ಆಗಷ್ಟ್ ರಶ್ (ಚಲನಚಿತ್ರ)
August Rush | |
---|---|
ಚಿತ್ರ:August rush poster.jpg | |
ನಿರ್ದೇಶನ | Kirsten Sheridan |
ನಿರ್ಮಾಪಕ | Richard Barton Lewis |
ಲೇಖಕ | Nick Castle James V. Hart Paul Castro |
ಪಾತ್ರವರ್ಗ | Freddie Highmore Keri Russell Jonathan Rhys Meyers with Terrence Howard and Robin Williams |
ಸಂಗೀತ | Mark Mancina |
ಛಾಯಾಗ್ರಹಣ | John Mathieson |
ಸಂಕಲನ | William Steinkamp |
ವಿತರಕರು | Warner Bros. (USA) Entertainment Film Distributors (UK) |
ಬಿಡುಗಡೆಯಾಗಿದ್ದು | November 21, 2007 |
ಅವಧಿ | 114 minutes |
ದೇಶ | ಟೆಂಪ್ಲೇಟು:FilmUS |
ಭಾಷೆ | English |
ಬಂಡವಾಳ | $25,000,000 (est.) |
ಬಾಕ್ಸ್ ಆಫೀಸ್ | $66,121,062[೧] |
ಆಗಷ್ಟ್ ರಶ್ 2007 ರ ಅಮೆರಿಕಾದ ನಾಟಕಆಧಾರಿತ ಚಲನಚಿತ್ರ,ಇದನ್ನು ಕಿರೆಸ್ಟೆನ್ ಶೆರಿಡ್ಯಾನ್ ನಿರ್ದೇಶಿಸಿದ್ದಾರೆ,ಪೌಲ್ ಕ್ಯಾಸ್ಟ್ರೊ,ನಿಕ್ ಕ್ಯಾಸ್ಟಲ್ ಮತ್ತು ಜೇಮ್ಸ್ ವಿ.ಹಾರ್ಟ್ ಇದನ್ನು ರಚಿಸಿದ್ದರೆ ರಿಚರ್ಡ್ ಬಾರ್ಟೊನ್ ಲೆವಿಸ್ ಇದರ ನಿರ್ಮಾಪಕರಾಗಿದ್ದಾರೆ. ಇದನ್ನು ಚಾರ್ಲ್ಸ್ ಡಿಕೆನ್ಸನ್ ಬರೆದಿರುವ ಆಲಿವರ್ ಟ್ವಿಸ್ಟ್ ನ ಇಲ್ಲಿಯತನಕದ ಪ್ರಸಂಗದ ಮೇಲೆ ಮರು ರಚನೆ ಮಾಡಲಾಗಿದೆ ಎಂದು [೨] ಉಲ್ಲೇಖಿಸಲಾಗುತ್ತದೆ
ಕಥಾವಸ್ತು
[ಬದಲಾಯಿಸಿ]ಇವಾನ್ ಟೇಯಲರ್ 12- ವರ್ಷದ ಬಾಲಕ (ಫ್ರೆಡ್ಡಿ ಹೈಮೊರ್ )ಒಬ್ಬ ಬಹಿಷ್ಕೃತ ಬಾಲಕರ ಆಶ್ರಯ ತಾಣದಲ್ಲಿ ಆತ ವಾಸ ಕಂಡುಕೊಂಡಿದ್ದ,ಆದರೆ ಎಲ್ಲರೂ ಆತನ ಪೋಷಕರು ಜೀವಂತವಾಗಿದ್ದಾರೆಂದು ನಂಬಿದ್ದರು. ಆತ ಪ್ರತಿಯೊಂದರಲ್ಲಿಯೂ ಸಂಗೀತವನ್ನು ಆಲಿಸುತ್ತಿದ್ದ,:ಅಂದರೆ ಬೆಳಕಿನಲ್ಲಿ,ಗಾಳಿಯಲ್ಲಿ ಅಲ್ಲದೇ ಹಾರುತ್ತಿರುವ ತರೆಗಲೆಗಳಲ್ಲೂ ಆತ ಸಂಗೀತದ ನಾದವನ್ನು ಆಲಿಸುತ್ತಿದ್ದ. ಆತ ತನ್ನ ತಂದೆತಾಯಿ-ಪೋಷಕರಿಂದಲೂ ಸಂಗೀತವನ್ನು ತಾನು ಕೇಳುತ್ತಿದ್ದೇನೆಂದು ನಂಬಿದ್ದ. ಅವರು ತನ್ನನ್ನು ಯಾವಾಗಲೂ ಬಯಸುತ್ತಾರೆ ಎಂದು ನಂಬಿದ ಆತನಿಗೆ ಅವರು ಒಂದಿಲ್ಲ ಒಂದು ದಿನ ಇಲ್ಲಿಗೆ ಬಂದು ತನ್ನನ್ನು ಕರೆದೊಯ್ಯುತ್ತಾರೆ ಎಂಬ ವಿಶ್ವಾಸದಲ್ಲಿದ್ದ. ಆತ ನ್ಯುಯಾರ್ಕ್ ನ ಮಕ್ಕಳ ಸೇವೆಗಳ ವಿಭಾಗದ ಸಮಾಜ ಸೇವಕ ಕಾರ್ಯಕರ್ತ ರಿಚರ್ಡ್ ಜೆಫ್ರಿಯನ್ನು (ಟೆರೆನ್ಸ್ ಹೌವರ್ಡ್ )ಅವರನ್ನು ಭೇಟಿಯಾದ. ತಾನು ದತ್ತುಹೋಗಲು ಇಷ್ಟಪಡುವುದಿಲ್ಲ ಎಂದು ಇವಾನ್ ಆತನಿಗೆ ಹೇಳಿದ. ಜೆಫ್ರೀಸ್ ಇವಾನ್ ನನ್ನು