ಅಸ್ವಾಳ್
ಗೋಚರ
ಅಸ್ವಾಳ್ ಎಂಬುದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಒಂದು ಗ್ರಾಮ. ಆ ಗ್ರಾಮದ ಪಿನ್ ಕೋಡ್ ೫೭೧೧೦೮ ಆಗಿದೆ.
ಹೆಸರಿನ ಮೂಲ
[ಬದಲಾಯಿಸಿ]ಲೇಖಕ ಚದುರಂಗ ಅವರ ಒಂದು ಕಾದಂಬರಿಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ, "ಹಸನಾದ ಬಾಳು" ಎಂಬ ಹೆಸರು ಈಗ ಅಸ್ವಾಳ್ ಎಂದು ಬದಲಾಗಿದೆ ಎಂದು ತಿಳಿಯುತ್ತದೆ.
ಸ್ಥಳದ ವಿವರ
[ಬದಲಾಯಿಸಿ]ಮೈಸೂರು ಜಿಲ್ಲೆಯಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ ಈ ಗ್ರಾಮ. ಮೈಸೂರಿನ ಬೋಗಾದಿ ಇಂದ ಗದ್ದಿಗೆ ರಸ್ತೆಯಲ್ಲಿ ಸಾಗಿದರೆ, ಈ ಗ್ರಾಮವನ್ನು ತಲುಪಬಹುದು.
ಇತರ ವಿವರಗಳು
[ಬದಲಾಯಿಸಿ]ಇಲ್ಲಿನ ಬಹುತೇಕ ಜನರು ಬೇಸಾಯವನ್ನೇ ಅವಲಂಬಿಸಿದ್ದಾರೆ. ಬೆಳೆಯುವ ಬೆಳೆಗಳೆಂದರೆ ಜೋಳ, ಕಬ್ಬು, ಭತ್ತ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲಲ್ಲಿ ಕೆರೆಗಳಿವೆ. ಒಂದು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇದೆ. ಸರಿಯಾದ ವಿದ್ಯುತ್ ಸಂಪರ್ಕ ಇಲ್ಲ. ಈ ಊರಿನಲ್ಲಿ ಜಿ.ಎಚ್.ಪಿ.ಎಸ್ ಉರ್ದು ಶಾಲೆ ಇದೆ. ಇದು ೧೯೬೫ ನೇ ವರ್ಷದಲ್ಲಿ ಸ್ಥಾಪಿಸಲಾಯಿತು. ಜಿ.ಎಚ್.ಪಿ.ಎಸ್ ಉರ್ದು ಶಾಲೆಯ ನಿರ್ವಹಣೆಯ ಶಿಕ್ಷಣ ಇಲಾಖೆ ಹೊಂದಿದೆ. ಇಲ್ಲಿ ಮಾಧ್ಯಮವು ಉರ್ದು ಭಾಷೆಯಾಗಿದೆ.