ವಿಷಯಕ್ಕೆ ಹೋಗು

ಈ-ಮೇಲ್ ಮಾರಾಟತಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Internet Marketing ಈ-ಮೇಲ್ ಮಾರಾಟತಂತ್ರ ವು ಒಂದು ವಿಧವಾದ ನೇರ ಮಾರಾಟದ ರೀತಿಯಾಗಿದ್ದು ಇದು ಎಲೆಕ್ಟ್ರಾನಿಕ್ ಅಂಚೆಯನ್ನು ವಾಣಿಜ್ಯಪರ ಅಥವಾ ಹಣಸಂಗ್ರಹದ ಸಲುವಾಗಿ ಸಂದೇಶಗಳನ್ನು ತನ್ನ ಶ್ರೋತೃಗಳಿಗೆ ಕಳುಹಿಸುವ ಸಂಪರ್ಕ ಸಾಧನವಾಗಿ ಉಪಯೋಗಿಸುತ್ತದೆ. ಸ್ಥೂಲವಾಗಿ ನೋಡಿದರೆ, ಮುಂದೆ ಗಿರಾಕಿಯಾಗಲು ಅರ್ಹನಾದ ಗಿರಾಕಿಗೆ ಅಥವಾ ಈಗ ಿರುವ ಗಿರಾಕಿಗೆ ಕಳುಹಿಸಿದ ಪ್ರತಿ ಈ-ಮೇಲ್ ಅನ್ನೂ ಈ-ಮೇಲ್ ಮಾರಾಟತಂತ್ರ ಎನ್ನಬಹುದು. ಆದರೆ, ಆ ಪದವನ್ನು ಸಾಮಾನ್ಯವಾಗಿ ಇವುಗಳನ್ನು ಕುರಿತು ಬಳಸಲಾಗುವುದು:

  • ವರ್ತಕನು ತನ್ನ ಈಗಿನ ಅಥವಾ ಹಿಂದಿನ ಗಿರಾಕಿಗಳೊಂದಿಗೆ ಹೊಂದಿರುವ ಸಂಪರ್ಕವನ್ನು ವೃದ್ಧಿಗೊಳಿಸಲು ಈ-ಮೇಲ್ ಗಳನ್ನು ಕಳುಹಿಸುವುದು ಮತ್ತು ತನ್ಮೂಲಕ ಗಿರಾಕಿ-ನಿಷ್ಠತೆ ಮತ್ತು ಪುನರ್ವ್ಯಾಪಾರಗಳನ್ನು ವೃದ್ಧಿಸುವುದು,
  • ಹೊಸ ಗಿರಾಕಿಗಳನ್ನು ಹೊಂದುವ ಸಲುವಾಗಿ ಅಥವಾ ಈಗಿನ ಗಿರಾಕಿಗಳೇ ಬೇಗನೆ ಯಾವುದಾದರೂ ವಸ್ತುಗಳನ್ನು ಕೊಳ್ಳಲು ಒಡಂಬಡಿಸುವ ಸಲುವಾಗಿ ಈ-ಮೇಲ್ ಗಳನ್ನು ಕಳುಹಿಸುವುದು,
  • ಇತರೆ ಕಂಪನಿಗಳು ತಮ್ಮ ಗಿರಾಕಿಗಳಿಗೆಂದು ಕಳುಹಿಸಿದ ಈ-ಮೇಲ್ ಗಳಿಗೆ ಜಾಹಿರಾತುಗಳನ್ನು ಸೇರಿಸುವುದು, ಮತ್ತು
  • ಈ-ಮೇಲ್ ಅಂತರಜಾಲದ ಹೊರತಾಗಿಯೂ ಇದ್ದಿತ್ತು ಮತ್ತು ಇದೆಯಾದ್ದರಿಂದ, ಅಂತರಜಾಲದ ಮೂಲಕ ಈ-ಮೇಲ್ ಗಳನ್ನು ಕಳುಹಿಸುವುದು(ಉದಾಹರಣೆ., ಅಂತರಜಾಲ ಈ-ಮೇಲ್ ಮತ್ತು FIDO.

ಸಂಶೋಧಕರ ಅಂದಾಜಿನ ಪ್ರಕಾರ 2006ರಲ್ಲಿ ಯುನೈಟೆಡ್ ಸ್ಟೇಟ್ಸ್ ಒಂದರಲ್ಲಿಯೇ US$400 ಮಿಲಿಯನ್ ಗೂ ಹೆಚ್ಚು ಹಣವನ್ನು ಈ-ಮೇಲ್ ಮಾರಾಟತಂತ್ರಕ್ಕಾಗಿ ಖರ್ಚು ಮಾಡಲಾಯಿತು.[]

ಸಾಂಪ್ರದಾಯಕ ಅಂಚೆಯೊಡನೆ ಹೋಲಿಕೆ

[ಬದಲಾಯಿಸಿ]

ಸಾಂಪ್ರದಾಯಿಕ (ರೂಢಿಯಲ್ಲಿರುವ) ಜಾಹಿರಾತು ಅಂಚೆಗೆ ಈ-ಮೇಲ್ ಅನ್ನು ಹೋಲಿಸಿದಾಗ ಅನುಕೂಲಗಳು ಇರುವಂತೆಯೇ ಅನಾನುಕೂಲಗಳೂ ಕಂಡುಬರುತ್ತವೆ.

ಪ್ರಯೋಜನಗಳು

[ಬದಲಾಯಿಸಿ]

(ಅಂತರಜಾಲದ ಮೂಲಕ)ಈ-ಮೇಲ್ ವ್ಯಾಪಾರವು ಕಂಪನಿಗಳಿಗೆ ಹಲವಾರು ಕಾರಣಗಳಿಂದ ಪ್ರಿಯವಾಗಿದೆ:

