ಆಡಮ್ ಸ್ಮಿತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಡಮ್ ಸ್ಮಿತ್
ಆಡಮ್ ಸ್ಮಿತ್‍ರವರ ಚಿತ್ರ
ಜನನ೧೬ ಜುನ್ ೧೭೨೩ NS
(೫ ಜುನ್ ೧೭೨೩ OS)
Kirkcaldy, Fife, ಸ್ಕಾಟ್‌ಲೆಂಡ್
ಮರಣ17 July 1790(1790-07-17) (aged 67)
ಎಡಿನ್‌ಬರ್ಗ್, ಸ್ಕಾಟ್‌ಲೆಂಡ್
ರಾಷ್ಟ್ರೀಯತೆಸ್ಕಾಟಿಷ್
ಪ್ರದೇಶWestern philosophy
ಧರ್ಮಕ್ರಿಶ್ಚಿಯನ್
ಪರಂಪರೆಶಾಸ್ತ್ರೀಯ ಅರ್ಥಶಾಸ್ತ್ರ
ಮುಖ್ಯ  ಹವ್ಯಾಸಗಳುPolitical philosophy, ethics, economics
ಅಧ್ಯಯನ ಮಾಡಿದ ಸಂಸ್ಥೆಗ್ಲ್ಯಾಸ್ಗೋ ವಿಶ್ವವಿದ್ಯಾಲಯ
Balliol College, Oxford
ಗಮನಾರ್ಹ ಚಿಂತನೆಗಳುClassical economics,
modern free market,
division of labour,
the "ಅಗೋಚರ ಕೈವಾಡ"
ಪ್ರಭಾವಕ್ಕೋಳಗಾಗು
ಪ್ರಭಾವ ಬೀರು
ಸಹಿ
ಆಡಂ ಸ್ಮಿತ್

ಆರ್ಥಿಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಆಡಂ ಸ್ಮಿತ್; ರಾಜಕೀಯ ಅರ್ಥಶಾಸ್ತ್ರದ ಪಿತನೆಂದೂ, ಆಂಗ್ಲ ಸಂಪ್ರದಾಯ ಪಂಥದ ಸಂಸ್ಥಾಪಕನೆಂದೂ, ಗೌರವಿಸಲ್ಪಡುತ್ತಾರೆ. ಆತನ " ವೆಲ್ತ್ ಆಫ಼್ ನೇಷನ್ಸ್" ಮಹಾಗ್ರಂಥವು ಒಂದು ಕ್ರಾಂತಿಯನ್ನೇ ಮಾಡಿ, ವಾಣಿಜ್ಯ ಪಂಥದ ಅಬಿಪ್ರಾಯಗಳನ್ನು ಅಸಂಗತವಾಗಿಸಿ, ಮುಕ್ತ ಆರ್ಥಿಕ ನೀತಿಯನ್ನು ಎತ್ತಿ ಹಿಡಿಯಿತು.

ಆಡಂ ಸ್ಮಿತ್‍ರವರು ವಾಸಿಸುತ್ತಿದ್ದ ಸ್ಥಳ
ಆಡಂ ಸ್ಮಿತ್ತ ರವರ ತಾಯಿ

1776 ರಲ್ಲಿ ರಾಷ್ಟ್ರೀಯ ಸಂಪತ್ತಿನ ಬಗ್ಗೆ ಅವರ ಅಭಿಪ್ರಾಯ ವ್ಯಕ್ತಪಡಿಸಿದರು

ಪರಿಚಯ[ಬದಲಾಯಿಸಿ]

 • ಎರಡು ಶತಮಾನಗಳಿಗೂ ಹಿಂದೆ ಪ್ರತಿಪಾದಲಿಸ ತನ್ನ ಆರ್ಥಿಕ ಅಭಿಪ್ರಾಯಗಳಲ್ಲಿ ಕೆಲವು ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಅನ್ವಯವಾಗುವುದನ್ನು ನೋಡಿದರೆ, ಆಡ್ಂ ಸ್ಮಿತ್‌ನ ಪ್ರತಿಭೆಯ ಅರಿವಾಗುತ್ತದೆ. ಆತನ ಪ್ರಖ್ಯಾತವಾದ ತೆರೆಗೆಯ ಸೂತ್ರಗಳು ಆಧುನಿಕ ಕಲ್ಯಾಣ ರಾಷ್ಟ್ರ ಗಳಲ್ಲಿ ತೆರೆಗೆಯ ತತ್ವದ ಮಾರ್ಗದರ್ಶಿಗಳಾಗಿವೆ. ಆರ್ಥಿಕ ತತ್ವಗಳ ಬಾಹೈಪಾ ರೂಪ ನಿರ್ಣಯ, ಅರ್ಥಶಾಸ್ತ್ರದ ವ್ಯಾಪ್ತಿಯ ನಿರ್ಧಾರ ಮತ್ತು ಉತ್ಪಾದನೆ, ಮೌಲ್ಯ ಹಾಗೂ ವಿತರಣಾ ಸಮಸ್ಯೆಗಳ ವಿಶ್ಲೇಷಣೆ ಮಾಡುವುದಕ್ಕೆ ಆಡ್ಂ ಸ್ಮಿತ್ ಕಾರಣಕರ್ತನಾಗಿದ್ದಾನೆ.
 • ಹಿತಸಕ್ತಿಗಳ ಸಮ್ಮಿಳನದ ಬಗ್ಗೆ ಕ್ರಮಬದ್ಧ ಹೇಳಿಕೆ ನೀಡಿದವರಲ್ಲಿ ಆತ ಪ್ರಥಮನಾಗಿದ್ದ ಹಾಗೂ ಅರ್ಥಶಾಸ್ತ್ರಕ್ಕೆ ತುಷ್ಟಿಗುಣ ಸಂಪ್ರದಾಯವನ್ನು, ಪರಿಚಯಿಸಿದ್ದು ಕೂಡ ಆಡ್ಂ ಸ್ಮಿತಿನ ಮಹತ್ಕಾರ್ಯವಾಗಿದೆ. ಅದುದರಿಂದ ಆಡ್ಂ ಸ್ಮಿತ್, ಇಂದಿಗೂ ಕೂಡ ರಾಜಕಿಯಾರ್ಥಶಾಸ್ತ್ರದ ಜನಕ ಎಂದು ಗೌರವಿಸಲ್ಪಡುತ್ತಾರೆ.[೧]

ಜೀವನ ಚಿತ್ರಣ[ಬದಲಾಯಿಸಿ]

 • ಸ್ಕಾಟ್ಲಾಂಡಿನ ಎಡಿನ್ಬರ್ಗ್ ಪಟ್ಟಣದ ಸಮೀಪದ ಕಿರ್ತಾಲ್ಡಿ ಎಂಬಲ್ಲಿ ೧೭೨೩ರಲ್ಲಿ ಒರ್ವ ಸ್ಕಾಟಿಷ್ ನ್ಯಾಯವಾದಿಯ ಪುತ್ರನಾಗಿ ಆಡ್ಂ ಸ್ಮಿತ್ ಜನಿಸಿದ.[೨] ಆಡ್ಂ ಸ್ಮಿತ್‌ನ ತಂದೆ ಸುಂಕದ ಅಧಿಕಾರಿ ಕೂಡಾ ಆಗಿದ್ದ.
 • ೧೭೩೭ ರಿಂದ ೧೭೪೦ರ ವರೆಗೆ ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ಸ್ಮಿತ್ ಅಧ್ಯಯನ ಮಾಡುವಾಗ, ಆಗಿನ ಸರ್ವೋಷ್ಕ್ರುಷ್ಟ ತತ್ವ ಚಿಂತಕ ಹೆಚ್ಸನ್ ಆತನಿಗೆ ಗುರುವಾಗಿ ದೊರೆತ.[೩] ೧೭೪೦ರಿಂದ ೧೭೪೬ರ ವರೆಗೆ ಹೆಸರಾಂತ ಆಕ್ಸ್ ಫ಼ೊರ್ಡ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಅಧ್ಯಯನವನ್ನು ಸ್ಮಿತ್ ಮುಂದುವರಿಸಿದರು.[೪]
 • ೧೭೪೭ರಿಂದ ೧೭೫೦ರ ವರೆಗೆ ಆತ ಎಡೆನ್ಬರ್ಗ್ ವಿಶ್ವವಿದ್ಯಾನಿಲಯದ ಆಂಗ್ಲ ಸಾಹಿತ್ಯ ಮತ್ತು ರಾಜಕಿಯಾರ್ಥಶಾಸ್ತ್ರದ ಬಗ್ಗೆ ಉಪನ್ಯಾಸಗಳನ್ನು ನೀಡಿದ.[೫] ಏತನ್ಮಧೈ ೧೭೪೯ರಲ್ಲಿ ಆತ ಫ಼ಿಲೊಸೊಫ಼ಿಕಲ್ ಎಸ್ಸೆ ಎಂಬ ಗ್ರಂಥ ಬರೆದ ನಾದರೂ ಅದು ಆತನ ಮರಣದ ನಂತರವೇ ಪ್ರಕಟವಾಯಿತು.
 • ೧೭೫೧ ರಲ್ಲಿ ಆತ ತರ್ಕಶಾಸ್ತ್ರದ ತಿಯರಿ ಆಫ಼್ ಮೊರಲ್ ಸೆನ್ಟಿಮೇನ್ಟ ಅವನಿಗೆ ಹೆಸರು ಮತ್ತು ಖ್ಯಾತಿಗಳೆರಡರಲ್ಲಿ ಒಟ್ಟಿಗೇ ತಂದಿತು[೬]. ಆಡ್ಂ ಸ್ಮಿತ್ ಗೊಡ್ಡು ತತ್ವವನ್ನು ಜೋತುಬೀಳದೆ ವಾಸ್ತವಿಕವಾದ ಭೌತಿಕತೆಗೆ ಪ್ರಾಧಾನ್ಯತೆ ನೀಡಿದುದನ್ನು ಈ ಪುಸ್ತಕದಲ್ಲಿ ಕಾಣಬಹುದು.
 • ೧೭೬೪ ರಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ತ್ಯಜಿಸಿದ್ದು ಸ್ಮಿತ್, ಡ್ಯೂಕ್ ಆಫ಼್ ಬೆಕಲ್ಯೋನ ಜೊತೆ ಯೂರೋಪಿನ ಪ್ರವಾಸ ಕೈಗೊಂಡ. ಆತ ಡ್ಯೂಕನ ಶಿಕ್ಷಕ ಹಾಗೂ ಮಾರ್ಗದರ್ಶಿಯಾಗಿ ಕೆಲಸ ನಿರ್ವಹಿಸಿದ. ಯೂರೋಪಿನ ಪ್ರವಾಸವು ಸ್ಮಿತಿನ ಜ್ಞಾನ ಹೆಚ್ಚಿಸಲು ಸಹಕಾರಿಯಾಗಿತ್ತು. ಈ ಪ್ರವಾಸಾವಧಿಯಲ್ಲಿ ಆತ ಸಮಕಾಲಿನ ಮಹಾನ್ ಚಿಂತಕರಾದ ಕ್ವಿನ್, ಡರ್ಗೋಟ್, ವಾಲ್ಟೆರ್ ಮುಂತಾದವರನ್ನು ಸಂಧಿಸಿದ.[೭]
 • ೧೭೬೬ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ ಸ್ಮಿತ್ ತನ್ನ ಯುಗ ಪ್ರವರ್ತಕ ಉದ್ಗ್ರಂಥವಾದ "ವೆಲ್ತ್ ಆಫ಼್ ನೇಷನ್ಸ್" ಅನ್ನು ಬರೆಯಲಾರಂಬಿಸಿದ. ೧೭೭೬ರಲ್ಲಿ ಈ ಪುಸ್ತಕ ಪ್ರಕಟವಾಗುವದರೊಂದಿಗೆ ಆರ್ಥಿಕ ಜಗತ್ತಿಗೆ ಹೊಸ ಆಯಾಮವೊಂದು ದೊರಕಿತು.[೮] ೧೭೭೮ರಲ್ಲಿ ತನ್ನ ತಂದೆಯ ಹುದ್ದೆಯಾದ ಸುಂಕ ಪ್ರಾಧಿಕಾರದ ಅಧಿಕಾರಿಯಾಗಿ ಸ್ಮಿತ್ ನೇಮಕಗೊಂಡ. ಇದೇ ಹುದ್ದೆಯಲ್ಲಿ ಆತ ೧೭೯೦ ರ ವರೆಗೆ, ಅಂದರೆ ಮರಣದವರೆಗೂ ಉಳಿದ.

ಆರ್ಥಿಕ ಚಿಂತನೆಗೆ ಸ್ಮಿತ್ತನ ಕೊಡುಗೆಗಳು[ಬದಲಾಯಿಸಿ]

ಸ್ಮಿತ್ತನ ಆರ್ಥಿಕ ಚಿಂತನೆಯನ್ನು ಆತನ ಮೇರು ಕೃತಿಯಾದ "ವೆಲ್ತ್ ಆಫ಼್ ನೇಷನ್ಸ್" ನಲ್ಲಿ ಕಾಣಬಹುದು. ಇದರ ಪ್ರಕಟಣೆಯೊಂದಿಗೆ ರಾಜಕಿಯಾರ್ಥ ಶಾಸ್ತ್ರದ ಆರಂಭಕ್ಕೆ ಬುನಾದಿ ದೊರೆಯಿತು. ಇದು ಯುಗ ಪ್ರವರ್ತಕ ಗ್ರಂಥವಾಗಿದ್ದು, ವಾಣಿಜ್ಯ ಪಂಥಕ್ಕೆ ಪ್ರಬಲ ಪಂಥಾಹ್ವಾನ ನೀಡಿತು.

