ವಿಷಯಕ್ಕೆ ಹೋಗು

ಆಕ್ರೊ ನೃತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊಣಕೈಯಲ್ಲಿ ನಿಲ್ಲುವುದು,ಆಕ್ರೊ ನೃತ್ಯ ವಾಡಿಕೆಯ ಭಾಗವಾಗಿ ಪ್ರದರ್ಶನ

ಆಕ್ರೊ ನೃತ್ಯ ವು ನೃತ್ಯದ ಒಂದು ಶೈಲಿಯಾಗಿದ್ದು, ಶಾಸ್ತ್ರೀಯ ನೃತ್ಯದ ತಂತ್ರವನ್ನು ನಿಖರ ಆಕ್ರೊಬಾಟಿಕ್(ದೊಂಬರಾಟದ ಕಸರತ್ತು) ಅಂಶಗಳಿಂದ ಸಂಯೋಜಿಸಿದೆ. ಇದನ್ನು ಅದರ ಅಥ್ಲೆಟಿಕ್ ಲಕ್ಷಣದಿಂದ ವ್ಯಾಖ್ಯಾನಿಸಬಹುದು. ಅದರ ವಿಶಿಷ್ಟ ನೃತ್ಯನಿಯೋಜನೆಯು ನಯವಾಗಿ ನೃತ್ಯ ಮತ್ತು ಆಕ್ರೋಬ್ಯಾಟಿಕ್ಸ್‌ನ್ನು ಒಂದುಗೂಡಿಸುತ್ತದೆ ಮತ್ತು ನೃತ್ಯದ ಸಂದರ್ಭದಲ್ಲಿ ದೊಂಬರಾಟದ ಕಸರತ್ತುಗಳ ಬಳಕೆಯ ಲಕ್ಷಣದಿಂದ ಕೂಡಿದೆ.[] ಇದು ಹವ್ಯಾಸಿ ಸ್ಪರ್ಧಾತ್ಮಕ ನೃತ್ಯದಲ್ಲಿ ಮತ್ತು ವೃತ್ತಿಪರ ನೃತ್ಯ ರಂಗಮಂದಿರದಲ್ಲಿ ಹಾಗೂ ಸರ್ಕ್ ಡು ಸೊಲೈಲ್ ಮುಂತಾದವರ ಸಮಕಾಲೀನ ಸರ್ಕಸ್ ತಯಾರಿಕೆಗಳಲ್ಲಿ ಜನಪ್ರಿಯ ನೃತ್ಯ ಶೈಲಿಯಾಗಿದೆ. ಇದು ಲಯಬದ್ಧ ಮತ್ತು ಕಲಾತ್ಮಕ ಜಿಮ್ನಾಸ್ಟಿಕ್ಸ್‌ಗೆ ತದ್ವಿರುದ್ಧವಾಗಿದೆ. ಅವು ಕ್ರೀಡೆಯಾಗಿದ್ದು, ಜಿಮ್ನಾಸ್ಟಿಕ್ಸ್ ಸಂದರ್ಭದಲ್ಲಿ ನೃತ್ಯದ ಅಂಶಗಳನ್ನು ಬಳಸಿಕೊಳ್ಳುತ್ತದೆ. ಪ್ರತಿಯೊಂದನ್ನೂ ಆಡಳಿತ ನಿರ್ವಹಿಸುವ ಜಿಮ್ನಾಸ್ಟಿಕ್ಸ್ ಸಂಘಟನೆ ಮತ್ತು ಕೋಡ್ ಆಫ್ ಪಾಯಿಂಟ್ಸ್ ನಿಯಂತ್ರಿಸುತ್ತದೆ. ಆಕ್ರೋ ನೃತ್ಯವು ಆಕ್ರೋಬ್ಯಾಟಿಕ್ ನೃತ್ಯ ಮತ್ತು ಜಿಮ್ನಾಸ್ಟಿಕ್ ನೃತ್ಯ ಸೇರಿದಂತೆ ವಿವಿಧ ಹೆಸರುಗಳಿಂದ ಪರಿಚಿತವಾಗಿದೆ. ಆದರೂ ಇದನ್ನು ಸಾಮಾನ್ಯವಾಗಿ ನರ್ತಕರು ಮತ್ತು ವೃತ್ತಿನಿರತ ನರ್ತಕರು ಸರಳವಾಗಿ ಆಕ್ರೊ ಎಂದು ಉಲ್ಲೇಖಿಸುತ್ತಾರೆ.

ಆಕ್ರೋ ವಿಶೇಷವಾಗಿ ಸವಾಲಿನ ನೃತ್ಯ ಶೈಲಿಯಾಗಿದ್ದು, ನರ್ತಕರಿಗೆ ನೃತ್ಯ ಮತ್ತು ಆಕ್ರೋಬ್ಯಾಟಿಕ್ ಕೌಶಲ್ಯಗಳು ಎರಡರಲ್ಲೂ ತರಬೇತಿ ಪಡೆಯುವ ಅಗತ್ಯವಿರುತ್ತದೆ. ಆಕ್ರೊ ನರ್ತಕರು ಉತ್ತಮ ದೈಹಿಕ ಆರೋಗ್ಯ ಸ್ಥಿತಿಯಿಂದ ಕೂಡಿರಬೇಕು, ಏಕೆಂದರೆ ಆಕ್ರೊ ದೈಹಿಕವಾಗಿ ಬೇಡಿಕೆಯ ಚಟುವಟಿಕೆಯಾಗಿದೆ. ಆಕ್ರೊ ಜನಪ್ರಿಯ ನೃತ್ಯ ಶೈಲಿಯಾಗಿದ್ದರೂ, ಅನೇಕ ನೃತ್ಯ ಶಾಲೆಗಳು ಅದನ್ನು ಬೋಧಿಸುವುದಿಲ್ಲ. ಏಕೆಂದರೆ ಸಾಮಾನ್ಯವಾಗಿ ಆಕ್ರೋಬ್ಯಾಟಿಕ್ ತರಬೇತಿಗೆ ಅಗತ್ಯವಾದ ಸೌಲಭ್ಯಗಳು ಅಥವಾ ತಜ್ಞತೆಯ ಕೊರತೆಯನ್ನು ಅವು ಹೊಂದಿರುತ್ತವೆ.

