ಆಂಟೊನೈನಸ್ ಪಯಸ್

ವಿಕಿಪೀಡಿಯ ಇಂದ
Jump to navigation Jump to search
ಆಂಟೊನೈನಸ್ ಪಯಸ್
Antoninus Pius Glyptothek Munich 337 Detail.jpg
Bust of Antoninus Pius, at Glyptothek, Munich.
ಜನನ 19 ಸಪ್ಟೆಂಬರ್ 86
near Lanuvium, Italy
ನಿಧನ 7 ಮಾರ್ಚ್ 161(161-03-07) (ವಯಸ್ಸು 74)
Lorium
Predecessor Hadrian, adopted father
Successor Marcus Aurelius and Lucius Verus, adopted sons
ಬಾಳ ಸಂಗಾತಿ Annia Galeria Faustina
Parents
Denarius, struck 140 AD with portrait of Antoninus Pius (obverse) and his adoptive son Marcus Aurelius (reverse).

ರೋಮ್

Head of Antoninus Pius.jpg

ಆಂಟೊನೈನಸ್ ಪಯಸ್ ಕ್ರಿ.ಶ. (86-161) 138-161 ರವರೆಗೂ ರೋಮನ್ ಚಕ್ರಾಧಿಪತಿಯಾಗಿದ್ದ; ಪ್ರಸಿದ್ಧ ಶ್ರೀಮಂತ ಮನೆತನಕ್ಕೆ ಸೇರಿದ್ದ ಈತ ಪ್ರತಿಭಾಸಂಪನ್ನತೆಯಿಂದ ಹೇಡ್ರಿಯನ್ ದೊರೆಯ ದಂಡಾಧಿಪತಿಯಾದ (120) ಇಟಲಿನ್ಯಾಯಾಂಗದ ಆಡಳಿತವನ್ನು ಕೆಲಕಾಲ ನಡೆಸಿದ[೨]. ಏಷ್ಯದ ಪ್ರಾಂತ್ಯಾಧಿಕಾರಿಯಾಗಿಯೂ ಇದ್ದ. ಅನಂತರ ಚಕ್ರವರ್ತಿಯ ಆಪ್ತ ಸಲಹೆಗಾರನಾದ. 138[೩] ರಲ್ಲಿ ಇವನೇ ಸಾಮ್ರಾಟನೆಂದು ಹೇಡ್ರಿಯನ್ ಘೋಷಿಸಿದ[೪]. ಈ ಘೋಷಣೆ ಹೋರಾಟ ಸ್ವಲ್ಪ ಕಾಲದ ಮೇಲೆ ಹೇಡ್ರಿಯನ್ ಮರಣ ಹೊಂದಿದ[೫].

ಸಾಮ್ರಾಟನಾಗಿದ್ದ ಇಪ್ಪತ್ತಮೂರು ವರ್ಷಗಳಲ್ಲಿ ರಾಜ್ಯ ಒಟ್ಟಿನಲ್ಲಿ ಶಾಂತಿಯಿಂದಿತ್ತು[೬]. ಬ್ರಿಟಿಷ್ ದ್ವೀಪಗಳು, ಜರ್ಮನಿ, ಮುಂತಾದ ಸರಹದ್ದು ಪ್ರದೇಶಗಳಲ್ಲಿ ಕೆಲವು ಗಲಭೆಗಳಾದವು. ಅವುಗಳನ್ನಡಗಿಸುವುದಕ್ಕೆ ಸರಹದ್ದು ರಕ್ಷಣಾಪಡೆಗಳಿಂದಲೇ ಸಾಧ್ಯವಾಯಿತು. ಹೇಡ್ರಿಯನ್‍ನಂತೆ ಆಗಿಂದಾಗೆ ಸಾಮ್ರಾಜ್ಯದಲ್ಲಿ ಸ್ವತಃ ತಿರುಗುವ ಹವ್ಯಾಸವನ್ನು ಬಿಟ್ಟು ರೋಮನಲ್ಲೇ ನಿಂತು ಸಮರ್ಥ ಸಲಹೆಗಾರರ ಸಹಾಯದಿಂದ ದೂರ ಪ್ರಾಂತ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದ. ಇದರಿಂದ ನ್ಯಾಯಾಂಗದಲ್ಲಿ ಅನೇಕ ಜನೋಪಯುಕ್ತ ಸುಧಾರಣೆಗಳನ್ನು ಮಾಡಲು ಸಾಧ್ಯವಾಯಿತು; ಅನೇಕ ಕ್ರೂರ ಶಿಕ್ಷಾಕ್ರಮಗಳು ರದ್ದಾದವು. ಜನಸಾಮಾನ್ಯರ ಜೀವನವನ್ನು ಸುಧಾರಿಸುವ ಪ್ರಯತ್ನ ನಡೆಸಿತು. ಅದಕ್ಕಾಗಿ ಹಣವನ್ನು ಹೇರಳವಾಗಿ ವ್ಯಯಮಾಡಲಾಯಿತು. ಪಯಸ್ ಎಂಬುದು ಅವನ ನಿಜವಾದ ಹೆಸರಲ್ಲ. ಧರ್ಮಶ್ರದ್ಧೆಯನ್ನೇ ಜೀವನದ ಉಸಿರಾಗಿ ಮಾಡಿಕೊಂಡಿದ್ದ ಅವನಿಗೆ ಪ್ರಜೆಗಳು ತಮ್ಮ ಕೃತಜ್ಞತಾಸೂಚಕವಾಗಿ ಕೊಟ್ಟ ಬಿರುದು. ಏಲಿಯಸ್ ಅರಿಸ್ಟಿಡೀಸ್ ಎಂಬ ಪ್ರಸಿದ್ಧ ವಾಗ್ಮಿ ಒಂದು ಸಲ ಮಾಡಿದ[ಚಕ್ರವರ್ತಿಯ ಗುಣಗಾನ ಇಟಲಿಯ ಇಡೀ ಜನತೆಯನ್ನೇ ರೋಮಾಂಚನಗೊಳಿಸಿತಂತೆ.

ಉಲ್ಲೇಖನಗಳು[ಬದಲಾಯಿಸಿ]