್ತು ಖಾಸಗಿತನವನ್ನು ಹೆಚ್ಚಿಸಲೆಂದು, ಬಹುಪಾಲು ಬ್ರೌಸರ್‌ಗಳು ತಟಸ್ಥ ಕುಕಿಗಳಿಗೆ (ಅಥವಾ ಅನ್ಯಾರ್ಥ/ತೃತೀಯ ಕುಕಿಗಳಿಗೆ) ತಡೆಯೊಡ್ಡಬಲ್ಲವಾಗಿರುತ್ತವೆ. ಬಳಕೆದಾರನ ವೆಬ್ ಅನುಭವದ ಮೇಲೆ ನಕಾರಾತ್ಮಕವಾದ ಪರಿಣಾಮವನ್ನು ಬೀರದೆಯೇ ಇದನ್ನು ಕಾರ್ಯಗತಗೊಳಿಸಲಾಗುತ್ತದೆ ಎಂಬುದು ಗಮನಾರ್ಹ ಸಂಗತಿ. ಅನೇಕ ಜಾಹೀರಾತು ನಿರ್ವಾಹಕರು ವರ್ತನ ಜಾಹೀರಾತನ್ನು ಆಯ್ದುಕೊಳ್ಳದಿರುವ ಒಂದು ಆಯ್ಕೆಯನ್ನು ಹೊಂದಿರುತ್ತಾರೆ; ಬ್ರೌಸರ್‌ನಲ್ಲಿರುವ ಒಂದು ಸಾರ್ವತ್ರಿಕ ಕುಕಿಯು ವರ್ತನ ಜಾಹೀರಾತಿಗೆ ತಡೆಯೊಡ್ಡುವ ಮೂಲಕ ಇದು ನೆರವೇರುತ್ತದೆ.[೨]
ಆದಾಯದ ಮಾದರಿಗಳು
[ಬದಲಾಯಿಸಿ]ಆನ್‌ಲೈನ್ ಜಾಹೀರಾತು ಖರೀದಿಸಲ್ಪಡುವ ಮೂರು ಅತ್ಯಂತ ಸಾಮಾನ್ಯ ವಿಧಾನಗಳಲ್ಲಿ CPM, CPC, ಮತ್ತು CPA ಸೇರಿವೆ.
- CPM (ಕಾಸ್ಟ್ ಪರ್ ಮಿಲ್ಲೆ) : ಇದನ್ನು "ಕಾಸ್ಟ್ ಪರ್ ಥೌಸಂಡ್ (CPT) ಎಂಬುದಾಗಿಯೂ ಕರೆಯಲಾಗುತ್ತದೆ. ಈ ವಿಧಾನದಲ್ಲಿ, ಒಂದು ನಿರ್ದಿಷ್ಟ ನೋಟಕವರ್ಗಕ್ಕೆ ತಮ್ಮ ಸಂದೇಶವನ್ನು ಪ್ರಚುರಪಡಿಸುವುದಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರು ಪಾವತಿಸುತ್ತಾರೆ. "ಪರ್ ಮಿಲ್ಲೆ" ಎಂದರೆ ಜಾಹೀರಾತೊಂದರ ತಲಾ ಸಾವಿರ ಮುದ್ರಣಗಳಿಗೆ, ಅಥವಾ ಹೊರೆಗಳಿಗೆ ಎಂದರ್ಥ. ಆದಾಗ್ಯೂ, ಒಂದು ಪುನರ್‌ಭರ್ತಿ ಅಥವಾ ಆಂತರಿಕ ಬಳಕೆದಾರ ಕ್ರಮದಂಥ ಕೆಲವೊಂದು ಮುದ್ರಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರಬಹುದು.
- CPV (ಕಾಸ್ಟ್ ಪರ್ ವಿಸಿಟರ್) : ಈ ವಿಧಾನದಲ್ಲಿ, ಜಾಹೀರಾತುದಾರರ ವೆಬ್‌ಸೈಟ್‌ಗೆ ಓರ್ವ ಉದ್ದೇಶಿತ ಸಂದರ್ಶಕನು ನೀಡುವ ವಿತರಣೆಗೆ ಸಂಬಂಧಿಸಿದಂತೆ ಜಾಹೀರಾತುದಾರರು ಪಾವತಿಸುತ್ತಾರೆ.
- CPV (ಕಾಸ್ಟ್ ಪರ್ ವ್ಯೂ) : ಒಂದು ಜಾಹೀರಾತು ಅಥವಾ ವೆಬ್‌ಸೈಟ್‌ನ್ನು (ಸಾಮಾನ್ಯವಾಗಿ ಇದನ್ನು ಪಾಪ್-ಅಪ್‌ಗಳು, ಪಾಪ್-ಅಂಡರ್‌ಗಳು ಮತ್ತು ತೆರಪಿನ ಜಾಹೀರಾತುಗಳೊಂದಿಗೆ ಬಳಸಲಾಗುತ್ತದೆ) ಪ್ರತಿ ಅನನ್ಯ ಬಳಕೆದಾರನು ವೀಕ್ಷಿಸಿದಾಗ ಈ ವಿಧಾನದಲ್ಲಿ ಓರ್ವ ಜಾಹೀರಾತುದಾರನು ಪಾವತಿಸುತ್ತಾನೆ.