ಇತಿಹಾಸ

[ಬದಲಾಯಿಸಿ]
ವಾಡೆವಿಲ್ಲೆ ನರ್ತಕ

ಆಕ್ರೋಬ್ಯಾಟಿಕ್ ನೃತ್ಯವು ಅಮೆರಿಕ, ಕೆನಡಾದಲ್ಲಿ ೧೯೦೦ನೇ ದಶಕದ ಪೂರ್ವದಲ್ಲಿ ವಾಡೆವಿಲ್ಲೆಯಲ್ಲಿ ನಿರ್ವಹಿಸುವ ನೃತ್ಯಗಳಲ್ಲಿ ಒಂದು ವಿಧವಾಗಿ ಹೊಮ್ಮಿದವು. ವೈಯಕ್ತಿಕ ನೃತ್ಯ ಮತ್ತು ಆಕ್ರೋಬ್ಯಾಟಿಕ್ ಕಸರತ್ತುಗಳನ್ನು ೧೯೦೦ಕ್ಕೆ ಮುಂಚೆ ಅನೇಕ ದಶಕಗಳವರೆಗೆ ವಾಡೆವಿಲ್ಲೆಯಲ್ಲಿ ನಿರ್ವಹಿಸಲಾಗಿದ್ದರೂ, ಇದು ೧೯೦೦ರ ದಶಕದ ಪೂರ್ವದಲ್ಲಿ ನೃತ್ಯ ಮತ್ತು ಆಕ್ರೋಬ್ಯಾಟಿಕ್ ಚಲನೆಗಳು ಸಂಯೋಜಿತವಾದ ಕಸರತ್ತುಗಳನ್ನು ಪ್ರದರ್ಶಿಸುವುದಕ್ಕೆ ಜನಪ್ರಿಯವಾಯಿತು.

ಆಕ್ರೋಬ್ಯಾಟಿಕ್ ನೃತ್ಯವು ವಾಡೆವಿಲ್ಲೆಯಲ್ಲಿ ದಿಢೀರನೆ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಇದು ವಿವಿಧ ರೂಪಗಳಲ್ಲಿ ಕ್ರಮೇಣ ಕಾಲಾವಧಿಯಲ್ಲಿ ಕಾಣಿಸಿಕೊಂಡಿತು. ಇದರ ಪರಿಣಾಮವಾಗಿ ಯಾವುದೇ ಪ್ರದರ್ಶಕನನ್ನು ಇದರ ಜನಕನೆಂದು ಉದಾಹರಿಸಲಾಗಿಲ್ಲ. ೧೯೦೦ರಿಂದ ೧೯೧೪ರವರೆಗೆ ವಾಟರ್‌ಮೆಲಾನ್ ಟ್ರಸ್ಟ್‌ನೊಂದಿಗೆ ಪ್ರದರ್ಶನ ನೀಡಿದ ಶರ್ಮನ್ ಕೋಟ್ಸ್ ತಾವು ಹಿಂದೆಂದೂ ಕಂಡಿರದ ಮೊದಲ ಆಕ್ರೋಬ್ಯಾಟಿಕ್ ನರ್ತಕ ಎಂದು ಅವರ ಸಹಚರ ನರ್ತಕರು ನೆನಪಿಸಿಕೊಳ್ಳುತ್ತಾರೆ.[] ಮುಂಚಿನ ದಾಖಲೆಯಾದ ಆಕ್ರೋಬ್ಯಾಟಿಕ್ ನೃತ್ಯ ಪ್ರದರ್ಶಕರು ಟಾಮಿ ವುಡ್ಸ್, ಅವರು ಶಫಲ್ ಎಲಾಂಗ್‌ ನಲ್ಲಿ ತಮ್ಮ ನಿಧಾನ ಚಲನೆಯ ಆಕ್ರೋಬ್ಯಾಟಿಕ್ ನೃತ್ಯಕ್ಕೆ ಹೆಸರು ಪಡೆದಿದ್ದರು. ಅದರಲ್ಲಿ ಅವರು ಸಂಗೀತದ ಜತೆ ನಿಖರವಾದ ಆಕ್ರೋಬ್ಯಾಟಿಕ್ ಚಲನೆಗಳನ್ನು ನಿರ್ವಹಿಸುತ್ತಿದ್ದರು.[] ೧೯೧೪ರಲ್ಲಿ ಆಕ್ರೋಬ್ಯಾಟ್ ಲುಲು ಕೋಟ್ಸ್ ಜನಪ್ರಿಯ ವಾಡೆವಿಲ್ಲೆ ಟ್ರೂಪ್ ಕ್ರಾಕರ್‌ಜ್ಯಾಕ್ಸ್ ರಚಿಸಿದರು. ಆ ಸಮೂಹವು ೧೯೫೨ರಲ್ಲಿ ಕಾರ್ಯಸ್ಥಗಿತಗೊಳಿಸುವ ತನಕ ಪ್ರದರ್ಶನ ಕೃತಿಸಂಚಯದಲ್ಲಿ ಆಕ್ರೋಬ್ಯಾಟಿಕ್ ನೃತ್ಯವನ್ನು ಒಳಗೊಂಡಿತ್ತು.[] ಇನ್ನೂ ಇತರೆ ಜನಪ್ರಿಯ ವಾಡೆವಿಲ್ಲೆ ಕಂಪೆನಿಗಳು ಗೈನೇಸ್ ಸಹೋದರರು ಸೇರಿದಂತೆ ತಮ್ಮ ಪ್ರದರ್ಶನಗಳಲ್ಲಿ ಆಕ್ರೋಬ್ಯಾಟಿಕ್ಸ್ ಮತ್ತು ನೃತ್ಯವನ್ನು ಸಂಯೋಜಿಸಿದರು. ವಾಡೆವೆಲ್ಲಾ ಯುಗದ ಅವನತಿಯ ನಂತರ, ಆಕ್ರೋಬ್ಯಾಟಿಕ್ ನೃತ್ಯವು ಬಹುಮುಖದ ವಿಕಾಸವನ್ನು ಹೊಂದಿ, ಇಂದಿನ ಸ್ವರೂಪಕ್ಕೆ ಬಂದಿದೆ. ಈ ವಿಕಾಸದ ಅತ್ಯಂತ ಗಮನಾರ್ಹ ಅಂಶವೇನೆಂದರೆ ನೃತ್ಯದ ಚಲನೆಗಳಿಗೆ ಬ್ಯಾಲೆಟ್ ತಂತ್ರದ ಸಂಯೋಜನೆಯಾಗಿದೆ. ಹೀಗೆ ವಾಯುಡೆವಿಲ್ಲೆ ಆಕ್ರೋಬ್ಯಾಟಿಕ್ ನೃತ್ಯದಲ್ಲಿ ಕಾಣಿಸದಿರುವ ಸ್ವರೂಪ ಮತ್ತು ಚಲನೆಯ ನಿಖರತೆಯನ್ನು ಆಕ್ರೋ ನೃತ್ಯಕ್ಕೆ ತಂದಿದೆ. ಅಲ್ಲದೇ ವಾಡೆವಿಲ್ಲೆ ಆಕ್ರೋಬ್ಯಾಟಿಕ್ ನೃತ್ಯಗಳು ಸಂಗೀತಕ್ಕೆ ಆಕ್ರೋಬ್ಯಾಟಿಕ್ ಸಂಯೋಜನೆ ಮಾಡುವುದಕ್ಕಿಂತ ತುಸು ಹೆಚ್ಚಿಗೆಯಿತ್ತು. ಆದರೆ ಆಧುನಿಕ ಆಕ್ರೊ ನೃತ್ಯವು ಮೂಲಭೂತವಾಗಿ ನೃತ್ಯವಾಗಿದ್ದು, ನೃತ್ಯದ ಸಂದರ್ಭದಲ್ಲಿ ಆಕ್ರೋಬ್ಯಾಟಿಕ್ ಚಲನೆಗಳನ್ನು ನಿರ್ವಹಿಸುವುದಾಗಿದೆ.