ಇಷ್ಟಪಡುತ್ತಾನೆ ಅಲ್ಲದೇ ತನ್ನ ಗುರುತಿನ ಕಾರ್ಡನ್ನು ನೀಡುತ್ತಾನೆ. ಇವಾನ್ ಗೆ ಅಂತಹ ಗುಟ್ಟಿನ ವಿಷಯವೇನಾದರೂ ಹೇಳಬೇಕಿದ್ದರೆ ತನಗೆ ನೇರವಾಗಿ ತಿಳಿಸಬಹುದೆಂದೂ ಅಲ್ಲದೇ ಅಂತಹ ಯಾವುದೇ ಅಗತ್ಯವಿದ್ದರೆ ತನ್ನನ್ನು ಸಂಪರ್ಕಿಸುವಂತೆ ಆತ ಹೇಳಿದ. ಈ ಹಿಂದಿನ ಕಥಾಸುರುಳಿಗಳು; ಇವಾನ್ ನ ತಂದೆತಾಯಿಗಳು ಲೈಲಾ ನೊವಸೆಕ್ (ಕೆರಿ ರಸೆಲ),ಅಪ್ರಾಪ್ತ ವಯಸ್ಸಿನ ಹುಡುಗ ಸಂಗೀತಗೋಷ್ಟಿಯಲ್ಲಿ ಉತ್ತಮ ವಾದ್ಯ ನುಡಿಸುವಾತ,ಅಲ್ಲದೇ ಲುಯಿಸ್ ಕೊನ್ನೆಲ್ಲಿ (ಜೊನಾಥನ್ ರೆಹ್ಸ್ ಮೆಯೆರ್ಸ್ )ಈತನೊಬ್ಬ ಐರಿಶ್ ಗಿಟಾರು ವಾದಕ,ಈತ ರಾಕ್ ಬಾಂಡ್ ವೊಂದರ ಪ್ರಮುಖ ಕಲಾವಿದ. ಅವರು ಒಂದೇ ಭೋಜನಕೂಟದಲ್ಲಿ ಭೆಟ್ಟಿಯಾಗಿ ಸ್ಮರ್ಣೀಯ ರಾತ್ರಿ ಕಳೆದವರು. ಲೈಲಾಳ ಕಟ್ಟುನಿಟ್ಟಿನ ತಂದೆಯ ನಡತೆಯಿಂದಾಗಿ ಲೈಲಾ ಲುಯಿಸ್ ನನ್ನು ಭೇಟಿ ಮಾಡಲು ಅಸಮರ್ಥಳಾದಳು,ಹೀಗೆ ಅವರು ಒಬ್ಬರನೊಬ್ಬರು ಎಂದಿಗೂ ನೋಡಲಾಗದಂತೆ ಪ್ರತ್ಯೇಕಗೊಂಡರು. ಲೈಲಾ ನಂತರ ಅವರ ಮಗುವನ್ನು ಹೊತ್ತ ಗರ್ಭಿಣಿಯಾದಳು. ಆದರೆ ಆಕೆಯ ತಂದೆಗೆ ಇದು ಇಷ್ಟ ಇರಲಿಲ್ಲ ಅವಳ ಯಶಸ್ವಿ ಭವಿಷ್ಯದ ಬದುಕಿಗೆ ಈ ಮಗು ಅಡ್ಡಿಯಾಗಬಾರದೆಂದು ಆತ ಅವಳಿಗೆ ಸೂಚಿಸಿದ. ತಂದೆಯೊಡನೆಯ ವಿವಾದೊಂದಿಗೆ ಲೈಲಾ ತಂದೆಯ ರೆಸ್ಟಾರಂಟ್ ನಿಂದ ಓಡಿ ಹೋಗುವ ಆಕೆ ಕಾರೊಂದರಿಂದ ಅಪಘಾತಕ್ಕೀಡಾಗುತ್ತಾಳೆ. ಆಸ್ಪತ್ರೆಯಲ್ಲಿರುವಾಗ ಆಕೆ ಮಗುವಿಗೆ ಜನ್ಮ ನೀಡುತ್ತಾಳೆ. ಆಕೆ ಕೊನೆಯದಾಗಿ ದಾದಿಗಳ ಮಾತನ್ನು ಆಲಿಸಿದಾಗ ಮಗುವಿನ ಎದೆ ಬಡಿತ ಇಳಿಮುಖವಾಗುತ್ತಿದೆ ಎಂಬ ಮಾತನ್ನು ಕೇಳಿಸಿಕೊಂಡಳು. ಯಾವಾಗ ಆಕೆ ಎಚ್ಚರಗೊಳ್ಳುತ್ತಾಳೋ ಆಗ ಆಕೆಯ ತಂದೆ ಅಲ್ಲಿದ್ದು ಮಗು ತನ್ನ ಪಾಲಿಗಿಲ್ಲ ಎನ್ನುತ್ತಾನೆ. ಅವಳಿಗೆ ಗೊತ್ತಿಲ್ಲದೇ ಮಗು ಬದುಕಿ ಉಳಿಯುತ್ತದೆ,ಅಲ್ಲಿ ಆಕೆಯ ತಂದೆ ದತ್ತುಕೊಡುವ ಕಾಗದದ ಮೇಲೆ ಅವಳ ನಕಲಿ ಸಹಿ ಹಾಕಿರುತ್ತಾನೆ. ಲುಯಿಸ್ ಮತ್ತು ಲೈಲಾ ತಮ್ಮ ನಟನಾ ಕಲೆಯ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.ಆದರೆ ತಮ್ಮ ಮಗುವಿನ ಅಸ್ತಿತ್ವದ ಬಗ್ಗೆ ಯಾವುದೇ ಸುಳಿವು ಅವರಿಗಿರಲಿಲ್ಲ. ಇವಾನ್, ಇತ್ತ ತಾನು ಸಂಗೀತ ನುಡಿಸುವುದನ್ನು ಕಲಿತರೆ ತನ್ನ ತಂದೆ-ತಾಯಿಗಳನ್ನು ಹುಡುಕಬಹುದೆಂಬ ನಂಬಿಗೆಯುಳ್ಳವನಾಗಿದ್ದ. ಅವರು ತನ್ನನ್ನು ಆಲಿಸುತ್ತಿದ್ದಾರೆಂದು ಆತ ನಂಬಿದ್ದ. ಹೀಗೆ ಆತ ಜೆರಿಯ ಕಾರ್ಡನ್ನು ಕಳೆದು ಹಾಕಿ ನ್ಯುಯಾರ್ಕ್ ನಗರಕ್ಕೆ ಓಡಿ ಹೋಗುತ್ತಾನೆ. ಆತ ಆರ್ಥರ್ (ಲೆಯಿನ್ ಜಿ ಥಾಮಸ್ III),ಎಂಬ ಎಳೆ ಪ್ರಾಯದ ಬೀದಿ ಸಂಗೀತಗಾರನನ್ನು ವಾಶಿಂಗ್ಟನ್ ಸ್ಕ್ವೆರ್ ಪಾರ್ಕ್ ನಲ್ಲಿ ವಾದ್ಯ ನುಡಿಸುವಾಗ ಬೇಟಿಯಾಗುತ್ತಾನೆ. ನಂತರ ಆರ್ಥರ್ ನ ಮನೆಗೆ ಆತ ಹಿಬಾಲಿಸಿ ಹೋಗುತ್ತಾನೆ. ನಂತರ ಮ್ಯಾಕ್ಸ್ ವೆಲ್ "ಮಂತ್ರವಾದಿ"ವಾಲೇಸ್ (ರಾಬಿನ್ ವಿಲಿಯಮ್ಸ್ )ಅವರಿಂದ ಅವರು ನಡೆಸುವ ಬೀದಿ ಮಕ್ಕಳು,ಓಡಿ ಬಂದವರಿಗಾಗಿರುವ ಅನಾಥಾಲಯಕ್ಕೆ ಬರುತ್ತಾನೆ.