ಸಂಪತ್ತಿನ ವ್ಯಾಖ್ಯೆ[ಬದಲಾಯಿಸಿ]

ವೆಲ್ತ್ ಆಫ಼್ ನೇಷನ್ಸ್ ನ ಮೊದಲ ಪುಟ
 • ಅರ್ಥಶಾಸ್ತ್ರವನ್ನು ಕರಾರುವಾಕ್ಕಾದ ಸಮರ್ಪಕ ಶಬ್ದಗಳಿಂದ ವ್ಯಾಖ್ಯಾನಿಸಿದವರಲ್ಲಿ ಆಡಂ ಸ್ಮಿತ್ ಮೊದಲಿಗನೆನಿಸಿದ್ದಾನರೆ. "ಅರ್ಥಶಾಸ್ತ್ರವು ಸಂಪತ್ತನ್ನು ಹೇಗೆ ಉತ್ಪಾದಿಸುವುದು ಮತ್ತು ಹಂಚುವುದು, ಎನ್ನುವುದನ್ನು ವಿವರಿಸುತ್ತದೆ ಆದುದರಿಂದ ಇದನ್ನು ಸಂಪತ್ತಿನ ಶಾಸ್ತ್ರ ಎಂದಿದ್ದಾರೆ. ಅರ್ಥಶಾಸ್ತ್ರದ ಬಗ್ಗೆ ಆಡಂ ಸ್ಮಿತ್ ನೀಡಿದ ವ್ಯಾಖ್ಯೆ ಹೀಗಿದೆ: "ರಾಜನೀತಿಜ್ಞ ಅಥವಾ ಶಾಸಕರ ವಿಜ್ಞಾನದ ಒಂದು ಅಂಗವೆಂದು ಪರಿಗಣಿಸಲ್ಪಡುವ ರಾಜಕೀಯ ಅರ್ಥಶಾಸ್ತ್ರವು ಎರಡು ನಿಶ್ಚಿತ ಉದ್ದೇಶಗಳನ್ನು ಸೂಚಿಸುತ್ತದೆ.
 • ಮೊದಲನೆಯದು, ಜನರಿಗೆ ವಿಪುಲ ಆದಾಯವನ್ನೂ ಅಥವಾ ಜೀವನಾದಾರ ಲಭ್ಯವಾಗುವಂತೆ ಹೆಚ್ಚು ಸಂಪತ್ತನ್ನು ಒದಗಿಸುವುದು. ಎರಡನೆಯದಾಗಿ, ರಾಷ್ಟ್ರಕ್ಕೆ ಮತ್ತು ಸಾರ್ವಜನಿಕ ಸೇವೆಗಳಿಗೆ ಯಥೇಚ್ಛ ಆದಾಯವನ್ನು ಪೂರೈಸುವುದು. ಒಟ್ಟಿನಲ್ಲಿ ಅರ್ಥಶಾಸ್ತ್ರವು ಜನರನ್ನು, ರಾಷ್ಟ್ರವನ್ನೂ ಶ್ರೀಮಂತರನ್ನಾಗಿಸಲು ಉದ್ದೇಶಿಸುತ್ತದೆ."
 • ಆಡಂ ಸ್ಮಿತ್ತನ ವ್ಯಾಖ್ಯೆಯನ್ನು ತಪ್ಪಾಗಿ ಅರ್ಥೈಸಿಕೊಂಡ ರಸ್ಕಿನ್, ಕಾರ್ಲ್ಯೆಲ್, ಡಿಕಿನ್ಸ್ ಮುಂತಾದ ಚಿಂತಿಕರು ಆಡಂ ಸ್ಮಿತ್ತಿನ ಸಂಪತ್ತಿನ ವಾಖ್ಯೆಯನ್ನು ಕಟುವಾಗಿ ಟೀಕಿಸಿದರು. ಅರ್ಥಶಾಸ್ತ್ರವು ಕೇವಲ ಸಂಪತ್ತನ್ನು ಗಳಿಸಲು ಮತ್ತು ವ್ಯಯಿಸಲು ಮಾತ್ರ ತಿಳಿಸುವುದಾದರೆ ಅದೊಂದು "ಹಾದರದ ವಿಜ್ಞಾನ; ಕೊಳಕು ಹಂದಿ ಸ್ವರೂಪದ ವಿಜ್ಞಾನ; ನಿರಾಶಾದಾಯಕ ಕರಾಳ ವಿಜ್ಞಾನ: ಸಂಪತೆಂಬ ದೆವ್ವವನ್ನು ಪೂಜಿಸುವ ಶಾಸ್ತ್ರ; ಧನಪಿಶಾಚಿಯ ಸುವಾರ್ತೆ" ಎಂದೆಲ್ಲಾ ಟೀಕಿಸಿದರು.
 • ಆದರೆ ಆಡಂ ಸ್ಮಿತ್ತಿನ ವ್ಯಾಖ್ಯೆ ತಪ್ಪಲ್ಲ. "ಸಂಪತ್ತು" ಎಂದರೆ ಮಾನವನ ಬಯಕೆಗಳನ್ನು ಪೂರೈಸುವುದು ಮಾನವನ ಆರ್ಥಿಕ ಚಟುವಟಿಕೆಗಳ ಉದ್ದೇಶವಾಗಿದೆ, ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಬದಲಾವಣೆಯನ್ನು ಜನ ಒಮ್ಮೆಗೇ ಒಪ್ಪಿಕೊಳ್ಳುವುದಿಲ್ಲ ಅದರಲ್ಲೂ ಆಡಂ ಸ್ಮಿತ್ತನ ಜೀವಿತದ ಅವಧಿಯಲ್ಲಿ ಚರ್ಚಿನ ಪುರೊಹಿತ ವರ್ಗದ ಪ್ರಭಾವ ಬಲವಾಗಿದ್ದು, ಜನರ ಧಾರ್ಮಿಕ ಭಾವನೆಗಳು ಮೌಢ್ಯ ರೂಪದಲ್ಲಿ ಬೆಳೆದಿದ್ದವು.
 • ಧಾರ್ಮಿಕ ಮೌಢ್ಯ ತುಂಬಿದ ಒಂದು ಸಮಾಜದಲ್ಲಿ ಲೌಕಿಕ ವಾದವನ್ನು ದಿಢೀರಾಗಿ ಪ್ರತಿಪಾದಿಸಿದರೆ ಅದು ಹೇಗೆ ವಿಫಲವಾಗುತ್ತಿತ್ತು ಎನ್ನುವುದಕ್ಕೆ ಆಡಂ ಸ್ಮಿತ್ತನ ವ್ಯಾಖ್ಯೆ ಒಂದು ನಿದರ್ಶನವಾಗಿದೆ. ಆದರೆ ಸತ್ಯಕ್ಕೆ ಸೋಲು ಸಂಭವಿಸಬಹುದಾದರೂ, ಸದಾಕಾಲ ಸತ್ಯವನ್ನು ಮರೆ ಮಾಡಲು ಸಾಧ್ಯವಾಗುವುದಿಲ್ಲ.

ಮೌಲ್ಯ ಸಿದ್ದಾಂತ[ಬದಲಾಯಿಸಿ]

ಆಡಂ ಸ್ಮಿತ್ತ ರವರ ಸಹಿ
 • ಆಡಂ ಸ್ಮಿತ್ತನು ಉಪಯೋಗದ ಮೌಲ್ಯ ಮತ್ತು ವಿನಿಮಯದ ಮೌಲ್ಯ ಇವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾನೆ. ತನ್ನ ಸುಪ್ರಸ್ಸಿದ್ದವಾದ "ವಜ್ರ-ನೀರಿನ ವಿರೋಧ್ಯಾಬ್ಯಾಸ"ದ ಮೂಲಕ ಆತ ತುಷ್ಟಿಗುಣವು ಮೌಲ್ಯದ ಏಕೈಕ ನಿರ್ದಾರಕ, ಎನ್ನುವ ಅಭಿಪ್ರಾಯವನ್ನು ತಳ್ಳಿಹಾಕುತ್ತಾನೆ. ಸ್ಮಿತ್ತನ ಪ್ರಕಾರ "ನೀರಿನಷ್ಟು ಉಪಯೋಗವಾದದ್ದು ಇನ್ನೋಂದಿಲ್ಲ. ಆದರೆ ಅದಕ್ಕಿರುವ ಕೊಳ್ಳುವ ಶಕ್ತಿ ಬಹಳ ಕಡಿಮೆ.
 • ಇದಕ್ಕೆ ವಿರುದ್ದವಾಗಿ ಬಹಳ ಕಡಿಮೆ ಉಪಯೋಗ ಮೌಲ್ಯವಿರುವ ವಜ್ರ ತನಗೆ ಬದಲಾಗಿ ಬೃಹತ್ ಪ್ರಮಾಣದಲ್ಲಿ ಇತರೆ ಸರಕುಗಳನ್ನು ಕೊಳ್ಳಬಹುದು." ಹಾಗಾಗಿ ತುಷ್ಟಿಗುಣದೊಂದಾಗಿಯೇ ಮೌಲ್ಯ ನಿರ್ಧಾರವಾಗುವುದಿಲ್ಲ.[೯] ಈ ತನಕದ ಆಧಾರದಲ್ಲಿ ಸ್ಮಿತ್ತನು ಶ್ರಮ ಮೌಲ್ಯ ಸಿದ್ದಾಂತವನ್ನು ಪ್ರಸ್ತುತ ಪಡಿಸುತ್ತಾನೆ.
 • ಮೌಲ್ಯ ನಿರ್ಧಾರ ವಿಧಾನವು ಅನೇಕ ವರ್ಷಗಳಿಂದ ಅರ್ಥಶಾಸ್ತ್ರದ ಕೇಂದ್ರ ಸಮಸ್ಯೆಯಾಗಿದ್ದರೂ ಸ್ಮಿತ್ತನು ಶ್ರಮವೇ ಮೌಲ್ಯದ ನೈಜ ಮೂಲವೆಂದು ನಂಬಿದ್ದರು. "ಶ್ರಮವು ಎಲ್ಲಾ ಸರಕುಗಳ ವಿನಿಮಯ ಮೌಲ್ಯದ ನೈಜ ಮಾಪಕ" ಎನ್ನುತ್ತಾರೆ ಸ್ಮಿತ್. ಅಂದರೆ ಒಂದು ವಸ್ತುವಿನ ಮೌಲ್ಯವು ಅದನ್ನು ಉತ್ಪಾದಿಸಲು ತಗಲುವ ಶ್ರಮ ಪ್ರಮಾಣವನ್ನು ಅವಲಂಬಿಸಿರುತ್ತದೆ, ಎನ್ನುವುದು ಸ್ಮಿತ್ತಿನ ಅಭಿಪ್ರಾಯ.
 • ಸ್ಮಿತ್ತನು ತನ್ನ ಶ್ರಮಮೌಲ್ಯ ಸಿದ್ಧಾಂತದ ಮೂಲಕ ವಿನಿಮಯ ಮೌಲ್ಯದ ನೈಜವಾದ ಮಾಪನವನ್ನು ತೋರಿಸಲು ಬಯಸಿದ್ದ. ಆತ ನೈಜ ಬೆಲೆ ಮತ್ತು ಮಾರುಕಟ್ಟೆ ಬೆಲೆಗಳ ನಡುವೆ ಈ ಕಾರಣಕ್ಕಾಗಿ ವ್ಯತ್ಯಾಸ ಕಲ್ಪಿಸುತ್ತಾನೆ. ನೈಜ ಬೆಲೆಯು ಸ್ವಾಭಾವಿಕವಾದ ಲಾಭ, ಕೂಲಿ ಮತ್ತು ಗೇಣಿ ಧರಗಳನ್ನು ಒಳಗೊಂಡಿರುತ್ತದೆ. ಅಂದರೆ ನೈಜ ಬೆಲೆಯನ್ನು ಉತ್ಪಾಧನಾ ವೆಚ್ಚವು ನಿರ್ಧರಿಸುತ್ತದೆ. ಮಾರುಕಟ್ಟೆ ಬೆಲೆಯು ಬೇಡಿಕೆ ಪೂರೈಕೆಗಳಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಅದು ನೈಜ ಬೆಲೆಯ ಸುತ್ತ ಮುತ್ತ ಓಲಾಡುತ್ತಿರುತ್ತದೆ.
 • ಶ್ರಮ ಮೌಲ್ಯ ಸಿದ್ಧಾಂತದೊಡನೆ ಸ್ಮಿತ್ತನು ಉತ್ಪಾದನ ವೆ‍ಚ್ಚ ಮೌಲ್ಯ ಸಿದ್ಧಾಂತವನ್ನು ಅಭಿವೃದ್ಧಿ ಪಡೆಸಿದ. ಸ್ಮಿತ್ತನ ಪ್ರಕಾರ ಒಂದು ಸರಕಿನ ಮೌಲ್ಯವು ಅದರ ಉತ್ಪಾದನ ವೆಚ್ಚವಾಗಿರುತ್ತದೆ, ಅಂದರೆ ಭೂಮಿ, ಶ್ರಮ ಭಂಡವಾಳಗಳಿಗೆ ನೀಡುವ ಪ್ರತಿಫಲ. ಆತನ ಉತ್ಪಾದನ ವೆಚ್ಚದಲ್ಲಿ ಲಾಭವು ಬಡ್ಡಿಯನ್ನು ಒಳಗೊಂಡಿರುತ್ತದೆ. ಕೂಲಿ, ಗೇಣಿ ಮತ್ತು ಬಡ್ಡಿಯನ್ನು ಸ್ಮಿತ್ ಉತ್ಪಾದನ ವೆಚ್ಚದ ಅಂಗಗಳಾಗಿ ವಿಶ್ಲೇಷಿಸಿದ್ದಾನೆ. ಸ್ಮಿತ್ ಒಂದೆಡೆಯಲ್ಲಿ ಶ್ರಮ ಮೌಲ್ಯ ಸಿದ್ಧಾಂತವನ್ನು ಇನ್ನೊಂದೆಡೆಯಲ್ಲಿ ಉತ್ಪಾದನಾ ವೆಚ್ಚ ಸಿದ್ಧಾಂತವನ್ನು ಏಕಕಾಲದಲ್ಲಿ ಅಭಿವೃದ್ಧಿ ಪಡೆಸಿದ್ಧಾನೆ.

ಸ್ಮಿತ್ತನ ಶ್ರಮ ಮೌಲ್ಯ ಸಿದ್ಧಾಂತದ ದೋಷಗಳು[ಬದಲಾಯಿಸಿ]

 1. ಕ್ರಮ ಮೌಲ್ಯ ಸಿದ್ಧಾಂತವು ತುಷ್ಟಿಗುಣ ಅಥವಾ ಬೇಡಿಕೆಯ ಭಾಗವನ್ನು ಅವಹಣಿಸಿ ಕೊರತೆ ಅಥವಾ ಪೂರೈಕೆಯ ಭಾಗಕ್ಕೆ ಮಹತ್ವ ನೀಡುತ್ತದೆ.
 2. ಶ್ರಮ ಅಥವಾ ಉತ್ಪಾದನ ವೆಚ್ಚವನ್ನು ಅಳೆಯುವುದು ಬಹಳ ಕಷ್ಟ. ಆಡಂ ಸ್ಮಿತ್ತಿನ ಸಮಯವನ್ನು ಅಳತೆಗೋಲನ್ನಾಗಿ ಉಪಯೋಗಿಸಿದ್ದಾನೆ. ಆದರೆ ಎಲ್ಲಾ ಶ್ರಮಿಕರ ದಕ್ಷತೆಯು ಒಂದೇ ತರನಾಗಿರುವುದಿಲ್ಲ.
 3. ತಪ್ಪು ನಿರ್ದೇಶಿತ ಶ್ರಮಕ್ಕೆ ಮೌಲ್ಯವಿರಲು ಸಾಧ್ಯವಿಲ್ಲ. ಒಂದು ಸರಕಿನ ಉತ್ಪಾದನೆಗೆ ಎಷ್ಟೇ ಶ್ರಮ ತಗಲಿದ್ದರೂ, ಅದರ ಉದ್ದೆಶವನ್ನು ಅದಕ್ಕೆ ಪೂರೈಸಲು ಸಾದ್ಯವಿಲ್ಲದಿದ್ದರೆ, ಅಂತಹ ವಸ್ತುವಿಗೆ ಮೌಲ್ಯವಿರಲಾರದು. "ಉಪಯೊಗದ ಅಂಶವಿಲ್ಲದಿದ್ದರೆ ಯಾವುದಕ್ಕೂ ಮೌಲ್ಯವಿರಲಾದು. ತಪ್ಪು ನಿರ್ದೇಶಿತ ಶ್ರಮವನ್ನು ಶ್ರಮವೆಂದು ಪರಿಗಣಿಸಲಾಗದು." ಎಂದು ಕಾರ್ಲ್ ಮಾರ್ಕ್ಸ್ ಕೂಡಾ ಒಪ್ಪಿಕೊಂಡಿದ್ದಾರೆ.
 4. ಶ್ರಮ ಮೌಲ್ಯ ಸಿದ್ಧಾಂತವು ಪರಿಪೂರ್ಣವಲ್ಲ. ಅದು ಅಪೂರ್ವ ಸರಕುಗಳ, ಚಿತ್ರಗಳ ಮತ್ತು ಪ್ರಾಚೀನ ವಸ್ತುಗಳ ಮೌಲ್ಯ ನಿರ್ಣಯ ಹೇಗಾಗುತ್ತದೆಂದು ಹೇಳುವುದಿಲ್ಲ.

ಆದರೂ ಸ್ಮಿತ್ತಿನ ಮೌಲ್ಯ ಸಿದ್ಧಾಂತಕ್ಕೆ ಅದರದೇ ಆದ ಮಹತ್ವವಿದೆ. ಅದು ಉತ್ಪಾದನೆಯಲ್ಲಿ ಶ್ರಮದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಅನೇಕ ಅರ್ಥ ಶಾಸ್ತ್ರತಜ್ಞರು ಮುಂದೆ ಸ್ಮಿತ್ತಿನ ಹಾದಿಯಲ್ಲಿಯೆ ಮುಂದುವರಿದು ಮೌಲ್ಯ ನಿರ್ಣಯದಲ್ಲಿ ಅಲಭ್ಯತೆಯ ಪ್ರಾಮುಕ್ಯತೆಯನ್ನು ವಿವರಿಸಿದ್ಧಾರೆ. ಕಾರ್ಲ್ ಮಾರ್ಕ್ಸ್ ಬಂಡವಾಳ ಶಾಹಿಯ ಕುಂದು ಕೊರತೆಯನ್ನು ಬಯಲುಗೊಳಿಸಲು ಇದೇ ಸಿದ್ಧಾಂತವನ್ನು ಬಳಸಿದ.

ಉತ್ಪಾದನ ಸಿದ್ಧಾಂತ[ಬದಲಾಯಿಸಿ]

ಸ್ಮಿತ್ತನು ಶ್ರಮ ಮತ್ತು ಬಂಡವಾಳದ ಬಗ್ಗೆ ವಿಶ್ಲೇಷಿಸಿದ್ದಾನೆ ಶ್ರಮಕ್ಕೆ ವಿಶೇಷ ಮಹತ್ವ ನೀಡಿರುವ ಸ್ಮಿತ್, ಶ್ರಮ ವಿಭಜನೆ ಹಾಗು ಉತ್ಪಾದಕ ಮತ್ತು ಅನುತ್ಪಾದಕ ಸರಕುಗಳು ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸಿದ್ದಾರೆ.