ಗುಣಲಕ್ಷಣಗಳು

[ಬದಲಾಯಿಸಿ]

ಆಕ್ರೋದ ಸ್ಫುಟವಾದ ಲಕ್ಷಣವು ನೃತ್ಯ ಮತ್ತು ಆಕ್ರೋಬ್ಯಾಟಿಕ್ ಚಲನೆಗಳ ನಡುವೆ ಸರಾಗ, ಹಿತವಾದ ಪರಿವರ್ತನೆಗಳಾಗಿವೆ. ಅಲ್ಲದೇ ನೃತ್ಯವನ್ನು ಆಕ್ರೋ ಎಂದು ವರ್ಗೀಕರಣ ಮಾಡಲು ಆಕ್ರೋಬ್ಯಾಟಿಕ್ ಅಂಶಕ್ಕೆ ಸಂಬಂಧಿಸಿದಂತೆ ನೃತ್ಯದ ಚಲನೆಯ ಗಮನಾರ್ಹ ಶೇಕಡಾವಾರು ಹೊಂದಿರಬೇಕು. ಉದಾಹರಣೆಗೆ, ಜಿಮ್ನಾಸ್ಟಿಕ್ಸ್ ಫ್ಲೂರ್ ಅಭ್ಯಾಸವನ್ನು ಆಕ್ರೊ ಎಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಅದರ ಆಕ್ರೋಬ್ಯಾಟಿಕ್ ಅಂಶಕ್ಕೆ ಹೋಲಿಸಿದರೆ ಅದರಲ್ಲಿ ನೃತ್ಯದ ಚಲನೆ ಕಡಿಮೆಯಿರುತ್ತದೆ ಅಥವಾ ಇರುವುದಿಲ್ಲ. ಅಲ್ಲದೇ ಇದು ನೃತ್ಯ ಮತ್ತು ಜಿಮ್ನಾಸ್ಟಿಕ್ಸ್ ಚಲನೆಗಳ ನಡುವೆ ಸರಾಗ ಪರಿವರ್ತನೆಗಳ ಕೊರತೆಯನ್ನು ಹೊಂದಿರುತ್ತದೆ.

ನೃತ್ಯಕಲಾ ಕೌಶಲಗಳು

[ಬದಲಾಯಿಸಿ]

ಆಕ್ರೋದ ನೃತ್ಯ ಚಲನೆಗಳು ಬ್ಯಾಲೆಟ್, ಜ್ಯಾಸ್, ಭಾವಗೀತಾತ್ಮಕ ಮತ್ತು ಆಧುನಿಕ ನೃತ್ಯ ಶೈಲಿಗಳಲ್ಲಿ ಕಂಡುಬಂದಿದೆ. ಆಕ್ರೋ ನೃತ್ಯ ಚಲನೆಗಳು ಈ ನೃತ್ಯ ಶೈಲಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಈ ಶೈಲಿಗಳ ಸಂಪೂರ್ಣ ಅನುಪಸ್ಥಿತಿಯು ನೃತ್ಯವನ್ನು ಆಕ್ರೊಗಿಂತ ಭಿನ್ನವಾದ ನೃತ್ಯವೆಂದು ವರ್ಗೀಕರಿಸಲು ಕಾರಣವಾಗುತ್ತದೆ.(ಉದಾಹರಣೆಗೆ ಬ್ರೇಕ್‌ಡ್ಯಾನ್ಸ್)

