ಆಂಜನೇಯ ದೇವಸ್ಥಾನ ಹಾರೊಹಳ್ಳಿ ಶಿಲಾಶಾಸನ
ಹಾರೊಹಳ್ಳಿ ಶಿಲಾಸನ | |
---|---|
ಸ್ಥಳ | ಹಾರೊಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ |
ಎತ್ತರ | 5.00×2.11 feet (1.52×0.64 m) |
ನಿರ್ಮಾಣ | CE1530 |
ಹಾರೊಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಶಿಲಾಶಾಸನವು ಬೆಂಗಳೂರಿನ ಹೊರವಲಯದ ಹಾರೊಹಳ್ಳಿಯಲ್ಲಿದೆ. ಇದು ಬೆಂಗಳೂರು ಕನಕಪುರ ರಸ್ತೆಯಲ್ಲಿ ಸಿಗುವ ಒಂದು ದೇವಸ್ಥಾನದಲ್ಲಿದೆ. ಈ ಶಾನಸ ಸುಮಾರು ಕ್ರಿ.ಶ ೧೫೩೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 5'X2'11". ಇದು ಕನ್ನಡ ಲಿಪಿಯಲ್ಲಿ ಇದೆ. ಇದನ್ನು ವಿಜಯನಗರ ಸಾಮ್ರಾಜ್ಯದ ಆಡಳಿತದ ಸಮಯದಲ್ಲಿ ಸ್ಥಾಪಿಸಲಾಗಿತ್ತು.
ಶಾಸನ ಪಠ್ಯ
[ಬದಲಾಯಿಸಿ]ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN28 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧] ಅದೇ ಹೋಬಳಿ ಹಾರೋಹಳ್ಳಿ ಗ್ರಾಮದ ಆಂಜುನೇಯ ದೇವಾಲಯದ ಬಳಿ ನೆಟ್ಟರುವ ಕಲ್ಲಿನಲ್ಲಿ
1. ಸ್ವಸ್ತಿಶ್ರೀಜಯಾಭ್ಯುದಯಶಾಲಿವಾಹಶಕ
2. ವರುಷ1452 ನೇ ವಿಕೃತಿಸಂವತ್ಸರ
3. ದಕಾರ್ತೀಕಶುದ್ಧ 12 ಪುಣ್ಯ ಕಾಲದಲ್ಲಿ ಆ
4. ಚ್ಯುತರಾಯಮಹಾರಾಯರಿಗೆನಮ್ಮ ತಂದೆಬ
5. ಸವಪ್ಪನಾಯಕರಿಗೆಪುಣ್ಯವಾಗಿಅಚ್ಯುತರಾ
6. ಯರುಸೋಲೂರಬಸವಪ್ಪ ನಾಯಕರಮಕಳುಕ್ರಿ
7. ಸ್ವಪ್ಪನಾಯಕರಿಗೆನಾಯಕತನಕ್ಕೆ ಪಾಲಿಸಿದಸಿವನ
8. ಸಮುದ್ರ ದಸ್ತ ಲಕ್ಕೆ ಸಲುವಹಾರೋಹಳ್ಳಿ ಗ್ರಾಮವ
9. ಸುಸಿಂಗಾಪುರದತಿರುವೆಂಗಳನಾತಲಿಂಗರಂಗ
10. ವೈಭೋಗಾಮ್ರು ತಪಡಿನೈವೇದ್ದಕ್ಕೆ ರಾಮಾನುಜಕೂ
11. ಟಕೆಸಲಬೇಕೆಂದು ಕೊಟ್ಟಸಿಲಶಸನ
ಅರ್ಥ
[ಬದಲಾಯಿಸಿ]Be it well. (On the date specified), :- In order that merit might be to Achyuta-Raya-maharaya and to our father Basavappa- Nayaka, - Harohalli, belonging to the Sivanasamudra-sthala, which Achyuta-Raya favoured to Solur Basavappa-Nayaka’s son Krishnappa-Nayaka for his office of Nayaka, have we granted for the decorations, illuminations and offerings of the god Tiruvengalanatha of Singapura, to be held by the Ramanuja-kuta.
ಉಲ್ಲೇಖಗಳು
[ಬದಲಾಯಿಸಿ]- ↑ Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
{{cite book}}
: CS1 maint: unrecognized language (link)
ಹೊರಕೊಂಡಿಗಳು
[ಬದಲಾಯಿಸಿ]- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018
- Inscription Stone of Bangalore, A physical verification project by Uday Kumar P L