ಇಲ್ಲಿ ಇಂತಹ ಬಹಿಷ್ಕೃತ ಮಕ್ಕಳಿಗೆ ಉದ್ಯೋಗ ತರಬೇತು,ಶಿಕ್ಷಣ ಮತ್ತು ಸಂಗೀತ ಇವನ್ನೆಲ್ಲ ಕಲಿಸಿಕೊಡಲಾಗುತ್ತದೆ. ಇವಾನ್ ಅತಿ ಶೀಘ್ರದಲ್ಲಿ ಸಂಗೀತ ಕ್ಷೇತ್ರದಲ್ಲಿ ಅರಳುವ ಪ್ರತಿಭೆಯಾಗಿ ಹೆಸರು ಮಾಡಿದ. ಹೀಗೆ ಆ (ವಿಜರ್ಡ)ಮಾಂತ್ರಿಕ ಇವಾನ್ ನನ್ನು ಗುರುತಿಸಿ "ಆಗಷ್ಟ್ ರಶ್ "ಎಂದು ಹೆಸರಿಸುತ್ತಾನೆ.ನಿನ್ನ ನಿಜನಾಮಧೇಯ ಗೊತ್ತಾದರೆ ವಾಪಸು ಅನಾಥಾಲಯಕ್ಕೆ ಕಳಿಸಿಕೊಡುವುದಾಗಿ ಹೇಳುತ್ತಾನೆ. ತನ್ನ ಮಗನು ಜೀವಂತವಾಗಿದ್ದಾನೆಂದು ಲೈಲಾಗೆ ಅವಳ ತಂದೆ ಮರಣಶಯ್ಯೆಯಲ್ಲಿರುವಾಗ ಹೇಳಿರುವ ವಿಷಯ ಅವಳಿಗೆ ವೇದ್ಯವಾಗುತ್ತದೆ. ತರುವಾಯ ಲೈಲಾ ತನ್ನ 12-ವರ್ಷ ವಯಸ್ಸಿ ಮಗನ ಹುಡುಕಾಟಕ್ಕೆ ತಕ್ಷಣವೇ ನ್ಯುಯಾರ್ಕ್ ಗೆ ತೆರಳುತ್ತಾಳೆ. ಇದೇ ವೇಳೆಗೆ ಲುಯಿಸ್ ತನ್ನ ಸಹೋದರ ಮತ್ತು ಬ್ಯಾಂಡ್ ಸಹೋದ್ಯೋಗಿಯಿಂದ ಪಾರ್ಟಿಯೊಂದರಲ್ಲಿ ಚಿತ್ರಹಿಸಂಸೆಗೊಳಗಾಗುತ್ತಾನೆ.ಇದು ಆತನ ವೃತ್ತಿ ಬದುಕನ್ನು ಮತ್ತೊಮ್ಮೆ ಹಿಂದೆ ನೋಡುವಂತೆ ಮಾಡುತ್ತದೆ. ಆತ ಕೊನೆಯಲ್ಲಿ ಲೈಲಾಳ ಪೂರ್ಣ ವಿಳಾಸ ಮತ್ತು ಅವಳಿರುವ ತಾಣವನ್ನು ಶಿಕ್ಯಾಗೊದಲ್ಲಿಪತ್ತೆಹಚ್ಚಿದ.ಹೀಗೆ ಆತ ತನ್ನ ಕೆಲಸ ಬಿಟ್ಟು ಅಲ್ಲಿಗೆ ಹೋಗಿ ಮತ್ತೆ ಪುನರ್ ಮಿಲನದ ಕನಸು ಕಂಡ. ಥೆಯಟರ್ ಹೋಮ್ ಮೇಲೆ ಪೊಲೀಸರ ದಾಳಿಯ ನಂತರ ವಿಜರ್ಡ್ ಮಾಂತ್ರಿಕ ಅದನ್ನು ತ್ಯಜಿಸಿ ದೂರ ಹೋಗುತ್ತಾನೆ.ಆಗ ಇವಾನ್ ನಗರದೊಳಗಿನ ಚರ್ಚ್ ವೊಂದರಲ್ಲಿ ಆಶ್ರಯ ಪಡೆಯುತ್ತಾನೆ. ನಂತರ ಆತ ತನ್ನ ನೈಸರ್ಗಿಕ ಸಂಗೀತ ಪ್ರತಿಭೆಯಿಂದ ಎಲ್ಲರ ಮನಸೆಳೆದು ಛಾಪು ಮೂಡಿಸಿ ಜುಲಿಯರ್ಡ್ ಸ್ಕೂಲ್ ಗೆ ಆತನನ್ನು ಕರೆತರಲಾಯಿತು.ಆತ ತನ್ನ ಹೆಸರನ್ನು ಸ್ಕೂಲಿನ್ ಹಾಜರಿ ಪಟ್ಟಿಯಲ್ಲಿ "ಆಗಷ್ಟ ರಶ್ "ಎಂದು ನಮೂದಿಸಲು ಹೇಳಿದ. ಆತ ತನ್ನ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ತಂದನಲ್ಲದೇ ಆತ ರಚಿಸಿದ ಗೀತೆಯೊಂದು ನ್ಯುಯಾರ್ಕ್ ಸಂಗೀತ ಗೋಷ್ಟಿ ಸೆಂಟ್ರಲ್ ಪಾರ್ಕ್ ನಲ್ಲಿ ನಡೆದ ಆರ್ಕೆಸ್ಟ್ರಾದಲ್ಲಿ ಪ್ರದರ್ಶನಗೊಂಡಿತು. ದುರದೃಷ್ಟಾವಶಾತ್ ಆ ಮಾಂತ್ರಿಕ ಒಂದು ದಿನ ಈತನ ವೇಷ ಬದಲಾವಣೆ ಮಾಡುವ ಕೋಣೆಗಳೊಳಗೆ ನುಗ್ಗಿ ಆತನ ನಿಜನಾಮವನ್ನು ಬಯಲಿಗೆಳೆಯುವುದಾಗಿ ಹೆದರಿಸುತ್ತಾನೆ.