ಆಕ್ರೋಬ್ಯಾಟಿಕ್ ಅಂಶಗಳು

[ಬದಲಾಯಿಸಿ]

ಆಕ್ರೊ ನೃತ್ಯದಲ್ಲಿ ಪ್ರದರ್ಶಿಸುವ ಆಕ್ರೋಬ್ಯಾಟಿಕ್ ಚಲನೆಗಳನ್ನು ಟ್ರಿಕ್ಸ್ ಎಂದು ಉಲ್ಲೇಖಿಸಲಾಗುತ್ತದೆ. ಆಕ್ರೊ ನೃತ್ಯಗಳಲ್ಲಿ ಅಸಂಖ್ಯಾತ ಟ್ರಿಕ್‌(ತಂತ್ರ)ಗಳನ್ನು ಸಾಮಾನ್ಯವಾಗಿ ನಿರ್ವಹಿಸಲಾಗುತ್ತದೆ. ಅವುಗಳನ್ನು ಪ್ರದರ್ಶಿಸಲು ಜಟಿಲತೆ ಮತ್ತು ಕೌಶಲಗಳಲ್ಲಿ ವ್ಯಾಪಕ ವ್ಯತ್ಯಾಸಗಳಿಂದ ಕೂಡಿರುತ್ತದೆ. ತಂತ್ರಗಳನ್ನು ನಿರ್ವಹಿಸಲು ನರ್ತಕರಿಗೆ ಬೇಕಾದ ಕೌಶಲಗಳ ಅಗತ್ಯವಲ್ಲದೇ, ಆಕ್ರೊ ನೃತ್ಯದಲ್ಲಿ ಪ್ರದರ್ಶಿಸುವ ತಂತ್ರಗಳ ವಿಧಗಳು ನರ್ತಕರ ಸಂಖ್ಯೆಯನ್ನು ಆಧರಿಸಿದೆ. ಸೊಲೊ ಅಥವಾ ಸಮೂಹ ನೃತ್ಯಗಳಲ್ಲಿ ಸ್ವತಂತ್ರ ನರ್ತಕರು ಸೊಲೊ ತಂತ್ರ ಗಳನ್ನು ಪ್ರದರ್ಶಿಸುತ್ತಾರೆ. ಇವುಗಳಿಗೆ ಉದಾಹರಣೆ:[]

  • ಬ್ಯಾಕ್ ಲೇಔಟ್
  • ಬ್ಯಾಕ್ ಟಕ್
  • ಬ್ಯಾಕ್ ವಾಕೋವರ್
  • ಕಾರ್ಟ್ವೀಲ್
  • ಚೆಸ್ಟ್ ಸ್ಟಾಂಡ್ (ಚಿನ್ ಸ್ಟಾಂಡ್)
  • ಮೊಣಕೈಯಲ್ಲಿ ನಿಲ್ಲುವುದು
  • ಮುಂಭಾಗಕ್ಕೆ ಹಾರುವುದು
  • ಹ್ಯಾಂಡ್‌ಸ್ಪ್ರಿಂಗ್
  • ಕೈಮೇಲೆ ನಿಲ್ಲುವುದು
  • ಕೈನಡಿಗೆ
  • ಕಿಪ್ ಅಪ್
  • ರೌಂಡ್‌ಆಫ್
  • ಸೈಡ್ ಏರಿಯಲ್
  • ವಾಲ್ಡೆಜ್
ಮುಂಭಾಗಕ್ಕೆ ಹಾರುವುದು
ಕೈ ನಡಿಗೆ
ವಾಲ್ಡೇಜ್

ಡಬಲ್ ಟ್ರಿಕ್ಸ್ಪಾರ್ಟ್‌ನರಿಂಗ್ ಟ್ರಿಕ್ಸ್ —ನರ್ತಕರ ಜೋಡಿಯಿಂದ ಮಾತ್ರ ಪ್ರದರ್ಶಿಸಬಹುದು. ಇದಕ್ಕೆ ಉದಾಹರಣೆ ಪಿಚ್ ಟಕ್ . ಇದರಲ್ಲಿ ಒಬ್ಬ ನರ್ತಕ ತನ್ನ ಕೈಗಳಿಂದ ಜೀನನ್ನು ರೂಪಿಸುತ್ತಾನೆ. ಎರಡನೇ ನರ್ತಕ್ತಿ ಜೀನಿನ ಮೇಲೆ ಹೆಜ್ಜೆಗಳನ್ನು ಇಡುತ್ತಾಳೆ ಮತ್ತು ಮೊದಲನೇ ನರ್ತಕ ಜೀನನ್ನು ಮೇಲಕ್ಕೆ ತಳ್ಳುತ್ತಾನೆ. ಎರಡನೇ ನರ್ತಕ್ತಿ ಹಿಂಭಾಗದ ಪರಿಭ್ರಮಣದೊಂದಿಗೆ ಮೇಲಕ್ಕೆ ಚಿಮ್ಮಿ, ಗಾಳಿಯಲ್ಲಿ ಪೂರ್ಣ ಆವರ್ತನದೊಂದಿಗೆ ಅವಳ ಪಾದಗಳ ಮೇಲೆ ನಿಲ್ಲುತ್ತಾಳೆ. ಆಕ್ರೊ ಜತೆಗಾರರು ಕೆಲವುಬಾರಿ ಸಿಂಗಲ್ ಮತ್ತು ಡಬಲ್ ಟ್ರಿಕ್ಸ್‌ನೊಂದಿಗೆ ಲಿಫ್ಟ್ಸ್(ಮೇಲಕ್ಕೆತ್ತುವುದು) ಮತ್ತು ಮೆಲುನಡೆ(ಅಡಾಜಿಯೊ)ಗಳನ್ನು ನಿರ್ವಹಿಸುತ್ತಾರೆ.