 1. ಉತ್ಪಾದಕ ಮತ್ತು ಅನುತ್ಪಾದಕ ಶ್ರಮ: ಸ್ಮಿತನು ಉತ್ಪಾದಕ ಮತ್ತು ಅನುತ್ಪಾದಕ ಶ್ರಮದ ನಡುವೆ ವ್ಯತ್ಯಾಸ ಕಲ್ಪಿಸಿದ್ದು ಇದನ್ನು ವ್ಯವಸಾಯ ಪಂಥೀಯರ ವಿಶ್ಲೇಷಣೆಯ ಮುಂದುವರಿಕೆ ಎಂದು ಭಾವಿಸಲಾಗಿದೆ. ಬಂಡವಾಳವು ಚಾಲನೆ ಕೊಡುವ ಶ್ರಮ ಉತ್ಪಾದಕ ಶ್ರಮವಾಗಿದೆ. ಉತ್ಪಾದಕ ಶ್ರಮವು ವಸ್ತುವಿನ ಮೌಲ್ಯವನ್ನು ಹೆಚ್ಚಿಸಿದರೆ, ಅನುತ್ಪಾದಕ ಶ್ರಮದ ಪರಿಣಾಮ ಏನೂ ಇರುವುದಿಲ್ಲ. ಓರ್ವ ಉತ್ಪಾದಕನ ಶ್ರಮವು ಸರಕುಗಳ ಮೌಲ್ಯವನ್ನು ಹೆಚ್ಚುಸುತ್ತದೆ."ಪ್ರಭುತ್ವ" ಅದರ ಎಲ್ಲಾ ಅಧಿಕಾರಿಗಳು, ನ್ಯಾಯಾಂಗ ಮತ್ತು ರಕ್ಷಣಾಂಗ ಮತ್ತು ಪ್ರಭುತ್ವದ ಕೆಳಗಿನ ಭೂಸೈನ್ಯ ಹಾಗು ಜಲಸೇನೆ. ಅನುತ್ಪಾದಕ ಶ್ರಮದ ನಾಲಿಗೆ ಸೇರುತ್ತದೆ.
 2. ಶ್ರಮ ವಿಭಜನೆ: ಸ್ಮಿತ್ತಿನ ಉತ್ಪಾದನಾ ಸಿದ್ಧಾಂತದಲ್ಲಿ ಶ್ರಮ ವಿಭಜಣೆಯು ಕೇಂದ್ರ ಸ್ಥಾನವನ್ನು ಪಡೆದಿದೆ. ಶ್ರಮ ವಿಭಜಣೆಯೆಂದರೆ ಉತ್ಪಾದನ ಪ್ರಕ್ರಿಯೆಯನ್ನು ವಿವಿಧ ಹಂತಗಳಾಗಿ ವಿಂಗಡಿಸಿ ಆಯಾ ಹಂತಗಳಲ್ಲಿ ಬೇರೆ ಬೇರೆ ಮಂದಿ ಶ್ರಮಿಕರು ಕೆಲಸ ಮಾಡುವುದು. ಶ್ರಮ ವಿಭಜನೆಯನ್ನು ಒಂದು ನಿರ್ಧಿಷ್ಟ ವಿಧದಿ ಸಾಮಾಜಿಕ ಸಹಕಾರದ ಸ್ವಾಭಾವಿಕ ಅನುಭವ ಎಂದು ಸ್ಮಿತ್ ಕರೆದಿದ್ದಾರೆ. ಸ್ಮಿತ್ತಿನ ಪ್ರಕಾರ ಶ್ರಮ ವಿಭಜಣೆಯೆಂದರೆ ಅದಲು ಬದಲು ಮಾಡಲು, ವಸ್ತುಗಳನ್ನು ಬದಲಾಯಿಸಿಕೊಳ್ಳಲು ಮತ್ತು ವಿನಿಮಿಯ ಮಾಡಿಕೊಳ್ಳಲು ಮಾನವನ್ನಲ್ಲಿರುವ ಸ್ವಾಭಾವಿಕ ಪ್ರಕೃತಿ. ಶ್ರಮ ವಿಭಜಣೆಯ ತೊಂದರೆಗಳ ಬಗ್ಗೆ ಸ್ಮಿತ್ ಮೌನ ವಹಿಸಿಲ್ಲ
 3. ಶ್ರಮ ವಿಭಜಣೆಯಿಂದಾಗಿ ಕೆಲಸದಲ್ಲಿ ಏಕತಾನತೆ ಉಂಟಾಗುತ್ತದೆ. ಜೀವನ ಯಾಂತ್ರಿಕೃತ ವಾಗಿಬಿಡುತ್ತದೆ.
 4. ಶ್ರಮ ವಿಭಜನೆಯು ಸಾಂಸ್ಕೃತಿಕವಾಗಿ ಪರಕೀಯ ಪ್ರಜ್ಞೆಯನ್ನು ಉಂಟುಮಾಡುತ್ತದೆ.
 5. ಶ್ರಮ ವಿಭಜನೆಯು ಮಾನಸೀಯ ಸ್ತಗಿತತೆಗೆ ಕಾರಣವಾಗುತ್ತದೆ. ವೈಶಿಷ್ಟತೆಯು ಭೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ವೆಚ್ಛದಲ್ಲಿ ಸ್ಥಾಪಿಸಲ್ಪಡುತ್ತದೆ.
 6. ಶ್ರಮ ವಿಭಜನೆಯಿಂದಾಗಿ ಶ್ರಮದ ಚಲನೆನಿಂತು ಬಿಡುತ್ತದೆ.

ಆದರೂ ಶ್ರಮ ವಿಭಜನೆಯ ಬಗೆಗೆ ಸ್ಮಿತ್ ಆಶಾವಾದಿಯಾಗಿದ್ದಾರೆ. ಅವರಿಗೆ ಅದರಲ್ಲಿ ಒಳಿತುಗಳೇ ಹೆಚ್ಚಾಗಿ ಕಾಣಿಸುತ್ತದೆ. ಅದುದರಿಂದ ಶ್ರಮ ವಿಭಜನೆ ಶ್ರೇಯಸ್ಕರ ಮತ್ತು ಅದು ಮುಕ್ತ ಪೈಫ಼ೋಟಿಗೆ ಕಾರಣವಾಗಿದೆ ಎನ್ನುವುದು ಆಡಂ ಸ್ಮಿತ್ತನ ಅಭಿಮತ.

