ಆದಿ ಗೋದ್ರೇಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆದಿ ಬುರ್ಜೋರ್ಜಿ ಗೋದ್ರೇಜ್
ಜನನ (1942-04-03) ೩ ಏಪ್ರಿಲ್ ೧೯೪೨ (ವಯಸ್ಸು ೮೨)
ಬಾಂಬೆ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
ವೃತ್ತಿಗೋದ್ರೆಜ್ ಗ್ರೂಪ್‍ನ ಅಧ್ಯಕ್ಷರು
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಸೇಂಟ್ ಕ್ಸೇವಿಯರ್ ಕಾಲೇಜ್, ಮುಂಬೈ
ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್
ಬಾಳ ಸಂಗಾತಿಪರಮೇಶ್ವರ ಆದಿ ಗೋದ್ರೇಜ್ (ಮರಣ ೨೦೧೬)
ಮಕ್ಕಳುನಿಸಾಬಾ ಆದಿ ಗೋದ್ರೇಜ್
ಪಿರೋಜಶಾ ಆದಿ ಗೋದ್ರೇಜ್
ತಾನ್ಯಾ ಅರವಿಂದ್ ದುಬಾಶ್

ಆದಿ ಬುರ್ಜೋರ್ಜಿ ಗೋದ್ರೇಜ್ (ಜನನ ೩ ಏಪ್ರಿಲ್ ೧೯೪೨) ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು ಕೈಗಾರಿಕೋದ್ಯಮಿ. ಇವರು ಗೋದ್ರೇಜ್ ಕುಟುಂಬದ ಮುಖ್ಯಸ್ಥ ಮತ್ತು ಗೋದ್ರೇಜ್ ಗ್ರೂಪ್‌ನ ಅಧ್ಯಕ್ಷರು. ಅಕ್ಟೋಬರ್ ೨೦೨೦ರ ಹೊತ್ತಿಗೆ, ಇವರು ಯುಎಸ್$೨.೩ ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದರು.[೧]

ಆರಂಭಿಕ ಜೀವನ[ಬದಲಾಯಿಸಿ]

ಗೋದ್ರೇಜ್ ಅವರು ತಮ್ಮ ಶಿಕ್ಷಣವನ್ನು ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜು, ಮುಂಬೈನಲ್ಲಿ ಪೂರ್ಣಗೊಳಿಸಿದರು.[೨] ಅವರು ಎಚ್ಎಲ್ ಕಾಲೇಜಿನಲ್ಲಿ ಪದವಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಪಡೆದರು. ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿಗಳಿಸಿದರು, ಅಲ್ಲಿ ಅವರು ಪೈ ಲ್ಯಾಂಬ್ಡಾ ಫಿ ಫ್ರಾಟರ್ನಿಟಿ ಮತ್ತು ಟೌ ಬೀಟಾ ಪೈಯಲ್ಲಿ ಸದಸ್ಯರಾಗಿದ್ದರು.[೩]

ವೃತ್ತಿ[ಬದಲಾಯಿಸಿ]

ಅವರು ಭಾರತಕ್ಕೆ ಹಿಂದಿರುಗಿದ ನಂತರ, ಕುಟುಂಬದ ವ್ಯವಹಾರಕ್ಕೆ ಸೇರಿ ನಿರ್ವಹಣಾ ರಚನೆಯನ್ನು ಆಧುನೀಕರಿಸಿದರು ಮತ್ತು ಪ್ರಕ್ರಿಯೆ ಸುಧಾರಣೆಗಳನ್ನು ಜಾರಿಗೆ ತಂದರು. ಅವರು ಗೋದ್ರೇಜ್ ಇಂಡಸ್ಟ್ರೀಸ್‌ನ ಗ್ರೂಪ್ ಬ್ರದರ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗೋದ್ರೇಜ್ ಅಗ್ರೋವೆಟ್‌ನ ಅಧ್ಯಕ್ಷರಾದ ನಾದಿರ್ ಗೋದ್ರೇಜ್ ಅವರ ಸೋದರಸಂಬಂಧಿ.

೨೦೨೧ ರಲ್ಲಿ ಅವರು ಗೋದ್ರೇಜ್ ಗ್ರೂಪ್‌ನ ಹಿಡುವಳಿ ಕಂಪನಿಯಾದ ಗೋದ್ರೇಜ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಯೋಜನೆಯನ್ನು ಪ್ರಕಟಿಸಿದರು. ನಂತರ, ಜಿಐಎಲ್‍ನ ಗೌರವಾನ್ವಿತ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.[೪]

ಗೋದ್ರೇಜ್[ಬದಲಾಯಿಸಿ]

ಇವರು ಹಲವಾರು ಭಾರತೀಯ ವ್ಯಾಪಾರ, ಕೈಗಾರಿಕಾ ಸಂಸ್ಥೆ ಮತ್ತು ಸಂಘಗಳ ಅಧ್ಯಕ್ಷರಾಗಿದ್ದಾರೆ.

ಅವರು ಏಪ್ರಿಲ್ ೨೦೧೧ ರಿಂದ ಏಪ್ರಿಲ್ ೨೦೧೮ ರವರೆಗೆ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಅಧ್ಯಕ್ಷರಾಗಿದ್ದರು. ೨೦೧೨-೧೩ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು.[೫][೬]

ಗೋದ್ರೇಜ್ ಹಿಡುವಳಿ ಕಂಪನಿಯ ಶೇಕಡಾ ಇಪ್ಪತ್ತೈದರಷ್ಟು ಷೇರುಗಳು ಪಿರೋಜ್ಶಾ ಗೋದ್ರೇಜ್ ಫೌಂಡೇಶನ್, ಸೂನಾಬಾಯಿ ಪಿರೋಜ್ಶಾ ಗೋದ್ರೇಜ್ ಫೌಂಡೇಶನ್, ಮತ್ತು ಗೋದ್ರೇಜ್ ಮೆಮೋರಿಯಲ್ ಟ್ರಸ್ಟ್ ಅನ್ನು ಒಳಗೊಂಡಿರುವ ಟ್ರಸ್ಟ್‌ಗಳಲ್ಲಿವೆ.[೭]

ವೈಯಕ್ತಿಕ ಜೀವನ[ಬದಲಾಯಿಸಿ]

ಅವರು ಅಕ್ಟೋಬರ್ ೨೦೧೬ರಲ್ಲಿ ಸಮಾಜವಾದಿ ಮತ್ತು ಲೋಕೋಪಕಾರಿ ಪರಮೇಶ್ವರ್ ಗೋದ್ರೇಜ್ ಅವರನ್ನು ವಿವಾಹವಾದರು ಮತ್ತು ಇವರು ಮೂರು ಮಕ್ಕಳನ್ನು ಹೊಂದಿದ್ದರು. ಇವರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ವಾಸಿಸುತ್ತಿದ್ದರು. ಆದಿಯವರು ಭಾರತೀಯ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ೨೦೦೨ ರಾಜೀವ್ ಗಾಂಧಿ ಪ್ರಶಸ್ತಿ ನೀಡಲಾಯಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. "Forbes profile: Adi Godrej". Forbes. Retrieved 9 October 2020.
  2. "Home". xaviers.edu. Archived from the original on 23 April 2021. Retrieved 2020-10-09.
  3. Pi Lambda Phi 2010 membership Directory
  4. K, Vijayaraghavan (29 October 2021). "Godrej family looks to divide a $4.1 billion empire". Economic Times. Retrieved January 5, 2023.
  5. "CII elects Adi Godrej as new President". timesofindia-economictimes. Retrieved 2016-03-18.
  6. "CII elects Adi Godrej as new President". 18 April 2012. Retrieved 2016-03-18.
  7. "Forbes India Magazine — The Godrej Foundation: In Charity They Trust". forbesindia.com. Retrieved 2016-03-18.