- CPC (ಕಾಸ್ಟ್ ಪರ್ ಕ್ಲಿಕ್) : ಇದು ಪೇ ಪರ್ ಕ್ಲಿಕ್ (PPC) ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಜಾಹೀರಾತುದಾರರ ಪಟ್ಟೀಕರಣದ ಮೇಲೆ ಓರ್ವ ಬಳಕೆದಾರನು ಪ್ರತಿಬಾರಿ ಕ್ಲಿಕ್ಕಿಸಿದಾಗ ಮತ್ತು ಜಾಹೀರಾತುದಾರರರ ವೆಬ್‌ಸೈಟ್‌ಗೆ ಅವನು ಮರುನಿರ್ದೇಶಿಸಲ್ಪಟ್ಟಾಗ, ಜಾಹೀರಾತುದಾರರು ಪಾವತಿಸುತ್ತಾರೆ. ವಾಸ್ತವವಾಗಿ ಅವರು ಪಟ್ಟೀಕರಣಕ್ಕಾಗಿ ಪಾವತಿಸುವುದಿಲ್ಲ, ಆದರೆ ಪಟ್ಟೀಕರಣವು ಕ್ಲಿಕ್ಕಿಸಲ್ಪಟ್ಟಾಗ ಮಾತ್ರವೇ ಅವರು ಪಾವತಿಸುತ್ತಾರೆ. ಜಾಹೀರಾತು ಪರಿಣಿತರು ಶೋಧನೆಗಳನ್ನು ಪರಿಷ್ಕರಿಸುವುದಕ್ಕೆ ಮತ್ತು ತಮ್ಮ ಮಾರುಕಟ್ಟೆಯ ಕುರಿತಾದ ಮಾಹಿತಿಯನ್ನು ಗಳಿಸುವುದಕ್ಕೆ ಈ ವ್ಯವಸ್ಥೆಯು ಅವಕಾಶ ಕಲ್ಪಿಸುತ್ತದೆ. ಪೇ ಪರ್ ಕ್ಲಿಕ್ ಬೆಲೆನಿಗದಿ ವ್ಯವಸ್ಥೆಯ ಅಡಿಯಲ್ಲಿ, ಜಾಹೀರಾತುದಾರರು ತಮ್ಮ ವೆಬ್‌ಸೈಟ್‌ಗೆ ಸಮಂಜಸವಾದ ದಟ್ಟಣೆಯನ್ನು ನಿರ್ದೇಶಿಸುವ ಉದ್ದೇಶಿತ ವಿಷಯದಿಂದ ತುಂಬಿದ ಪದಗಳ ಒಂದು ಸರಣಿಯ ಅಡಿಯಲ್ಲಿ ಪಟ್ಟಿಮಾಡಲ್ಪಡಬೇಕಾದ ಹಕ್ಕಿಗಾಗಿ ಪಾವತಿಸುತ್ತಾರೆ. ಅಷ್ಟೇ ಅಲ್ಲ, ಅವರ ವೆಬ್‌ಸೈಟ್‌ಗೆ ನೇರವಾಗಿ ಸಂಪರ್ಕಿಸುವ ಅವರ ಪಟ್ಟೀಕರಣದ ಮೇಲೆ ಯಾರಾದರೊಬ್ಬರು ಕ್ಲಿಕ್ಕಿಸಿದಾಗ ಮಾತ್ರವೇ ಸದರಿ ಜಾಹೀರಾತುದಾರರು ಪಾವತಿಸುತ್ತಾರೆ. CPV ವಿಧಾನದಿಂದ CPC ವಿಧಾನವು ಪ್ರತ್ಯೇಕವಾಗಿ ನಿಲ್ಲುತ್ತದೆ; ಬಳಕೆದಾರನು ಉದ್ದೇಶದ ತಾಣದೆಡೆಗೆ ಕ್ಲಿಕ್ಕಿಸುವಿಕೆಯನ್ನು ಮಾಡಿದನೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಪ್ರತಿ ಕ್ಲಿಕ್ಕಿಸುವಿಕೆಯೂ ಪಾವತಿಸಲ್ಪಡುವ ವಿಶಿಷ್ಟತೆಯಿಂದಾಗಿ ಇದು ಪ್ರತ್ಯೇಕವಾಗಿ ನಿಲ್ಲುತ್ತದೆ ಎಂದು ಹೇಳಬಹುದು.
- CPA (ಕಾಸ್ಟ್ ಪರ್ ಆಕ್ಷನ್) ಅಥವಾ (ಕಾಸ್ಟ್ ಪರ್ ಅಕ್ವಿಸಿಷನ್) ಜಾಹೀರಾತು ಎಂಬುದು ಕಾರ್ಯಕ್ಷಮತೆ ಆಧರಿಸಿದ ವಿಧಾನವಾಗಿದೆ ಮತ್ತು ವ್ಯವಹಾರದ ಅಂಗೀಭೂತವಾದ ಮಾರಾಟಗಾರಿಕಾ ವಿಭಾಗದಲ್ಲಿ ಇದು ಸಾಮಾನ್ಯವಾಗಿದೆ. ಈ ಪಾವತಿ ಯೋಜನೆಯಲ್ಲಿ, ಜಾಹೀರಾತನ್ನು ನಡೆಸುವುದರ ಎಲ್ಲಾ ಅಪಾಯವನ್ನು ಪ್ರಕಾಶಕನಾದವನು ತೆಗೆದುಕೊಳ್ಳುತ್ತಾನೆ ಮತ್ತು ಒಂದು ಖರೀದಿ ಅಥವಾ ಸಹಿ-ಹಾಕುವಿಕೆಯಂಥ ವ್ಯವಹಾರದ ನಿರ್ವಹಣೆಯೊಂದನ್ನು ಪೂರ್ಣಗೊಳಿಸುವ ಬಳಕೆದಾರರ ಮೊತ್ತಕ್ಕೆ ಅಥವಾ ಪ್ರಮಾಣಕ್ಕೆ ಸಂಬಂಧಿಸಿದಂತೆ ಮಾತ್ರವೇ ಜಾಹೀರಾತುದಾರನು ಪಾವತಿಸುತ್ತಾನೆ. ಪತಾಕೆ-ಸ್ವರೂಪದ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಇದು ದರ-ಪಾವತಿಯ ಅತ್ಯುತ್ತಮ ಬಗೆಯಾಗಿದ್ದರೆ, ವಿಧಿಸಲ್ಪಡುವ-ದರಕ್ಕೆ ಸಂಬಂಧಿಸಿದಂತೆ ಕೆಟ್ಟ ಬಗೆಯಾಗಿದೆ.
- ಅದೇ ರೀತಿಯಲ್ಲಿ, CPL (ಕಾಸ್ಟ್ ಪರ್ ಲೀಡ್) ಜಾಹೀರಾತು ವಿಧಾನವು CPA ಜಾಹೀರಾತಿಗೆ ತದ್ರೂಪಿಯಾಗಿದೆ ಮತ್ತು ಒಂದು ನಮೂನೆಯನ್ನು ಪೂರ್ಣಗೊಳಿಸುವ, ಸುದ್ದಿಪತ್ರವೊಂದಕ್ಕಾಗಿ ನೋಂದಾಯಿಸುವ ಅಥವಾ ಮಾರಾಟವೊಂದಕ್ಕೆ ಕಾರಣವಾಗುತ್ತದೆ ಎಂಬುದಾಗಿ ವ್ಯಾಪಾರಿಯು ಭಾವಿಸುವ ಬೇರಾವುದೇ ಕ್ರಮವನ್ನು ಪೂರ್ಣಗೊಳಿಸುವ ಬಳಕೆದಾರನ ಮೇಲೆ ಈ ವಿಧಾನವು ಆಧರಿಸಿದೆ.
- ಇದೇ ರೀತಿಯಲ್ಲಿ ಸಾಮಾನ್ಯವಾಗಿರುವ CPO (ಕಾಸ್ಟ್ ಪರ್ ಆರ್ಡರ್) ಜಾಹೀರಾತು ವಿಧಾನವು, ಪ್ರತಿಬಾರಿಯೂ ಬೇಡಿಕೆಯೊಂದು ನಿರ್ವಹಿಸಲ್ಪಡುವುದರ ಮೇಲೆ ಆಧರಿಸಿದೆ.
- CPE (ಕಾಸ್ಟ್ ಪರ್ ಎಂಗೇಜ್‌ಮೆಂಟ್) ಎಂಬುದು ಕಾಸ್ಟ್ ಪರ್ ಆಕ್ಷನ್ ಬೆಲೆನಿಗದಿಯ ಒಂದು ಸ್ವರೂಪವಾಗಿದ್ದು, 2008ರ ಮಾರ್ಚ್‌ನಲ್ಲಿ ಮೊದಲು ಪರಿಚಯಿಸಲ್ಪಟ್ಟಿತು. ಕಾಸ್ಟ್-ಪರ್-ಇಂಪ್ರೆಷನ್ ಅಥವಾ ಕಾಸ್ಟ್-ಪರ್-ಕ್ಲಿಕ್ ಮಾದರಿಗಳಿಂದ ಪ್ರತ್ಯೇಕವಾಗಿ ನಿಲ್ಲುವ ಒಂದು CPE ಮಾದರಿಯು ಸೂಚಿಸುವ ಅನುಸಾರ, ಜಾಹೀರಾತು ಮುದ್ರಣಗಳು ಉಚಿತವಾಗಿರುತ್ತವೆ ಮತ್ತು ಜಾಹೀರಾತುದಾರರ ನಿರ್ದಿಷ್ಟ ಜಾಹೀರಾತು ಘಟಕದೊಂದಿಗೆ ಓರ್ವ ಬಳಕೆದಾರನು ತೊಡಗಿಸಿಕೊಂಡಾಗ ಮಾತ್ರವೇ ಜಾಹೀರಾತುದಾರರು ಪಾವತಿಸುತ್ತಾರೆ. ಓರ್ವ ಬಳಕೆದಾರನು ಒಂದು ಜಾಹೀರಾತಿನೊಂದಿಗೆ ಎಷ್ಟೇ ಸಂಖ್ಯೆಯ ವಿಧಾನಗಳಲ್ಲಿ ಪರಸ್ಪರ ವರ್ತಿಸುವುದನ್ನು ತೊಡಗಿಸಿಕೊಳ್ಳುವಿಕೆ ಎಂದು ವ್ಯಾಖ್ಯಾನಿಸಲಾಗುತ್ತದೆ.[೩]
- ಕಾಸ್ಟ್ ಪರ್ ಕನ್ವರ್ಷನ್ : ಈ ವಿಧಾನವು ಓರ್ವ ಗ್ರಾಹಕನನ್ನು ಹೊಂದುವುದರ ವೆಚ್ಚವನ್ನು ವಿವರಿಸುತ್ತದೆ; ಜಾಹೀರಾತು ಪ್ರಚಾರವೊಂದರ ಒಟ್ಟು ವೆಚ್ಚವನ್ನು ಮಾರ್ಪಾಡುಗಳ ಸಂಖ್ಯೆಯಿಂದ ಭಾಗಿಸುವ ಮೂಲಕ ಇದನ್ನು ವಿಶಿಷ್ಟವಾಗಿ ಲೆಕ್ಕಹಾಕಲಾಗುತ್ತದೆ. ಸನ್ನಿವೇಶವನ್ನು ಅವಲಂಬಿಸಿ "ಮಾರ್ಪಾಡಿನ" ವ್ಯಾಖ್ಯೆಯು ಬದಲಾಗುತ್ತದೆ: ಕೆಲವೊಮ್ಮೆ ಇದು ಒಂದು ಮಾರ್ಗದರ್ಶನವಾಗಿ, ಒಂದು ಮಾರಾಟವಾಗಿ ಅಥವಾ ಒಂದು ಖರೀದಿಯಾಗಿ ಪರಿಗಣಿಸಲ್ಪಡುತ್ತದೆ.
ವಿಧಗಳು
[ಬದಲಾಯಿಸಿ]ಮೇಲೆ ಕಂಡಂತೆ, ಜಾಹೀರಾತೊಂದರ ಬಳಕೆ ಅಥವಾ ಪರಸ್ಪರ ಪ್ರಭಾವದಿಂದ ಹೊರಹೊಮ್ಮಿದ ಒಂದು ವೆಚ್ಚವನ್ನು ಆನ್‌ಲೈನ್ ಜಾಹೀರಾತಿನ ಒಂದು ದೊಡ್ಡ ಭಾಗವು ಹೊಂದಿದೆಯಾದರೂ, ಕೇವಲ ಒಂದು ಸಲದ ಪಾವತಿಯನ್ನಷ್ಟೇ ಬಯಸುವ ಆನ್‌ಲೈನ್ ಜಾಹೀರಾತಿನ ಇತರ ಕೆಲವು ವಿಧಾನಗಳೂ ಸಹ ಅಸ್ತಿತ್ವದಲ್ಲಿವೆ. ದಿ ಮಿಲಯನ್ ಡಾಲರ್ ಹೋಮ್‌ಪೇಜ್ ಎಂಬುದು ಇದಕ್ಕೆ ಸಂಬಂಧಿಸಿರುವ ಅತ್ಯಂತ ಯಶಸ್ವೀ ಉದಾಹರಣೆಯಾಗಿದೆ. ಇಲ್ಲಿ ಪ್ರತಿ ಪಿಕ್ಸೆಲ್‌ನಷ್ಟು ಜಾಹೀರಾತಿನ ಸ್ಥಳಾವಕಾಶಕ್ಕೆ 1$ನಷ್ಟು ಹಣವನ್ನು ಪಾವತಿಸುವುದು ಸಂದರ್ಶಕರಿಗೆ ಸಾಧ್ಯವಿತ್ತು ಮತ್ತು ಎಲ್ಲಿಯವರೆಗೆ ವೆಬ್‌ಸೈಟ್ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೂ ಯಾವುದೇ ಹೆಚ್ಚುವರಿ ವೆಚ್ಚಗಳನ್ನು ಪಾವತಿಸದೆಯೇ ಅವರ ಜಾಹೀರಾತು ಮೂಲಪುಟದಲ್ಲಿ ಉಳಿದುಕೊಂಡಿರುತ್ತದೆ.
- ತೇಲುವ ಜಾಹೀರಾತು: ಈ ಬಗೆಯ ಜಾಹೀರಾತು ಬಳಕೆದಾರ ಪರದೆಯಲ್ಲಿ ಅಡ್ಡಡ್ಡಲಾಗಿ ಚಲಿಸುತ್ತದೆ ಅಥವಾ ತಾಣದಲ್ಲಿನ ಪಠ್ಯದ ಹೂರಣದ ಮೇಲ್ಭಾಗದಲ್ಲಿ ತೇಲುತ್ತದೆ.
- ವಿಸ್ತರಿಸುವ ಜಾಹೀರಾತು: ಈ ಬಗೆಯ ಜಾಹೀರಾತು ಗಾತ್ರವನ್ನು ಬದಲಾಯಿಸುತ್ತದೆ ಮತ್ತು ವೆಬ್‌ಪುಟದ ಹೂರಣಗಳನ್ನು ಇದು ಮಾರ್ಪಡಿಸಬಹುದು.
- ಸುಶಿಷ್ಟ ಜಾಹೀರಾತು: ದರ್ಶಿಸಲ್ಪಡುತ್ತಿರುವ ಹೂರಣಕ್ಕೆ ಒದಗುವ ಅಡಚಣೆಯನ್ನು ಕನಿಷ್ಟಗೊಳಿಸಲೆಂದು, ದೊಡ್ಡ ಜಾಹೀರಾತೊಂದು ಸಣ್ಣದಾದ ತುಣುಕುಗಳಲ್ಲಿ ಡೌನ್‌ಲೋಡ್ ಮಾಡಲ್ಪಡುವುದನ್ನು ಈ ವಿಧಾನವು ಒಳಗೊಂಡಿದೆ.
- ಭಿತ್ತಿಪತ್ರ ಜಾಹೀರಾತು: ಇದು ವೀಕ್ಷಿಸಲ್ಪಡುತ್ತಿರುವ ಪುಟದ ಹಿನ್ನೆಲೆಯನ್ನು ಬದಲಾಯಿಸುವ ಒಂದು ಜಾಹೀರಾತು ಆಗಿದೆ.
- ಚಮತ್ಕಾರಿಕ ಪತಾಕೆ-ಜಾಹೀರಾತು: ಇದು ಒತ್ತುಗುಂಡಿಗಳನ್ನು ಹೊಂದಿರುವ ಒಂದು ಸಂವಾದ ಪೆಟ್ಟಿಗೆಯಂತೆ ಕಾಣಿಸುವ ಒಂದು ಪತಾಕೆ-ಶೈಲಿಯ ಜಾಹೀರಾತು ಆಗಿದೆ. ಒಂದು ದೋಷ ಸಂದೇಶ ಅಥವಾ ಒಂದು ಎಚ್ಚರಿಕೆಯ ಸೂಚನೆಯನ್ನು ಇದು ಅನುಕರಿಸುತ್ತದೆ.
- ಪಾಪ್-ಅಪ್: ಇದು ಒಂದು ಜಾಹೀರಾತು, ಅಥವಾ ಸಮಗ್ರ ವೆಬ್‌ಪುಟವನ್ನು ಪ್ರದರ್ಶಿಸುತ್ತಿರುವ ಸದ್ಯದ ಕಿಟಕಿಯೊಂದರ ಮುಂಭಾಗದಲ್ಲಿ ತೆರೆದುಕೊಳ್ಳುವ ಒಂದು ಹೊಸ ಕಿಟಕಿಯಾಗಿದೆ.
- ಪಾಪ್-ಅಂಡರ್: ಸದ್ಯಕ್ಕೆ ಚಾಲನೆಯಲ್ಲಿರುವ ಕಿಟಕಿಯ ಹಿಂಭಾಗದಲ್ಲಿ ತುಂಬಿಸಲ್ಪಡುತ್ತದೆ ಅಥವಾ ಕಳಿಸಲ್ಪಡುತ್ತದೆ ಎಂಬುದನ್ನು ಹೊರತುಪಡಿಸಿದರೆ ಇದು ಒಂದು ಪಾಪ್-ಅಪ್ ಕಿಟಕಿಯನ್ನು ಹೋಲುತ್ತದೆ; ಈ ವಿಶಿಷ್ಟತೆಯಿಂದಾಗಿ, ಬಳಕೆದಾರನು ಒಂದು ಅಥವಾ ಹೆಚ್ಚು ಸಕ್ರಿಯ ಕಿಟಕಿಗಳನ್ನು ಮುಚ್ಚುವವರೆಗೂ ಪಾಪ್-ಅಂಡರ್ ಕಿಟಕಿಯನ್ನು ನೋಡುವುದಿಲ್ಲ.
- ದೃಶ್ಯಭಾಗದ ಜಾಹೀರಾತು: ಇದರಲ್ಲಿ ಒಂದು ಸ್ಥಿರ ಅಥವಾ ಸಜೀವ ಚಿತ್ರಿಕೆಯ ಬಿಂಬದ ಬದಲಿಗೆ, ವಾಸ್ತವಿಕವಾದ ಚಲಿಸುವ ದೃಶ್ಯಭಾಗದ ತುಣುಕುಗಳು ಪ್ರದರ್ಶಿಸಲ್ಪಡುತ್ತವೆ ಎಂಬುದನ್ನು ಹೊರತುಪಡಿಸಿದರೆ, ಇದು ಒಂದು ಪತಾಕೆ-ಸ್ವರೂಪದ ಜಾಹೀರಾತನ್ನು ಹೋಲುತ್ತದೆ. ಇದು ದೂರದರ್ಶನದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಜಾಹೀರಾತಿನ ಬಗೆಯಾಗಿದೆ, ಮತ್ತು ದೂರದರ್ಶನ ಹಾಗೂ ಆನ್‌ಲೈನ್ ಜಾಹೀರಾತುಗಳೆರಡಕ್ಕೂ ಸಂಬಂಧಿಸಿದಂತೆ ಅನೇಕ ಜಾಹೀರಾತುದಾರರು ಅದೇ ತುಣುಕುಗಳನ್ನು ಬಳಸುತ್ತಾರೆ.
- ನಕ್ಷೆಯ ಜಾಹೀರಾತು: ಗೂಗಲ್ ನಕ್ಷೆಗಳಂಥ ಒಂದು ವಿದ್ಯುನ್ಮಾನ ನಕ್ಷೆಯಲ್ಲಿನ ಒಂದು ತಾಣದಲ್ಲಿರುವ ಅಥವಾ ಅದರ ಮೇಲೆ ಕಾಣಿಸುವ ಮತ್ತು ಅದರಿಂದ ಸಂಪರ್ಕಿಸಲ್ಪಡುವ ಪಠ್ಯ ಅಥವಾ ರೇಖಾಚಿತ್ರಗಳು ಇದರಲ್ಲಿ ಸೇರುತ್ತವೆ.
- ಮೊಬೈಲ್ ಜಾಹೀರಾತು: ಇದು ಒಂದು ಸೆಲ್‌ಫೋನ್‌ಗೆ ಕಳಿಸಲ್ಪಡುವ ಒಂದು SMS ಪಠ್ಯ ಅಥವಾ ಮಲ್ಟಿ-ಮೀಡಿಯಾ ಸಂದೇಶವಾಗಿರುತ್ತದೆ.
- ಸೂಪರ್‌ಸ್ಟಿಷಿಯಲ್: ಇದು ಎನ್‌ಲಿವೆನ್ ಮಾರ್ಕೆಟಿಂಗ್ ಟೆಕ್ನಾಲಜೀಸ್‌ಗೆ ಸೇರಿದ ವೆಬ್ ಪುಟವೊಂದರ ಮೇಲಿರುವ ಒಂದು ಸಜೀವ ಚಿತ್ರಿಕೆಯ ಜಾಹೀರಾತು ಆಗಿದೆ. TV-ರೀತಿಯಲ್ಲಿನ ಒಂದು ಜಾಹೀರಾತನ್ನು ಒದಗಿಸಲು, ಇದು ದೃಶ್ಯಭಾಗ, 3D ಹೂರಣ ಅಥವಾ ಫ್ಲ್ಯಾಶ್ ಸ್ವರೂಪವನ್ನು ಬಳಸುತ್ತದೆ. ಯೂನಿಕ್ಯಾಸ್ಟ್ ಟ್ರಾನ್ಸಿಷನಲ್ ಜಾಹೀರಾತುಗಳು ಎಂಬ ಹೆಸರಿನಿಂದ ಬಳಸಲ್ಪಡುತ್ತಿದ್ದ ಇವು ಮೂಲತಃ ಯೂನಿಕ್ಯಾಸ್ಟ್ ಕಮ್ಯುನಿಕೇಷನ್ಸ್ ವತಿಯಿಂದ ರೂಪಿಸಲ್ಪಟ್ಟಿದ್ದವು; ಆದರೆ 2004ರಲ್ಲಿ ಈ ಕಂಪನಿಯನ್ನು ವ್ಯೂಪಾಯಿಂಟ್ ಕಾರ್ಪೊರೇಷನ್ ಕಂಪನಿಯು ಸ್ವಾಧೀನಪಡಿಸಿಕೊಂಡ ನಂತರ, 2008ರಲ್ಲಿ ಇದರ ಹೆಸರು ಎನ್‌ಲಿವೆನ್ ಎಂಬುದಾಗಿ ಬದಲಾಯಿಸಲ್ಪಟ್ಟಿತು.[೪]
- ತೆರಪಿನ ಜಾಹೀರಾತು: ಇದು ಓರ್ವ ಬಳಕೆದಾರನು ತನ್ನ ಮೂಲ ಗಮ್ಯಸ್ಥಾನವನ್ನು ತಲುಪುವುದಕ್ಕೆ ಮುಂಚಿತವಾಗಿ ಕಾಣಿಸುವ ಒಂದು ಪೂರ್ಣ-ಪುಟದ ಜಾಹೀರಾತು ಆಗಿದೆ.
ಇದರ ಜೊತೆಗೆ, ಪ್ರವಹಿಸುತ್ತಿರುವ ದೃಶ್ಯಭಾಗ ಅಥವಾ ಪ್ರವಹಿಸುತ್ತಿರುವ ಶ್ರವ್ಯಭಾಗವನ್ನು ಒಳಗೊಂಡಿರುವ ಜಾಹೀರಾತುಗಳು, ಜಾಹೀರಾತುದಾರರ ವಲಯದಲ್ಲಿ ಅತ್ಯಂತ ಜನಪ್ರಿಯವಾಗುತ್ತಿವೆ.