ನಂತರ ಆತ ಮನಸ್ಸಿನಲ್ಲದೇ ಆತನ ಹಿಂಬಾಲಿಸಿ ಮತ್ತೆ ಬೀದಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸುವ ಕಾರ್ಯಕ್ಕೆ ಮುಂದಾಗುತ್ತಾನೆ. ಇದೇ ವೇಳೆಗೆ ಲೈಲಾ ಇವಾನ್ ನ ಗುರುತನ್ನು ಜೆಫ್ರೀಸ್ ಮೂಲಕ ಪತ್ತೆ ಹಚ್ಚುತ್ತಾಳೆ.ಅದಲ್ಲದೇ ತನ್ನ ಮಗನನ್ನು ಹುಡುಕಲು ನ್ಯುಯಾರ್ಕ್ ನಲ್ಲಿ ಇರಲು ಬಯಸುತ್ತಾಳೆ. ಅಲ್ಲಿರುವಾಗ ಆಕೆ ತನ್ನ ವೃತ್ತಿಜೀವನವನ್ನು ಸೆಂಟ್ರಲ್ ಪಾರ್ಕ್ ನಲ್ಲಿ ಓರ್ವ ವಾದ್ಯಗೋಷ್ಟಿಯ ವಾದಕಿಯಾಗಿ ಕೆಲಸ ಮಾಡಲು ನಿರ್ಧರಿಸುತ್ತಾಳೆ. ಶಿಕ್ಯಾಗೊದಲ್ಲಿರುವ ಲೈಲಾಳ ನೆರೆಹೊರೆಯ ಗೆಳತಿಯೊಬ್ಬಳು ನೀಡಿದ ತಪ್ಪು ಮಾಹಿತಿಯಿಂದ ಆಕೆ ಮದುವೆಯಾದ ನಂತರ ಮತ್ತೆ ತನ್ನ ಹಳೆಯ ಬ್ಯಾಂಡ್ ನೊಂದಿಗೆ ಮತ್ತೆ ಸಂಗೀತ ಗೋಷ್ಟಿಗೆ ಬರುತ್ತಾಳೆಂಬ ತಪ್ಪು ಮಾಹಿತಿ ನೀಡಿದಳು. ಆತನಿಗೆ ಆಕಸ್ಮಿಕವಾಗಿ ಇವಾನ್ ನ ಭೇಟಿಯಾಗುವ ಅವಕಾಶ ಸಿಗುತ್ತದೆ,ಇವಾನ್ ವಾಶಿಂಗ್ಟನ್ ಕಾರ್ನರ್ ಗೆ ಮರಳಿದ ನಂತರ ಅವರಿಬ್ಬರೂ ಅತ್ಯಂತ ಸುಧಾರಿತ ಸಂಗೀತ ನುಡಿಸಿ ಸೈ ಎನಿಸಿಕೊಳ್ಳುತ್ತಾರೆ.ಆದರೆ ಅವರಿಬ್ಬರ ರಕ್ತ ಸಂಬಂಧ ಇದೆ ಎಂಬ ಅರಿವು ಅವರಗಿರಲಿಲ್ಲ. ಲುಯಿಸ್ ಈ ಸಂಗೀತ ಬಿಡದಂತೆ"ಆಗಷ್ಟ್ "ನನ್ನು ಹುರಿದುಂಬಿಸುತ್ತಾನೆ,ತನ್ನ ಸಂಗೀತ ಕಚೇರಿಗಳನ್ನೂ ತಪ್ಪಿಸಿಕೊಳ್ಳದಂತೆ ಹೇಳುತ್ತಾನೆ. ಆ ರಾತ್ರಿಯ ಸಂಗೀತ ಗೋಷ್ಟಿಯ ನಂತರ ಆ ಮಾಂತ್ರಿಕ ಸೆರೆಯಿಂದ ತಪ್ಪಿಸಿಕೊಂಡು ಆರ್ಥರನ್ ಅನೆರವಿನಂದ ವಾದ್ಯಗೋಷ್ಟಿಗಳಲ್ಲಿ ಭಾಗವಹ್ಸಿಉವ ಇಚ್ಛೆಯಿಂದ ಅಲ್ಲಿಂದ ಓಡಿಹೋಗಲು ನಿರ್ಧರಿಸುತ್ತಾನೆ. ಸ್ಥಳೀಯ ರಾತ್ರಿ ಕ್ಲಬ್ ವೊಂದರಲ್ಲಿ ತನ್ನ ಬ್ಯಾಂಡ್ ಮುಗಿದ ನಂತರ ಲುಯಿಸ್ ಇವಾನ್ ಜೊತೆಗಿನ ಕಲ್ಪಿತ ಹೆಸರು ಲೈಲಾಳನ್ನು ಹೋಲುತ್ತದೆ ಎಂದು ಗೊತ್ತಾದಾಗ ಆತ ಆ ಕೂಡಲೇ ಸೆಂಟ್ರಲ್ ಪಾರ್ಕ್ ಕಡೆಗೆ ದಾಪುಗಾಲಿಡುತ್ತಾನೆ. ಅದೇ ಸಮಯದಲ್ಲಿ ಜೆಫ್ರೀಸ್ , ಇವಾನ್ ನನ್ನು CPS ಮೂಲಕ ಪತ್ತೆ ಹಚ್ಚಿ ಜುಲ್ಲಿಯರ್ಡ್ ನೆರವಿನಂದ ಆಗಷ್ಟ್ ರಶ್ ನನ್ನು ತನ್ನಲ್ಲಿಟ್ಟುಕೊಂಡಿರುತ್ತಾನೆ,ಅದೇ ರೀತಿ ಆತನ ವಾದ್ಯಗಗೋಷ್ಟಿ ನಡೆಯುವಲ್ಲಿಗೆ ಆತ ನಡೆಯುತ್ತಾನೆ. ಇವಾನ್ ನ ಈ ವಾದ್ಯಗೋಷ್ಟಿ ಕಾರ್ಯಕ್ರಮ ಲೈಲಾ ಮತ್ತು ಲುಯಿಸ್ ಇಬ್ಬರನ್ನೂ ಅಲ್ಲಿಗೆ ಸೆಳೆಯುತ್ತದೆ,ಈ ಕೇಳುಗ ಗುಂಪಿನ ಎದುರಲ್ಲೇ ಅವರ ಸಮ್ಮಿಲನವಾಗುತ್ತದೆ.ಆಗ "ಆಗಷ್ಟ್ "ತಮ್ಮ ಪುತ್ರ ಎಂದು ಗೊತ್ತಾಗುತ್ತದೆ. ಕೊನೆಯಲ್ಲಿ ಲೈಲಾ ಮತ್ತು ಲುಯಿಸ್ ಕೈಕೈ ಜೋಡಿಸಿ ನಿಂತಿದ್ದನ್ನು ಗಮನಿಸಿದ ಇವಾನ್ ತಾನು ತನ್ನ ತಂದೆ ತಾಯಿಯೊಂದಿಗೆ ಸೇರಿಕೊಂಡೆ ಎಂದು ಸಂತಸಪಡುತ್ತಾನೆ.
