ವಿಷಯಕ್ಕೆ ಹೋಗು

ಅಸೀಮಾ ಚಟರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸಿಮಾ ಚಟರ್ಜಿ
অসীমা চট্টোপাধ্যায়
ಅಸೀಮಾ ಚಟರ್ಜಿ
ಜನನ(೧೯೧೭-೦೯-೨೩)೨೩ ಸೆಪ್ಟೆಂಬರ್ ೧೯೧೭
ಕೊಲ್ಕತ್ತಾ, ಬಂಗಾಳ, ಬ್ರಿಟಿಷ್ ಭಾರತ
ಮರಣError: Need valid birth date (second date): year, month, day
ಕೋಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಜೈವಿಕ ರಸಾಯನಶಾಸ್ತ್ರ, ಫೈಟೊಮೆಡಿಸಿನ್
ಸಂಸ್ಥೆಗಳುಕಲ್ಕತ್ತಾ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಕಲ್ಕತ್ತಾ ವಿಶ್ವವಿದ್ಯಾಲಯ

ಅಸೀಮಾ ಚಟರ್ಜಿ (೨೩ ಸೆಪ್ಟೆಂಬರ್ ೧೯೧೭-೨೨ ನವೆಂಬರ್ ೨೦೦೬) ಭಾರತೀಯ ರಸಾಯನ ಶಾಸ್ತ್ರಜ್ಞೆ. ಆರ್ಗಾನಿಕ್ ರಸಾಯನ ಶಾಸ್ತ್ರ ಮತ್ತು ಫೈಟೋ ಮೆಡಿಸಿನ್[] ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ವಿಂಕಾ ಆಲ್ಕಲಾಇಡ್ಸ್ ಎಂಬ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಇವರು ಮೂರ್ಛೆ ರೋಗ ವಿರೋಧಕ ಮತ್ತು ಮಲೇರಿಯಾ ವಿರೋಧಕ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಾಕಷ್ಟು ದುಡಿದಿದ್ದಾರೆ. ಭರತ ಖಂಡದ ಔಷಧೀಯ ಸಸ್ಯಗಳ ಬಗ್ಗೆ ಸಂಪುಟಗಳನ್ನು ರಚಿಸಿದ್ದಾರೆ.

ಜೀವನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಅಸೀಮಾ ಚಟರ್ಜಿಯವರು ಪಶ್ಚಿಮ ಬಂಗಾಳದಲ್ಲಿ ೨೩ ಸೆಪ್ಟೆಂಬರ್ ೧೯೧೭ ರಂದು ಜನಿಸಿದರು. ಕೊಲ್ಕತ್ತಾದಲ್ಲಿ ಬೆಳೆದ ಇವರು ಬಹಳ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು. ಶಾಲೆಯನ್ನು ಮುಗಿಸಿ, ಕಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಆನರ್ಸ್ ಪದವಿ ಪಡೆದರು.

ವೃತ್ತಿ

[ಬದಲಾಯಿಸಿ]

ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಲೇಡಿ ಬ್ರಬೋರ್ನ್ ಕಾಲೇಜಿನಲ್ಲಿ ಸೇರಿಕೊಂಡರು ಮತ್ತು ಅಲ್ಲಿ ರಸಾಯನಶಾಸ್ತ್ರ ವಿಭಾಗವನ್ನು ಸ್ಥಾಪಿಸಿದರು. ೧೯೫೪ ರಲ್ಲಿ, ಅಸಿಮಾ ಚಟರ್ಜಿ ಕಲ್ಕತ್ತಾ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ಗೆ ಸೇರಿದರು, ಶುದ್ಧ ರಸಾಯನಶಾಸ್ತ್ರದಲ್ಲಿ ಓದುಗರಾಗಿ.[]

ಶೈಕ್ಷಣಿಕ ಚಟುವಟಿಕೆಗಳು

[ಬದಲಾಯಿಸಿ]

೧೯೩೮ರಲ್ಲಿ ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವೀಧರೆಯಾದ ಅಸೀಮಾರವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡಲು ಪ್ರಾರಂಭಿಸಿ, ಸಸ್ಯಗಳಿಂದ ಉತ್ಪಾದಿಸಲ್ಪಡುವ ರಾಸಾಯನಿಕಗಳು ಮತ್ತು ಸಿಂಥೆಟಿಕ್ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗಗಳಲ್ಲಿ ಕೆಲಸಮಾಡಿದರು. ಅವರ ಮಾರ್ಗದರ್ಶಕರಾಗಿ ರಸಾಯನ ಶಾಸ್ತ್ರದ ಆಗಿನ ದಿಗ್ಗಜರಾದ ಪ್ರಫುಲ್ಲ ಚಂದ್ರ ರೇ ಮತ್ತು ಸತ್ಯೇಂದ್ರನಾಥ್ ಬೋಸ್ ಇದ್ದರು. ಆನಂತರ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಲೇಡಿ ಬ್ರಾಬೋರ್ನ್ ಕಾಲೇಜಿಗೆ ಸೇರಿದ ಅವರು ರಸಾಯಶಾಸ್ತ್ರ ವಿಭಾಗದ ಆರಂಭಿಕ ಮುಖ್ಯಸ್ಥರಾಗಿ ೧೯೪೦ ರಲ್ಲಿ ಕೆಲಸಕ್ಕೆ ಸೇರಿದರು. ಭಾರತೀಯ ವಿಶ್ವವಿದ್ಯಾಲಯ ನೀಡುವ ಪಿ.ಎಚ್.ಡಿ ಪದವಿಗೆ ಭಾಜನರಾದ ಪ್ರಪ್ರಥಮ ಭಾರತೀಯ ಮಹಿಳೆ ಅಸೀಮಾ ಚಟರ್ಜಿ.ಅವರಿಗೆ ಪಿ.ಎಚ್.ಡಿ ಪದವಿ ೧೯೪೪ ರಲ್ಲಿ ದೊರೆಯಿತು. ೧೯೫೪ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ನಲ್ಲಿ ರೀಡರ್ ಹುದ್ದೆಗೆ ಸೇರಿದರು. ೧೯೬೨ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರತಿಷ್ಟಿತ ಖೈರಾ ಪ್ರೊಫೆಸರ್ ಹುದ್ದೆಯನ್ನು ಅಲಂಕರಿಸಿ, ೧೯೮೨ ರ ವರೆಗೂ ಆ ಸ್ಥಾನದಲ್ಲಿದ್ದರು.