  • ಡಬಲ್ ಬ್ಯಾಕ್ ವಾಕೋವರ್
  • ಡಬಲ್ ಕಾರ್ಟ್‌ವೀಲ್
  • ಡಬಲ್ ಪ್ಲೇಂಜ್
  • ಲಾನ್‌ಮೋವರ್
  • ಪಿಚ್ ಟಕ್
  • ಸ್ವಿಜಲ್
  • ವಾಲ್ಟ್ ಸಾಮರ್‌ಸಾಲ್ಟ್
ಲಾನ್‌ಮೋವರ್
ಪಿಚ್ ಟಕ್
ಸ್ವಿಸಲ್

ಗ್ರೂಪ್ ಟ್ರಿಕ್ಸ್ ಗೆ ಸಾಮಾನ್ಯವಾಗಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ನರ್ತಕರ ಅಗತ್ಯವಿರುತ್ತದೆ. ಇವುಗಳಿಗೆ ಉದಾಹರಣೆ:

  • ಬ್ರಿಜ್ ಪಿರಮಿಡ್
  • ಟ್ರಿಪಲ್ ಕಾರ್ಟ್‌ವೀಲ್

ಉಡುಗೆತೊಡುಗೆ

[ಬದಲಾಯಿಸಿ]

ಪಾದರಕ್ಷೆ

[ಬದಲಾಯಿಸಿ]
ಆಕ್ರೊ ಬೂಟುಗಳ ಜತೆ
ಕೆಳಗಿನಿಂದ ಗೋಚರಿಸುವ ಪಾದಗಳ ಚರ್ಮಪಟ್ಟಿ

ಆಕ್ರೊ ನೃತ್ಯಗಳನ್ನು ಸಾಮಾನ್ಯವಾಗಿ ಗಟ್ಟಿ ವೇದಿಕೆಗಳಲ್ಲಿ ವ್ಯಾಪಕವಾಗಿ ವ್ಯತ್ಯಾಸದಿಂದ ಕೂಡಿದ ಮೇಲ್ಮೈಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇಂತಹ ನೆಲಗಳು ಜಿಮ್ನಾಸ್ಟಿಕ್ಸ್ ನೆಲಕ್ಕಿಂತ ಗಣನೀಯವಾಗಿ ವ್ಯತ್ಯಾಸದಿಂದ ಕೂಡಿರುತ್ತದೆ. ಇವುಗಳ ಸಾಮಾನ್ಯ ಮೇಲ್ಮೈಯನ್ನು ಮೆತ್ತಗಿನ ಫೋಮ್ ಮತ್ತು ಸ್ಪ್ರಿಂಗ್ ಫ್ಲೋರ್ ಮೇಲೆ ನಿರ್ಮಿಸಲಾಗಿರುತ್ತದೆ. ಜಿಮ್ನಾಸ್ಟ್‌ಗಳು ಬರೀ ಕಾಲಿನಲ್ಲಿ ಪ್ರದರ್ಶನ ನೀಡುತ್ತಾರೆ ಮತ್ತು ಎಳೆತ ಮತ್ತು ಮೆತ್ತನೆಯ ಸ್ಥಿತಿಗೆ ಸಾಧಾರಣ ಜಿಮ್ನಾಸ್ಟಿಕ್ಸ್ ನೆಲವನ್ನು ಅವಲಂಬಿಸುತ್ತಾರೆ. ಆದರೆ ಆಕ್ರೊ ನರ್ತಕರು ಬರೀಕಾಲಿನಲ್ಲಿ ನೃತ್ಯಮಾಡುವುದು ಅಪರೂಪ. ಬದಲಿಗೆ ಆಕ್ರೋ ಬೂಟುಗಳು ಅಥವಾ ಪಾದದ ಚರ್ಮದ ಪಟ್ಟಿಗಳನ್ನು ಅವಶ್ಯಕ ಎಳೆತ ಮತ್ತು ಮೆತ್ತನೆಯ ಸ್ಥಿತಿ ಒದಗಿಸುವುದಕ್ಕಾಗಿ ಅವಲಂಬಿಸಿರುತ್ತಾರೆ. ಆಕ್ರೊ ಪಾದರಕ್ಷೆಗಳ ಎಲ್ಲ ಸಾಮಾನ್ಯ ವಿಧಗಳು ಎಳೆತ ಮತ್ತು ಮೆತ್ತನೆಯ ಸ್ಥಿತಿ ಎರಡನ್ನೂ ಒದಗಿಸುತ್ತದೆ. ಇದರ ಜತೆಗೆ, ಆಕ್ರೊ ಪ್ರದರ್ಶನದ ಮೇಲ್ಮೈಗಳು ಸಾಮಾನ್ಯವಾಗಿ ಒರಟಾಗಿರುತ್ತವೆ. ಆದ್ದರಿಂದ ಚರ್ಮ ಸವೆಯದಂತೆ ಪಾದದ ತಳಭಾಗವನ್ನು ಆಕ್ರೊ ಪಾದರಕ್ಷೆಯು ರಕ್ಷಿಸಬೇಕು. ಸವೆತದಿಂದ ರಕ್ಷಣೆಯು ಪಾದದ ಉಬ್ಬಿಗೆ ವಿಶೇಷವಾಗಿ ಮುಖ್ಯವಾಗಿದೆ. ನೃತ್ಯದಲ್ಲಿ ಜಿಗಿತಗಳು ಮತ್ತು ಸುತ್ತುತಿರುಗುವಿಕೆಗಳ ಸಂದರ್ಭದಲ್ಲಿ ಘರ್ಷಣೆಗೆ ಪಾದದ ಉಬ್ಬು ಒಳಗಾಗುತ್ತದೆ. ಎಳೆತವು ನಂತರದ ಜಾರುವಿಕೆ ತಡೆಯಲು ಅವಶ್ಯಕವಾಗಿದ್ದು, ಜಾರುವಿಕೆಯಿಂದ ಗಟ್ಟಿಯಾದ ನೆಲಕ್ಕೆ ಅಪಾಯಕಾರಿಯಾಗಿ ಬೀಳುವುದರಲ್ಲಿ ಫಲಿತಾಂಶ ನೀಡುತ್ತದೆ. ಮೆತ್ತನೆಯ ವಸ್ತು ಟಕ್ಸ್ ಮತ್ತು ಲೇಔಟ್ಸ್ ಮುಂತಾದ ತಂತ್ರಗಳನ್ನು ಪ್ರದರ್ಶಿಸುವಾಗ ಬಡಿತವನ್ನು ಮೃದುಗೊಳಿಸುತ್ತದೆ. ಇದರಲ್ಲಿ ನರ್ತಕರ ಪಾದಗಳು ಅತ್ಯಂತ ವೇಗದಲ್ಲಿ ನೆಲವನ್ನು ಬಡಿಯಬಹುದು. ಮೆತ್ತನೆಯ ನೆಲವು ಮಾರ್ಲೆ ಫ್ಲೂರ್ ಅಲಭ್ಯತೆಯಲ್ಲಿ ವಿಶೇಷವಾಗಿ ಪ್ರಾಮುಖ್ಯತೆ ಗಳಿಸಿದೆ. ಏಕೆಂದರೆ ಮುಚ್ಚಿಲ್ಲದ ಪ್ರದರ್ಶನ ಮೇಲ್ಮೈಗಳಲ್ಲಿ ಮೆತ್ತನೆಯ ಸ್ಥಿತಿ ಇರುವುದಿಲ್ಲವಾದ್ದರಿಂದ ಇದು ತೀರಾ ಗಟ್ಟಿಯಾಗಿರುತ್ತದೆ ಮತ್ತು ಫಲಿತಾಂಶ ನೀಡುವುದಿಲ್ಲ.