ಪಾತ್ರವರ್ಗ
[ಬದಲಾಯಿಸಿ]- ಫ್ರೆಡ್ರಿ ಹೈಮೊರ್ ಇವಾನ್ ಟೇಲರ್/ಆಗಷ್ಟ್ ರಶ್ ಆಗಿ
- ಕೆರಿ ರ್ಸೆಲ್ ಲೈಲಾ ನೊವಾಸೆಕ್ ಪಾತ್ರದಲ್ಲಿ
- ಜೊನಾತನ್ ರಿಹಿಸ್ ಮೆಯೆರ್ಸ್ ಲುಯಿಸ್ ಕನೆಲಿಯಾಗಿ
- ಟೆರ್ನ್ಸ್ ಹೈವರ್ಡ್ಸ್ ರಿಚರ್ಡ್ ಜೆಫ್ರಿಯಾಗಿ
- ರಾಬಿನ್ಸ್ ವಿಲಿಯಮ್ಸ್ as ಮ್ಯ್ಕ್ಸ್ ವೆಲ್ "ವಿಜರ್ಡ್" ವಾಲೇಸ್ ಆಗಿ
- ವಿಲಿಯಮ್ ಸ್ಯಾಡ್ಲರ್ ಥಾಮಸ್ ನೊವಾಸೆಕ್ ಆಗಿ
- ಮರಿಯನ್ ಸೆಡೆಸ್ ದಿ ಡೀನ್ ಆಗಿ
- ಮಿಕೆಲೆಟಿ ವಿಲಿಯಮ್ ಸನ್ ರೆವರೆಂಡ್ ಜೇಮ್ಸ್ ಆಗಿ
- ಲಿಯಾನ್ ಥಮಸ್ III ಆರ್ಥರ್ ಆಗಿ
- ಆರೊನ್ ಸ್ಟೇಶನ್ ನಿಕ್ ಆಗಿ
- ಅಲೆಕ್ಸ್ ಒ'ಲಾಫ್ಲಿನ್ ಮಾರ್ಶಲ್ ಆಗಿ
- ಜಮಿಯಾ ಸಿಮೊನೆ ನ್ಯಾಶ್ ಹೋಪ್ ಜೆಫ್ರೀಸಯಾಗಿ
- ಬೆಕಿ ನಿವ್ಟನ್ ಜೆನ್ನಿಫರ್ ಆಗಿ
- ರೊನಾಲ್ಡ್ ಗಟ್ ಮ್ಯಾನ್ ಪ್ರೊಫೆಸ್ಸರ್ ಆಗಿ
- ಬೊನ್ನೀ ಮೆಕಿ ಲಿಜ್ಜಿಯಾಗಿ
- ತಿಮೊಥಿ ಟಿ. ಮಿಚುಮ್ ಜೊಯ್ ಆಗಿ
- ಕಾಕಿ ಕಿಂಗ್ ಇವಾನ್ ಟೇಲರ್ ನ ಗಿಟಾರ್ ಕೆಲಸದಲ್ಲಿ ಕೈಜೋಡಿಸುವಾತ,ಧ್ವನಿ ಸಂಯೋಜನೆಯಲ್ಲಿ ನಿಷ್ಣಾತ,ಕಲಾವಿದ ಮತ್ತು ಗಿಟಾರ ಶಿಕ್ಷಕ/ಸಲಹೆಗಾರನಾಗಿ.
- ಕು ಹೆ ಸನ್ - ಕ್ಯಾಮಿಯೊ ಪಾತ್ರ (ಹಿನ್ನಲೆ ಪಾತ್ರದ ಸನ್ನಿವೇಶ)
- ಟ್ಯಬ್ಲೊ- ಕ್ಯಾಮಿಯೊ ಪಾತ್ರ
ಸಂಗೀತ
[ಬದಲಾಯಿಸಿ]- "ಮೇನ್ ಟೈಟಲ್ " - (ಪ್ರಧಾನ ಶೀರ್ಷಿಕೆ)ಮಾರ್ಕ್ ಮಾನ್ಸಿನಾ
- "ಬ್ಯಾಚ್ ಬ್ರೆಕ್ " - ಜೊನಾತನ್ ರೆಹ್ಸ್ ಮೆಯೆರ್ಸ್ (ರಚನೆ ಸ್ಟಿವ್ ಎರ್ಡ್ಡೊಡಿ )
- "ಮೂನ್ ಡಾನ್ಸ್" - ಲುಯಿಸ್ (ರಚನೆ ವ್ಯಾನ್ ಮೊರಿಸನ್)
- "ದಿಸ್ ಟೈಮ್ " - ಜೊನಾತನ್ ರೆಹ್ಸ್ ಮೆಯೆರ್ಸ್ (ರಚನೆ ಕ್ರಿಸ್ ಟ್ರಾಪರ್ )
- "ಬಾರಿ ಇಂಪ್ರೊ " - ಕಾಕಿ ಕಿಂಗ್ (ರಚನೆ ಮಾರ್ಕ್ ಮನಸಿನಾ ಮತ್ತು ಕಾಕಿ ಕಿಂಗ್ )
- "ರಿಚ್ಯುವಲ್ ಡಾನ್ಸ್ " - ಕಾಕಿ ಕಿಂಗ್ (ರಚನೆ ಮೈಕೆಲ್ ಹೆಜಿಸ್ಸ್ )
- "ರೇಜ್ ಇಟ್ ಅಪ್ " - ಹೋಪ್ ಅಂಡ್ ಇಂಪಾಕ್ಟ್ ರಿಪೊರ್ಟರಿ ಥೆಯೆಟರ್ (ರಚನೆ ಇಂಪಾಕ್ಟ್ ರಿಪೊರ್ಟರಿ ಥೆಯೆಟರ್ ) - ಅಕಾಡಮಿ ಅವಾರ್ಡ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ ಗಾಗಿ ನಾಮನಿರ್ದೇಶನ
- "ಡ್ಯುಲಿಂಗ್ ಗಿಟಾರ್ಸ್ " - ಹೀಟೊರಾ ಪೆರೆರಾ ಮತ್ತು ಡೌಗ್ ಸ್ಮಿತ್ (ರಚನೆ ಹೀಟೊರಾ ಪೆರೆರಾ )
- "ಎಲ್ಗಾರ್ /ಸಮ್ಥಿಂಗ್ ಇನ್ಸೈಡ್ " - ಜೊನಾತನ್ ರೆಹ್ಸ್ ಮೆಯೆರ್ಸ್
- "ಆಗಸ್ಟ್ ಸ್' ರಾಪ್ಸೊಡಿ" (ರಚನೆ ಮಾರ್ಕ್ ಮನಸಿನಾ ಸಂಕಲನ ವ್ಯಾನ್ ಮೊರಿಸನ್)
- "ಸಮ್ ಬಡಿ" - ಜೊನ್ ಲ್ಕೆಜೆಂಡ್ (ರಚನೆ ಜೊನ್ ಲ್ಕೆಜೆಂಡ್)
- "ಕಿಂಗ್ ಆಫ್ ದಿ ಅರ್ಥ್ " - ಜೊನ್ ಒಂಡ್ರಾಸಿಕ್