  • ಅಂಚೆ ಯಾರಿಗೆ ತಲುಪಬೇಕೋ ಅವರ ಪಟ್ಟಿಯು ವಿವಿಧ ಸ್ಥಳ,ಸ್ತರಗಳಲ್ಲಿರುವ ಹಾಗೂ ಆ ಜಾಹಿರಾತುಗಳಿಗೆ ಸೂಕ್ತವಾದ,ಕೊಳ್ಳಲು ಸಮರ್ಥರಾದ ಜನರಿಗೆ ಮಾಹಿತಿಯನ್ನು ಕಡಿಮೆ ಖರ್ಚಿನಲ್ಲಿ ವಿತರಿಸಲು ಸಾಧ್ಯವಾಗುತ್ತದೆ.
  • [ನೇರ ಅಂಚೆ]ಅಥವಾ[ಮುದ್ರಿತ ಸುದ್ದಿಬರಹಪತ್ರ]ಗಳಂತಹ ಇತರ ಮಾಧ್ಯಮಗಳ ಮೇಲೆ ಬಂಡವಾಳ ಹೂಡುವುದಕ್ಕೆ ಹೋಲಿಸಿದರೆ,ಈ-ಮೇಲ್ ಗೆ ಕಡಿಮೆ ವೆಚ್ಚ ತಗಲುತ್ತದೆ.
  • ಹೂಡಿದ[ಬಂಡವಾಳದಕ್ಕೆ ದಕ್ಕಿದ ಲಾಭ]ದ ನಿಖರ ಮಾಹಿತಿಯು ಪತ್ತೆಯಾಗುವುದು ("ಟ್ರ್ಐಕ್ ಟು ಬ್ಯಾಸ್ಕೆಟ್" ವಿಧದಿಂದ) ಮತ್ತು ಸರಿಯಾಗಿ ಈ-ಮೇಲ್ ತಂತ್ರವನ್ನು ಅಳವಡಿಸಿಕೊಂಡಾಗ ಈ ಲಾಭಾಂಶವು ಹೆಚ್ಚಾಗಿರುವುದು ಸಾಬೀತಾಗಿದೆ.[ಶೋಧ ಮಾರಾಟತಂತ್ರ(ಸರ್ಚ್ ಮಾರ್ಕೆಟಿಂಗ್)] ನಂತರ ಈ-ಮೇಲ್ ಮಾರಾಟತಂತ್ರವೇ ಅತ್ಯಂತ ಪರಿಣಾಮಕಾರಿ ಆನ್-ಲೈನ್ ಮಾರಾಟತಂತ್ರವೆಂದು ಆಗಾಗ್ಗೆ ವರದಿಯಾಗಿದೆ.
  • ಅಂಚೆಯ ಮೂಲಕ ಕಳುಹಿಸುವ ಜಾಹಿರಾತುಗಳು ಗಿರಾಕಿಗಳಿಗೆ ತಲುಪಲು ತಗಲುವ ಸಮಯ(ಎಂದರೆ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳು)ಕ್ಕೆ ಹೋಲಿಸಿದರೆ ಈ-ಮೇಲ್ ಮೂಲಕ ಸಂದೇಶ ಕಳುಹಿಸಲು ತಗಲುವ ಸಮಯ ಬಹಳ ಕಡಿಮೆ(ಎಂದರೆ ಸೆಕೆಂಡ್ ಗಳು ಅಥವಾ ನಿಮಿಸಗಳಷ್ಟೆ)
  • ವೆಬ್-ಸೈಟ್ ಆಧಾರಿತ ಜಾಹಿರಾತು ನೀಡುವಿಕೆಯ ತಂತ್ರದಲ್ಲಿ ಗಿರಾಕಿಯೇ ಆ ವೆಬ್-ಸೈಟ್ ಗೆ ಭೇಟಿ ನೀಡುವುದಾಗಬೇಕು; ಆದರೆ ಈ-ಮೇಲ್ ತಂತ್ರವು ಜಾಹಿರಾತುದಾರನು ತನ್ನ ಸಂದೇಶವನ್ನು ನೋಡುಗರಿಗೆ "ತಳ್ಳಲು" ಅವಕಾಶವಿದೆ.
  • ಈ-ಮೇಲ್ ಸಂದೇಶಗಳನ್ನು ಬಹಳ ಸುಲಭವಾಗಿ ಅನುಸರಿಸಿ ಹಿಡಿಯಬಹುದು. ಜಾಹಿರಾತುದಾರರು [ಸ್ವಯಂಪ್ರತಿಕ್ರಿಯಿಸುವವರು(ಆಟೋರೆಸ್ಪಾಂಡರ್ಸ್)], [ವೆಬ್ ಬಗ್ ಗಳು],[ಹಿಂದಿರುಗಿದ ಸಂದೇಶಗಳು(ಬೌನ್ಸ್ ಮೆಸೇಜಸ್)], ಕಳುಹಿಸಬೇಡಿರಿ ಎಂಬ ಬೇಡಿಕೆ(ಅನ್ ಸಬ್ಸ್ ಕ್ರೈಬ್ ರಿಕ್ವೆಸ್ಟ್ಸ್),[ಸ್ವೀಕರಿಸುದುದನ್ನು ಓದಿದುದು(ರೆಡ್ ರಿಸೀಪ್ಟ್ಸ್)],[ಕ್ಲಿಕ್ ಮಾಡಿ ಸಾಗುವಂತಹವರು(ಕ್ಲಿಕ್-ಥ್ರೂಸ್)], ಇತ್ಯಾದಿಗಳ ಮೂಲಕ ತಮ್ಮ ಜಾಹಿರಾತಿನ [ಜಾಡನ್ನು ಪತ್ತೆ ಹಚ್ಚಬಹುದು].ಈ ತಂತ್ರಾಂಶಗಳ ಮೂಲಕ [ಮುಕ್ತ ದರಗಳು], ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರತಿಕ್ರಿಯೆಗಳ ಮಾಹಿತಿ ದೊರೆತು,ತನ್ಮೂಲಕ ಮಾರಾಟತಂತ್ರಕ್ಕೆ ಬೇಕಾದ ರೀತಿಯಲ್ಲಿ ತಮ್ಮ ಹಂಚಿಕೆಗಳನ್ನು ರೂಪಿಸಿಕೊಳ್ಳಬಹುದು.
  • ಜಾಹಿರಾತುದಾರರು ತಾನಾಗಿಯೇ, ಭರಿಸಲು ಸುಲಭವಾದ ವೆಚ್ಚದಲ್ಲಿ ಪುನರ್ವ್ಯಾಪಾರವನ್ನು ಹೊಂದಬಹುದು.
  • ತಮಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ಈ-ಮೇಲ್ ಸಂಪರ್ಕದ ಮೂಲಕ ಸಂದೇಶಗಳನ್ನು ಸ್ವೀಕರಿಸಲು ಒಪ್ಪಿರುವ ಗಣನೀಯ ಪ್ರಮಾಣದಷ್ಟು ಜನರನ್ನು ಜಾಹಿರಾತುದಾರರು ಈ-ಮೇಲ್ ಮೂಲಕ ಸಂಪರ್ಕಿಸಬಹುದು.
  • [ಅಂತರಜಾಲ] ಉಪಯೋವಿಸುವವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಮಾಮೂಲಿ ದಿನಗಳಲ್ಲಿ ಈ-ಮೇಲನ್ನು ಓದುತ್ತಾರೆ ಅಥವಾ ಕಳುಹಿಸುತ್ತಾರೆ.
  • ಸಂದೇಶಗಳಿಗೆ ಹೊಮ್ಮುವಂತಹ ನಿರ್ದಿಷ್ಟ ಪ್ರತಿಕ್ರಿಯಗಳು ಮತ್ತಷ್ಟು ಸಂದೇಶಗಳನ್ನು ಯಾಂತ್ರಿಕವಾಗಿ ಕಳುಹಿಸಲು ಪ್ರಚೋದಕವಾಗಬಹುದು ಅಥವಾ ಗಿರಾಕಿಗಳ ಬಗ್ಗೆ ಇರುವ ಮಾಹಿತಿಗಳನ್ನು ಆ ದಿನದ ವರೆಗೂ ಪರಿಷ್ಕರಿಸುವುದರ ಮೂಲಕ ಗಿರಾಕಿಗಳಿಗೆ ಬೇಕಾದ ನಿರ್ದಿಷ್ಟವಾದ ಆಸಕ್ತಿಯ ವಲಯಗಳಿಗೆ ಸೇರಿದ ಮಾಹಿತಿಗಳನ್ನೇ ಕಳುಹಿಸಲು ಸೂಚಿಗಳನ್ನು ಹೊಂದಬಹುದು.
  • ಈ-ಮೇಲ್ ಮಾರಾಟತಂತ್ರವು ಕಾಗದರಹಿತ(ಎಂದರೆ,"ಹಸಿರು").
  • [ಜಾಡುಹಿಡಿಯುವಿಕೆ]ಮತ್ತು ಪ್ರತಿಕ್ರಿಯೆ ಅಂಶಗಳು ವಿವಿಧ ರೀತಿಯ ವಸ್ತುಗಳನ್ನು ಉಪಯೋಗಿಸುವುದರ ಮೂಲಕ ಮತ್ತು ಅಂಕಿ-ಅಂಶದ ಪ್ರಕಾರ ಗಮನಾರ್ಹವಾದ ಫಲಿತಾಂಶಗಳನ್ನು ಹೊಂದುವ ಲೆಕ್ಕದ ಪ್ರಕಾರ ಈ-ಮೇಲ್ ಮಾರಾಟತಂತ್ರ ವಾಹಿನಿಯನ್ನು ಮಾರುಕಟ್ಟೆಯ ಶೃತಿಗೆ ಹೊಂದಿಸಿ,ಹೆಚ್ಚು ಪರಿಣಾಮಕಾರಿಯಾಗುವಂತೆ ಬದಲಿಸಲು ಸಾಧ್ಯ.
  • ಈ-ಮೇಲ್ ಡಿಜಿಟಲ್ ಮಾರಾಟಗಾರರಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು,2009ರಲ್ಲಿ ಯುಕೆಯಲ್ಲಿ ಸುಮಾರು 15%ನಷ್ಟು ಹೆಚ್ಚಳ ಕಂಡು £292ಮಿಲಿಯನ್ ತಲುಪಿತು.<ಆಧಾರ>ಮೀಡಿಯಾವೀಕ್: ಯುಕೆ ಈ-ಮೇಲ್ ಮಾರಾಟವು 15 % ಹೆಚ್ಚುವುದೆಂದು ಹೇಳಲಾಗಿದೆ
  • ಈ-ಮೇಲನ್ನು ಇತರೆ ಆಲ್ ಲೈನ್ ಮಾರಾಟ ಯತ್ನಗಳಾದ ವೆಬ್ ಸೈಟ್ ಅನಲಿಟಿಕ್ಸ್,[ಸೋಷಿಯಲ್ ಮೀಡಿಯಾ],[ಬ್ಲಾಗಿಂಗ್].[ಸರ್ಚ್ ಎಂಜಿನ್ ಆಪ್ಟಿಮೈಝೇಷನ್] ಮತ್ತು [ಸರ್ಚ್ ಇಂಜಿನ್ ಅಡ್ವರ್ಟೈಸಿಂಗ್] ಗಳಿಗೆ ಹೊಂದಿಸಿಬಿಡಬಹುದು.

ಅನಾನುಕೂಲಗಳು

[ಬದಲಾಯಿಸಿ]

ಬಹಳ ಕಂಪನಿಗಳು ಪ್ರಸ್ತುತ ಗಿರಾಕಿಗಳೊಂದಿಗೆ ಸಂಪರ್ಕಿಸಲು ಈ-ಮೇಲ್ ಬಳಸುತ್ತವೆ, ಆದರೆ ಇತರೆ ಕಂಪನಿಗಳು ಬಯಸದಂತಹ ಬೃಹತ್ ಸಂಖ್ಯೆಯ, [ಸ್ಪ್ಯಾಮ್]ಗಳೆಂದು ಕರೆಯಲಾಗುವ, ಈ-ಮೇಲ್ ಗಳನ್ನು ಕಳುಹಿಸುತ್ತವೆ. ಅಂತರಜಾಲ ವ್ಯವಸ್ಥೆಯ ಆಡಳಿತಾಧಿಕಾರಿಗಳು "ಅಂತರಜಾಲದ ದುರುಪಯೋಗ"ದ ಬಗ್ಗೆ ಕಾಳಜಿ ವಹಿಸುವರೆಂದು ತಮ್ಮನ್ನು ತಾವೇ ಕರೆದುಕೊಂಡರೂ, ಅಂತರಜಾಲದಲ್ಲಿ ಮೇಲೆ ನಡೆಯುವ ದುರ್ನಡೆಗಳ ಬಗ್ಗೆ ಅವರು ಚಕಾರವೆತ್ತಿಲ್ಲ ಎಂದರೆ ಸ್ಪ್ಯಾಮ್ ಗಳ ವಿರುದ್ಧ ಬಲವಾಗಿ ಪ್ರತಿಕ್ರಿಯೆ ನೀಡುತ್ತಾರೆ ಆದರೆ ಲೈಬಲ್ (ನಿಂದಾಪತ್ರ),[ಟ್ರೇಡ್ ಮಾರ್ಕ್ ದುರುಪಯೋಗ],ಇತ್ಯಾದಿಗಳನ್ನು ಕಾನೂನಿನ ವ್ಯವಸ್ಥೆಯ ಕೈಗೆ ಹಾಕಿಬಿಡುತ್ತಾರೆ.ಬಹತೇಕ ಅಧಿಕಾರಿಗಳಿಗೆ ಸ್ಪ್ಯಾಮ್ ಎಂದರೆ ಬಹಳ ದ್ವೇಷವಿದ್ದು,ಸ್ಪ್ಯಾಮ್ ಎಂದರೆ ಯಾವುದೇ ಬಯಸದ ಈ-ಮೇಲ್ ಎಂದು ಅವರು ಹೇಳಿಕೆ ನೀಡುತ್ತಾರೆ.[ಡ್ರಾಕೋನಿಯನ್] ಶಿಕ್ಷಾ ವಿಧಿಗಳಾದ ಕಾರ್ಪೊರೇಟ್ ವೆಬ್ ಸೈಟ್ ಗಳನ್ನು[ಕಿತ್ತು ಹಾಕುವ]ಪದ್ಧತಿಗಳನ್ನು,ಸ್ಪ್ಯಾಮ್ ಕಳುಹಿಸಿದ ಕಂಪನಿಗಳ ಮೇಲೆ ಎಚ್ಚರಿಕೆ ನೀಡಿ ಅಥವಾ ನೀಡದೆ ವಿಧಿಸುವುದು ಸಾಮಾನ್ಯ.ಅದಕ್ಕೆ ತಕ್ಕಂತೆ ಅಂತರಜಾಲ ಕಂಪನಿಗಳ ಗುತ್ತಿಗೆ ಪರವಾನಗಿಯಲ್ಲಿ [ಸೇವೆಯ ಷರತ್ತು]ಗಳಲ್ಲಿ ಈ ವಿಧದ ನಡವಳಿಕೆಗೆ ಅನುಮತಿ ಇದೆ,ಆದ್ದರಿಂದ ಸ್ಪ್ಯಾಮ್ ಕಳುಹಿಸಿದವರಿಗೆ ಗತ್ಯಂತರವಿಲ್ಲ. ಕಾನೂನುಬಾಹಿರ ಈ-ಮೇಲ್ ಮಾರಾಟತಂತ್ರವು ಕಾನೂನುಬದ್ಧ ಈ-ಮೇಲ್ ಮಾರಾಟತಂತ್ರಕ್ಕಿಂತಲೂ ಹಳೆಯದು.ಮೊದಲ ಅಂತರಜಾಲ(ಎಂದರೆ [ಅರ್ಪಾನೆಟ್]ದಲ್ಲಿ ವ್ಯವಹಾರಗಳಿಗೆ ಆ ಮಾಧ್ಯಮವನ್ನು ಬಳಸಿಕೊಳ್ಳಿವಂತಿರಲಿಲ್ಲ.ತತ್ಕಾರಣವಾಗಿ ವ್ಯಾಪಾರಿಗಳು ತಾವು ಕಾನೂನುಬದ್ಧ ವ್ಯವಹಾರ ನಡೆಸುವವರೆಂದು ಈ-ಮೇಲ್ ಮಾಧ್ಯಮದಲ್ಲಿ ಸ್ಥಾಪಿತವಾಗುವುದು ತ್ರಾಸಕರವಾಗಿತ್ತು,ಅಲ್ಲದೆ ಕಾನೂನುಬಾಹಿರ ವ್ಯಾಪಾರಸ್ಥರೂ ತಮ್ಮನ್ನು ತಾವೇ ಕಾನೂನುಬದ್ಧರೆನ್ನುತ್ತ ಸ್ಪ್ಯಾಮ್ ಗಳನ್ನು ಕಳುಹಿಸುವುದೂ ನಿಯತ್ತಿನ ವ್ಯಾಪಾರಿಗಳ ಮೇಲೆ ಪರೋಕ್ಷವಾಗಿ ದುಷ್ಪರಿಣಾಮ ಬೀರುತ್ತಿತ್ತು. ಈ-ಮೇಲ್ ಮಾರಾಟತಂತ್ರದಲ್ಲಿ ನೋಡುಗರಿಗೆ ಕಾನೂನುಬದ್ಧ ಹಾಗೂ ಸ್ಪ್ಯಾಮ್ ಗಳ ವ್ಯತ್ಯಾಸವು ತಿಳಿಯುವುದು ಕಷ್ಟ. ಮೊದಲಿಗೆ ಸ್ಪ್ಯಾಮ್ ಕಳುಹಿಸುವವರು ತಾವು ಕಾನೂನುಬದ್ಧ ವ್ಯಾಪಾರಸ್ಥರೆಂದು ಸ್ಥಾಪಿಸಲು ಯತ್ನಿಸುತ್ತಾರೆ.ಎರಡನೆಯದಾಗಿ,ನೇರ-ಮಾರಾಟದ ರಾಜಕೀಯ ತಂಡಗಳಾದ ಯುನೈಟೆಸ್ ಸ್ಟೇಟ್ಸ್[ಡೈರೆಕ್ಟ್ ಮಾರ್ಕೆಟಿಂಗ್ ಅಸೋಸಿಯೇಷನ್](DMA)ನಂತಹವು ಕೆಲವು ಅಂತರಜಾಲ ಕೇಂದ್ರಗಳನ್ನು ನಡೆಸುವವರು ಸ್ಪ್ಯಾಮ್ ಎಂದು ಪರಿಗಣಿಸುವ ಬಯಸದ ವಾಣಿಜ್ಯಪರ ಈ-ಮೇಲ್ "ಬೇಡವೆಂದು-ತೆರಳು" ಎಂದು ಕಳುಹಿಸುವ ಕ್ರಿಯೆಯನ್ನು ಕಾನೂನಿ ಪರಿಧಿಗೆ ತರಲು ಶಾಸಕಾಂಗದ ಮೇಲೆ ಒತ್ತಡ ತಂದರು.ಮೂರನೆಯದಾಗಿ ಸ್ಪ್ಯಾಮ್ ಬೃಹತ್ ಪ್ರಮಾಣದಲ್ಲಿ ಬರುವುದರಿಂದ ಹಲವಾರು ಮಂದಿ ಅವನ್ನೇ ಕಾನೂನುಬದ್ಧ ವಾಣಿಜ್ಯ ಈ-ಮೇಲ್ ಎಂದು ತಪ್ಪಾಗಿ ಭಾವಿಸಿದ್ದಾರೆ. ಈ ಸ್ಥಿತಿಯು ಗ್ರಾಹಕನು ತಾನು ಚಂದಾದಾರನಾದ ಅಂಚೆ ಪಟ್ಟಿಗಳಿಂದಲೇ ಇಂತಹ ಈ-ಮೇಲ್ ಗಳನ್ನು ಪಡೆದಾಗ ಉದಯಿಸುತ್ತದೆ. ಅದರಲ್ಲೂ[HTML]ಮತ್ತು ಗ್ರಾಫಿಕ್ಸ್ ಇರುವಂತಹ, ಒಂದೇ ರೀತಿ ಕಾಣುವಂತಹ ಅಸಲಿ ಮತ್ತು ನಕಲಿ ಸಂದೇಶಗಳೆರಡೂ ಬಂದುಬಿಟ್ಟರಂತೂ ತಲೆ ಕೆಟ್ಟು ಮೊಸರಿನ ಗಡಿಗೆಯಾಗುತ್ತದೆ. ಸುಸ್ಥಾಪಿತ ಈ-ಮೇಲ್ ಮಾರಾಟತಂತ್ರನಿರತ ಕಂಪನಿಗಳು ಉಪಯೋಗುಸುವ ಒಂದು ಪರಿಣಾಮಕಾರಿ ಕೌಶಲವು ಗಿರಾಕಿಯು "ದಬಲ್-ಆಪ್ಟ್-ಇನ್" ಬದ್ಧನಾಗಿರಬೇಕು ಎಂಬುದಾಗಿದ್ದು,ಈ ಮೂಲಕ ಗ್ರಾಹಕನು ತನ್ನ ಕೈಯಾರೆ ಈ ಸೇವೆ ಬೇಕೆಂದು ಕೋರುವುದನ್ನು ಸೂಚಿಸುವ ದ್ಯೋತಕದ ಮೇಲೆ ಕ್ಲಿಕ್ ಮಾಡಿ, ಸ್ವೀಕರಿಸುತ್ತಿರುವ ಮೇಲ್ ವಿಳಾಸದ ಮಾಲಿಕನಾದ ತಾನು ನಿಜಕ್ಕೂ ಆ ಮಾಹಿತಿಯನ್ನು ಕೋರಿರುವುದಾಗಿ ದೃಢೀಕರಿಸುವುದನ್ನು ಅವಶ್ಯಕ ಅಂಗವಾಗಿಸಿವೆ. ಜವಾಬ್ದಾರಿಯುತ ಈ-ಮೇಲ್ ಮಾರಾಟ ತಂತ್ರ ಮತ್ತು ಆಟೋರೆಸ್ಪಾಂಡರ್ ಕಂಪನಿಗಳು ಈ ಡಬಲ್-ಆಪ್ಟ್-ಇನ್ ವ್ಯವಸ್ಥೆಯನ್ನು ಪ್ರತಿ ಕೋರಿಕೆಯ ದೃಢೀಕರಣಕ್ಕೂ ಪಡೆದ ನಂತರವೇ ಮಾಹಿತಿಗಳನ್ನು ಹೊರಗೆಡವುತ್ತವೆ. ಈ-ಮೇಲ್ ಸರ್ವೀಸಸ್ ಕಂಪನಿ ರಿಟರ್ನ್ ಪಾಥ್ ನವರು ಈ-ಮೇಲ್ ತಲುಪಿಸುವಿಕೆಯ ಬಗ್ಗೆ 2008ರ ಮಧ್ಯಭಾಗದಲ್ಲಿ ನೀಡಿದ ಒಂದು ವರದಿಯು ಇಂದಿಗೂ ನ್ಯಾಯಬದ್ಧ ಮಾರಾಟಗಾರರಿಗೆ ಚರ್ಚಾಸ್ಪದ ವಿಷಯವಾಗಿದೆ.ಆ ವರದಿಯ ಪ್ರಕಾರ,ಕಾನೂನುಬದ್ಧ ಈ-ಮೇಲ್ ಸೇವೆಗಳು ಸರಾಸರಿ 56% ರವಾನೆ ಮಾಡಿದವು, ಸಂದೇಶದ ಇಪ್ಪತ್ತು ಪ್ರತಿಶತ ತಿರಸ್ಕರಿಸಲ್ಪಟ್ಟವು ಮತ್ತು ಎಂಟು ಪ್ರತಿಶತ ಶೋಧಿಸಲ್ಪಟ್ಟವು. ಅಂತರಜಾಲದಲ್ಲಿ ಸ್ಪ್ಯಾಮ್ ಈ-ಮೇಲ್ ನ ಪರಿಮಾಣವನ್ನು ಗಮನಿಸಿದರೆ ಬಹಳಷ್ಟು ಅಂತರಜಾಲ ಉಪಯೋಗಿಸುವವರಿಗೆ[ಸ್ಪ್ಯಾಮ್-ಫಿಲ್ಟರ್]ಗಳು ಅವಶ್ಯಕ.ಕೆಲವು ಮಾರಾಟಗಾರರು ಕಾನೂನುಬದ್ಧ ಈ-ಮೇಲ್ ಸಂದೇಶಗಳೂ ಆಗಾಗ್ಗೆ ಈ ಫಿಲ್ಟರ್ ಗಳಲ್ಲಿ ಸಿಲುಕಿ ಅಡಗಿಸಲ್ಪಡುವವೆಂದು ವರದಿ ಮಾಡಿದ್ದಾರೆ,ಆದರೆ ಈ-ಮೇಲ್ ಉಪಯೋಗಿಸುವವರು ಸ್ಪ್ಯಾಮ್ ಫಿಲ್ಟರ್ ಗಳು ನ್ಯಾಯಬದ್ಧ ಅಂಚೆಗಳು ಹೀಗೆ ಸಿಲುಕುತ್ತವೆಂದು ದೂರಿರುವುದು ಅಪರೂಪ. ಈ-ಮೇಲ್ ಮೂಲಕ ಮಾರಾಟ ಮಾಡಲು ಬಯಸುವ ಕಂಪನಿಗಳು ಅವರ ಸಂದೇಶಪ್ರೇಷಕಕ್ರಿಯೆಗಳು ಯುನೈಟೆಡ್ ಸ್ಟೇಟ್ಸ್ ನ ಆಹ್ವಾನವಿಲ್ಲದ ಪೋರ್ನೋಗ್ರಫಿ ಮತ್ತು ಮಾರಾಟ ಕಾಯಿದೆ (CAN-SPAM),[] ಯೂರೋಪಿಯನ್ ಪ್ರೈವೆಸಿ ಮತ್ತು ಎಲೆಕ್ಟ್ರಾನಿಕ್ ಸಂಪರ್ಕ ನಿಯಮಾವಳಿಗಳು 2003 ಅಥವಾ ಅವರ[ಇಂಟರ್ ನೆಟ್ ಸೇವೆ ನೀಡುವವ]ರ[ಸ್ವೀಕಾರಾರ್ಹ ಉಪಯೋಗ ನೀತಿ]ಗಳನ್ನು ಉಲ್ಲಂಘನೆ ಮಾಡದ ರೀತಿ ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು.ಕಂಪನಿಯು ಸಕಲ ನಿಯಮಗಳಿಗೂ ಬದ್ಧವಾಗಿದ್ದರೂ ಸಹ,ಇಂಟರ್ ನೆಟ್ ಈ-ಮೇಲ್ ಅಧಿಕಾರಿಗಳು ಆ ಕಂಪನಿಯು ಸ್ಪಾಮ್ ಗಳನ್ನು ಕಳುಹಿಸುತ್ತಿದೆಯೆಂದು ತೀರ್ಮಾನಿಸಿದಲ್ಲಿ,ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬಹುದು.

