ಅಳಲೆ ಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಳಲೆ ಕಾಯಿ
Harra (Terminalia chebula) leafless tree at 23 Mile, Duars, WB W IMG 5905.jpg
A leafless T. Chebula tree
Egg fossil classification
Kingdom:
Plantae
(unranked):
(unranked):
Eudicots
(unranked):
Order:
Family:
Genus:
Species:
T. chebula
Binomial nomenclature
Terminalia chebula
Synonym (taxonomy)
  • Buceras chebula (Retz.) Lyons
  • Myrobalanus chebula (Retz.) Gaertn.
  • Myrobalanus gangetica (Roxb.) Kostel.
  • Terminalia acuta Walp.
  • Terminalia chebula var. chebula
  • Terminalia gangetica Roxb.
  • Terminalia parviflora Thw.
  • Terminalia reticulata Roth
  • Terminalia zeylanica Van Heurck & Müll. Arg.
ಚಿತ್ರ:Alalekayi.jpg
ಅಳಲೆ ಕಾಯಿ ಮರ

ಅಳಲೆ ಕಾಯಿದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (Terminalia chebula) ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.

ಸಸ್ಯದ ಗುಣಲಕ್ಷಣ[ಬದಲಾಯಿಸಿ]

ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.[೧]

ಔಷಧೀಯ ಉಪಯೋಗ[ಬದಲಾಯಿಸಿ]

ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. ನೆಗಡಿ, ಕೆಮ್ಮು, ಜ್ವರ ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, ಅಸ್ತಮಾ, ಮೂಲವ್ಯಾಧಿ, ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ. ಮಲಭದ್ದತೆಯಲ್ಲಿ ಇದರ ಚೂರ್ಣವನ್ನು ಬೆಲ್ಲದೊಂದಿಗೆ ಅಥವಾ ಶುಂಠಿ ಚೂರ್ಣದೊಂದಿಗೆ ನೀಡುತ್ತಾರೆ. ವಾಂತಿಯಲ್ಲಿ ಇದರ ಚೂರ್ಣವನ್ನು ಸೇವಿಸಬಹುದು.

ವಾಣಿಜ್ಯ ಉಪಯೋಗ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. A Text Book Of Dravyaguna Vijnana by Dr. Prakash L Hegde and Dr. Harini A