- "ಗಾಡ್ ಬ್ಲೆಸ್ ದಿ ಚೈಲ್ಡ್ " - ಕ್ರಿಸ್ ಬೊಟ್ಟಿ ಮತ್ತು ಪೌಲಾ ಕೋಲೆ
- "ಲಾ ಬಾಂಬಾ " - ಲಿಯಾನ್ ಜಿ. ಥಾಮಸ್ III
- "ಫಾದರ್ಸ್ ಸಾಂಗ್" - ಲಿಯೊನ್ ಜಿ. ಥಾಮಸ್ III (ರಚನೆ ಚಾರ್ಲ್ಸ್ ಮಾಕ್ )
- "ಮೂನ್ ಡಾನ್ಸ್" - ಕ್ರಿಸ್ ಬೊಟ್ಟಿ (ರಚನೆ ವ್ಯಾನ್ ಮೊರಿಸನ್ )[೩]
ಲೈಲಾ ಮತ್ತು ಲುಯಿಸ್ ಕೊನೆಯಲ್ಲಿ ಸರದಿಯಂತೆ ಲೈಲಾ ಎಡ್ವರ್ಡ್ ಎಲ್ಗಾರ್ ರ ಸೆಲ್ಲೊ ಕನ್ಸರ್ಟೊ ಇನ್ ಇ ಮೈನರ್ ನ ಅಡಜೊಯೊ-ಮಾಡರೇಟೊವನ್ನು ನುಡಿಸುತ್ತಾಳೆ. "ಡ್ಯುಯಲಿಂಗ್ ಗಿಟಾರ್ಸ್ ; ಹೊರತುಪಡಿಸಿ ಆಗಷ್ಟ್ ನ ಎಲ್ಲಾ ಗಿಟಾರ್ ಗಾಯನವಾದವನ್ನು ಅಮೆರಿಕದ ಗಿಟಾರಿಸ್ಟ್ ಮತ್ತು ಸಂಯೋಜಕ ಕಾಕಿ ಕಿಂಗ್ ನುಡಿಸುತ್ತಾರೆ.ಅದಲ್ಲದೇ ಇವಾನ್ ನ ಸಂಗೀತಗೋಷ್ಟಿಗಳಲ್ಲಿ ಆತ ದ್ವಿಪಾತ್ರ [ಸೂಕ್ತ ಉಲ್ಲೇಖನ ಬೇಕು]ಮಾಡುತ್ತಾರೆ. ಗೀತ ರಚನೆಗಾರ ಮಾರ್ಕ್ ಮನಸಿನಾ ಸುಮಾರು 18 ತಿಂಗಳ ಕಾಲ ಚಲನಚಿತ್ರಗಳಿಗೆ ಸಂಗೀತ ಸಂಯೋಜಕನಾಗಿದ್ದ. "ಈ ಕಥೆಯ ಹೃದಯ ಭಾಗವೆಂದರೆ ನಾವು ಹೇಗೆ ಈ ಕಥಾನಕವನ್ನು ಬಳಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇದು ಒಬ್ಬ ಹುಡುಗ ತನ್ನಗೀತಂದೆತಾಯಿಗಳನ್ನು ತನ್ನ ಸಂಗತ ಗೋಷ್ಟಿ ಮೂಲಕ ಹುಡುಕುತ್ತೇನೆಂಬ ನಂಬಿಕೆ. ಅದೇ ಆತನನ್ನು ಗುರಿ ಸಾಧನೆಯಲ್ಲಿ ಮುನ್ನೆಡೆಸುತ್ತದೆ."[೪] ಚಿತ್ರದ ಅಂತಿಮ ಭಾಗವನ್ನು ಮೊದಲು ಚಿತ್ರಿಸಲಾಗಿತ್ತು.[೫] ಟೊಡ್ -ಎಒ ದಲ್ಲಿ ಇದರ ಸಂಗೀತ ಸಂಯೋಇಜನೆಯಾಗಿತ್ತು,ಅಲ್ಲದೇ ಈಸ್ಟ್ ವುಡ್ ಸ್ಕೊರಿಂಗ್ ಸ್ಟೇಜ್ ಅಂದರೆ ಎರಡನೆಯ ಸಂಗೀತದ ಧ್ವನಿ ಮುದ್ರಣ ಇಲ್ಲಿ [೫] ನಡೆದಿತ್ತು.
ಎಮ್-ಟೊರೆಂಟ್ ತಂತ್ರಾಂಶದ ಸ್ವೀಕೃತಿ
[ಬದಲಾಯಿಸಿ]ವಾಣಿಜ್ಯ ಬಳಕೆ
[ಬದಲಾಯಿಸಿ]ಆಗಷ್ಟ್ ರಶ್ 2007 ನವೆಂಬರ್ 21 ರಂದು ಹೊಅರಬಂದಿತು ಮತ್ತು ಇಲ್ಲಿ #7 ಇದರ ಮೂಲಕ ವಾರಾಂತ್ಯಕ್ಕೆ ಅದು $9,421,369.[೬] ಗಳಿಸಿತ್ತು ಒಟ್ಟು ಅಂದಾಜು $25 ದಶಲಕ್ಷ ವೆಚ್ಚ, ಸ್ಥಳೀಯ ಮಾರುಕಟ್ಟೆಯಲ್ಲಿ ಆದಾಯವು $31,664,162 ಮತ್ತು ವಿಶ್ವಾದಾದ್ಯಂತ $66,121,062 ಆದಾಯ ಗಳಿಸಿತು.[೭]
ವಿಮರ್ಶೆ
[ಬದಲಾಯಿಸಿ]USA ಟುಡೆ ಯಲ್ಲಿ ಬಂದ ವಿಮರ್ಶೆ ಪ್ರಕಾರ "ಆಗಷ್ಟ್ ರಶ್ ಇದು ಎಲ್ಲರೂ ನೋಡುವಂತಹದ್ದಲ್ಲ,ನೀವು ಭಾವನಾತ್ಮಕವಾಗಿ ಇದರ ಕಥಾವಿಷಯಕ್ಕೆ ಮನಸೋತರೆ ಮಾತ್ರ ಇದರ ಭಾವನಾಪ್ರಧಾನವಾದ ಸಂಗೀತ ಅಮ್ತ್ತು ಗೋಚರತೆ ಕಣ್ಣಿಗೆ [೮] ಕಟ್ಟುತ್ತದೆ." ದಿ ಹಾಲಿಯುಡ್ ರಿಪೊರ್ಟರ್ ಈ ಚಿತ್ರವನ್ನು ಉತ್ತಮ ಎಂದು ಹೇಳಿದೆ."ಈ ಚಿತ್ರಕಥೆಯು ಸಂಗೀತಗಾರರ ಬಗೆಗಿದೆ,ಸಂಗೀತ ಇಂದು ಜನರನ್ನು ಸಂಪರ್ಕಿಸಿ-ಸಂವಹನ ಮಾಡುತ್ತದೆ.