ಆಪ್ಟ್-ಇನ್ ಈ-ಮೇಲ್ ಜಾಹಿರಾತು ನೀಡುವಿಕೆ

[ಬದಲಾಯಿಸಿ]

ಆಪ್ಟ್-ಇನ್ ಈ-ಮೇಲ್ ಜಾಹಿರಾತು ನೀಡುವಿಕೆ ಅಥವಾ ಅನುಮತಿ ಮಾರಾಟವು ಜಾಹಿರಾತನ್ನು ಪಡೆಯುವ ಗ್ರಾಹಕನು ಅಂತಹ ಜಾಹಿರಾತುಗಳನ್ನು ಈ-ಮೇಲ್ ಮೂಲಕ ಪಡೆಯಲು ಅನುಮತಿ ನೀಡಿರುವುದರ ಮೇರೆಗೆ ಜಾಹಿರಾತು ನೀಡಲ್ಪಡುವಂತಹ ಕ್ರಮವಾಗಿದೆ. ಈ-ಮೇಲ್ ಮಾರಾಟದ ತೊಡರುಗಳನ್ನು ಹತ್ತಿಕ್ಕಲು ಈ ವಿಧವಾದ ಮಾರಾಟತಂತ್ರವನ್ನು ಹಲವು ಮಾರಾಟಗಾರರು ವೃದ್ಧಿಗೊಳಿಸಿದ್ದಾರೆ.[] ಆಪ್ಟ್-ಇನ್ ಈ-ಮೇಲ್ ಮಾರಾಟವು ಪ್ರೇಷಕ ಮತ್ತು ಗ್ರಾಹಕನ ಮಧ್ಯೆ ಹ್ಯಾಂಡ್ ಷೇಕ್ ಪ್ರೋಟೋಕಾಲ್ (ಕೈಕುಲುಕುವ ರಾಯಭಾರ)ಅನ್ನು ಅಳವಡಿಸಿಕೊಳ್ಳುವಂತಹ ತಂತ್ರಾಂಶವಾಗಿ ಮಾರ್ಪಡಬಹುದು.[] ಈ ವ್ಯವಸ್ಥೆಯ ಮೂಲಕ ಕಾಲಕ್ರಮೇಣ ಗ್ರಾಹಕ ಮತ್ತು ಮಾರಾಟಗಾರರಿಬ್ಬರಿಗೂ ಉನ್ನತ ಮಟ್ಟದ ತೃಪ್ತಿ ಹೊಂದುವಂತಾಗಬೇಕೆಂಬುದೇ ಇದರ ಉದ್ದೇಶ. ಆಪ್ಟ್-ಇನ್ ಈ-ಮೇಲ್ ಜಾಹಿರಾತು ನೀಡುವಿಕೆಯನ್ನು ಉಪಯೋಗಿಸಿದಲ್ಲಿ ಗಿರಾಕಿಗಳಿಗೆ ಕಳುಹಿಸಲ್ಪಡುವಂತಹ ವಸ್ತುಗಳು "ನಿರೀಕ್ಷಿಸಲ್ಪಟ್ಟವು" ಆಗಿರುತ್ತವೆ. ಗಿರಾಕಿಯು ಇದನ್ನು ಪಡೆಯಲು ಬಯಸಿದನೆಂದು ಕಲ್ಪಿಸಿಕೊಳ್ಳಲಾಗುವುದರಿಂದ, ಅನೈಚ್ಛಿಕ ಜಾಹಿರಾತುಗಳನ್ನು ಗಿರಾಕಿಗಳಿಗೆ ಕಳುಹಿಸಿದಂತಾಗುವುದಿಲ್ಲ. ಸೂಕ್ತವಾಗಿ, ಆಪ್ಟ್-ಇನ್ ಈ-ಮೇಲ್ ಜಾಹಿರಾತುಗಳು ಹೆಚ್ಚು ವ್ಯಕ್ತಿಗತವಾಗಿದ್ದು ಗುರಿಯಿರದೆ ಕಳುಹಿಸಿದ ಜಾಹಿರಾತುಗಳಿಗಿಂತಲೂ ಗ್ರಾಹಕನಿಗೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಅನುಮತಿ ಮಾರಾಟತಂತ್ರದ ಸಾಮಾನ್ಯ ಉದಾಹರಣೆಯೆಂದರೆ ಜಾಹಿರಾತು ಕಂಪನಿಯ ಗಿರಾಕಿಗಳಿಗೆ ಸುದ್ದಿಪತ್ರಗಳನ್ನು ಕಳುಹಿಸುವಂತಹುದು. ಆ ಸುದ್ದಿಪತ್ರಗಳು ಗಿರಾಕಿಗಳಿಗೆ ಬರಲಿರುವ ಕಾರ್ಯಕರ್ಮಗಳು ಅಥವಾ ವಸ್ತುವಿಗೆ ಮುಂಬಡ್ತಿ ನೀಡುವಿಕೆ ಅಥವಾ ಹೊಸ ವಸ್ತುಗಳ ಬಗ್ಗೆ ವರದಿ ನೀಡುತ್ತವೆ.[] ಈ ವಿಧಧ ಜಾಹಿರಾತು ತಂತ್ರದಲ್ಲಿ ಸುದ್ದಿಪತ್ರಗಳನ್ನು ಕಳುಹಿಸಬಯಸುವ ಕಂಪನಿಯು ಕೊಳ್ಳುವಿಕೆಯ ಹಂತದಲ್ಲಿರುವ ತನ್ನ ಗಿರಾಕಿಗಳನ್ನು, ಸುದ್ದಿಪತ್ರ ಸ್ವೀಕರಿಸಲು ಬಯಸುವರೇ ಎಂದು ಕೇಳಬಹುದು. ಅನುಮತಿ-ಭರಿತ (ಆಪ್ಟೆಡ್-ಇನ್) ಸಂಪರ್ಕಗಳ ಮಾಹಿತಿಯ ಬುನಾದಿಯನ್ನು ತಮ್ಮ ಮಾಹಿತಿಸಂಚಯದಲ್ಲಿ ಶೇಖರಿಸಿಕೊಂಡ ಮಾರಾಟಗಾರರು ಪ್ರಚಾರ ಸಂಬಂಧಿತ ವಸ್ತುಗಳನ್ನು ಅಡೆತಡೆಯಿಲ್ಲದೆ ತಮ್ಮ ಗ್ರಾಹಕರಿಗೆ ಕಳುಹಿಸಬಹುದು. ತಮ್ಮ ಪ್ರಚಾರವನ್ನು ನಿರ್ದಿಷ್ಟವಾದ ಮಾರ್ಕೆಟ್ ಸೆಗ್ಮೆಂಟ್(ಮಾರುಕಟ್ಟೆಯ ವಿಭಾಗಗಳು)ಗಳಿಗೂ ವಿಂಗಡಿಸಿ ವಿತರಿಸಬಹುದು.[]