ಆಕ್ರೊ ಬೂಟುಗಳು

[ಬದಲಾಯಿಸಿ]

ಆಕ್ರೊ ನರ್ತಕರು ಬಹುಮಟ್ಟಿಗೆ ಜ್ಯಾಜ್ ನೃತ್ಯ ಬೂಟುಗಳನ್ನು ಧರಿಸುತ್ತಾರೆ. ಇವನ್ನು ಸಾಮಾನ್ಯವಾಗಿ ಆಕ್ರೊ ನರ್ತಕರು ಆಕ್ರೊ ಶ್ಯೂಸ್ ಎಂದು ಉಲ್ಲೇಖಿಸುತ್ತಾರೆ. ಆಕ್ರೊ ಬೂಟುಗಳನ್ನು ಜಾಜ್ ಬೂಟುಗಳು , ಜಾಜ್ ಆಂಕಲ್ ಬೂಟುಗಳು ಮತ್ತು ಜಾಜ್ ಬೂಟೀಸ್ ಹಾಗು ಇತರೆ ಹೆಸರುಗಳಿಂದ ವಿವಿಧ ಉತ್ಪಾದಕರು ಕರೆಯುತ್ತಾರೆ. ಅವು ಸಾಮಾನ್ಯವಾಗಿ ಲೇಸ್‌ರಹಿತ, ಸುಲಭವಾಗಿ ಧರಿಸುವ ಬೂಟುಗಳು ಮತ್ತು ಬಿಗಿಯಾದ ಚರ್ಮದ ಅಪ್ಪರ್‌(ಮೇಲುಭಾಗ) ಹೊಂದಿದ್ದು, ನರ್ತಕನ ಪಾದಗಳು ಬೂಟುಗಳ ಒಳಗೆ ಸ್ಥಳಾಂತರವಾಗುವುದನ್ನು ನಿವಾರಿಸುತ್ತದೆ. ಅವುಗಳ ತೆಳುವಾದ, ಬಗ್ಗುವ ಚರ್ಮದ ಅಪ್ಪರ್‌ಗಳು ಮತ್ತು ಸೀಳಿದ ಅಡಿಭಾಗದಿಂದ ಆಕ್ರೊ ಬೂಟುಗಳು ಉತ್ತಮ ನಮ್ಯತೆಯನ್ನು ಹೊಂದಿರುತ್ತದೆ. ಹೀಗೆ ನರ್ತಕರಿಗೆ ಉತ್ತಮ ನೃತ್ಯದ ರೂಪ ಮತ್ತು ಆಕ್ರೋಬ್ಯಾಟಿಕ್ ನಿಯಂತ್ರಣವನ್ನು ಸಾಧಿಸಲು ಅನುಕೂಲ ಕಲ್ಪಿಸುತ್ತದೆ. ಪಾದರಕ್ಷೆಯ ಅಡಿಭಾಗವು ಮೃದು ರಬ್ಬರ್‌ನಿಂದ ತಯಾರಿಸಲಾಗಿದ್ದು ಇದರಿಂದ ಎಳೆತ ಮತ್ತು ಮೆತ್ತನೆಯ ಸ್ಥಿತಿ ಒದಗಿಸುತ್ತದೆ. ಇದು ಪಾದದ ಸಂಪೂರ್ಣ ಅಡಿಯನ್ನು ಮುಚ್ಚುವುದರಿಂದ ಚರ್ಮದ ಸವೆತದಿಂದ ಉತ್ತಮ ರಕ್ಷಣೆ ನೀಡುತ್ತದೆ.