ಹೀಗೆ ಸಂಗೀತ ಮತ್ತು ಗೀತ ರಚನೆಗಳು ಮಾರ್ಕ್ ಮನಸಿನಾ ಮತ್ತು ಹ್ಯಾನ್ಸ್ ಜಿಮ್ಮರ್ ಇವರನ್ನು ಜನಪ್ರಿಯಗೊಳಿಸಿವೆ.ಇದು ಕಾವ್ಯಮಯ ಮತ್ತು ಪ್ರಶಂಸೆ ಮೀರಿದ ಕಥೆ ಎಂದು [೯] ಹೇಳಿದೆ." ಒಟ್ಟಾರೆ 110 ವಿಮರ್ಶೆಗಳ ಆಧರಿಸಿದ ರೊಟೆನ್ ಟೊಮ್ಯಾಟೊಸ್ ವಿಮರ್ಶೆಗಳನ್ನು ಪರಿಗಣಿಸಿದರೆ 36% ರಷ್ಟು ಒಳ್ಳೆಯ ವಿಮರ್ಶೆಗಳು ಬಂದಿವೆ. "ಒಟ್ಟಾಭಿಪ್ರಾಯ: ಆಗಷ್ಟ್ ರಶ್ ನ ಪ್ರತಿಭಾವಂತ ನಟನೆ ಇಲ್ಲಿ ಇನ್ನುಳಿದುದು ಪರಿಗಣನೆಗೆ ಬಂದಿಲ್ಲ,ನಿರ್ದೇಶನ ಮತ್ತು ಕಥಾ ಹಂದರ ಉತ್ತಮ ನಿರೂಪಣೆ ಹೊಂದಿದೆ."[೧೦] ಒಟ್ಟಾರೆ ವಿಮರ್ಶಾ ಸೂತ್ರ,ದಂತೆ ಚಿತ್ರವು ಒಟ್ಟು 100 ಕ್ಕೆ 38 ಅಂಕಗಳನ್ನು ಪಡೆದ್ದನ್ನು 27 ವಿಮರ್ಶೆಗಳ ಆಧಾರದ ಮೇಲೆ ಹೇಳಬಹುದಾಗಿದೆ.[೧೧] ಸ್ಯಾನ್ ಫ್ರಾನ್ಸಿಸ್ಕೊ ಕ್ರೊನಿಕಲ್ ನ ಪ್ಯಾಮ್ ಗ್ರೇಡಿ ಪ್ರಕಾರ ಇದೊಂದು ಅರ್ಥ ರಹಿತ ಭಾವಾತಿರೇಕದ ಸಂಗೀತ ಚಿತ್ರ ಎಂದಿದ್ದಾರೆ. "ಗ್ರೇಡಿ ಹೇಳಿದ ಪ್ರಕಾರ "ಇಡೀ ಕಥೆಯು ಹಾಸ್ಯಾಸ್ಪದ,ಮತ್ತು" ಕಾಕತಾಳಿಯಗಳ ಸರಮಾಲೆ,ಇದರಲ್ಲಿ ಸಂಗತಿ ಹಾಗು ವಿಷಯವನ್ನು ಅದರ ತಾರ್ಕಿಕತೆಗೆ ಸಂಬಂಧವಿಲ್ಲದ್ದಾಗಿವೆ,ಅಲ್ಲದೇ ಪಾತ್ರಗಳೂ ಅತ್ಯಂತ ತೆಳುವಾದ ಲೇಪನದಂತೆ ಕಾಣುತ್ತವೆ. ಆಕೆ ಇನ್ನೂ ಮುಂದೆ ಹೋಗಿ "ಚಿತ್ರದ ಅಂತಿಮ ಭಾಗವು ಯಾರನ್ನೂ ಪ್ರಭಾವಿಸಲಾರದು."ಎಂದಿದ್ದಾರೆ ಅವರು ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿರುತ್ತಾರೆ ಆದರೆ ಹಠಾತ್ ಆಗಿ ಚಿತ್ರಕತೆ ಕೊನೆಯಾಗದೇ [೧೨] ಮುಗಿದುಹೋಗುತ್ತದೆ." ಎಡ್ವರ್ಡ್ ಡೌಗ್ಲಾಸ್ ತಮ್ಮ comingsoon.net ಮೂಲಕ ಈ ಚಿತ್ರವು ತನ್ನ ರಹಸ್ಯ ಬಿಟ್ಟುಕೊಡಲು ಬಹುಸಮಯ ತೆಗೆದುಕೌಂಡಂತೆ ಕಾಣುತ್ತದೆ.ಇದು ಹೃದಯಗಳ ತಲುಪಲು ಅತಿಯಾದ ಆಳಕ್ಕೆ ಇಳಿಯಬೇಕಾಗುತ್ತದೆ "[೧೩][unreliable source?]ಎನ್ನುತ್ತಾರೆ." ರೊಜರ್ ಎಬರ್ಟ್ ಇದಕ್ಕೆ ಮೂರು ಸ್ಟಾರ ನೀಡಿ ಅದರ ಲಕ್ಷಣಗಳ ಪಟ್ಟಿ ಮಾಡಿದ್ದಾರೆ "ಈ ಚಿತ್ರವು ಭಾವಾತಿರೇಕದ ಕಂದಕದಲ್ಲಿ ಬಿದ್ದು ತನ್ನನ್ನು ತಾನು ಎತ್ತ್ಸಿಕೊಳ್ಲಲು ಶ್ರಮಿಸುತ್ತದೆ."[೧೪] ಎಂದು ಕರೆದಿದ್ದಾರೆ. ಜಮಿಲಾ ಗಾವಿನ್ ಇದನ್ನು ಡಿಕೆನ್ಸನ್' ನ ಆಲಿವರ್ ಟ್ವಿಸ್ಟ್ ಮತ್ತು ಕೊರಮ್ ಬಾಯ್ .[೧೫][೧೬] ಹೋಲಿಸಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]ಇದರ ಧ್ವನಿ ಮುದ್ರಿಕೆಯಲ್ಲಿ ಹೊಸ ಮತ್ತು ಸ್ಥಾಪಿತ ಜನಪ್ರಿಯ ಹಾಡುಗಲಿವೆ. ಈ ಚಿತ್ರವು ಉತ್ತಮ ನೈಸರಗಿಕ ಹಾಡಿಗಾಗಿ ಅಕಾಡೆಮಿ ಅವಾರ್ಡ್ ನ್ನುಬೆಸ್ಟ್ ಒರಿಜಿನಲ್ ಸಾಂಗ್ ಗಾಂಗ್ಗಾಗಿ ಅಂದರೆ(ರೇಜ್ ಇಟ್ ಅಪ್ ) ನಾಮನಿರ್ದೇಶನಗೊಂಡಿತು.