ಕಾನೂನಿನ ಪ್ರಕಾರ ಅವಶ್ಯಕತೆಗಳು

[ಬದಲಾಯಿಸಿ]

2002ರಲ್ಲಿ ಯೂರೋಪಿಯನ್ ಯೂನಿಯನ್ ನವರು ಡೈರೆಕ್ಟಿವ್ ಆನ್ ಪ್ರೈವೆಸಿ ಎಂಡ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್(ಗೋಪ್ಯತೆ ಮತ್ತು ಎಲೆಕ್ಟ್ರಾನಿಕ್ ಸಂಪರ್ಕದ ಪರವಾಗಿ ಆದೇಶ)ಅನ್ನು ಪ್ರಸ್ತುತಪಡಿಸಿತು. ಕಾಯಿದೆಯ ಕಲಂ 13ರ ಅನ್ವಯವು ಈಮೇಲ್ ವಿಳಾಸಗಳನ್ನು ವಾಣಿಜ್ಯಸಂಬಂಧಿತ ಚಟುವಟಿಕೆಗಳಿಗಾಗಿ ಉಪಯೋಗಿಸುವುದನ್ನು ನಿಷೇಧಿಸುತ್ತದೆ. ಈ ಅಧಿಸೂಚನೆಯು ಆಪ್ಟ್-ಇನ್(ಒಳಬರಲು-ಅನಿಮತಿಸು) ಯುಗವನ್ನು ಜಾರಿಗೆ ತರುವುದರ ಮೂಲಕ ಆಹ್ವಾನಿಸದ ಸಂದೇಶಗಳನ್ನು ಗ್ರಾಹಕನು ಮೊದಲೇ ಒಪ್ಪಿದಾಗ ಮಾತ್ರ ಕಳುಹಿಸುವ ಕ್ರಮವು ನಿರ್ಧರಿತವಾಯಿತು. ಈ ನಿರ್ದೇಶವು ಅಂದಿನಿಂದಲೂ ಸದಸ್ಯ ರಾಜ್ಯಗಳ ಕಾನೂನುಗಳಲ್ಲಿ ಅಳವಡಿಸಲಾಗಿದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಇದನ್ನು ಪ್ರೈವೆಸಿ ಎಂಡ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್ (ಇಸಿ ಡೈರೆಕ್ಟಿವ್)2003[] ರ ಅಡಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದು ಎಲೆಕ್ಟ್ರಾನಿಕ್ ಸಂಪರ್ಕಗಳ ಮೂಲಕ ಯಾವುದೇ ವಿಧವಾದ ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳಿಗೂ ಇದು ಅನ್ವಯಿಸುತ್ತದೆ. 2003ರ CAN-SPAM ಕಾಯಿದೆಯು ಸ್ಪಾಮ್ ಕಳುಹಿಸುವಿಕೆಯು ಅಪರಾಧವೆಂದು ಪರಿಗಣಿಸಿ ಹಾಗೆ ಕಳುಹಿಸಲ್ಪಟ್ಟ ಪ್ರತಿ ಗಿರಾಕಿಯ ಗಣತಿಯ ಮೇರೆಗೆ(ತಲೆ ಲೆಕ್ಕದಲ್ಲಿ) ಪ್ರತಿ ತಲೆಗೆ ಕಳುಹಿಸಿದವರ ಮೇಲೆ US$11,000 ದಂಡ ವಿಧಿಸಲು ಅಧಿಕಾರ ನೀಡಿದೆ. ಆದ್ದರಿಂದ ಯುನೈಟೆಡ್ ಸ್ಟೇಟ್ಸ್ ನ ಹಲವಾರು ವ್ಯವಹಾರನಿರತ ಈ-ಮೇಲ್ ಮಾರಾಟಗಾರರು ಒಂದು ಸೇವೆ(ಸರ್ವೀಸ್)ಯನ್ನು ಅಥವಾ ಒಂದು ವಿಶೇಷ ಸಾಫ್ಟ್ ವೇರನ್ನು ಉಪಯೋಗಿಸುವುದರ ಮೂಲಕ ಈ ಕಾಯಿದೆಗೆ ಖಾತ್ರಿಯಾಗಿ ಬದ್ಧರಾಗಿರುತ್ತಾರೆ. ಹಲವಾರು ಹಳೆಯ ವ್ಯವಸ್ಥೆಗಳು ಈಗಲೂ ಜಾರಿಯಲ್ಲಿದ್ದು, ಈ ಕಾಯಿದೆಗೆ ಅವು ಹೊಂದಾಣಿಕೆಯಾಗುವ ಸ್ಥಿತಿಯಲ್ಲಿಲ್ಲ. ವಾಣಿಜ್ಯಪರ ಈ-ಮೇಲ್ ಕಾಯಿದೆಯ ನಿಯಮಗಳಿಗೆ ಅನುಗುಣವಾಗಿರಬೇಕಾದರೆ, ಅದರ ಸೇವೆ ಪಡೆಯುವಂತಹವರು ತಮ್ಮ ಮರುವಿಳಾಸವನ್ನು ಅಧಿಕೃತಗೊಳಿಸಬೇಕಾದುದು ಮತ್ತು ಸರಿಯಾದ ವಿಳಾಸವನ್ನು ನೀಡುವುದಷ್ಟೇ ಅಲ್ಲದೆ, ಒಂದು ಕ್ಲಿಕ್ ಮೂಲಕ ಗ್ರಾಹಕ ಸೇವೆಯಿಂದ ಹೊರಹೋಗಲು ಅವಕಾಶದ ವ್ಯವಸ್ಥೆ ಇರಬೇಕು ಮತ್ತು ಸೂಕ್ತ ಅನುಮತಿ ಹೊಂದದೆ ಕೊಂಡಂತಹ ವಿಳಾಸಗಳ ಪಟ್ಟಿಯನ್ನು ಆಮದು ಮಾಡಿಕಳ್ಳುವುದರ ಮೇಲೆ ನಿಷೇಧವಿರಬೇಕು. ಕಾನೂನಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ, ಈ-ಮೇಲ್ ಸೌಲಭ್ಯ ನೀಡುವವರು ತಮ್ಮ ಗಿರಾಕಿಗಳೇ ಸ್ವತಃ ಈ-ಮೇಲ್ ಮಾರ್ಕೆಟಿಂಗ್ ಚಟುವಟಿಕೆಗಳನ್ನು ಸ್ಥಾಪಿಸಲು ಮತ್ತು ನಡೆಸಲು ಸಹಾಯ ಮಾಡಲಾಂಭಿಸಿದರು. ಸೌಲಭ್ಯ ನೀಡುವವರು ಈ-ಮೇಲ್ ಟೆಂಪ್ಲೇಟ್ ಗಳು ಮತ್ತು ಸರ್ವರೂ ಉಪಯೋಗಿಸತಕ್ಕ ಉತ್ತಮ ಅಂಶಗಳನ್ನು ಸರಬರಾಜು ಮಾಡುವುದಲ್ಲದೆ ಚಂದಾ ಹಣಸಂಗ್ರಹವನ್ನು ಮತ್ತು ರದ್ದತಿಗಳನ್ನು ಸ್ವಯಂ ನಿಭಾಯಿಸುವ ರೀತಿಗಳನ್ನೂ ತಲುಪಿಸುವರು. ಅಲ್ಲದೆ ಕಳುಹಿಸಲ್ಪಟ್ಟ ಸಂದೇಶಗಳ ಸಂಖ್ಯೆ, ಅದರಲ್ಲಿ ತೆರೆಯಲ್ಪಟ್ಟ ಸಂದೇಶಗಳ ಲೆಕ್ಕ, ಗ್ರಾಹಕರು ಸಂದೇಶದಲ್ಲಿದ್ದ ಯಾವುದಾದರೂ ಲಿಂಕ್(ಕೊಂಡಿ)ಗಳ ಮೇಲೆ ಕ್ಲಿಕ್ ಮಾಡಿದರೇ ಎಂಬ ಎಲ್ಲಾ ಅಂಕಿ ಅಂಶಗಳನ್ನೂ ನೀಡುತ್ತಾರೆ. CAN-SPAM ಕಾಯಿದೆಯನ್ನು ಇತ್ತೀಚೆಗೆ ಪರಿಷ್ಕರಿಸಲಾಗಿ, ಕೆಲವು ಹೊಸ ನಿಯಮಗಳು[clarification needed] ಮಿಳಿತವಾಗಿ, ಪರಿಷ್ಕೃತ ಕಾಯಿದೆಯು ಜೂನ್ 7, 2008ರಂದು ಜಾರಿಗೆ ಬಂದಿತು.[ಸೂಕ್ತ ಉಲ್ಲೇಖನ ಬೇಕು]

