ಆಕ್ಸಿಟೆಟ್ರಸೈಕ್ಲೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕ್ಸಿಟೆಟ್ರಸೈಕ್ಲೀನ್
Systematic (IUPAC) name
(4S,4aR,5S,5aR,6S,12aS) -4-(dimethylamino)-3,5,6,10,11,12a-hexahydroxy -6-methyl-1,12-dioxo-1,4,4a,5,5a,6,12,12a-octahydrotetracene -2-carboxamide
Clinical data
ಗರ್ಭಧಾರಣೆಯ ವರ್ಗ D (AU) D (US)
ಕಾನೂನು ಸ್ಥಿತಿ Prescription only
Routes Oral, Ophthalmic
Pharmacokinetic data
Half-life 6-8 hours
ವಿಸರ್ಜನೆ Renal
Identifiers
CAS ಸಂಖ್ಯೆ 79-57-2
ATC ಕೋಡ್ D06AA03
ಪಬ್‌ಕೆಮ್ CID 5353856
ಡ್ರಗ್ ಬ್ಯಾಂಕ್ DB00595
ಕೆಮ್‌ಸ್ಪೈಡರ್ 10482174 checkY
UNII SLF0D9077S checkY
KEGG D00205
ChEBI CHEBI:27701
ChEMBL CHEMBL1517
PDB ligand ID OAQ (PDBe, RCSB PDB)
Chemical data
ರಾಸಾಯನಿಕ ಸೂತ್ರ C22H24N2O9 
Mol. mass 460.434 g/mol
  • InChI=1S/C22H24N2O9/c1-21(32)7-5-4-6-8(25)9(7)15(26)10-12(21)17(28)13-14(24(2)3)16(27)11(20(23)31)19(30)22(13,33)18(10)29/h4-6,12-14,17,25,27-29,32-33H,1-3H3,(H2,23,31)/t12-,13-,14+,17+,21-,22+/m1/s1 checkY
    Key:IWVCMVBTMGNXQD-PXOLEDIWSA-N

 checkY (what is this?)  (verify)

ಆಕ್ಸಿಟೆಟ್ರಸೈಕ್ಲೀನ್ ಅಗಲರೋಹಿತ ಜೀವಿವಿರೋಧಕಗಳ (ಬ್ರಾಡ್ - ಸ್ಪೆಕ್ಟ್ರಂ ಆಂಟಿಬಯೋಟಿಕ್ಸ್) ಗುಂಪಿನ ಮದ್ದುಗಳಲ್ಲಿ ಒಂದು.

ತಯಾರಿಕೆ[ಬದಲಾಯಿಸಿ]

ಮೊಟ್ಟಮೊದಲು (1950) ಫಿಂಡ್ಲೆ ಮತ್ತು ಸಂಗಡಿಗರು ತಯಾರಿಸಿದರು.[೧] ಮದ್ದು ತಯಾರಕರ ವ್ಯಾಪಾರದ ಹೆಸರು ಟೆರೆಮೈಸಿಸ್. ಮೊದಲಿಗೆ ಇದನ್ನು ಮಣ್ಣಲ್ಲಿರುವ ಕಿರಣಣಬೆ ಸ್ಟ್ರೆಪ್ಟೊಮೈಸಿಸ್ ರೈಮೋಸಸನ್ನು ತಳಿಯೆಬ್ಬಿಸಿ ಬಂದ ರಸದಿಂದ ಹರಳುಗಳಾಗಿ ತಯಾರಿಸಿದ್ದರೂ ಈಗ ಇದು ಕೃತಕವಾಗೂ ತಯಾರಾಗುತ್ತಿದೆ.

ವೈದ್ಯಕೀಯ ಉಪಯೋಗಗಳು[ಬದಲಾಯಿಸಿ]

ಇದರ ಹೈಡ್ರೊಕ್ಲೋರೈಡು, ಹೈಡ್ರೇಟು ಲವಣಗಳಿಂದ ಗ್ರಾಂ ಬಣ್ಣವೇರದ, ಗ್ರಾಂ ಬಣ್ಣವೇರುವ (ಗ್ರಾಂ-ನೆಗೆಟಿವ್, ಗ್ರಾಂ-ಪಾಸಿಟಿವ್) ಏಕಾಣುಜೀವಿಗಳು, ರಿಕೆಟ್ಸ್ ರೋಗಾಣುಗಳು (ರಿಕೆಟ್ಸಿಯಾಸ್), ಕೆಲವು ದೊಡ್ಡ ವಿಷಕಣಗಳು, ಕೆಲವು ಮುಂಜೀವಿ ಪರಪಿಂಡಿಗಳೂ ಸಾಯುತ್ತವೆ. ಇಲ್ಲವೇ ಗುಣಿತವಾಗುವುದನ್ನು ಅಣಗಿಸುತ್ತವೆ. ಚಲ್ಕಣದ (ಅಮೀಬಿಕ್) ರಕ್ತಭೇದಿ, ವಿಷಮಶೀತ ಜ್ವರಗಳಲ್ಲೂ ಕೊಡುವುದುಂಟು. ಕ್ಷಯ, ಕುಷ್ಠ, ಬೂಷ್ಟಿನ (ಅಣಬೆ) ರೋಗಗಳಲ್ಲಿ ಕೆಲಸಕ್ಕೆ ಬರದು. ಬಾಯಿ ಮೂಲಕ ಕೊಡುವುದು ಸಾಮಾನ್ಯ; ರಕ್ತನಾಳಾಂತರವಾಗೂ, ಒಂದೆಡೆ ಹಚ್ಚುವ ದ್ರಾವಣವಾಗೂ ಕೊಡಬಹುದು.

ಪಾರ್ಶ್ವ ಪರಿಣಾಮಗಳು[ಬದಲಾಯಿಸಿ]

ಯಾವಾಗಲೂ ಕರುಳಲ್ಲಿ ಇದ್ದೇ ಇರುವ ಏಕಾಣುಜೀವಿಗಳನ್ನು ಇದು ಹಾಳುಮಾಡಿ ತೊಂದರೆ ಕೊಡಬಹುದು. ಮಜ್ಜಿಗೆ ಸೇವನೆಯಿಂದ ಇದು ಸರಿಹೋಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Fischer J, Ganellin CR (2006). Analogue-based Drug Discovery (in ಇಂಗ್ಲಿಷ್). John Wiley & Sons. p. 489. ISBN 9783527607495.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: