ವಿಷಯಕ್ಕೆ ಹೋಗು

ಆಂಡರ್ಸ್ ಜೋನಾಸ್ ಆಂಗ್‌ಸ್ಟ್ರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಂಗ್ಸ್ಟ್ರಾಮ್, ಆಂಡರ್ಸ್ಯೊನಸ್ ಇಂದ ಪುನರ್ನಿರ್ದೇಶಿತ)
ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್
ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್
ಜನನಆಗಸ್ಟ್ ೧೩, ೧೮೧೪
ಮೆಡೆಲ್ಪಾಡ್, ಸ್ವೀಡನ್
ಮರಣಜೂನ್ ೨೧, ೧೮೭೪
ಉಪ್ಸಲ, ಸ್ವೀಡನ್
ರಾಷ್ಟ್ರೀಯತೆಸ್ವೀಡನ್
ಕಾರ್ಯಕ್ಷೇತ್ರಗಳುಭೌತಶಾಸ್ತ್ರಜ್ಞ
ಸಂಸ್ಥೆಗಳುಉಪ್ಸಲ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣರೋಹಿತದರ್ಶನ (spectroscopy)
ಗಮನಾರ್ಹ ಪ್ರಶಸ್ತಿಗಳುRumford Medal

ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್ (ಆಗಸ್ಟ್ ೧೩, ೧೮೧೪ – ಜೂನ್ ೨೧, ೧೮೭೪)[] ಸ್ವೀಡನ್ ದೇಶದ ಭೌತಶಾಸ್ತ್ರಜ್ಞ.ಇವರನ್ನು ಭೌತಶಾಸ್ತ್ರದ ರೋಹಿತದರ್ಶನ (spectroscopy)ವಿಭಾಗದ ಪಿತಾಮಹ ಎಂದು ಕರೆಯಬಹುದು. ಲಗ್ಡ ಎಂಬಲ್ಲಿ ೧೮೧೪ನೆಯ ಆಗಸ್ಟ್ ೧೩೧ರಂದು ಜನಿಸಿದ. ಉಪ್ಸಾಲ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿಯ ವಿದ್ಯಾಲಯದಲ್ಲಿಯೆ ಶಿಕ್ಷಕನಾದ (೧೮೩೯). ಮುಂದೆ ಸ್ಟಾಕ್ ಹೋಮ್ ವೇದಶಾಲೆಯಲ್ಲಿ ಅನುಭವಗಳಿಸಿ ಉಪ್ಸಾಲ ವೇದಶಾಲೆಯಲ್ಲಿ ವೀಕ್ಷಕನಾದ (೧೮೪೩). ಭೂಮಿಯ ಕಾಂತತ್ವದ ವಿಷಯದಲ್ಲಿ ವಿಶೇಷ ಶೋಧನೆಗಳನ್ನು ನಡೆಸಿದ. ೧೮೫೮ರಲ್ಲಿ ಉಪ್ಸಾಲದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕನಾದ. ಅದುವರೆಗೂ ಬೇರೆ ಬೇರೆ ವೈಜ್ಞಾನಿಕರು ವಸ್ತುಗಳ ಉಷ್ಣವಾಹಕತ್ವವನ್ನು (ಥರ್ಮಲ್ ಕಂಡಕ್ಟಿವಿಟಿ[]) ಕಂಡುಹಿಡಿಯುವುದರಲ್ಲಿ ಒಂದಕ್ಕೊಂದಕ್ಕೆ ಸಂಪೂರ್ಣ ಅಸಂಗತಗಳಾದ ಮೌಲ್ಯಗಳು ದೊರೆತಿದ್ದು ಅವ್ಯವಸ್ಥೆಯಿತ್ತು. ಆಂಗ್‍ಸ್ಟ್ರಾಂ[] ಹೊಸ ಮಾರ್ಗದಿಂದ ಈ ಗುಣವನ್ನು ಅಳೆದು ಸಂಗತವಾದ ಮೌಲ್ಯಗಳು ದೊರೆಯುವುದಕ್ಕೆ ಕಾರಣನಾದ. ಅಂಗ್‌ಸ್ಟ್ರಾಮ್‌ರವರು ಸ್ವೀಡನ್ನಿನ ಶರೀರವಿಜ್ಞಾನಿ ಮತ್ತು ಖಗೋಳವಿಜ್ಞಾನಿಯಾಗಿದ್ದರು. ಅವರು ಉಷ್ಣದಹನ ಪ್ರಕ್ರಿಯೆಯ ಪ್ರಯೋಗಗಳನ್ನು ನಡೆಸುವಾಗ, ಉಷ್ಣವಾಹಕತೆಯ ಮಾಪನ ವಿಧಾನವನ್ನು ರೂಪಿಸಿದರು. ಅದರಿಂದ ಉಷ್ಣವಾಹಕತೆ ವಿದ್ಯುದ್ವಾಹಕತೆಗೆ ಅನುಪಾತವಾಗಿದೆ (proportional) ಎಂಬ ವಿಷಯ ಋಜುವಾತಾಯಿತು. ೧೮೫೩ರಲ್ಲಿ ಅವರು ಬರೆದ ‘ಆಪ್ಟಿಕಲ್ ಇನ್ವೆಸ್ಟಿಗೇಶನ್ಸ್’ ಪುಸ್ತಕದಲ್ಲಿ ರೋಹಿತ ವಿಶ್ಲೇಷಣೆಯ (spectrum analysis) ತತ್ವಗಳನ್ನು ಪ್ರಕಟಿಸಿದರು. ಅವರು ವಿದ್ಯುತ್ ಚಾಪದ (electric arc) ಬಗ್ಗೆ ಅಧ್ಯಯನ ನಡೆಸಿದಾಗ, ಆ ಚಾಪ ಒಂದರಮೇಲೊಂದು ಮೇಳೈಸಿರುವ ಎರಡು ರೋಹಿತಗಳಿರುತ್ತವೆ ಎಂಬುದಾಗಿ ಕಂಡುಹಿಡಿದರು. ಮೊದಲನೆಯ ರೋಹಿತ ಇಲೆಕ್ಟ್ರೋಡ್‌ನ ಲೋಹದಿಂದ ಹೊರಹೊಮ್ಮುತ್ತದೆ, ಎರಡನೆಯದು ಆ ಚಾಪವನ್ನು ಆವರಿಸಿರುವ ಅನಿಲದಿಂದ ಹೊರಹೊಮ್ಮುತ್ತದೆ.[] ಅಂಗ್‌ಸ್ಟ್ರಾಮ್‌ರವರು ಉತ್ತರಧ್ರುವಪ್ರಭೆಯ (Arora Borealis) ರೋಹಿತವನ್ನು (೧೮೬೭ರಲ್ಲಿ) ಅಭ್ಯಸಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಸೂರ್ಯನ ಅಂತರಾಳದ ಹೈಡ್ರೋಜನ್ ಅನಿಲದ ಅಸ್ತಿತ್ವವನ್ನು ಅವರು ೧೮೬೨ರಲ್ಲಿ ಕಂಡುಹಿಡಿದರು. ಪ್ರಮಾಣಕ್ಕನುಗುಣವಾದ ಸೌರರೋಹಿತದ ಭೂಪಟವನ್ನು ಅಂಗ್‌ಸ್ಟ್ರಾಮ್‌ರವರು ೧೮೬೯ರಲ್ಲಿ ಪ್ರಕಟಿಸಿದರು. ಅಂಗ್‌ಸ್ಟ್ರಾಮ್‌ರವರು ೧೮೭೪ರ ಜೂನ್ ೨೧ರಂದು ನಿಧನರಾದರು. ಬೆಳಕಿನ ತರಂಗದೂರದ ಅಳತೆಯ (ಅಥವಾ ವಿದ್ಯುದಯಸ್ಕಾಂತ ವಿಕಿರಣದ ತರಂಗದೂರದ ಅಳತೆಯ) ಮಾನಕ್ಕೆ ‘ಅಂಗ್‌ಸ್ಟ್ರಾಮ್’ ಎಂಬುದಾಗಿ ಅವರ ಗೌರವಾರ್ಥವಾಗಿ ೧೯೦೭ರಲ್ಲಿ ಅಂಗೀಕೃತವಾಯಿತು. ಒಂದು ಅಂಗ್‌ಸ್ಟ್ರಾಮ್ ೧೦-೧೦ ಮೀಟರ್‌ಗಳ ತರಂಗದೂರಕ್ಕೆ ಸಮನಾಗಿದೆ. ಚಂದ್ರಲೋಕದಲ್ಲಿನ ಒಂದು ಕುಳಿಗೆ (crater) ಅಂಗ್ ಸ್ಟ್ರಾಮ್ ರವರ ಹೆಸರನ್ನು ಇಡಲಾಗಿದೆ.