ಇ-ಮೇಲ್ ಜಾಹೀರಾತು
[ಬದಲಾಯಿಸಿ]ಶಾಸನಬದ್ಧ ಇ-ಮೇಲ್ ಜಾಹೀರಾತು ಅಥವಾ ಇ-ಮೇಲ್ ಮಾರಾಟಗಾರಿಕೆ ಎಂಬುದು, ಕಳಪೆ ವಿಷಯದಿಂದ ಅದನ್ನು ಪ್ರತ್ಯೇಕಿಸಲೆಂದು "ಆಯ್ದುಕೊಳ್ಳಲಾಗುವ ಇ-ಮೇಲ್ ಜಾಹೀರಾತು" ಎಂಬುದಾಗಿ ಅನೇಕವೇಳೆ ಕರೆಯಲ್ಪಡುತ್ತದೆ.
ಅಂಗೀಭೂತವಾದ ಮಾರಾಟಗಾರಿಕೆ
[ಬದಲಾಯಿಸಿ]ಅಂಗೀಭೂತವಾದ ಮಾರಾಟಗಾರಿಕೆ ಎಂಬುದು ಆನ್‌ಲೈನ್ ಜಾಹೀರಾತಿನ ಒಂದು ಸ್ವರೂಪವಾಗಿದ್ದು, ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸಣ್ಣ (ಮತ್ತು ದೊಡ್ಡ) ಪ್ರಕಾಶಕರೊಂದಿಗೆ ಜಾಹೀರಾತುದಾರರು ಪ್ರಚಾರವನ್ನು ಪ್ರಕಟಿಸುತ್ತಾರೆ; ಜಾಹೀರಾತುದಾರನೆಡೆಗೆ ದಟ್ಟಣೆಯು ಒಗ್ಗೂಡಿಸಲ್ಪಟ್ಟಾಗ ಅಥವಾ ಜಮಾವಣೆಗೊಂಡಾಗ ಮಾತ್ರವೇ, ಮತ್ತು ಒಂದು ನಿರ್ದಿಷ್ಟವಾದ ಅಳೆಯಬಹುದಾದ ಪ್ರಚಾರ ಫಲಿತಾಂಶವು (ಒಂದು ನಮೂನೆ, ಒಂದು ಮಾರಾಟ, ಒಂದು ಸಹಿ-ಹಾಕುವಿಕೆ, ಇತ್ಯಾದಿ.) ಸಿಕ್ಕಿದ ನಂತರವಷ್ಟೇ ಸದರಿ ಪ್ರಕಾಶಕರಿಗೆ ಪಾವತಿಸಲಾಗುತ್ತದೆ. ಇಂದು, ಒಂದು ಅಂಗೀಭೂತವಾದ ಜಾಲದೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದ ಮೂಲಕ ಇದನ್ನು ಸಾಮಾನ್ಯವಾಗಿ ನೆರವೇರಿಸಲಾಗುತ್ತದೆ. ಅಂಗೀಭೂತವಾದ ಮಾರಾಟಗಾರಿಕೆ ಎಂಬುದನ್ನು CDNow.com 1994ರಲ್ಲಿ ಆವಿಷ್ಕರಿಸಿತು ಮತ್ತು Amazon.com ತಾಣವು ಅಸೋಸಿಯೇಟ್ ಪ್ರೋಗ್ರ್ಯಾಂ ಎಂದು ಕರೆಯಲಾಗುವ ತನ್ನ ಅಂಗೀಭೂತವಾದ ಕಾರ್ಯಸೂಚಿಯನ್ನು 1996ರಲ್ಲಿ ಪರಿಚಯಿಸಿದಾಗ, ಈ ವಿಧಾನವು ಅತಿಶಯಿಸಲ್ಪಟ್ಟಿತು. ಕಡಿಮೆ ವೆಚ್ಚದಲ್ಲಿ ಬ್ರಾಂಡ್‌ನ ಪ್ರಕಟಪಡಿಸುವಿಕೆಯನ್ನು ಸೃಷ್ಟಿಸಲೆಂದು ಸದರಿ ಆನ್‌ಲೈನ್ ಚಿಲ್ಲರೆ ವ್ಯಾಪಾರಿಯು ತನ್ನ ಕಾರ್ಯಸೂಚಿಯನ್ನು ಬಳಸಿಕೊಂಡಿತು ಮತ್ತು ಅದೇ ವೇಳೆಗೆ ಸಣ್ಣ ವೆಬ್‌ಸೈಟ್‌ಗಳು ಒಂದಷ್ಟು ಪೂರಕವಾದ ಆದಾಯವನ್ನು ಗಳಿಸುವ ಒಂದು ವಿಧಾನವನ್ನೂ ಇದು ಒದಗಿಸಿತು.