ಪಾದದ ಚರ್ಮ ಪಟ್ಟಿಗಳು

[ಬದಲಾಯಿಸಿ]

ಆಕ್ರೊ ನರ್ತಕ ಪಾದದ ಚರ್ಮ ಪಟ್ಟಿ ಗಳನ್ನು ಸಾಮಾನ್ಯ ವಿರಳವಾಗಿ ಧರಿಸುತ್ತಾನೆ. ಇವುಗಳನ್ನು ಉತ್ಪಾದಕನನ್ನು ಅವಲಂಬಿಸಿ ಡ್ಯಾನ್ಸ್ ಪಾಸ್ ಮತ್ತು ಫುಟ್ ಅನ್ಡೀಜ್ , ಎಂದು ಕರೆಯಲಾಗುತ್ತದೆ. ಪಾದದ ಚರ್ಮ ಪಟ್ಟಿಗಳನ್ನು ಸುಲಭವಾಗಿ ಧರಿಸಬಹುದು. ಆಂಶಿಕ ಪಾದವನ್ನು ಮುಚ್ಚುತ್ತದೆ ಮತ್ತು ಪಾದದ ಉಬ್ಬನ್ನು ಮಾತ್ರ ರಕ್ಷಿಸುತ್ತದೆ. ಸೌಂದರ್ಯದ ಕಾರಣಗಳಿಗಾಗಿ ಆಕ್ರೋ ಬೂಟುಗಳಿಗಿಂತ ಕೆಲವೊಮ್ಮೆ ಇವಕ್ಕೆ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ, ಮೈ ಬಣ್ಣದ ಪಾದದ ಚರ್ಮ ಪಟ್ಟಿಗಳು ಬರೀ ಪಾದಗಳ ನೋಟವನ್ನು ನೀಡುತ್ತದೆ. ಆಕ್ರೊ ಬೂಟುಗಳು ಒದಗಿಸುವ ಎಳೆತ, ಮೆತ್ತನೆ ಸ್ಥಿತಿ ಮತ್ತು ಸವೆತದ ರಕ್ಷಣೆಯನ್ನು ಸ್ವಲ್ಪ ಪ್ರಮಾಣಕ್ಕೆ ಉಳಿಸಿಕೊಳ್ಳುತ್ತದೆ.

ಉಡುಗೆ-ತೊಡುಗೆ

[ಬದಲಾಯಿಸಿ]
ಆಕ್ರೊ ವಾಡಿಕೆಯ ಸ್ಕರ್ಟ್ ಗಿಡ್ಡವಾಗಿದ್ದು, ನರ್ತಕಿ ತಲೆಕೆಳಗಾದಾಗ ಇದು ತಲೆಪಟ್ಟಿಯನ್ನು ಸಂಪರ್ಕಿಸುವುದಿಲ್ಲ.

ಆಕ್ರೊ ನರ್ತಕರು ಸಾಮಾನ್ಯವಾಗಿ ಮೆತುವಾದ, ಬಿಗಿಯಾದ ಉಡುಪನ್ನು ಸುರಕ್ಷತೆ ಮತ್ತು ಸೌಂದರ್ಯದೃಷ್ಟಿಯ ಕಾರಣಗಳಿಗಾಗಿ ಧರಿಸುತ್ತಾರೆ. ಮೈಗೆ ಬಿಗಿಯಾದ ಉಡುಪಿಗೆ ಸಡಿಲ ಉಡುಪಿಗಿಂತ ಹೆಚ್ಚು ಆದ್ಯತೆ ನೀಡುತ್ತಾರೆ.ಏಕೆಂದರೆ ಸಡಿಲ ಉಡುಪು ದೇಹದ ಜತೆ ಸಮಕಾಲಿಕವಾಗಿ ಚಲಿಸುವುದಿಲ್ಲ. ಹೀಗೆ ನಿಯಂತ್ರಣ ಸಾಧಿಸುವ ನರ್ತಕರ ಸಾಮರ್ಥ್ಯಕ್ಕೆ ಅಡ್ಡಿವುಂಟಾಗಬಹುದು. ಇದು ನರ್ತಕರು ತಂತ್ರಗಳನ್ನು ನಿರ್ವಹಿಸುವಾಗಿ ವಿಶೇಷವಾಗಿ ಪ್ರಾಮುಖ್ಯತೆ ಗಳಿಸಿದೆ.ಏಕೆಂದರೆ ನಿಯಂತ್ರಣ ತಪ್ಪಿದರೆ ಗಂಭೀರ ಗಾಯವಾಗಬಹುದು. ಸುರಕ್ಷತೆ ಅಂಶವಲ್ಲದೇ, ಬಿಗಿಯಾದ ಉಡುಪು ನರ್ತಕ/ನರ್ತಕಿಯ ದೇಹದ ಅವಯವಗಳ ಆಕಾರವನ್ನು ಬಹಿರಂಗಗೊಳಿಸುತ್ತದೆ. ಇದು ಆಕ್ರೊ ನೃತ್ಯ ಪ್ರದರ್ಶನದ ದೃಶ್ಯ ಪರಿಣಾಮಕ್ಕೆ ಗಮನಾರ್ಹ ಕೊಡುಗೆ ನೀಡುತ್ತದೆ. ಸ್ಪರ್ಧಾತ್ಮಕ ಆಕ್ರೊ ನರ್ತಕರು ಸಾಮಾನ್ಯವಾಗಿ ನೃತ್ಯ ಸ್ಪರ್ಧೆಗಳಲ್ಲಿ ಪ್ರದರ್ಶನ ನೀಡುವಾಗ ಪೋಷಾಕುಗಳನ್ನು ಧರಿಸುತ್ತಾರೆ. ಆಕ್ರೊ ಪೋಷಾಕುಗಳು ಸಾಮಾನ್ಯವಾಗಿ ಸಡಿಲ ಬಟ್ಟೆಯ ತುಂಡುಗಳನ್ನು ಉದಾಹರಣೆಗೆ ಗಿಡ್ಡ ಲಂಗಗಳು,ಆದರೆ ಇವುಗಳ ಗಾತ್ರಗಳು ಮತ್ತು ಸ್ಥಳಗಳನ್ನು ಎಚ್ಚರಿಕೆಯಿಂದ ಎಣಿಕೆ ಮಾಡಿ,ಯಾವುದೇ ಸುರಕ್ಷತೆ ಅಪಾಯಗಳನ್ನು ಉಂಟುಮಾಡದಂತೆ ಖಾತರಿಮಾಡಲಾಗುತ್ತದೆ. ಹೆಚ್ಚುವರಿ ಸುರಕ್ಷತೆ ಕ್ರಮವಾಗಿ, ಸ್ಕರ್ಟ್‌ಗಳನ್ನು ಕೆಲವು ಬಾರಿ ಸೊಂಟದ ಸುತ್ತಳತೆಯಲ್ಲಿ ಪಿನ್ ಮಾಡಲಾಗುತ್ತದೆ ಅಥವಾ ಹೊಲಿಯಲಾಗುತ್ತದೆ. ಇದರಿಂದ ಕೈ ನಡಿಗೆ ಮುಂತಾದುವಲ್ಲಿ ನರ್ತಕಿ ತಲೆಕೆಳಗಾದಾಗ ಅವು ಸಂಪೂರ್ಣ ಜೋತುಬೀಳುವುದಿಲ್ಲ ಮತ್ತು ನರ್ತಕಿಯ ಕೂದಲಿನಲ್ಲಿ ಅಥವಾ ಪೋಷಾಕಿನ ತಲೆಪಟ್ಟಿಯಲ್ಲಿ ಸಿಕ್ಕಿಹಾಕಿಕೊಳ್ಳಬಹುದಾದ ಸ್ಕರ್ಟ್ ನರ್ತಕಿಯ ತಲೆಯನ್ನು ಸಂಪರ್ಕಿಸುವುದನ್ನು ನಿವಾರಿಸುತ್ತದೆ.