ಆಂಗ್‍ಸ್ಟ್ರಂನ ಮಗ ನಟ್‍ಯೋಹನ್ ಆಂಗ್‍ಸ್ಟ್ರಂ (೧೮೫೭-೧೯೧೦) ಉಪ್ಸಾಲದಲ್ಲಿಯೇ ಭೌತಶಾಸ್ತ್ರ ಪ್ರಾಧ್ಯಾಪಕನಾದ (೧೮೯೬). ಸೌರಉಷ್ಣದ ವಿಸರಣೆ ಮತ್ತು ಭೂಮಿಯ ವಾಯುಮಂಡಲದಿಂದ ಅದರ ಹೀರುವಿಕೆ ಇವುಗಳನ್ನು ಕುರಿತು ಸಂಶೋಧನೆ ನಡೆಸಿದ. ಈ ದಾರಿಯಲ್ಲಿ ಹಲವಾರು ಸೂಕ್ಷ್ಮೋಪಕರಣಗಳನ್ನೂ (ಉದಾ : ಎಲೆಕ್‍ಟ್ರಿಕ್ ಕಾಂಪೆನ್‍ಸೇಷನ್ ಪೈರ್‍ಹೀಲಿಯೋಮೀಟರ್, ೧೮೯೩, ಅತಿರಕ್ತ ರೋಹಿತದ ಫೋಟೋಸೂಚಕ ಉಪಕರಣ ೧೮೯೫) ಸೂಕ್ಷ್ಮ ವಿಧಾನಗಳನ್ನೂ ಕಂಡುಹಿಡಿದ.

ಉಲ್ಲೇಖಗಳು

[ಬದಲಾಯಿಸಿ]
  1. https://www.google.co.in/search?client=ubuntu&channel=fs&q=Anders+Jonas+Angstrom&ie=utf-8&oe=utf-8&gfe_rd=cr&ei=3n0ZV_uwHMOCoAOYpoGgAg#channel=fs&q=Anders+Jonas+Angstrom+born
  2. http://www.amadamiyachi.com/glossary/glossthermalconductivity
  3. https://www.britannica.com/science/angstrom
  4. "ಆರ್ಕೈವ್ ನಕಲು". Archived from the original on 2018-07-27. Retrieved 2016-04-22.