ಆಕರಗಳು

[ಬದಲಾಯಿಸಿ]
  1. DMA:"ದ ಪವರ್ ಆಫ್ ಡೈರೆಕ್ಟ್ ಮಾರ್ಕೆಟಿಂಗ್: ROI,ಸೇಲ್ಸ್, ಎಕ್ಸ್ ಪೆಂಡಿಚರ್ಸ್ ಎಂಡ್ ಎಂಪ್ಲಾಯ್ಮೆಂಟ್ ಇನ್ ದ ಯೂ.ಎಸ್., 2006-2007 ರ ಮುದ್ರಣ", ಡೈರೆಕ್ಟ್ ಮಾರ್ಕೆಟಿಂಗ್ ಅಸೋಸಿಯೇಷನ್, ಅಕ್ಟೋಬರ್ 2006
  2. ದ CAN-SPAM ಆಕ್ಟ್ ಆಫ್ 2003 Archived 2007-01-16 ವೇಬ್ಯಾಕ್ ಮೆಷಿನ್ ನಲ್ಲಿ. ಆನ್-ಲೈನ್ ftc.gov ನಲ್ಲಿ ಅಥವಾ PDF ಮಾದರಿ Archived 2007-01-19 ವೇಬ್ಯಾಕ್ ಮೆಷಿನ್ ನಲ್ಲಿ. ಯಲ್ಲಿ
  3. ೩.೦ ೩.೧ ಫೇಯ್ರ್ ಹೆಡ್, ಎನ್. (2003) "ಆಲ್ ಹೇಯ್ಲ್ ದ ಬ್ರೇವ್ ನ್ಯೂ ವರ್ಲ್ಡ್ ಆಫ್ ಪರ್ಮಿಷನ್ ಮಾರ್ಕೆಟಿಂಗ್ ವಯಾ ಈ-ಮೇಲ್" (ಮೀಡಿಯಾ 16, ಆಗಸ್ಟ್ 2003)
  4. ಡಿಲ್ ವರ್ಥ್, ಡಯಾನಾ. (2007) ರಥ್'ಸ್ ಕ್ರಿಸ್ ಸ್ಟೀಕ್ ಹೌಸ್ ಸೆಂಡ್ಸ್ ಸಿಝ್ಲಿಂಗ್ ಈ-ಮೇಲ್ಸ್ ಫಾರ್ ಸ್ಪೆಷಲ್ ಅಕೇಶನ್ಸ್ Archived 2010-02-18 ವೇಬ್ಯಾಕ್ ಮೆಷಿನ್ ನಲ್ಲಿ., DMNews , ಪುನಃಸ್ಥಾಪನೆ ಫೆಬ್ರವರಿ 19 , 2008
  5. ಒಬ್ರೈನ್ ಜೆ. & ಮೋಂಟಾಝೇಮಿಯಾ, ಎ.(2004) ಮ್ಯಾನೇಜ್ ಮೆಂಟ್ ಇಂಫಾರ್ಮೇಷನ್ ಸಿಸ್ಟಮ್ಸ್ (ಕೆನಡಾ: ಮೆಕ್ ಗ್ರಾ-ಹಿಲ್ ರಿಯೆರ್ಸನ್ ಲಿಮಿಟೆಡ್.)
  6. ಫುಲ್ ಟೆಕ್ಸ್ಟ್ ಆಫ್ ಪ್ರೈವೆಸಿ ಅಂಡ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್ (ಎಚ್ ಡೈರೆಕ್ಟಿವ್) ರೆಗ್ಯುಲೇಷನ್ಸ್

ಇವನ್ನೂ ಗಮನಿಸಿ

[ಬದಲಾಯಿಸಿ]