ಪ್ರಶಸ್ತಿ-ಪುರಸ್ಕಾರಗಳು

[ಬದಲಾಯಿಸಿ]
  • ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರೇಮ್ ಚಂದ್ ರಾಯ್ ಚಂದ್ ಸ್ಕಾಲರ್
  • ಯಾವುದೇ ಭಾರತೀಯ ವಿಶ್ವವಿದ್ಯಾಲಯ ನೀಡುವ ಡಾಕ್ಟರೇಟ್ ಪದವಿಯ ಪಡೆದ ಮೊಟ್ಟ ಮೊದಲ ಮಹಿಳೆ.
  • ೧೯೬೨-೧೯೮೨ ರ ವರೆಗೆ ಕಲ್ಕತ್ತಾ ವಿಶ್ವವಿದ್ಯಾಲಯದ ಖೈರಾ ಪ್ರೊಫೆಸರ್ ಸ್ಥಾನ.
  • ೧೯೭೨ ರಲ್ಲಿ ಯು.ಜಿ.ಸಿ. ಪ್ರಾಯೋಜಿತ ನೈಸರ್ಗಿಕ ರಸಾಯನ ಶಾಸ್ತ್ರದ ಶಿಕ್ಷಣ ಮತ್ತು ಪ್ರಶಿಕ್ಷಣ ಕಾರ್ಯಕ್ರಮದ ಗೌರವಾನ್ವಿತ ಸಂಚಾಲಕಿಯಾಗಿ ನೇಮಕ.
  • ೧೯೬೦ ರಲ್ಲಿ ಇಂಡಿಯನ್ ನ್ಯ್ಯಾಷನಲ್ ಸೈನ್ಸ್ ಅಕಾಡೆಮಿಯ "ಫೆಲೋ"ಆಗಿ ನೇಮಕ.
  • ೧೯೬೧ ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದು ಈ ಪ್ರಶಸ್ತಿ ಪಡೆದ ಪ್ರಪ್ರಥಮ ಮಹಿಳೆ ಎನಿಸಿಕೊಂಡರು.
  • ೧೯೭೫ ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾದರು. ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಪ್ರಪ್ರಥಮ ಮಹಿಳೆ.
  • ಹಲವಾರು ವಿಶ್ವವಿದ್ಯಾಲಯಗಳಿಂದ ಡಿ.ಎಸ್ಸಿ ಪದವಿ ಪ್ರದಾನ.
  • ೧೯೮೨-೧೯೯೦ ರ ವರೆಗೆ ಭಾರತದ ರಾಷ್ಟ್ರಪತಿಗಳಿಂದ ರಾಜ್ಯಸಭಾ ಸದಸ್ಯರಾಗಿ ನಾಮಾಂಕಿತಗೊಂಡರು.
  • ೨೩ ಸೆಪ್ಟೆಂಬರ್ ೨೦೧೭ರಂದು ಚಟರ್ಜಿಯವರ ಜನ್ಮಶತಮಾನೋತ್ಸವಾದ ಗೌರವಾರ್ಥ ಗೂಗಲ್ 24 ಗಂಟೆಗಳ ಗೂಗಲ್ ಡೂಡಲ್ ಅನ್ನು ನಿಯೋಜಿಸಿತು.[]

ಗೂಗಲ್ ಗೌರವ

[ಬದಲಾಯಿಸಿ]

ಗೂಗಲ್ ಡೂಡಲ್, ೨೩ ಸೆಪ್ಟೆಂಬರ್ ೨೦೧೭ ರಂದು ಅಸಿಮಾ ಚಟರ್ಜಿಯ ೧೦೦ ನೇ ಹುಟ್ಟುಹಬ್ಬವನ್ನು ಭಾರತೀಯ ಸಂಸ್ಥೆಯಿಂದ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಮಹಿಳೆ ಎಂದು ಆಚರಿಸಿತು.[]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. The Shaping of Indian Science. p. 1036. Indian Science Congress Association, Presidential Addresses By Indian Science Congress Association. Published by Orient Blackswan, 2003. ISBN 978-81-7371-433-7
  2. Mishra, Shinjinee (1 November 2017). "Asima Chatterjee And Her Pioneering Work In Medicinal Chemistry | #IndianWomenInHistory". Feminism In India. Retrieved 20 March 2020.
  3. "ಅಸೀಮಾ ಚಟರ್ಜಿ ಜನ್ಮಶತಮಾನೋತ್ಸಕ್ಕೆ ಗೂಗಲ್‌ ಡೂಡಲ್‌ ಗೌರವ". www.prajavani.net , 23 September 2017.
  4. "Asima Chatterjee's 100th Birthday". www.google.com (in ಇಂಗ್ಲಿಷ್). Retrieved 20 March 2020.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]