ಸ್ಪರ್ಧಾತ್ಮಕ ಆಕ್ರೊ

[ಬದಲಾಯಿಸಿ]

ಆಕ್ರೊ ನೃತ್ಯವನ್ನು ಏಕರೂಪವಾಗಿ ಸ್ಪರ್ಧಾತ್ಮಕ ನೃತ್ಯ ಕೈಗಾರಿಕೆಯಲ್ಲಿ ವ್ಯಾಖ್ಯಾನಿಸಲಾಗಿಲ್ಲ.[] ಕೆಲವು ನೃತ್ಯ ಸ್ಪರ್ಧೆ ಕಂಪೆನಿಗಳಿಗೆ ಬಹುಮಟ್ಟಿಗೆ ಶೇಕಡ ೫೦ರಷ್ಟು ಆಕ್ರೊಬ್ಯಾಟಿಕ್ ಅಂಶದೊಂದಿಗೆ ಕನಿಷ್ಠ ನಾಲ್ಕು ಅಥವಾ ಐದು ತಂತ್ರಗಳ ಆಕ್ರೊ ವಾಡಿಕೆಯ ಅಗತ್ಯವಿರುತ್ತದೆ. ಇತರೆ ಕಂಪೆನಿಗಳಿಗೆ ಶೇಕಡ ಐವತ್ತು ನಿಖರವಾಗಿ ಅಥವಾ ಅದಕ್ಕಿಂತ ಹೆಚ್ಚು ಆಕ್ರೋಬ್ಯಾಟಿಕ್ ಅಂಶವನ್ನು ಹೊಂದಿರುವ ವಾಡಿಕೆಯ ಅಗತ್ಯವಿರುತ್ತದೆ. ಕೆಲವು ಸ್ಪರ್ಧೆಗಳಲ್ಲಿ ಆಕ್ರೊ ನೃತ್ಯವು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಆಕ್ರೊ ಡ್ಯಾನ್ಸ್ ಪ್ರದರ್ಶನ ವರ್ಗಕ್ಕೆ ಹೊಂದಿಕೆಯಾಗುತ್ತದೆ. ಉಳಿದ ಸ್ಪರ್ಧೆಗಳಲ್ಲಿ "ಆಕ್ರೊ/ಜಿಮ್" ಮುಂತಾದ ಇದೇ ರೀತಿಯ ವರ್ಗಕ್ಕೆ ಅಥವಾ ಪರ್ಯಾಯ ವರ್ಗ "ಓಪನ್‌" ಮುಂತಾದುವಕ್ಕೆ ಹೊಂದಿಕೆಯಾಗುತ್ತದೆ. ಈ ವ್ಯತ್ಯಾಸಗಳ ಕಾರಣದಿಂದಾಗಿ, ಭಿನ್ನ ಸ್ಫರ್ಧೆಗಳಲ್ಲಿ ಭಿನ್ನ ಪ್ರದರ್ಶನ ವರ್ಗಗಳಲ್ಲಿನ ನಿರ್ದಿಷ್ಟ ಆಕ್ರೊ ವಾಡಿಕೆಗೆ ಪ್ರವೇಶಿಸುವುದು ಅಗತ್ಯವಾಗಬಹುದು.

ಉಲ್ಲೇಖಗಳು‌‌

[ಬದಲಾಯಿಸಿ]
  1. ೧.೦ ೧.೧ Jim Lamberson. "Acro Dance as defined by the Competitive Dance Industry". Archived from the original on 2008-05-03. Retrieved 2008-04-03.
  2. Frank Cullen, Florence Hackman, Donald McNeilly (2007). Vaudeville, Old and New: An Encyclopedia of Variety Performers in America. Routledge. p. 239. ISBN 0-415-93853-8.{{cite book}}: CS1 maint: multiple names: authors list (link)
  3. Marshall Stearns, Jean Stearns (1994). Jazz Dance: The Story Of American Vernacular Dance. Da Capo Press. p. 263. ISBN 0-306-80553-7.
  4. StreetSwing Dance History Archives. "The Crackerjacks". Archived from the original on 2008-07-04. Retrieved 2008-06-06.
  5. Carla Webber. "Acrobatic skills for acro dance". Archived from the original on 2008-05-03. Retrieved 2008-04-03.


ಇವನ್ನೂ ಗಮನಿಸಿ‌

[ಬದಲಾಯಿಸಿ]

ಟೆಂಪ್ಲೇಟು:Portal