ವರ್ತನೆಯ ಉದ್ದೇಶಿಸುವಿಕೆ
[ಬದಲಾಯಿಸಿ]ಸಂದರ್ಭೋಚಿತ ಉದ್ದೇಶಿಸುವಿಕೆಯ ಜೊತೆಯಲ್ಲಿ, ಓರ್ವ ಬಳಕೆದಾರನ ಹಿಂದಿನ ಕ್ಲಿಕ್-ಹರಿವನ್ನು ಆಧರಿಸಿಸಿಯೂ ಆನ್‌ಲೈನ್ ಜಾಹೀರಾತನ್ನು ಉದ್ದೇಶಿಸಬಹುದು. ಉದಾಹರಣೆಗೆ, ಬಳಕೆದಾರನ ಕಂಪ್ಯೂಟರ್‌ನಲ್ಲಿ ಶೇಖರಿಸಲ್ಪಟ್ಟಿರುವ, ಕುಕಿಗಳಿಂದ ಅನುವುಗೊಳಿಸಲ್ಪಟ್ಟಿರುವ ಕ್ಲಿಕ್-ಹರಿವಿನ ವಿಶ್ಲೇಷಣೆಯನ್ನು ಆಧರಿಸಿದ, ಮೋಟಾರು ವಾಹನಗಳಿಗೆ ಸಂಬಂಧಿಸಿದ ಕೊಳ್ಳುವಿಕೆ / ಹೋಲಿಕೆಯ ಹಲವಾರು ತಾಣಗಳನ್ನು ಒಂದು ವೇಳೆ ಓರ್ವ ಬಳಕೆದಾರನು ಇತ್ತೀಚೆಗಷ್ಟೇ ಸಂದರ್ಶಿಸಿದ್ದರೆ, ಸದರಿ ಬಳಕೆದಾರನು ಬೇರೆಯ, ಮೋಟಾರು ವಾಹನಗಳಿಗೆ ಸಂಬಂಧಿಸಿರದ ತಾಣಗಳನ್ನು ಸಂದರ್ಶಿಸಿದಾಗ ಅವನಿಗೆ ವಾಹನ-ಸಂಬಂಧಿತ ಜಾಹೀರಾತುಗಳನ್ನು ಪೂರೈಕೆ ಮಾಡಲು ಸಾಧ್ಯವಿದೆ.
ಲಾಕ್ಷಣಿಕ ಜಾಹೀರಾತು
[ಬದಲಾಯಿಸಿ]ಲಾಕ್ಷಣಿಕ ಜಾಹೀರಾತು ಎಂಬುದು ವೆಬ್ ಪುಟಗಳಿಗೆ ಲಾಕ್ಷಣಿಕ ವಿಶ್ಲೇಷಣೆಯ ಕೌಶಲಗಳನ್ನು ಅನ್ವಯಿಸುತ್ತದೆ. ಪುಟದ ಅರ್ಥ ಮತ್ತು/ಅಥವಾ ಮುಖ್ಯ ವಿಷಯವನ್ನು ನಿಖರವಾಗಿ ಅರ್ಥೈಸಲು ಮತ್ತು ವರ್ಗೀಕರಿಸಲು ಹಾಗೂ ನಂತರದಲ್ಲಿ ಅದನ್ನು ಉದ್ದೇಶಿತ ಜಾಹೀರಾತು ಜಾಗಗಳಿಂದ ತುಂಬಿಸಲು ಈ ಪ್ರಕ್ರಿಯೆಯು ಮೀಸಲಾಗಿರುತ್ತದೆ. ಜಾಹೀರಾತಿಗೆ ಹೂರಣವನ್ನು ನಿಕಟವಾಗಿ ಸಂಪರ್ಕಿಸುವ ಮೂಲಕ, ಜಾಹೀರುಗೊಳಿಸಿದ ಉತ್ಪನ್ನ ಅಥವಾ ಸೇವೆಯಲ್ಲಿ ನೋಡುಗನು ಒಂದು ಆಸಕ್ತಿಯನ್ನು (ಅಂದರೆ, ತೊಡಗಿಸಿಕೊಳ್ಳುವಿಕೆಯ ಮೂಲಕ) ತೋರಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಭಾವಿಸಲಾಗುತ್ತದೆ.
ಜಾಹೀರಾತು ಸರ್ವರ್ ಮಾರುಕಟ್ಟೆಯ ಸ್ವರೂಪ
[ಬದಲಾಯಿಸಿ]ಅಗ್ರಗಣ್ಯರಾಗಿರುವ 2008ರಲ್ಲಿನ ಜಾಹೀರಾತು ಸರ್ವರ್ ಮಾರಾಟಗಾರರ ಪಟ್ಟಿಯೊಂದನ್ನು ಈ ಕೆಳಗೆ ನೀಡಲಾಗಿದ್ದು, ಆಟ್ರಿಬ್ಯೂಟರ್ ಸಮೀಕ್ಷೆಯೊಂದರಲ್ಲಿ ಪ್ರಕಟಿಸಲ್ಪಟ್ಟ Archived 2008-05-05 ವೇಬ್ಯಾಕ್ ಮೆಷಿನ್ ನಲ್ಲಿ. ನೋಡುಗರ ಸಂಖ್ಯೆಯ ಅಂಕಿ-ಅಂಶಗಳು ದಶಲಕ್ಷಗಳಲ್ಲಿ ಇರುವುದನ್ನು ಇದು ಒಳಗೊಂಡಿದೆ. 2008ರಿಂದಲೂ ಗೂಗಲ್ ಕಂಪನಿಯು ಆನ್‌ಲೈನ್ ಜಾಹೀರಾತು ಮಾರುಕಟ್ಟೆಯ 69%ನಷ್ಟು ಅಂದಾಜಿಸಲ್ಪಟ್ಟ ಭಾಗವನ್ನು ನಿಯಂತ್ರಿಸುತ್ತಿದೆ.[೫]
ಮಾರಾಟಗಾರ | ಜಾಹೀರಾತು ನೋಡುಗರು (ದಶಲಕ್ಷಗಳಲ್ಲಿ) |
---|---|
ಗೂಗಲ್ | 1,118 |
ಡಬಲ್‌ಕ್ಲಿಕ್ (ಗೂಗಲ್) | 1,079 |
ಯಾಹೂ! | 362 |
MSN (ಮೈಕ್ರೋಸಾಫ್ಟ್) | 309 |
AOL | 156 |
ಆಡ್‌ಬ್ರೈಟ್ | 73 |
ಒಟ್ಟು | 3,087 |
3.1 ಶತಕೋಟಿ $ನಷ್ಟಿರುವ ಒಂದು ಪರಿಗಣನಾರ್ಹ ಮೊತ್ತಕ್ಕೆ ಗೂಗಲ್ ಕಂಪನಿಯು ಡಬಲ್‌ಕ್ಲಿಕ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು. 68 ದಶಲಕ್ಷ ಕ್ಷೇತ್ರಗಳಷ್ಟಿರುವ Archived 2011-11-24 ವೇಬ್ಯಾಕ್ ಮೆಷಿನ್ ನಲ್ಲಿ. ಮಾದರಿಯೊಂದನ್ನು ಮೇಲಿನ ಸಮೀಕ್ಷೆಯು ಆಧರಿಸಿತ್ತು.
ಇವನ್ನೂ ನೋಡಿ
[ಬದಲಾಯಿಸಿ]- ಉದ್ಯಮದ ಲೆಕ್ಕಾಚಾರಗಳು:
- ಕ್ಲಿಕ್ ಥ್ರೂ ರೇಟ್ (CTR)
- ಕಾಸ್ಟ್ ಪರ್ ಆಕ್ಷನ್ (CPA)
- ಎಫೆಕ್ಟಿವ್ ಕಾಸ್ಟ್ ಪರ್ ಆಕ್ಷನ್ (eCPA)
- ಕಾಸ್ಟ್ ಪರ್ ಕ್ಲಿಕ್ ಅಥವಾ ಪೇ ಪರ್ ಕ್ಲಿಕ್ (CPC ಅಥವಾ PPC)
- ಕಾಸ್ಟ್ ಪರ್ ಇಂಪ್ರೆಷನ್ (CPI)
- ಕಾಸ್ಟ್ ಪರ್ ಮಿಲ್ಲೆ (CPM), ಇದು ಕಾಸ್ಟ್ ಪರ್ ಥೌಸಂಡ್ (CPT) ಎಂಬುದಾಗಿಯೂ ಪರಿಚಿತವಾಗಿದೆ.
- ಎಫೆಕ್ಟಿವ್ ಕಾಸ್ಟ್ ಪರ್ ಮಿಲ್ಲೆ (eCPM)
- ಕಾಸ್ಟ್ ಪರ್ ಮಿಲ್ಲೆ (CPM), ಇದು ಕಾಸ್ಟ್ ಪರ್ ಥೌಸಂಡ್ (CPT) ಎಂಬುದಾಗಿಯೂ ಪರಿಚಿತವಾಗಿದೆ.
- ವರ್ಗೀಕೃತ ಜಾಹೀರಾತು
- ವೆಬ್ ಜಾಹೀರಾತು:
- ಜಾಹೀರಾತು ಶೋಧಿಸುವಿಕೆ
- ಜಾಹೀರಾತು ಜಾಲ
- ವಸ್ತುವಿನ ಮಾರಾಟಗಾರಿಕೆ
- ಅಂಗೀಭೂತವಾದ ಮಾರಾಟಗಾರಿಕೆ
- ಕೇಂದ್ರಸ್ಥ ಜಾಹೀರಾತು ಸರ್ವರ್
- ಕ್ಲಿಕ್ ವಂಚನೆ
- ಡಾಟ್ ಜಾಹೀರಾತುಗಳು
- ಪಠ್ಯಾಂತರ್ಗತ ಜಾಹೀರಾತು
- ಆನ್‌ಲೈನ್ ವರ್ಗೀಕೃತ ಜಾಹೀರಾತು
- ಅನ್ಯ ದತ್ತಾಂಶ ಸ್ಥಾಪನೆ
- ಪೇ ಪರ್ ಕ್ಲಿಕ್
- ಪೇ ಪರ್ ಪ್ಲೇ
- ಕಾರ್ಯಕ್ಷಮತೆ-ಆಧರಿಸಿದ ಜಾಹೀರಾತು
- ಪಾಪ್-ಅಪ್ ಜಾಹೀರಾತು
- ಲಾಕ್ಷಣಿಕ ಜಾಹೀರಾತು
- ಟ್ರೈಬಲ್ ಫ್ಯೂಷನ್ (ಜಾಹೀರಾತು ಜಾಲ)
- ಯೂನಿಕ್ಯಾಸ್ಟ್ ಜಾಹೀರಾತು
- ವೆಬ್ ಪತಾಕೆ ಜಾಹೀರಾತು
- ಇ-ಮೇಲ್ ಜಾಹೀರಾತು:
- ಇ-ಮೇಲ್ ಕಳಪೆ ವಿಷಯ
- ಆಯ್ದುಕೊಳ್ಳಬಹುದಾದ ಇ-ಮೇಲ್ ಜಾಹೀರಾತು
- ಸ್ಪ್ಯಾಮಿಂಗ್
- ಶೋಧಕ ಸಾಧನಗಳು
- ಶೋಧಕ ಸಾಧನ ಮಾರಾಟಗಾರಿಕೆ (ಸರ್ಚ್ ಎಂಜಿನ್ ಮಾರ್ಕೆಟಿಂಗ್-SEM)
- ಶೋಧಕ ಸಾಧನ ಗರಿಷ್ಠೀಕರಣ (ಸರ್ಚ್ ಎಂಜಿನ್ ಆಪ್ಟಿಮೈಸೇಷನ್-SEO)
- ಮೊಬೈಲ್ ಜಾಹೀರಾತು
- ಮೊಬೈಲ್ ಮಾರಾಟಗಾರಿಕೆ
- ಮೊಬೈಲ್ ಅಭಿವೃದ್ಧಿ
- WAP
ಉಲ್ಲೇಖಗಳು
[ಬದಲಾಯಿಸಿ]- ↑ http://modernl.com/article/ethical-blogging-101 Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ. Modern Life: Ethical Blogging 101
- ↑ http://taco.dubfire.net/ Archived 2010-06-11 ವೇಬ್ಯಾಕ್ ಮೆಷಿನ್ ನಲ್ಲಿ. TACO, the Targeted Advertising Cookie Opt-Out Firefox extension
- ↑ "ಆಡ್‌ವೀಕ್". Archived from the original on 2010-02-25. Retrieved 2010-11-18.
- ↑ "ಆರ್ಕೈವ್ ನಕಲು". Archived from the original on 2013-03-05. Retrieved 2021-08-24.
- ↑ "68 ದಶಲಕ್ಷ ಕ್ಷೇತ್ರಗಳು". Archived from the original on 2011-11-24. Retrieved 2010-11-18.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2009) |