ಬಂಡವಾಳ[ಬದಲಾಯಿಸಿ]

ಆಡಂ ಸ್ಮಿತ್ತ ಮತ್ತು ಡೇವಿಡ್ ಹ್ಯುಮೆ

ಬಂಡವಾಳವು ಆರ್ಥಿಕಾಭಿವೃದ್ಧಿಯಲ್ಲಿ ನಿರ್ವಹಿಸುವ ಪಾತ್ರವನ್ನು ಆಡಂ ಸ್ಮಿತ್ತನು ವಿಶೇಷವಾಗಿ ವಿಶ್ಲೇಷಿಸಿದ್ದಾನೆ. ಸ್ಮಿತ್ತನ ಪ್ರಕಾರ ಬಂಡವಾಳವು

 1. ಉತ್ಪಾದನೆಯ ಒಂದು ಸಾಧನವಾಗಿದೆ.
 2. ಶ್ರಮಿಕರನ್ನು ಕೆಲಸದಲ್ಲಿ ಉಳಿಸಿಕೊಳ್ಳುವ ನಿಧಿಯಾಗಿ ಮತ್ತು
 3. ಆದಾಯದ ಒಂದು ಮೂಲವಾಗಿ ಕಾಣಿಸಿಕೊಂಡಿದೆ. ಅವನು ಬಂಡವಾಳವನ್ನು -

೧. ತಕ್ಷಣ ಅನುಬೋಗಕ್ಕಾಗಿ ೨. ಸ್ಥಿರ ಬಂಡವಾಳ ೩. ಚರ ಬಂಡವಾಳ ಎಂದು ವಿಭಜಿಸಿದ್ದಾನೆ. ವಿನಿಮಯ ಮತ್ತು ವ್ಯಾಪಾರ: ಸ್ಮಿತ್ತನು ವಿನಿಮಯಕ್ಕೆ ಸಂಬಂಧಿಸಿದಂತೆ ಹಣದ ಪ್ರಮುಕ್ಯತೆ ಬಗ್ಗೆ ವಿಶ್ಲೇಷನೆ ಮಾಡಿದ್ದಾನೆ. ಆತನ ಗರಿಷ್ಟ ಪ್ರಯೋಜನ ತತ್ವವು ಅಂತರರಾಷಷ್ಟೀಯ ವ್ಯಾಪಾರಕ್ಕೆ ಒಂದು ಕಾರಣವನ್ನು ನೀಡಿದೆ. ಸರಕಾರ ವ್ಯಾಪಾರದಲ್ಲಿ ಹರ್ತ ಕ್ಷೇಪ ಮಾಡಕೂಡದು. ಅಂದರೆ ವ್ಯಾಪಾರವು ಯಾವುದೇ ನಿರ್ಭಂದಗಳಿಂದ ಮುಕ್ತವಾಗಿರಬೇಕು ಎನ್ನುವುದು ಸ್ಮಿತನ ಆಭಿಮತವಾಗಿತ್ತು. "ಪ್ರತಿಯೊಬ್ಬ ಮನುಷ್ಯನು ಒಂದರ್ಥದಲ್ಲಿ ಒಬ್ಬ ವ್ಯಾಪಾರಿಯಾಗುತ್ತಾನೆ. ಅದುದರಿಂದ ವಾಣಿಜ್ಯ ಸಾರ್ವತ್ರಿಕ ಸಾಧನವಾಗಿ ಹನವನ್ನು ಬಳಸಬೇಕಾಗುತ್ತದೆ." ಎಂದಿದ್ದಾನೆ ಸ್ಮಿತ್. ಸ್ಮಿತ್ತನ ಈ ವಿವರಣೆಯು ಸಾಪೇಕ್ಷ ಮೌಲ್ಯ ಎಂಬ ಪ್ರಬೇಧಕ್ಕೆ ಪುಷ್ಟಿ ನೀಡಿದ್ದಾನೆ. ಆಡಂ ಸ್ಮಿತ್ತನ ಆರ್ಥಿಕ ಅಭಿಪ್ರಾಯಗಳಲ್ಲಿ ಟೀಕಾಕಾರರು ಐದು ಮುಖ್ಯವಾದ ದೋಷಗಳನ್ನು ಗುರುತಿಸಿದ್ದಾರೆ.

 1. ಆತನೊಬ್ಬ ಪ್ರಗಲ್ಭ ಭೌತವಾದಿಯಾಗಿದ್ದು ಮಾನವ ಕಲ್ಯಾನಕ್ಕಿಂತಲೂ ಸಂಪತ್ತಿನ ಆರ್ಜನೆಗೆ ಅಧಿಕ ಮಹತ್ವ ನೀಡಿದ್ದಾನೆ.
 2. ಆತನೊರ್ವ ವ್ಯಕ್ತಿವಾದಿಯಾಗಿದ್ದು ಪ್ರತಿಯೊರ್ವನು ಸ್ವಪ್ರೇಮ ಮತ್ತು ಸ್ವಹಿತಗಳಿಂದ ತುಂಬಿರುವ ಆರ್ಥಿಕ ಮಾನವ ಎಂಬ ಅವಾಸ್ತವಿಕ ಕಲ್ಪನೆಯನ್ನು ಮಾಡಿದ್ದಾನೆ.
 3. ವಿತರಣೆಗೆ ಸಂಬಂಧಿಸಿದಂತೆ ಸ್ಮಿತ್ತನ ವಿವರಣೆ ಅಸಂಪೂರ್ಣ ಮಾತ್ರವಲ್ಲ ಗೋಜಲು ಗೋಜಲಾಗಿದೆ.
 4. ಸ್ಮಿತ್ ಲಾಭದ ಸಿದ್ಧಾಂತ, ಪ್ರತಿಫ಼ಲ ನಿಯಮ ಮತ್ತು ತುಲನಾತ್ಮಕ ವೆಚ್ಚದ ಸಿದ್ದಾಂತಗಳನ್ನು ಅಭಿವೃದ್ಧಿ ಪಡಿಸಿಲ್ಲ.
 5. ಅವನ ನೈಸರ್ಗಿಕ ಸ್ವಾತಂತ್ರ್ಯ, ಶ್ರಮ ವಿಭಜನೆ, ವ್ಯಾಪರ ಮತ್ತು ವಿತರಣೆಗೆ ಸಂಭಂಧಿಸಿದ ವಿವರಣೆಗಳು ವ್ಯವಸಾಯ ಪಂಥೀಯರ ಅಭಿಪ್ರಾಯದಿಂದ ಪ್ರೇರಿತಗೊಂಡವು. ಆದರೂ ಆಡಂ ಸ್ಮಿತ್ ರಾಜಕೀಯಾರ್ಥಶಾಸ್ತ್ರ ಪಿತಾಮಹನೆಂಬ ಗೌರವಕ್ಕೆ ಕಾರಣನಾಗಿರುವುದು ಈ ಕೆಳಕಂಡ ಕಾರಣಗಳಿಂದಾಗಿ:
ಆಡಂ ಸ್ಮಿತ್ತರವರ ಸಮಾಧಿ
 1. ಆತನ ವೆಲ್ತ್ ಆಫ಼್ ನೇಷನ್ಸ್ ಆಧುನಿಕ ಅರ್ಥಶಾಸ್ತ್ರದ ಅಸ್ತಿಭಾರವಾಯಿತು.
 2. ವಿಷಯವನ್ನು ಸುವ್ಯವಸ್ಥಿತವಾಗಿಸುವುದರ ಮೂಲಕ ಆತ ಅರ್ಥಶಾಸ್ತ್ರವನ್ನು ಒಂದು ವಿಜ್ಞಾನವನ್ನಾಗಿಸಿದ.
 3. ಸ್ಮಿತ್ ಪೂರ್ವದ ಚಿಂತಕರು ಉತ್ಪಾದನೆಗಷ್ಟೇ ಪ್ರಾಧಾನ್ಯ ನೀಡಿದ್ದಾರೆ ಸ್ಮಿತ್ ಅನುಭೋಗ ಮತ್ತು ಉತ್ಪಾದನೆಗಳಿಗೆ ಸಮಾನವಕಾಶ ನೀಡಿದೆ ಮತ್ತು ಉತ್ಪಾದನೆಗಳು ಸಮಾನವಕಾಶ ನೀಡಿದೆ.
 4. ಶ್ರಮಕ್ಕೆ ಬಹಳ ಮಹತ್ವ ನೀಡುವುದರೊಂದಿಗೆ ಆತ ಬಂಡವಾಳಕ್ಕೂ ಪ್ರಾಮುಖ್ಯತೆ ನೀಡಿದ.
 5. ಶ್ರಮ ವಿಭಜನೆಗೆ ಸ್ಮಿತ್ ಆರ್ಥಿಕ ಜೀವನದ ಮುಂಚೂಣಿಯ ಸ್ಥಾನವನ್ನು ನೀಡಿದ್ದಾನೆ.
 6. ಸ್ಮಿತ್ತನ ಮೌಲ್ಯ ಸಿದ್ದಾಂತವು ಮೌಲ್ಯ ಸಿದ್ದಾಂತದ ಒಟ್ಟು ಬೆಳವಣೆಗೆಗೆ ಕಾರಣವಾಗಿ ಎಲ್ಲಾ ಆರ್ಥಿಕಶಾಸ್ತ್ರಜ್ಞರಿಗೆ ದಾರಿದೀಪವಾಯಿತು.
 7. ಸ್ಮಿತ್ತನ ನೈಸರ್ಗಿಕವಾದ, ಆಶಾವಾದ ಮತ್ತು ಉದಾರವಾದ ಮುಂದೆ ಉದಾರವಾದೀಯ ಅರ್ಥಚಿಂತನೆಯ ಬೆಳವಣೆಗೆಗೆ ಕಾರಣವಾಯಿತು.
 8. ಸ್ಮಿತ್ತನ ಲೇಜೇ ಫ಼ೇರ್ ನೀತಿಯು ಸುಮಾರು ೧೫೦ ವರ್ಷಗಳವರೆಗೆ ಅರ್ಥನೀತಿಯನ್ನು ಪ್ರಭಾವಿತಗೊಳಿಸಿತು.
 9. ಆತನ ತೆರೆಗೆಯ ಸೂತ್ರಗಳು ಈಗಲೂ ತೆರಿಗೆ ವ್ಯವಸ್ಥೆಯ ಅಡಿಗಲಾಗಿವೆ.

ಆಡಂ ಸ್ಮಿತ್ತನ ವಿಚಾರಗಳ ಹಿರಿಮೆಯನ್ನು ಅಲೆಗ್ಸಾಂಡ್ರ್ ಗ್ರೇ ಮನಮುಟ್ಟುವಂತೆ ಕೆಳಗಿನ ಮಾತುಗಳಲ್ಲಿ ಹೇಳಿದ್ದಾರೆ. "ಆಡಂ ಸ್ಮಿತ್ತನಿಗಿಂತ ಮೊದಲು ಅನೇಕ ಆರ್ಥಿಕ ತತ್ವಗಳಿದ್ದವು ಅವನಿಂದಾಗಿ ನಾವು ಅರ್ಥಶಾಸ್ತ್ರವನ್ನು ವಿಶ್ಲೇಷಿಸುವ ಹಂತಕ್ಕೆ ತಲುಪಿದ್ದೇವೆ." "ಎಲ್ಲಾ ಆರ್ಥಿಕ ಚಿಂತನೆಯ ಪಂಥಗಳು ತಮ್ಮ ಮೂಲ ಅಥವಾ ಸ್ಪೂರ್ತಿಯನ್ನಾಗಿ ಆತನನ್ನು ಆರಿಸಿರುವುದು ಸ್ಮಿತ್ತನ ದೊಡ್ಡತನಕ್ಕೆ ನೀಡುವ ಶ್ರದ್ಧಾಂಜಲಿಯಾಗಿದೆ."

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. L. Davis, William; Figgins, Bob; Hedengren, David; B. Klein, Daniel (May 2011). "Economics Professors’ Favorite Economic Thinkers, Journals, and Blogs (along with Party and Policy Views)" (PDF). Econ Journal Watch 8 (2): 133.
 2. Rae, John (1895). Life of Adam Smith. London & New York: Macmillan. ISBN 0-7222-2658-6.
 3. Bussing-Burks, Marie (2003). Influential Economists. Minneapolis: The Oliver Press. ISBN 1-881508-72-2.
 4. Buchan, James (2006). The Authentic Adam Smith: His Life and Ideas. W. W. Norton & Company. ISBN 0-393-06121-3.
 5. Rae, John (1895). Life of Adam Smith. London & New York: Macmillan. ISBN 0-7222-2658-6.
 6. David Hume to Adam Smith, 12 April 1759, in Hume (2011), p. 49
 7. Buchholz, Todd (1999). New ideas from Dead Economists: An introduction to modern economic thought. Penguin Books. ISBN 0-14-028313-7.
 8. Buchholz, Todd (1999). New ideas from Dead Economists: An introduction to modern economic thought. Penguin Books. ISBN 0-14-028313-7.
 9. http://www.investopedia.com/articles/economics/09/adam-smith-wealth-of-nations.asp