ಯುವ ಕಲಾವಿದ ಪ್ರಶಸ್ತಿ
[ಬದಲಾಯಿಸಿ]ಫ್ರೆಡ್ರೀ ಹೈಮೊರ್ ಇವಾನ್ ಟೇಲರ್ / ಆಗಸ್ಟ್ ರಶ್ ಪಾತ್ರಕ್ಕಾಗಿ ಈ ಕೆಳಗಿನ್ವೋಗಳಿಗೆ ಪಾತ್ರನಾದ:
- ನಾಮಕರಣ— ಬ್ರಾಡ್ ಕಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೊಶಿಯೇಶನ್ ಅವಾರ್ಡ್ ಬೆಸ್ಟ್ ಯಂಗ್ ಪರ್ ಫಾರ್ಮರ್
- ನಾಮಕರಣ— ಯುವ ನಟನ ಪ್ರಶಸ್ತಿ ಉತ್ತಮ ಅಭಿನಯಕ್ಕಾಗಿ ಚಿತ್ರಪ್ರಶಸ್ತಿ - ನಾಯಕ ಯುವ ನಟನ ಪಾತ್ರ
2008 ವನ್ ಕ್ಯಾಟಗರಿ/ರಿಸಿಪಿಯಂಟ್ಸ್(s)
- ಬೆಸ್ಟ್ ಫ್ಯಾಮಿಲಿ ಫೀಚರ್ (ಕಾಮೆಡಿ ಅಥವಾ ಡ್ರಾಮಾ)
- ಬೆಸ್ಟ್ ಪರ್ ಫಾರ್ಮನ್ಸ್ ಇನ್ ಎ ಫೀಚರ್ ಫಿಲ್ಮ್- ಸಪೊರ್ಟಿಂಗ್ ಯಂಗ್ ಆಕ್ಟರ್Young Actor - ಫಾಂಟಸಿ ಆರ್ ಡ್ರಾಮಾ(ಲಿಯೊನ್ ಜಿ. ಥಾಮಸ್ III)
ಅಕಾಡೆಮಿ ಆಫ್ ಸೈನ್ಸ್ ಫಿಕ್ಸನ್ ,ಫಾಂಟಸಿ & ಹಾರರ್ ಫಿಲ್ಮ್ಸ್ USA
[ಬದಲಾಯಿಸಿ]2008 ವನ್ ಸ್ಯಾಟರ್ನ್ ಅವಾರ್ಡ್ ಬೆಸ್ಟ್ ಪರ್ ಫಾರ್ಮನ್ಸ್ ಬೈ ಯಂಗ್ ಆಕ್ಟರ್ - ಫ್ರೆಡ್ಡಿ ಹೈಮೋರ್
ಉಲ್ಲೇಖಗಳು
[ಬದಲಾಯಿಸಿ]- ↑ http://www.boxofficemojo.com/movies/?id=augustrush.htm
- ↑ http://www.seattlepi.com/movies/340444_august21q.html
- ↑ "August Rush-music from the motion picture". starpulse.com. Archived from the original on 2011-06-07. Retrieved 2009-09-11.
- ↑ Crisafulli, Chuck and Graff, Gary. "And The Best Original Song Oscar Nominees Are..." Billboard. Retrieved 2008-11-09.
{{cite web}}
: Italic or bold markup not allowed in:|publisher=
(help)CS1 maint: multiple names: authors list (link) - ↑ ೫.೦ ೫.೧ Dan Goldwasser. "Scoring Session Photo Gallery from August Rush". ScoringSessions.com. Retrieved 2008-02-29.
- ↑ "August Rush (2007) - Weekend Box Office Results - Box Office Mojo". Box Office Mojo. Retrieved 2010-02-05.
- ↑ "August Rush (2007) - Box Office Mojo". Box Office Mojo. Retrieved 2010-02-05.
- ↑ Puig, Claudia (2007-11-23). "Lilting 'August Rush' is poetry in emotion". USA Today. Retrieved 2008-02-29.
{{cite news}}
: Italic or bold markup not allowed in:|publisher=
(help) - ↑ Honeycutt, Kirk (November 8, 2007). "August Rush". The Hollywood Reporter. Archived from the original on 2008-05-06. Retrieved 2008-02-29.
{{cite web}}
: Italic or bold markup not allowed in:|publisher=
(help) - ↑ "August Rush — Rotten Tomatoes". Rotten Tomatoes. Retrieved 2007-11-27.
- ↑ "August Rush (2007): Reviews". Metacritic. Archived from the original on 2012-01-04. Retrieved 2007-11-27.
- ↑ Pam Grady (2007-11-21). "Review: Orphan has a song in his heart in 'August Rush'". San Francisco Chronicle. Retrieved 2007-11-27.
- ↑ [೧]
- ↑ Roger Ebert (2007-11-21). "August Rush". Chicago Sun-Times. Archived from the original on 2007-11-24. Retrieved 2007-11-26.
- ↑ Smith, Sid (2007-11-21). "August Rush (Oliver Twist reset in N.Y.) — 2 stars". Chicago Tribune. Archived from the original on 2007-12-12. Retrieved 2007-12-15.
Turn to the master, Charles Dickens, or better yet, update and recycle him. Such must have been the thinking behind August Rush, a thinly disguised retelling of Oliver Twist, transplanted to contemporary New York and sweetened by a theme of the healing magic of music.
- ↑ Covert, Colin (2007-11-20). "Movie review: Romanticism trumps reason in Rush". Star Tribune. Archived from the original on 2012-10-08. Retrieved 2007-12-15.
If Charles Dickens were alive today, he might be writing projects like August Rush, the unabashedly sentimental tale of a plucky orphan lad who falls in with streetwise urchins as he seeks the family he ought to have. Come to think of it, Dickens did write that one, and called it Oliver Twist.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- August Rush at IMDb
- August Rush at AllMovie
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ August Rush
- August Rush at Rotten Tomatoes
- August Rush at Metacritic
- ಸ್ಕೊರಿಂಗ್ ಸೆಶೆನ್ಸ್ ಫೊಟೊ ಗ್ಯಾಲರಿ ScoringSessions.com
- ಆಗಷ್ಟ್ ರಶ್ ನಂಬರ್ಸ್ Archived 2011-09-06 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: markup
- CS1 maint: multiple names: authors list
- Orphaned articles from ಮಾರ್ಚ್ ೨೦೧೯
- All orphaned articles
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- English-language films
- Articles with unsourced statements from February 2010
- All articles lacking reliable references
- Articles lacking reliable references from January 2010
- Rotten Tomatoes ID same as Wikidata
- Rotten Tomatoes template using name parameter
- Metacritic ID different from Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 2007ರ ಚಲನಚಿತ್ರಗಳು
- 2000ರ ನಾಟಕ ಚಲನಚಿತ್ರಗಳು
- ಅಮೆರಿಕಾದ ಸಂಗೀತ ನಾಟಕ ಚಲನಚಿತ್ರಗಳು.
- ಅಮೆರಿಕಾ ರಾಮ್ಯಾಟಿಕ್ ಡ್ರಾಮ್ ಫಿಲ್ಮಸ್
- ಅಮೆರಿಕನ್ ರೊಮ್ಯಾಂಟಿಕ್ ಫ್ಯಾಂಟಸಿ ಚಲನಚಿತ್ರಗಳು
- ಅಮೆರಿಕಾದ ಭಾವಪ್ರಧಾನವಾದ ಸಂಗೀತ ಚಲನಚಿತ್ರಗಳು
- ಇಂಗ್ಲಿಷ್-ಭಾಷೆಯ ಚಲನಚಿತ್ರಗಳು
- ಸಂಗೀತ ಮತ್ತು ಸಂಗೀತಗಾರರ ಬಗೆಗಿನ ಚಿತ್ರಗಳು
- 1990ರ ದಶಕದಲ್ಲಿ ಆರಂಭವಾದ ಚಲನಚಿತ್ರಗಳು
- ವಾರ್ನರ್ ಬ್ರದರ್ಸ್ ಚಲನಚಿತ್ರಗಳು
- ಚಲನಚಿತ್ರಗಳು