ವಿಷಯಕ್ಕೆ ಹೋಗು

ಅವಾಹಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅವಾಹಕಗಳ ಇಂದ ಪುನರ್ನಿರ್ದೇಶಿತ)
ತಾಮ್ರ ವಾಹಕದ ಸುತ್ತ ಪ್ಲಾಸ್ಟಿಕ್ ಅವಾಹಕ

ತನ್ನ ಮೂಲಕ ಎಲೆಕ್ಟ್ರಾನ್ ಪ್ರವಾಹವನ್ನು (ವಿದ್ಯುತ್ ಪ್ರವಾಹವನ್ನು) ಹರಿಯಲು ಬಿಡದ ವಸ್ತುಗಳನ್ನು ಅವಾಹಕ (Insulator) ಗಳೆಂದು ಕರೆಯುತ್ತಾರೆ. ಅರೆವಾಹಕಗಳು ವಾಹಕಗಳಿಗಿಂತ ಹೆಚ್ಚಿನ ಪ್ರತಿರೋಧಕತೆಯನ್ನು ಹೊಂದಿರುತ್ತವೆ.

ವಿದ್ಯುದೀಕೃತ ರೈಲು ಮಾರ್ಗದಲ್ಲಿ ಬಳಸಲಾದ ಸರ್‍ಯಾಮಿಕ್ ನಿರೋಧಕ

ವಿದ್ಯುನ್ನಿರೋಧ ಎಂದರೆ ಎರಡು ಅಥವಾ ಅಧಿಕ ವಾಹಕಗಳು ಪರಸ್ಪರ ಸಂಪರ್ಕಿಸದಂತೆ ತಡೆಯುವ ವ್ಯವಸ್ಥೆ (ಎಲೆಕ್ಟ್ರಿಕಲ್ ಇನ್‌ಸುಲೇಶನ್). ಇದನ್ನು ಆಗಗೊಳಿಸುವುದು ಉಚ್ಚರೋಧವುಳ್ಳ ವಿದ್ಯುನ್ನಿರೋಧಕಗಳು (ಇನ್‌ಸುಲೇಟರ್ಸ್). ನಿರೋಧಕಗಳಲ್ಲಿ ಮುಕ್ತ ಎಲೆಕ್ಟ್ರಾನುಗಳಿರದ ಕಾರಣ ವಿದ್ಯುತ್ತನ್ನು ಅವು ಹರಿಯಬಿಡುವುದಿಲ್ಲ. ಆದರೂ, ವಿದ್ಯುತ್‌ಕ್ಷೇತ್ರವನ್ನು ಪ್ರಯೋಗಿಸಿದಾಗ ಬಂಧಿತ ಎಲೆಕ್ಟ್ರಾನುಗಳು ತಮ್ಮ ಪ್ರಸಾಮಾನ್ಯ ಸ್ಥಾನದಿಂದ ವಿಸ್ಥಾಪನೆಗೊಂಡು ವಿದ್ಯುದ್ಧ್ರುವೀಕರಣ ಉಂಟುಮಾಡುತ್ತವೆ. ಪ್ರಯೋಗಿಸಿದ ವಿದ್ಯುತ್‌ಕ್ಷೇತ್ರಕ್ಕೆ ವಿರುದ್ಧವಾಗಿ ಧ್ರುವೀಕರಣ ವರ್ತಿಸಿ ಅದನ್ನು ದುರ್ಬಲಗೊಳಿಸುತ್ತದೆ.

ನಿರೋಧಕಗಳನ್ನು ವಾಹಕಗಳ ಸುತ್ತ ಇರಿಸಿ ಅವು ವಿದ್ಯುದೀಯವಾಗಿ ಸ್ಪರ್ಶಿಸದಂತೆ ಅಥವಾ ವಿದ್ಯುನ್ಮಂಡಲದ ವಿವಿಧ ಭಾಗಗಳು ಪರಸ್ಪರ ಸಂಪರ್ಕಿಸದಂತೆ ಮಾಡಬಹುದು. ನಿರೋಧಕ್ಕೆ ಬಳಸುವ ಪದಾರ್ಥಗಳ ಆಯ್ಕೆ ವಾಹಕ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿರುವುದು. ಉದಾ: ಮನೆಗಳಲ್ಲಿ ಬಳಸುವ ತಾಮ್ರದ ತಂತಿಗಳಿಗೆ ರಬ್ಬರ್ ಅಥವಾ ಪ್ಲಾಸ್ಟಿಕ್, ಉಚ್ಚವೋಲ್ಟೇಜಿನ ವಿದ್ಯುಚ್ಛಕ್ತಿ ಸರಬರಾಜು ಮಾಡುವ ತಂತಿಗಳಿಗೆ ಪಿಂಗಾಣಿ ಅಥವಾ ಯುಕ್ತ ಸರ‍್ಯಾಮಿಕ್, ವಿದ್ಯುಜ್ಜನಕಗಳಲ್ಲಿ ಅಭ್ರಕ.

ಉಲ್ಲೇಖಗಳು

[ಬದಲಾಯಿಸಿ]
  • Taylor, Sue (May 2003). Bullers of Milton. ISBN 978-1-897949-96-2.
  • Function of Grading rings to Composite Insulator Archived 2019-08-29 ವೇಬ್ಯಾಕ್ ಮೆಷಿನ್ ನಲ್ಲಿ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅವಾಹಕ&oldid=1181307" ಇಂದ ಪಡೆಯಲ್ಪಟ್ಟಿದೆ