ಆನ್ಸೆರೆಸ್ ಬಾತು

ವಿಕಿಪೀಡಿಯ ಇಂದ
Jump to navigation Jump to search
Bar-headed goose
Bar-headed Goose - St James's Park, London - Nov 2006.jpg
Conservation status
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Aves
ಗಣ: Anseriformes
ಕುಟುಂಬ: Anatidae
ಉಪಕುಟುಂಬ: Anserinae
ಬುಡಕಟ್ಟು: Anserini
ಕುಲ: Anser
ಪ್ರಭೇದ: A. indicus
ದ್ವಿಪದ ಹೆಸರು
Anser indicus
(Latham, 1790)
ಸಮಾನಾರ್ಥಕಗಳು

Eulabeia indica

Swimming at Sylvan Heights Waterfowl Park
Bar-headed Geese relaxing on the bank of Magadi lake, Gadag, Karnataka, India.

ಆನ್ಸೆರೆಸ್ ಬಾತು- ಈ ಬಾತು ಪ್ರಪಂಚದ ಸಿಹಿನೀರಿನ ಜಲಾಶಯಗಳಲ್ಲೆಲ್ಲ ವಾಸಿಸಬಲ್ಲದು.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಆನ್ಸೆರಿಫಾರ್ಮೆ ಉಪವರ್ಗಕ್ಕೆ ಸೇರಿದ ಹಕ್ಕಿ.

ಲಕ್ಷಣಗಳು[ಬದಲಾಯಿಸಿ]

ಅಗಲವಾಗಿ ಚಪ್ಪಟೆಯಾಗಿರುವ ಇದರ ಕೊಕ್ಕು ಮುಖ್ಯವಾಗಿ ನೀರಿನಲ್ಲಿರುವ ಸಣ್ಣ ಸಣ್ಣ ಜೀವಿಗಳನ್ನು ಹಿಡಿದು ತಿನ್ನಲು ಅನುಕೂಲಿಸುವಂತಿದೆ. ಕೆಲವು ಬಾತುಗಳು ಸಸ್ಯಾಹಾರಿಗಳು; ಕೆಲವು ನೀರಿನಲ್ಲಿರುವ ಆಹಾರವನ್ನು ಜಾಲಿಸಿ ತಿನ್ನಬಲ್ಲವು. ಮತ್ತೆ ಕೆಲವು ಮೃದ್ವಂಗಿಗಳನ್ನು ಅಥವಾ ಮೀನುಗಳನ್ನು ಹಿಡಿದು ತಿನ್ನುವುವು. ಹೆಬ್ಬೆಟ್ಟು ಮೊಟಕಾಗಿದೆ. ಇತರ ಬೆರಳುಗಳ ಮಧ್ಯೆ ಚರ್ಮ ಆವರಿಸಿ ಜಲಪಾದ ಏರ್ಪಟ್ಟು ನೀರಿನಲ್ಲಿ ಈಜಲು ಅನುಕೂಲವಾಗಿದೆ. ನಾಲಗೆ ದಪ್ಪವಾಗಿಯೂ ಮಾಂಸಭರಿತವಾಗಿಯೂ ಇದೆ. ಹಾರುವ ಹಕ್ಕಿಗಳಲ್ಲಿಲ್ಲದ ಒಳಹೊರಗಾಗುವ ಶಿಶ್ನವಿರುವುದು.

ಸಂತಾನೋತ್ಪತ್ತಿ[ಬದಲಾಯಿಸಿ]

ಹೆಣ್ಣುಬಾತುಗಳು ಬಹು ಸಂಖ್ಯೆಯಲ್ಲಿ ಬಿಳಿಯ ಮೊಟ್ಟೆಗಳನ್ನಿಡುತ್ತವೆ. ನೆಲದ ಮೇಲೆ ಗೂಡುಗಳನ್ನು ಕಟ್ಟುತ್ತವೆ. ಒಂದೇ ಜೊತೆ ಗಂಡು ಹೆಣ್ಣು ಬಾತು ಹಕ್ಕಿಗಳು ಒಟ್ಟಾಗಿ ದೀರ್ಘಕಾಲ ದಾಂಪತ್ಯ ಜೀವನ ನಡೆಸುವುವು. ಹೆಚ್ಚು ವೇಳೆ ಜಲಾಶಯಗಳಲ್ಲಿರುವ ಮುಳುಗುವ ಹಕ್ಕಿ ಆನ್ಸೆರ್ ಇಂಡಿಕಸ್ ಎಂಬುದು ನಮ್ಮ ದೇಶದ ಬಾತು (ನೀರು ಕೋಳಿ).

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: